ಶಿಡ್ಲಘಟ್ಟದ ರೈಲ್ವೆ ನಿಲ್ದಾಣದ ಆವರಣದಲ್ಲಿ ದೇಶಪ್ರೇಮಿ ಯುವಕರ ಬಳಗದ ವತಿಯಿಂದ ಸೈನಿಕ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು. ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಭಗವಾನ್ ಸಿಂಗ್ ಹಾಗೂ ಹರಿನಾಥ್ ಹಾಗೂ ರೈಲ್ವೆ ಇಲಾಖೆಯ ಶಿವನಂಜೇಗೌಡ, ದೇಶಪ್ರೇಮಿ ಯುವಕರ ಬಳಗದ ರಮೇಶ್, ಲೋಕೇಶ್, ಶ್ರೀನಾಥ್, ಅರುಣ್, ಮನೋಜ್, ಶ್ರೇಯಸ್ ಹಾಜರಿದ್ದರು
Sidlaghatta Cocoon Market-15/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 15/01/2021
CB Lots: 304
Qty: 15552 Kgs
Max: 481
Min: 200
Avg: 364
BV Lots: 11
Qty: 610 Kgs
Max: 460
Min: 381
Avg: 419
ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಅಭಿಯನದ ಕಾರ್ಯಲಯ ಉದ್ಘಾಟನೆ
ಶಿಡ್ಲಘಟ್ಟದಲ್ಲಿ ಗುರುವಾರ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಅಭಿಯನದ ಕಾರ್ಯಲಯವನ್ನು ಉದ್ಘಾಟನೆ ಮಾಡಿ ಕರಪತ್ರ ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಸಹ ಕಾರ್ಯದರ್ಶಿ ಅಶ್ವತ್, ತಾಲ್ಲೂಕು ಅಧ್ಯಕ್ಷ ಪ್ರಭು, ಮಲ್ಲೇಶ್, ವೆಂಕಟೇಶ್, ರವಿಚಂದ್ರ ಹಾಜರಿದ್ದರು.
ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಹಶೀಲ್ದಾರ್ ಕೆ.ಅರುಂದತಿ ಮಾತನಾಡಿದರು.
ಕಾಯಕದ ಮಹತ್ವವನ್ನು ತಿಳಿಸಿದ ಸಿದ್ದರಾಮೇಶ್ವರರು ಮಹಾನ್ ಯೋಗಿಯಾಗಿದ್ದರು ಎಂದು ಅವರು ತಿಳಿಸಿದರು.
12ನೇ ಶತಮಾನದ ಖ್ಯಾತ ಪಂಚಶರಣರಲ್ಲಿ ಒಬ್ಬರಾದ ಶಿವಯೋಗಿ ಸಿದ್ದರಾಮೇಶ್ವರರು ವೈದಿಕ ಧರ್ಮದ ಮೌಡ್ಯತೆ, ಮೇಲುಕೀಳು, ವರ್ಣಧರ್ಮ ಶ್ರೇಣೀಕರಣ, ಸಂಪ್ರದಾಯಗಳಿಂದ ದೂರ ಉಳಿದು ಎಲ್ಲರೂ ಸಮಾನರು ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯನ್ನು ಆ ಕಾಲದಲ್ಲೇ ಹುಟ್ಟುಹಾಕಿದವರು ಎಂದರು.
ತಾಲ್ಲೂಕು ಭೋವಿ ಸಂಘದ ಅಧ್ಯಕ್ಷ ಚಿಕ್ಕನರಸಿಂಹಪ್ಪ ಮಾತನಾಡಿ, ದಯೆಯೇ ಧರ್ಮದ ಮೂಲವೆಂದು ಸಾರಿದ ವಚನಕಾರರು ಮೌಡ್ಯದ ವಿರುದ್ಧ ಜನಜಾಗೃತಿ ಮೂಡಿಸಿದ್ದರು. ಕೆರೆ ಕಟ್ಟೆಗಳನ್ನು, ಅನ್ನದಾಸೋಹ ಕಟ್ಟಡಗಳನ್ನು ಕಟ್ಟುವ ಮೂಲಕ ಕಲ್ಲು ಮಣ್ಣಿನ ಕಸುಬಿನ ಮಹತ್ವ ಎತ್ತಿಹಿಡಿದವರು ಸಿದ್ದರಾಮೇಶ್ವರರು. ದೇವರ ಬಗ್ಗೆ ಅಪಾರ ಭಕ್ತಿಯುಳ್ಳ ಶಿವಭಕ್ತರಾಗಿ, ಕರ್ಮಯೋಗಿಯಾಗಿ ಅಕ್ಷರಜ್ಞಾನದಿಂದ ವಚನಗಳನ್ನು ರಚಿಸುವ ಮೂಲಕ ಜ್ಞಾನಯೋಗಿಗಳಾಗಿದ್ದಾರೆ ಎಂದು ಹೇಳಿದರು.
ಭೋವಿ ಸಂಘದ ಕಾರ್ಯದರ್ಶಿ ನರಸಪ್ಪ, ರಾಜಸ್ವ ನಿರೀಕ್ಷಕ ಪ್ರಶಾಂತ್ ಹಾಜರಿದ್ದರು.
