ಬೀದಿ ನಾಯಿಗಳ ದಾಳಿಗೆ ಕುರಿಗಳು ಬಲಿ

0
120
Street dogs Bite Sheep

Chikkatekahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕತೇಕಹಳ್ಳಿ ಗ್ರಾಮದ ಕಾಂತಮ್ಮ ಎಂಬುವರಿಗೆ ಸೇರಿದ ಕುರಿಗಳು ನಾಯಿಗಳ ದಾಳಿಯಿಂದ ಮೃತಪಟ್ಟಿವೆ.

ಕಾಂತಮ್ಮ ಅವರು ಸಾಕಿದ್ದ 14 ಕುರಿಗಳು. ಬೀದಿನಾಯಿಗಳ ದಾಳಿಗೆ ಸಿಲುಕಿದ್ದು, 4 ಕುರಿಗಳು ಬಲಿಯಾಗಿವೆ. 1 ಕುರಿ ತೀವ್ರವಾಗಿ ಅಸ್ವಸ್ಥಗೊಂಡಿದೆ. 6 ಕುರಿಗಳು ಗಾಯಗೊಂಡಿವೆ.

ಸೋಮವಾರ ಬೆಳಗ್ಗೆ 8 ಗಂಟೆಯ‌ಲ್ಲಿ ಸಮಯದಲ್ಲಿ ಹೊರಗಡೆ ಕಟ್ಟಿಹಾಕಿದ್ದ ಸಂದರ್ಭದಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ.

ಜೀವನಕ್ಕೆಂದು ಕುರಿಗಳನ್ನು ಸಾಕುತ್ತಿದ್ದು, ಈ ದಿನ 4 ಕುರಿಗಳು ಬೀದಿ ನಾಯಿಗಳ ಹಾವಳಿಗೆ ತುತ್ತಾಗಿವೆ. ನಮಗೆ ಈ ದುರ್ಘಟನೆಯಿಂದ ಸುಮಾರು 40 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ದಯವಿಟ್ಟು ನಮಗೆ ಪರಿಹಾರ ಕೊಡಿಸಿಕೊಡಿ. ಹಾಗೆಯೇ ಬೀದಿ ನಾಯಿಗಳ ಹಾವಳಿಗೆ ಸೂಕ್ತ ಪರಿಹಾರ ಒದಗಿಸಿ. ಮುಂದೆ ಬೇರೆ ಯಾವ ಕುರಿಗಳಿಗೂ ಈ ರೀತಿ ಘಟನೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ನೊಂದ ಮಹಿಳೆ ಕಾಂತಮ್ಮ ಹೇಳಿದರು.

ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಕ್ರಮವಹಿಸುವ ಜೊತೆಗೆ, ಕುರಿಗಳ ಸಾವಿನಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಪಶು ವೈದ್ಯಕೀಯ ಮತ್ತು ಸೇವಾ ಇಲಾಖೆಯ ಅಧಿಕಾರಿಗಳನ್ನು ಮಾಜಿ ಮಂಡಲ್ ಅಧ್ಯಕ್ಷ ಟಿ.ವಿ.ಶ್ರೀನಿವಾಸರೆಡ್ಡಿ ಒತ್ತಾಯಿಸಿದ್ದಾರೆ.

“ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬೀದಿ ನಾಯಿಗಳ ದಾಳಿಗೆ ಕುರಿಗಳು ತುತ್ತಾಗಿವೆ. ಬಲಿಯಾದಂತಹ ಕುರಿಗಳಿಗೆ ಸರ್ಕಾರದಿಂದ ಅನುಗ್ರಹ ಯೋಜನೆಯಲ್ಲಿ ಒಂದು ಕುರಿಗೆ 5 ಸಾವಿರ ರೂಪಾಯಿ ಪರಿಹಾರ ಇದೆ.‌ ಅದನ್ನ ಫಲಾನುಭವಿಗೆ ಇಲಾಖೆಯಿಂದ ಕೊಡಿಸಲು ಪ್ರಯತ್ನಿಸುತ್ತೇವೆ” ಎಂದು ಪಶು ವೈದ್ಯಾಧಿಕಾರಿ ಡಾ.ಎನ್.ವಿ ಮುನಿಕೃಷ್ಣ ತಿಳಿಸಿದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!