Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ (Primary Health care Centre) ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (Tuberculosis Eradication Program) ಹಾಗೂ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ಮಾತನಾಡಿ, ಈಗ ಸುಮಾರು 79 ಹಳ್ಳಿಗಳಲ್ಲಿ ಹಾಗೂ ಅತ್ಯಂತ ಕಿರಿದಾದ ಪ್ರದೇಶಗಳಲ್ಲಿ ವಾಸ ಮಾಡುವ ಸ್ಥಳಗಳಲ್ಲಿ ಜನರನ್ನು ಪರೀಕ್ಷಿಸಲಾಗುತ್ತಿದೆ. ಹಾಗೂ ಹೆಚ್ಚಾಗಿ ಎರಡು ವಾರಗಳಿಂದ ಕೆಮ್ಮು ಮತ್ತು ಕಫದಲ್ಲಿ ರಕ್ತ ಬರುವುದು, ತೂಕ ಇಳಿಕೆ ಯಾಗುವುದು, ಹೊಟ್ಟೆ ಹಸಿವು ಆಗದಿರುವುದು, ರಾತ್ರಿ ಜ್ವರ ಬಂದು ಹೆಚ್ಚಾಗಿ ಬೇವರು ಬರುವುದು, ಎಷ್ಟು ಬಾರಿ ಚಿಕಿತ್ಸೆ ಪಡೆದರೂ ಸಹ ಕಡಿಮೆ ಆಗಿಲ್ಲ ಎನ್ನುವವರನ್ನು ನಮ್ಮಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಯವರು ಮನೆ ಮನೆಗೆ ಭೇಟಿ ಕೊಟ್ಟಾಗ ಕಫ ಪರೀಕ್ಷೆ ಮಾಡಿಸಿ ಪರೀಕ್ಷೆಯಲ್ಲಿ ಮೈಕೋ ಬ್ಯಾಕ್ಟೀರಿಯ ಕಂಡುಬಂದರೆ ಅವರಿಗೆ 6 ಮತ್ತು 8 ತಿಂಗಳ ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್, ಆರೋಗ್ಯ ನಿರೀಕ್ಷಕ ದೇವರಾಜ್, ಆಶಾ ಕಾರ್ಯಕರ್ತೆಯರು ಮತ್ತು ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.