Sidlaghatta Cocoon Market-14/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 14/01/2021
CB Lots: 226
Qty: 11973 Kgs
Max: 430
Min: 267
Avg: 368
BV Lots: 3
Qty: 195 Kgs
Max: 428
Min: 411
Avg: 420
ಸಂಕ್ರಾಂತಿ ಸಂಭ್ರಮದ ಪ್ರಯುಕ್ತ ಶಾಲೆಯಲ್ಲಿ ಸುಗ್ಗಿ ಸಂಭ್ರಮ
ಸಂಕ್ರಾಂತಿ ಹಬ್ಬದ ಮುನ್ನಾ ದಿನ ಬುಧವಾರ ನಗರದ ಶ್ರೀ ಗರುಡಾದ್ರಿ ಇಂಗ್ಲಿಷ್ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ (ಸುಗ್ಗಿ ಹಬ್ಬ) ಗೋ ಪೂಜೆ, ರಂಗೋಲಿ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಭತ್ತ, ರಾಗಿ, ಧಾನ್ಯಗಳ ರಾಶಿ ಪೂಜೆಯೊಡನೆ ಆರಂಭಗೊಂಡು ಗೋ ಪೂಜೆ ನೆರವೇರಿಸುವ ಮೂಲಕ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷ ಕ ವೃಂದ ದೇಶಿಯ ಉಡುಗೆ, ತೊಡುಗೆ ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅತಿಥಿಗಳ ಗಮನಸೆಳೆದರಲ್ಲದೇ ಅಪ್ಪಟ ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಪರಸ್ಪರ ಎಳ್ಳು, ಬೆಲ್ಲ ವಿನಿಮಯದೊಟ್ಟಿಗೆ ಸುಗ್ಗಿಹಬ್ಬ ಸಂಕ್ರಾಂತಿಯನ್ನು ಬರಮಾಡಿಕೊಂಡರು.
ಶಾಲೆಯಲ್ಲಿ ಬೇಯಿಸಿದ ಗೆಣಸು, ಕಡಲೆಕಾಯಿ ಮತ್ತು ಅವರೆಕಾಯಿ ಹಾಗೂ ಪೊಂಗಲ್ ಮಾಡಿಸಿದ್ದು, ಮಕ್ಕಳು, ಪೋಷಕರು, ಶಿಕ್ಷಕರು ಸವಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಶ್ರೀನಿವಾಸಮೂರ್ತಿ ಮತ್ತು ಯೋಗ ಶಿಕ್ಷಕ ಶ್ರೀಕಾಂತ್, ವಿದ್ಯಾರ್ಥಿಗಳು ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ ಇಂತಹ ಹಬ್ಬ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಸಂಸ್ಕೃತಿಯ ಉಳಿವಿಗೆ ಮನವಿ ಮಾಡಿದರು.
ಪ್ರಾಂಶುಪಾಲ ಕೆ.ಪುರುಷೋತ್ತಮ, ಕಿರುತೆರೆನಟ ಮದನ್ ಗೌಡ, ಶಿಕ್ಷಕ ನಾಗರಾಜ್ ಹಾಜರಿದ್ದರು.
ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ವಿಜೇತರು
ನಗರದ ಶ್ರೀ ಕಾಳಿಕಾಂಬ ಕಮಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಂಗಳೂರು, ಗೌರಿಬಿದನೂರು, ಬಾಗೇಪಲ್ಲಿ, ಕೋಲಾರ ಮತ್ತು ಶಿಡ್ಲಘಟ್ಟದ ಒಟ್ಟು 70 ಮಕ್ಕಳು ಕರಾಟೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ವಿಜೇತರಿಗೆ ಪದಕ, ಪ್ರಮಾಣಪತ್ರಗಳನ್ನು ವಿತರಿಸಲಾಯಿತು ಎಂದು ಆಯೋಜಕ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್‌ನ ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.
ವಿಜೇತ ಕರಾಟೆಪಟುಗಳು :
ಕತಾ ವಿಭಾಗ : ನರೇಂದ್ರ (ಪರ್ಪಲ್ ಬೆಲ್ಟ್), ಜಯಸಿಂಹ (ಬ್ರೌನ್ ಬೆಲ್ಟ್), ಅಂಜನ್ (ಗ್ರೀನ್ ಬೆಲ್ಟ್), ಇಂದರ್ (ಬ್ಲೂ ಬೆಲ್ಟ್), ಚೆರ್ರಿ (ವೈಟ್ ಬೆಲ್ಟ್), ಶಿರೀಷ (ಎಲ್ಲೋ ಬೆಲ್ಟ್)
ಕುಮಿತೆ ವಿಭಾಗ : ಓಜಸ್ (ಬ್ಲೂ ಬೆಲ್ಟ್), ಅಂಜನ್ (ಗ್ರೀನ್ ಬೆಲ್ಟ್), ಶಿರೀಷ (ಎಲ್ಲೋ ಬೆಲ್ಟ್), ಕಿಶನ್ (ಬ್ಲೂ ಬೆಲ್ಟ್), ಇಂದರ್ (ಬ್ಲೂ ಬೆಲ್ಟ್), ಹರ್ಷಿತ್ (ಬ್ರೌನ್ ಬೆಲ್ಟ್), ನಂದೀಶ್ (ಬ್ರೌನ್ ಬೆಲ್ಟ್)
Sidlaghatta Cocoon Market-13/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 13/01/2021
CB Lots: 344
Qty: 17634 Kgs
Max: 450
Min: 188
Avg: 347
BV Lots: 11
Qty: 526 Kgs
Max: 415
Min: 213
Avg: 377
ಶ್ರೀ ಮಳ್ಳೂರಾಂಬ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ
ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಶ್ರೀ ಮಳ್ಳೂರಾಂಬ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್‌ಕುಮಾರ್ ಮಾತನಾಡಿದರು.
