Sidlaghatta : ಶಿಡ್ಲಘಟ್ಟ ನಗರದ ಮಾರುತಿನಗರದ ಮನೆ ಮುಂಭಾಗದಲ್ಲಿರುವ ಕುರಿ ಮಂದೆಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದರಿಂದ ಸುಮಾರು ನಾಲ್ಕು ಕುರಿಗಳು ಮೃತಪಟ್ಟಿವೆ.
ನಗರದ ಮಾರುತಿನಗರದ ನಗರಸಭೆ ಸದಸ್ಯೆ ವಸಂತ ಬಾಲಕೃಷ್ಣ ಎಂಬುವವರಿಗೆ ಸೇರಿದ ಕುರಿ ಮಂದೆಯ ಮೇಲೆ ಸೋಮವಾರ ಮದ್ಯಾಹ್ನದ ವೇಳೆ ದಾಳಿ ನಡೆಸಿರುವ ಬೀದಿ ನಾಯಿಗಳು ಗುಂಪಿನಲ್ಲಿದ್ದ ಹಲವು ಕುರಿಗಳನ್ನು ಕಚ್ಚಿದ್ದು ನಾಲ್ಕು ಕುರಿಗಳು ಮೃತಪಟ್ಟಿವೆ.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ನಗರಸಭೆಗೆ ಹಲವಾರು ಭಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ. ಇದೀಗ ಕುರಿಗಳ ಮೇಲೆ ದಾಳಿ ನಡೆಸಿದ ಬೀದಿ ನಾಯಿಗಳು ರಸ್ತೆಯಲ್ಲಿ ಓಡಾಡುವ ಮಕ್ಕಳು ಸೇರಿದಂತೆ ವೃದ್ದರ ಮೇಲೆ ದಾಳಿ ನಡೆಸಿದರೆ ಏನು ಗತಿ ಈ ಕೂಡಲೇ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಅಗತ್ಯ ಕ್ಮರ ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯೆ ವಸಂತ ಬಾಲಕೃಷ್ಣ ಒತ್ತಾಯಿಸಿದ್ದಾರೆ.