ಶಿಡ್ಲಘಟ್ಟದ ಷರಾಫ್ ರಸ್ತೆಯ ಅರಳಿಕಟ್ಟೆಯ ಪಕ್ಕದ ‘ಪ್ರತಾಪ್ ಸ್ವೀಟ್ಸ್’ ಎಂದೊಡನೆ ಬಾಯಲ್ಲಿ ನೀರೂರುತ್ತದೆ. ಸಂಜೆ 6 ಗಂಟೆಯ ನಂತರವಷ್ಟೆ ತೆರೆಯುವ ಈ ತಿನಿಸಿನ ದುಖಾನಿನಲ್ಲಿ ಸಿಗುವ ಖಾದ್ಯಗಳು ವೈವಿಧ್ಯಮಯ. ತೈರೊಡೆ, ಆಲೂಗಡ್ಡೆಬೋಂಡ, ಕ್ಯಾಪ್ಸಿಕಮ್, ಈರುಳ್ಳಿಬೋಂಡ, ಮೆಣಸಿನಕಾಯಿ ಬಜ್ಜಿ, ವಿವಿಧ ರೀತಿಯ ಹಲ್ವಾಗಳು, ಜಾಮೂನ್, ಚಮ್‌ಚಮ್, ಮಿಕ್ಸ್‌ಚರ್ ಇತ್ಯಾದಿ. ಎಲ್ಲಕ್ಕಿಂತ ಮಿಗಿಲಾಗಿ ಗ್ರಾಹಕರನ್ನು ಅತಿಥಿಗಳಂತೆ ಮಾತನಾಡಿಸುವುದು ಪ್ರತಾಪ್ ಅವರ ವಿಶೇಷ ಗುಣ.
- Advertisement -
- Advertisement -