ಸ್ವಚ್ಛತೆ ಪ್ರತಿಯೊಬ್ಬ ವ್ಯಕ್ತಿಯ ಸ್ವಾಭಿಮಾನದ ಸಂಕೇತವಾಗಬೇಕು ಎಂದು ಅವರು ಹೇಳಿದರು.
ಮನುಷ್ಯ ನೆಮ್ಮದಿಗಾಗಿ ಶ್ರದ್ಧಾ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ದೇವಸ್ಥಾನದಲ್ಲಿನ ಅಶುಚಿತ್ವದಿಂದ ಅಲ್ಲಿ ಭಕ್ತಿ ಭಾವಗಳು ಮೂಡದೇ ಮತ್ತಷ್ಟು ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ನಮ್ಮ ನಮ್ಮ ಗ್ರಾಮಗಳ ದೇವಾಲಯಗಳನ್ನು ಸ್ವಚ್ಚವಾಗಿಟ್ಟುಕೊಂಡರೆ ಅದೇ ಧರ್ಮಸ್ಥಳ ಅದೇ ಮಂಜುನಾಥ ಸ್ವಾಮಿ ಸನ್ನಿಧಿಯಾಗುತ್ತದೆ ಎಂದರು.
ಕಳೆದ ಕೆಲ ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪ್ರತಿವರ್ಷ ಜನವರಿ ತಿಂಗಳಲ್ಲಿ ಹಲವಾರು ಧಾರ್ಮಿಕ ಕೇಂದ್ರಗಳ ಸ್ವಚ್ಚತೆ ಕಾರ್ಯ ಕೈಗೊಳ್ಳುತ್ತಿದ್ದು ಈ ವರ್ಷವೂ ತಾಲ್ಲೂಕಿನ ವಿವಿಧ ಗ್ರಾಮಗಳ ಧಾರ್ಮಿಕ ಕೇಂದ್ರಗಳ ಸ್ವಚ್ಚತೆಗೆ ಮುಂದಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ರಮಾಕಾಂತ್, ಮೇಲ್ವಿಚಾರಕಿ ಲಕ್ಷ್ಮಿ, ವಕೀಲ ಮುನಿರಾಜು, ಗ್ರಾಮ ಪಂಚಾಯತಿ ಸದಸ್ಯ ರಾಜಣ್ಣ, ಕಾರ್ಯದರ್ಶಿ ಗೋಪಾಲ್, ಗ್ರಾಮ ಸಂಪನ್ಮೂಲ ವ್ಯಕ್ತಿ ಚನ್ನಕೃಷ್ಣ, ವೇಣುಗೋಪಾಲ್, ಸೇವಾ ಪ್ರತಿನಿಧಿ ಅರ್ಷಿಯ, ಅನಿತಾ ಹಾಜರಿದ್ದರು.
ಔಷಧಿ ವ್ಯಾಪಾರಿಗಳೂ ಸಹ ಕೊರೊನಾ ವಾರಿಯರ್ಸ್
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ ಸಹಾಯಕ ಔಷಧ ನಿಯಂತ್ರಕ ನಾರಾಯಣರೆಡ್ಡಿ ಮಾತನಾಡಿದರು.
