23.1 C
Sidlaghatta
Friday, March 29, 2024

Covid-19 ನಿಂದಾದ ಕಲಿಕಾ ನಷ್ಟವನ್ನು ತುಂಬಲು ಕಲಿಕಾ ಚೇತರಿಕೆ ಉಪಕ್ರಮ ಸಹಕಾರಿ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ BGS ಶಾಲೆಯ (School) ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, DSERT ವತಿಯಿಂದ ಹಮ್ಮಿಕೊಂಡಿದ್ದ ಪ್ರೌಢಶಾಲಾ ಶಿಕ್ಷಕರ (High School Teachers) ವಿವಿಧ ವಿಷಯಗಳ ಕಲಿಕಾ ಚೇತರಿಕೆ-ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು (Workshop) ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಜಿ.ರಘುನಾಥರೆಡ್ಡಿ ಅವರು ಮಾತನಾಡಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಟಾನಗೊಳಿಸುತ್ತಿರುವ ಸಂದರ್ಭದಲ್ಲಿ ಹಲವು ಶೈಕ್ಷಣಿಕ ಬದಲಾವಣೆಗಳ ಅಗತ್ಯವಿದೆ. ಕೋವಿಡ್ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿಷಯವಾರು ಅಗತ್ಯ ಸಾಮರ್ಥ್ಯಗಳನ್ನು ಕಲಿಸಲು ಪ್ರಯತ್ನಿಸಿದ್ದಾಗ್ಯೂ ಸಾಕಷ್ಟು ನಿರೀಕ್ಷಿತ ಸಾಧನೆಯಾಗಿರಲಿಲ್ಲ. Covid-19 ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ಶಾಲೆಗಳು ಸರಿಯಾಗಿ ನಡೆಯದೇ ಮಕ್ಕಳಿಗೆ ಆಗಿರುವ ಕಲಿಕಾ ನಷ್ಟವನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಉಪಕ್ರಮವನ್ನು ಈ ವರ್ಷ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಡಯಟ್‌ನ ಉಪನ್ಯಾಸಕಿ, ಕಲಿಕಾಚೇತರಿಕೆ ತರಬೇತಿ ಕಾರ್ಯಗಾರದ ತಾಲ್ಲೂಕು ನೋಡಲ್ ಅಧಿಕಾರಿ ಎಚ್.ಜಿ.ಮಮತಾ ಮಾತನಾಡಿ, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲವ್ಯಕ್ತಿಗಳಿಗೆ ತರಬೇತಿ ನೀಡಲಾಗಿದ್ದು ತಾಲ್ಲೂಕು ಮಟ್ಟದಲ್ಲಿ ಎಲ್ಲಾ ಶಿಕ್ಷಕರಿಗೂ ಕಡ್ಡಾಯವಾಗಿ ಯಾವುದಾದರೊಂದು ವಿಷಯದಲ್ಲಿ ಕಲಿಕಾಹಾಳೆಗಳು, ಶಿಕ್ಷಕರ ಕೈಪಿಡಿ ಮತ್ತಿತರ ಅಂಶಗಳ ಬಗ್ಗೆ ತರಬೇತುಗೊಳಿಸಲಾಗುತ್ತಿದೆ. ಇದೇ ತಿಂಗಳ 16 ರಿಂದಲೇ ಶಾಲೆಗಳು ಆರಂಭವಾಗಿದ್ದು ವರ್ಷಪೂರ್ತಿ ಕಲಿಕಾಫಲಗಳನ್ನಾಧರಿಸಿ ಕಲಿಕಾಚೇತರಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಜ್ಯಮಟ್ಟದ ಸಂಪನ್ಮೂಲವ್ಯಕ್ತಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಮೂರು ವರ್ಷಗಳ ಕಲಿಕಾಫಲಗಳನ್ನು ನಿರ್ಧರಿಸಿ ಅದರ ಆಧಾರದಲ್ಲಿ ಚಟುವಟಿಕೆ, ಮಾದರಿ ಉದಾಹರಣೆ, ಆಕರ್ಷಕ ಚಿತ್ರಗಳು, ನಿಜಜೀವನದಲ್ಲಿ ಬಳಸುವ ಸಾಮಾನ್ಯ ಅಂಶಗಳನ್ನು ಬಳಸಿಕೊಂಡು ಮಕ್ಕಳು ಆಸಕ್ತಿದಾಯಕವಾಗಿ ಕಲಿಕಾಫಲಗಳನ್ನು ಗಳಿಸಲು ಪೂರಕವಾಗಿ ಕಲಿಕಾಹಾಳೆಗಳು ಸಿದ್ಧವಾಗಿದ್ದು ಭಾರತದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಈ ರೀತಿಯ ಉತ್ತಮ ಉಪಕ್ರಮವನ್ನು ಅನುಷ್ಟಾನಗೊಳಿಸುತ್ತಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.

ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳ 125 ಕ್ಕೂ ಹೆಚ್ಚು ಶಿಕ್ಷಕರಿಗೆ ಗಣಿತ, ಇಂಗ್ಲೀಷ್, ಸಮಾಜವಿಜ್ಞಾನ ವಿಷಯಗಳಲ್ಲಿ ಕಲಿಕಾಚೇತರಿಕೆ ಉಪಕ್ರಮ ಕುರಿತು ಎರಡು ದಿನಗಳ ಕಾಲ ತರಬೇತಿ ನೀಡಲಾಯಿತು.

ಬಿಜಿಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಮಹದೇವ್, ಚಿಕ್ಕಬಳ್ಳಾಪುರ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆಂಪಣ್ಣ, ಶಿಡ್ಲಘಟ್ಟ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಶಿಕ್ಷಣಸಂಯೋಜಕ ಇ.ಭಾಸ್ಕರಗೌಡ, ಪರಿಮಳಾ, ತಾಲ್ಲೂಕು ದೈಹಿಕಶಿಕ್ಷಣಾಧಿಕಾರಿ ದೇವೇಂದ್ರಪ್ಪ, ವಿವಿಧ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ತಾಲ್ಲೂಕು ಸಂಪನ್ಮೂಲವ್ಯಕ್ತಿಗಳು, ಶಿಕ್ಷಕರು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!