ಸಂಕ್ರಾಂತಿ ಕವಿಗೋಷ್ಠಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆ ಕಾರ್ಯಕ್ರಮ

Sankranti Celebration Swamy Vivekananda Birthday Birth Anniversary Sidlaghatta

ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಸಂಜೆ ಕರ್ನಾಟಕ ವಚನ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಬಳಗದ ಅಧ್ಯಕ್ಷ ನಂಜಪ್ಪರೆಡ್ಡಿ ಮಾತನಾಡಿದರು.

ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬ ಹಿರಿಯರ ಮಾತುಗಳನ್ನು ಆಚರಣೆಗೆ ತರದೇ ಇದೀಗ ಕೇವಲ ತೋರಿಕೆಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಅವರು ಹೇಳಿದರು.

 ರೈತರು ತಾವು ಬೆಳೆದ ಫಸಲನ್ನು ರಾಶಿ ಮಾಡಿ ಗೋವುಗಳಿಗೆ ಕಿಚ್ಚು ಹಾಯಿಸುವ ಸುಗ್ಗಿಯ ಹಬ್ಬವಿದು. ಆದರೆ ಈ ಬಾರಿ  ಕೊರೊನಾ ಮಹಾಮಾರಿಯಿಂದ  ಸಂಕ್ರಾಂತಿಯ ಹಬ್ಬದ ಸಂಭ್ರಮ ಕೆಲವೆಡೆ ಕಣ್ಮರೆಯಾಗಿವೆ. ರೈತರು ಸಹ ವ್ಯವಸಾಯ ಮಾಡಲು ದನಕರುಗಳ ಬದಲಿಗೆ ಯಂತ್ರೋಪಕರಣಗಳ ಮೊರೆಹೋಗಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ ಎಮದರು.

 ಶಿಕ್ಷಕ ವಿ.ಕೃಷ್ಣ ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ವಿಶ್ವ ಯುವ ದಿನಾಚರಣೆ ಯನ್ನಾಗಿ ಆಚರಣೆ ಮಾಡುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯ. ವೀರ ಸನ್ಯಾಸಿ ನರೇಂದ್ರರ ಆದರ್ಶಗಳು ಇಷ್ಟು ವರ್ಷಗಳ ಬಳಿಕವೂ ಪ್ರಸ್ತುತವಾಗಿದೆ ಎಂದರೆ ಅವರ ತಾಕತ್ತು ಎಂತದ್ದು ಎಂದು ಪ್ರತಿಯೊಬ್ಬರು ಮನಗಾಣಬೇಕಿದೆ. ಸದೃಢವಾದ ದೇಶ ಕಟ್ಟಲು ಬುದ್ಧಿಬಲದ ಜೊತೆಗೆ ಉದಾತ್ತವಾದ ಗುರಿ ಹಾಗೂ ಅದನ್ನು ಈಡೇರಿಸಲು ಬೇಕಾದ ಇಚ್ಛಾಶಕ್ತಿ ಯುವಕರಲ್ಲಿರಬೇಕು ಎಂದರು.

 ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಸಂಕ್ರಾಂತಿಯ ಸೂಗಡು ಹಾಗೂ ಸ್ವಾಮಿವಿವೇಕಾನಂದರ ಬಗ್ಗೆ ಮಾತನಾಡಿದರು.

 ದಾಸ ಸಾಹಿತ್ಯ ಪರಿಷತ್ತಿನ ಬಿ.ಪಿ.ರಾಘವೇಂದ್ರ, ಕವಿಗಳಾದ ಜಿ.ಎನ್.ಶಾಮಸುಂದರ, ಕೆ.ಮಂಜುನಾಥ್, ಟಿ.ಟಿ.ನರಸಿಂಹಪ್ಪ, ಮಂಜುನಾಥ್, ಸುಂದರಾಚಾರಿ, ನೂರುಲ್ಲ ಕವನ ವಾಚನ ಮಾಡಿದರು.

 ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಪ್ರದಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ, ರೈತ ಮುಖಂಡರಾದ ಮುನಿನಂಜಪ್ಪ, ರಾಮಕೃಷ್ಣಪ್ಪ,  ನಾರಾಯಣಸ್ವಾಮಿ, ದೇವರಾಜು, ನಾಗರಾಜ್, ಸುಬ್ರಹ್ಮಣ್ಯ, ಶಿಕ್ಷಕರಾದ  ಎನ್.ಮಾರುತಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!