ಕಳೆದ ವರ್ಷ ಕೊರೊನಾದಿಂದಾಗಿ ಪ್ರತಿಯೊಬ್ಬರಿಗೂ ಕರಾಳವಾಗಿತ್ತು. ಸಾಕಷ್ಟು ತೊಂದರೆಗಳ ನಡುವೆಯೂ ಔಷಧಿ ವ್ಯಾಪಾರಿಗಳು ಜನರಿಗೆ ಹಗಲಿರುಳು ಅಗತ್ಯ ಸೇವೆಯನ್ನು ಒದಗಿಸಿದ್ದಾರೆ. ಕೊರೊನಾ ಭಯದ ನಡುವೆಯೂ ಸೇವೆಸಲ್ಲಿಸಿರುವ ಔಷಧಿ ವ್ಯಾಪಾರಿಗಳನ್ನು ಸಹ ಕೊರೊನಾ ವಾರಿಯರ್ ಗಳೆಂದು ಗುರುತಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಔಷಧಿ ವ್ಯಾಪಾರಿಗಳಿಗೆ ಹಲವಾರು ನಿಯಮಗಳು ಮತ್ತು ನಿಬಂಧನೆಗಳಿವೆ. ಅವನ್ನು ಸಾಧ್ಯವಾದಷ್ಟೂ ಪಾಲಿಸಬೇಕು. ಸಮಾಜದಲ್ಲಿ ಗೌರವವುಳ್ಳ ವೃತ್ತಿಯಾದ ಇದರ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಎಸ್.ವಿ.ಗುಪ್ತ, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಕೆ.ಎನ್.ರಮೇಶ್ ಬಾಬು, ಖಜಾಂಚಿ ಪಿ.ವಿ.ಮಂಜುನಾಥ್, ಜಂಟಿ ಕಾರ್ಯದರ್ಶಿ ಎಲ್.ಸುರೇಶ್, ಲಕ್ಷ್ಮಿನಾರಾಯಣಬಾಬು, ಜಗದೀಶ್, ಅಲೀಮುಲ್ಲ, ಅಂಜನಿ ಮೋಹನ್ ಹಾಜರಿದ್ದರು
Sidlaghatta Cocoon Market-12/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 12/01/2021
CB Lots: 345
Qty: 17507 Kgs
Max: 490
Min: 222
Avg: 319
BV Lots: 06
Qty: 391 Kgs
Max: 482
Min: 410
Avg: 423
ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆ ತಾಲ್ಲೂಕು ಸಮಿತಿಯ ಪದಾಧಿಕಾರಿಗಳ ನೇಮಕ
ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಶಿಡ್ಲಘಟ್ಟ ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪನಮನ ಸಲ್ಲಿಸುವ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡಿ ಆಯ್ಕೆ ಪತ್ರಗಳನ್ನು ವಿತರಿಸಿದರು.
ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಿ.ವಿ.ನಾರಾಯಣಸ್ವಾಮ ಮಾತನಾಡಿ, ಅಂಬೇಡ್ಕರ್ ಅವರ ಬದುಕೆ ಜಗತ್ತಿಗೆ ಇಂದಿಗೂ ಎಂದೆಂದಿಗೂ ಮಾದರಿಯಾಗಿರಲಿದೆ. ಅಂಬೇಡ್ಕರ್ ಅವರ ಜೀವನ ಚಿರಿತ್ರೆಯನ್ನು ಇಂದಿನ ಮಕ್ಕಳು ಯುವಪೀಳಿಗೆಗೆ ತಿಳಿಸಿಕೊಡುವ ಮೂಲಕ ಎಲ್ಲರ ಬದುಕನ್ನು ಉತ್ತಮಪಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಗೆ ಜಿಲ್ಲಾ ಪ್ರತಿನಿಧಿ ಸೇರಿದಂತೆ ಶಿಡ್ಲಘಟ್ಟ ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸೇನೆಯ ರಾಜ್ಯ ಖಜಾಂಚಿ ಮುನೀಂದ್ರ, ರಾಜ್ಯ ಯುವ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ತಿಮ್ಮರಾಜು, ತಾಲ್ಲೂಕು ಅಧ್ಯಕ್ಷ ಅರವಿಂದ್ ಹಾಜರಿದ್ದರು.
ತಾಲ್ಲೂಕು ಸಮಿತಿ ಪದಾಧಿಕಾರಿಗಳು :
ಅಧ್ಯಕ್ಷ ಕೆ.ಜೆ.ಅರವಿಂದ್, ಪ್ರಧಾನ ಕಾರ್ಯದರ್ಶಿ ಪ್ರವೀಣ್, ಉಪಾಧ್ಯಕ್ಷರು ಮುನಿರಾಜು ಮತ್ತು ಮನೋಜ್, ಗೌರವಾಧ್ಯಕ್ಷ ಮುನಿರಾಜು, ಖಜಾಂಚಿ ವಿ.ಮುರಳಿ, ಜಂಟಿ ಕಾರ್ಯದರ್ಶಿಗಳು ಗೋಪಿ, ಸುರೇಶ್, ಮುನಿಕೃಷ್ಣ ಮತ್ತು ನಯಾಜ್ ಖಾನ್, ಮಹಿಳಾ ಘಟಕದ ಅಧ್ಯಕ್ಷೆ ಸಂಜನಾ, ಪ್ರಧಾನ ಕಾರ್ಯದರ್ಶಿ ದ್ಯಾವಮ್ಮ, ಉಪಾಧ್ಯಕ್ಷೆ ವನಿತಾ, ಖಜಾಂಚಿ ಚೈತ್ರ
ನಾಲ್ಕು ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ : ಸಂಸದ ಎಸ್.ಮುನಿಸ್ವಾಮಿ
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ ಹೆಸರಿನ ಭವನಕ್ಕಾಗಿ ನಗರದ ಹೃದಯ ಭಾಗದ ತೋಟಗಾರಿಕೆ ಇಲಾಖೆ ಉಳಿಸಿಕೊಂಡಿರುವ ಜಮೀನಿನಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಕಟ್ಟಡ ನಿರ್ಮಿಸಲು ನೆರವಾಗಬೇಕೆಂದು ತಾಲ್ಲೂಕಿನ ದಲಿತ ಯುವ ಮುಖಂಡರು ಸಂಸದ ಎಸ್.ಮುನಿಸ್ವಾಮಿ ರವರನ್ನ ಬೇಟಿ ಮಾಡಿ ಮನವಿ ಸಲ್ಲಿಸಿದರು.
