Sidlaghatta : ಶಾಲಾ ಕಾಲೇಜುಗಳಲ್ಲಿ ಓದು ಬರೆಯುವುದು ಪರೀಕ್ಷೆಯನ್ನು ಎದುರಿಸುವುದನ್ನು ಕಲಿಸುವಂತೆಯೆ ಬದುಕನ್ನು ಎದುರಿಸುವುದನ್ನು ಕಲಿಸಬೇಕಿದೆ. ಹೆತ್ತವರು, ಹುಟ್ಟಿದ ಊರು, ಗುರುಗಳನ್ನು ಗೌರವಿಸುವ ಸಂಸ್ಕಾರವನ್ನು ಜತೆಗೆ ಜತೆಗೆ ಕಲಿಸಬೇಕಿದೆ ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ಅಭಿಪ್ರಾಯಪಟ್ಟರು.
ನಗರದಲ್ಲಿನ ದಿ ಪ್ರೆಸಿಡೆನ್ಸಿ ಶಾಲೆಯ ಆವರಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ನಿತ್ಯದ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಬದುಕುವುದನ್ನು ಕಲಿಸುವ ಕೆಲಸ ಆಗಬೇಕಿದೆ. ಜತೆಗೆ ಸಂಸ್ಕಾರವನ್ನು ಕಲಿಸುವ ಕೆಲಸವೂ ಮನೆ ಶಾಲಾ ಕಾಲೇಜುಗಳಲ್ಲಿ ಆಗಬೇಕಿದೆ ಎಂದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ವಾರ್ಷಿಕೋತ್ಸವ ಅಂಗವಾಗಿ ನಡೆದ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಕ್ಷೇತ್ರ ಶಿಕ್ಷಣಾಕಾರಿ ನರೇಂದ್ರಕುಮಾರ್, ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ.ವಿ.ವೆಂಕಟೇಶ್, ಕ್ರೆಸೆಂಟ್ ಶಾಲೆಯ ತಮೀಮ್ ಅನ್ಸಾರಿ, ಪ್ರೆಸೆಡೆನ್ಸಿ ಶಾಲೆಯ ಅಧ್ಯಕ್ಷ ನ್ಯಾಮತ್ ಪಾಷ, ಕಾರ್ಯದರ್ಶಿ ಇಮ್ರಾನ್‌ಪಾಷ, ಪ್ರಿನ್ಸಿಪಾಲ್ ರಘುನಾಥ್, ಅರ್ಥಶಾಸ್ತ್ರ ಉಪನ್ಯಾಸಕ ಶ್ರೀನಾಥ್, ಲಿಯೋ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಹಾಜರಿದ್ದರು.