ವಾಸವಿ ಜಯಂತಿ ಆಚರಣೆ

0
624
Sidlaghatta Vasavi Jayanti

Sidlaghatta : ಶಿಡ್ಲಘಟ್ಟ ನಗರದ ವಾಸವಿ ರಸ್ತೆಯ (Vasavi Temple Road) ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಬುಧವಾರ ವಾಸವಿ ಜಯಂತಿ (Vasavi Jayanti) ಪ್ರಯುಕ್ತ ಆರ್ಯ ವೈಶ್ವ ಮಂಡಳಿ ವತಿಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.

ಬೆಳಗ್ಗೆಯಿಂದ ಪ್ರಾರಂಭವಾದ ಪೂಜಾ ವಿಧಿಗಳಲ್ಲಿ ಅಗ್ರೋದಕಾಹರಣ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ದೇವಿ ಸಪ್ತಶತಿ ಪಾರಾಯಣ, ಋತ್ವಿಕ್‌ವರುಣ, ಕಳಶಸ್ಥಾಪನೆ, ವಾಸವಿ ನವಗ್ರಹ ಕಲ್ಪೋಕ್ತ ಹೋಮಾದಿಗಳು, ಪೂರ್ಣಾಹುತಿ, ಮಹಾನೈವೇದ್ಯ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು.

ದೇವಾಲಯದಲ್ಲಿರುವ ಗಣಪತಿ, ಕನ್ನಿಕಾಪರಮೇಶ್ವರಿ, ವಾಸವಿ ದೇವಿ, ಮತ್ತು ಆಂಜನೇಯ ದೇವರುಗಳಿಗೆವಿವಿಧ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಕಳೆದ ಮೂರು ದಿನಗಳಿಂದ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯ ಅಭಿಷೇಕ, ಲಲಿತಾ ಸಪ್ತಶರಿ ಪಾರಾಯಣ, ವಿಶೇಷ ಅಲಂಕಾರಗಳನ್ನು ಮಾಡಿದ್ದು ಭಕ್ತರಿಗೆ ತೀರ್ಥ ಪ್ರಸಾದಗಳನ್ನು ವಿತರಿಸುವ ಜೊತೆಗೆ ವಾಸವಿ ದೇವಿಗೆ ಉಯ್ಯಾಲೋತ್ಸವವನ್ನು ನಡೆಸಲಾಯಿತು.

ಆರ್ಯ ವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ ಹಾಗೂ ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!