ಹೊಸಕೋಟೆಯ ಕನ್ನಮಂಗಲ ಗ್ರಾಮದ ಸಂಸದರ ತೋಟದ ಮನೆಯ ಬಳಿ ತೆರಳಿದ ದಲಿತ ಯುವ ಮುಖಂಡರು ಸಂಸದರೊಂದಿಗೆ ಈ ಬಗ್ಗೆ ಚರ್ಚಿಸಿದರು.
ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಭವನ 4 ಕೋಟಿ ವೆಚ್ಚದಲ್ಲಿ ನಿರ್ಮಿಸೋಣ. ಸುಸಜ್ಜಿತ, ಶಾಶ್ವತವಾದ ಹಾಗೂ ವೈಜ್ಞಾನಿಕವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಭವನ ನಿರ್ಮಿಸಿ, ಇಬ್ಬರ ಪುತ್ಥಳಿ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಅವರ ಪುಸ್ತಕಗಳು ಸೇರಿದಂತೆ ಉತ್ತಮ ಗ್ರಂಥಾಲಯದ ವ್ಯವಸ್ಥೆ ಮಾಡಲಾಗುವುದು ಎಂದರು.
ನನಗೆ ಸುಳ್ಳು ಭರವಸೆ ನೀಡುವ ಅಭ್ಯಾಸವಿಲ್ಲ. ಮಾತಿಗಿಂತ ಕೆಲಸ ಮುಖ್ಯ. ಒಳ್ಳೆಯ ಕೆಲಸಕ್ಕೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ದಲಿತ ಸಂಘಟನೆಗಳು ತಮ್ಮ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳು ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಶಕ್ತಿ ಹೆಚ್ಚಾಗುವುದರ ಜೊತೆಗೆ ಕೆಲಸವೂ ಪರಿಪೂರ್ಣವಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯಿಂದ ಹಾಗೂ ಕೇಂದ್ರದಿಂದ ಅನುದಾನ ಮಂಜೂರು ಮಾಡಿಸಿ ಸುಮಾರು 4 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಇನ್ನು ಒಂದು ವಾರದೊಳಗೆ ಅಧಿಕಾರಿಗಳು ಮತ್ತು ತಾಲ್ಲೂಕಿನ ದಲಿತ ಸಂಘಟನೆಗಳ ಸಭೆ ಕರೆದು ನಗರದ ಹೃದಯ ಭಾಗದಲ್ಲೇ ಉಪಯುಕ್ತವಾದ ಸ್ಥಳ ಗುರ್ತಿಸುವ ಕೆಲಸ ಮಾಡುವ ಭರವಸೆ ನೀಡಿದರು.
“ದಲಿತ ಸಂಘಟನೆಗಳು ಸತತವಾಗಿ 30 ವರ್ಷಗಳಿಂದ ಹೋರಾಟಗಳು ಮಾಡಿಕೊಂಡು ಬರುತ್ತಿವೆ. ತಾಲ್ಲೂಕಿಗೆ ಹಲವು ಗ್ರೇಡ್ -1 ಅಧಿಕಾರಿಗಳು ಬಂದು ಹೋಗುತ್ತಿದ್ದಾರೆ. ಯಾವೊಬ್ಬ ಅಧಿಕಾರಿಯೂ ಸಹಾ ಕಾಳಜಿ ವಹಸುತ್ತಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಭವನಕ್ಕಾಗಿ 1.5 ಕೋಟಿ ಅನುದಾನ ಮೀಸಲಿಟ್ಟಿದೆ. ಆದರೆ ಅಧಿಕಾರಿಗಳು ಅಂಬೇಡ್ಕರ್ ಭವನಕ್ಕಾಗಿ ಜಾಗ ಗುರ್ತಿಸುವಲ್ಲಿ ಹಾಗೂ ನಗರದಲ್ಲಿ ಭವನ ನಿರ್ಮಿಸಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ” ಎಂದು ದಲಿತ ಮುಖಂಡರು ಬೇಸರ ವ್ಯಕ್ತಪಡಿಸಿದರು.
ದೇಶದ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅವರನ್ನ ಜಾತಿಯ ದೃಷ್ಟಿ ಕೋನದಲ್ಲಿ ಯಾರೂ ನೋಡಬಾರದು. ರಂಗಮಂದಿರ ಇರದ ಶಿಡ್ಲಘಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾದರೆ ನಗರದಲ್ಲಿ ಕಲೆ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ವಿವಿಧ ಜಯಂತಿಗಳನ್ನು ಆಚರಿಸಲು ಅನುಕೂಲವಾಗುತ್ತದೆ. ಕ್ಷೇತ್ರದ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಿ ಭವನ ನಿರ್ಮಿಸಬೇಕೆಂದು ದಲಿತ ಯುವ ಮುಖಂಡರು ಮನವಿಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ದಲಿತ ಮುಖಂಡರಾದ ಬೈರಗಾನಹಳ್ಳಿ ಗೋವಿಂದ, ಈಧರೆ ಪ್ರಕಾಶ್, ವೆಂಕಟೇಶ್, ಮಳ್ಳೂರು ಅಶೋಕ, ವೇಣು, ಭಕ್ತರಹಳ್ಳಿ ಪ್ರತೀಶ್, ಆನಂದ್ ಕುಮಾರ್, ವಿಜಯ್ ಕುಮಾರ್, ದೊಣ್ಣಹಳ್ಳಿ ರಮೇಶ್, ವೇಣು, ಹರಿಪ್ರಸಾದ್, ಕಿರಣ್, ಮುನಿಆಂಜಿನಪ್ಪ, ಮುನಿಕೃಷ್ಣ, ದೇವರಮಳ್ಳೂರು ಕ್ರಿಷ್ಣಪ್ಪ, ಚಲವಾಧಿ ತ್ಯಾಗರಾಜು, ನಗರಸಭೆ ಸದಸ್ಯ ಕೃಷ್ಣಮೂರ್ತಿ, ಕೋಟಹಳ್ಳಿ ಅನಿಲ್ ಕುಮಾರ್ ಹಾಜರಿದ್ದರು.
Sidlaghatta Cocoon Market-11/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 11/01/2021
CB Lots: 303
Qty: 15792 Kgs
Max: 435
Min: 155
Avg: 310
BV Lots: 06
Qty: 273 Kgs
Max: 450
Min: 305
Avg: 386
ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಉದ್ಘಾಟನೆ
ನಗರದ ಒಂದನೇ ನಗರ್ತ ಪೇಟೆಯ ಶ್ರೀ ಕಾಳಿಕಾಂಬ ಕಮಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 2020 -21 ನೇ ಸಾಲಿನ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಉದ್ಘಾಟಿಸಿ ಯುವ ಮತ್ತು ಕ್ರೀಡಾಭಿವೃದ್ಧಿ ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿದರು.
ಓದಿನ ಜೊತೆಗೆ ಮಕ್ಕಳು ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ. ಪೋಷಕರೂ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಲು ಆಸಕ್ತಿ ವಹಿಸಬೇಕು. ನಿಯಮಿತವಾಗಿ ದೇಹವನ್ನು ದಂಡಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನೂ ಸಹ ಬೆಳೆಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಸ್ವಯಂ ರಕ್ಷಣೆಗಾಗಿ ಎಲ್ಲಾ ಮಕ್ಕಳು ಕರಾಟೆ ಕಲಿಯಬೇಕು, ವಿಶೇಷವಾಗಿ ಹೆಣ್ಣುಮಕ್ಕಳು ಕರಾಟೆಯಲ್ಲಿ ಪ್ರಾವಿಣ್ಯತೆ ಸಾಧಿಸಿದರೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಕರಾಟೆ ಕಲಿಯುವ ಮಕ್ಕಳು ಜೀವನದಲ್ಲಿ ಅತ್ಯಂತ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೆ. ಶಿಕ್ಷಣದ ಜತೆಗೆ ಕರಾಟೆ ಕಲಿಯಬೇಕು. ಇದು ಜೀವನದಲ್ಲಿ ತುಂಬ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿದರು.
ಶ್ರೀ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ಮುನಿರತ್ನಮಾಚಾರ್ ಮಾತನಾಡಿ, ಎಳೆಯ ವಯಸ್ಸಿನಲ್ಲಿ ಕಲಿಯುವ ವಿದ್ಯೆ ಜೀವನ ಪರ್ಯಂತ ನೆರವಾಗುತ್ತದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಖಾಯಿಲೆಗಳಿಂದ ದೂರವಿರಬಹುದು ಎಂದರು.
ಬೆಂಗಳೂರು, ಗೌರಿಬಿದನೂರು, ಬಾಗೇಪಲ್ಲಿ, ಕೋಲಾರ ಮತ್ತು ಶಿಡ್ಲಘಟ್ಟದ ಒಟ್ಟು 70 ಮಕ್ಕಳು ಕರಾಟೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಜನವರಿ 29, 30 ಮತ್ತು 31 ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಶಿಡ್ಲಘಟ್ಟದ ಸ್ಪರ್ಧೆಯಲ್ಲಿನ ವಿಜೇತರು ಪಾಲ್ಗೊಳ್ಳಲು ಅರ್ಹರಾಗುತ್ತಾರೆ ಎಂದು ಕರಾಟೆ ಶಿಕ್ಷಕರು ತಿಳಿಸಿದರು.
ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್‌ನ ಕರಾಟೆ ಶಿಕ್ಷಕ ಅರುಣ್ ಕುಮಾರ್, ಮುನಿರಾಜು, ಬಾಗೇಪಲ್ಲಿ ಕರಾಟೆ ಶಿಕ್ಷಕ ವೆಂಕಟಾದ್ರಿ ಹಾಜರಿದ್ದರು.
Sidlaghatta Cocoon Market-10/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 10/01/2021
CB Lots: 308
Qty: 15784 Kgs
Max: 405
Min: 240
Avg: 314
BV Lots: 01
Qty: 12 Kgs
Max: 275
Min: 275
Avg: 275
ನಗರದ ಹೃದಯಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯ
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಶಾಸಕ ವಿ. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ತಹಶೀಲ್ದಾರ್ ಅರುಂಧತಿ ಅವರ ಉಪಸ್ಥಿತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಭೆಯನ್ನು ಕರೆಯಲಾಗಿತ್ತು.
ಈ ಸಭೆಗೆ ಭಾಗವಹಿಸಲು ದಲಿತ ಸಂಘಟನೆಗಳ ಒಕ್ಕೂಟದಿಂದ ಎಲ್ಲಾ ಮುಖಂಡರು ಒಗ್ಗೂಡಿ ಪ್ರವಾಸಿಮಂದಿರದಲ್ಲಿ ಸೇರಿ ಚರ್ಚಿಸಿ ತೋಟಗಾರಿಕೆ ಇಲಾಖೆಯ ಸ್ಥಳದಲ್ಲಿ ಸ್ಥಳ ನಿಗದಿಪಡಿಸಬೇಕೆಂದು ಸಭೆಯಲ್ಲಿ ಮಂಡಿಸಲು ತೀರ್ಮಾನಿಸಿದರು. ತಾಲ್ಲೂಕು ಕಚೇರಿಯಲ್ಲಿ ಸಭೆ ನಡೆಸದೇ ಶಾಸಕ ವಿ.ಮುನಿಯಪ್ಪ ಅವರು ಪ್ರವಾಸಿ ಮಂದಿರದ ಹೊರಗೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರೊಂದಿಗೆ ಈ ಬಗ್ಗೆ ಚರ್ಚಿಸಿದರು.
ಈ ವೇಳೆ ಶಾಸಕ ವಿ.ಮುನಿಯಪ್ಪ ಮಾತನಾಡಿ, ನೀವು ಕೇಳುತ್ತಿರುವ ತೋಟಗಾರಿಕೆಯ ಸ್ಥಳ ನೀಡಲು ಆಗುವುದಿಲ್ಲ. ರಾಜ್ಯದ ಎಲ್ಲಾ ತಾಲ್ಲೂಕು ಕಚೇರಿಗಳ ಮುಂಭಾಗದಲ್ಲೇ ತೋಟಗಾರಿಕೆ ಇಲಾಖೆ ಇದೆ. ಈಗಾಗಲೆ ಭವನ ನಿರ್ಮಿಸಲು ಸರ್ಕಾರದಿಂದ ಹಣ ಮಂಜೂರಾಗಿದೆ. ಆದ್ದರಿಂದ ನಗರದ ಹೊರ ಭಾಗದಲ್ಲಿ ಭವನಕ್ಕೆ ಸೂಚಿಸಲಾದ ಸ್ಥಳದಲ್ಲಿ ನಿರ್ಮಿಸುವ ಮೂಲಕ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಎಲ್ಲರೂ ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಂಜಿಗುಂಟೆ ಮೂರ್ತಿ, “ಡಾ.ಬಿ.ಆರ್. ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣವಾದರೆ ನಗರದಲ್ಲಿ ಎಲ್ಲಾ ರೀತಿಯ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುತ್ತದೆ. ಊರಿನಿಂದ ದೂರ ನಿರ್ಮಿಸಿದರೆ ಯಾರಿಗೂ ಉಪಯೋಗವಾಗದು. ಆದ್ದರಿಂದ ಭವನ ತೋಟಗಾರಿಕೆಯ ಇಲಾಖೆಯ ಸ್ಥಳದಲ್ಲಿ ಕಟ್ಟಲು ತಾವು ಅನುಮತಿ ಸೂಚಿಸಿ ಸರ್ಕಾರಕ್ಕೆ ಪತ್ರ ಬರೆಯಿರಿ. ನಗರದಿಂದ ಡಾ. ಬಿ.ಆರ್ ಅಂಬೇಡ್ಕರ್ ಭವನ ಹೊರ ಹಾಕದೆ ನಗರದಲ್ಲೇ ಕಟ್ಟುವಂತ ಕೆಲಸ ಆಗಬೇಕು” ಎಂದು ವಿನಂತಿಸಿದರು.
ಶಾಸಕ ವಿ. ಮುನಿಯಪ್ಪ ಮುಖಂಡರ ಮನವಿಯನ್ನು ಆಲಿಸಿ, “ಈ ದಿನದ ಸಭೆಯನ್ನು ಮುಂದೂಡಲಾಗಿದೆ. ಸಂಸದ ಆರ್. ಮುನಿಸ್ವಾಮಿ ಅವರು ಸಹ ಭಾಗವಹಿಸಲಿ. ಸರ್ಕಾರದಿಂದ ಬಿಡುಗಡೆಯಾದ ಹಣ ಸದುಪಯೋಗ ಮಾಡಿಕೊಂಡು ಡಾ. ಬಿ.ಆರ್.ಅಂಬೇಡ್ಕರ್ ಭವನ ಕಟ್ಟಲು ಸ್ಥಳ ನಿಗದಿ ಮಾಡೋಣ. ಸಂಸದರೊಂದಿಗೆ ಚರ್ಚಿಸಿ ಸಭೆಯ ದಿನಾಂಕವನ್ನು ನಿಗದಿ ಮಾಡುತ್ತೇವೆ” ಎಂದರು.
ತಹಶೀಲ್ದಾರ್ ಅರುಂಧತಿ, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ನಗರಠಾಣೆ ಪಿಎಸ್ ಐ ಸತೀಶ್, ಶಿರಸ್ಥೇದಾರ್ ಮಂಜುನಾಥ್, ದಲಿತ ಸಂಘಟನೆಗಳ ಒಕ್ಕೂಟ ಕಾರ್ಯದರ್ಶಿ ಈಧರೆ ಪ್ರಕಾಶ್, ಕೆ.ಎಸ್ ದ್ಯಾವಕೃಷ್ಣಪ್ಪ, ನಾಗನರಸಿಂಹ, ಗೊರಮಡುಗು ನಾರಾಯಣಸ್ವಾಮಿ, ನಡಿಪಿನಾಯಕನಹಳ್ಳಿ ಎನ್.ಎ ವೆಂಕಟೇಶ್, ಜೆ. ವೆಂಕಟಾಪುರ ವಿಜಯಕುಮಾರ್, ತಾತಹಳ್ಳಿ ಚಲಪತಿ, ಭಕ್ತರಹಳ್ಳಿ ಪ್ರತೀಶ್, ದೇವರಮಳ್ಳೂರು ಕೃಷ್ಣಪ್ಪ, ಅರುಣ್ ಕುಮಾರ್, ಮಳ್ಳೂರು ಅಶೋಕ್, ರವಿಶಂಕರ್, ಪ್ರಕಾಶ್, ಮಧು, ಸೊಣ್ಣೇನಹಳ್ಳಿ ವೆಂಕಟೇಶಪ್ಪ, ಪಿಂಡಿಪಾಪನಹಳ್ಳಿ ಮುನಿಆಂಜಿಪ್ಪ, ರಾಮಾಂಜಿಪ್ಪ, ತಾತಹಳ್ಳಿ ಗಂಗಾಧರ್, ಡಿ.ಸಿ.ನರಸಿಂಹಮೂರ್ತಿ, ಬೈರಗಾನಹಳ್ಳಿ ಕಿರಣ್, ಲಕ್ಕೇನಹಳ್ಳಿ ವೆಂಕಟೇಶ್ ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕರಾಟೆ ಕಲೆಯನ್ನು ಬೆಳೆಸುವ ಸಲುವಾಗಿ ಮತ್ತು ಪ್ರತಿಭಾವಂತ ಕರಾಟೆ ಪಟುಗಳಿಗೆ ಅವಕಾಶ ಕಲ್ಪಿಸಲು ಜನವರಿ 10 ರಂದು ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಡೆಸಲಾಗುತ್ತಿದೆ ಎಂದು ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್‌ನ ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಅವರು, ಶಿಡ್ಲಘಟ್ಟ ನಗರದ ಒಂದನೇ ನಗರ್ತ ಪೇಟೆಯ ಶ್ರೀ ಕಾಳಿಕಾಂಬ ಕಮ್ಮಟೇಶ್ವರಸ್ವಾಮಿ ಸಮುದಾಯ ಭವನದಲ್ಲಿ 2020 -21 ನೇ ಸಾಲಿನ ಕರಾಟೆ ಚಾಂಪಿಯನ್ ಶಿಪ್ ನಡೆಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಮೊದಲು ಕರಾಟೆ ಪಟುಗಳ ತಾಲೀಮ್ ನಡೆಸಿ, ನಂತರ ವಿವಿಧ ಸ್ಪರ್ಧೆಗಳನ್ನು ನಡೆಸಿ, ಸಂಜೆ ವೇಳೆಗೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೆರೆ ತುಂಬಿದ ಪರಿಣಾಮವಾಗಿ ಅಂತರ್ಜಲ ವೃದ್ಧಿ – ಉಕ್ಕಿ ಹರಿದ ರೈತರ ಕೊಳವೆ ಬಾವಿಗಳು
ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳು ತುಂಬಿ ಅಂತರ್ಜಲ ವೃದ್ಧಿಯಾಗುತ್ತಿರುವ ಪರಿಣಾಮ, ತಲಕಾಲಬೆಟ್ಟ ಗ್ರಾಮ ಪಂಚಾಯಿತಿಯ ಕರಿಯಪ್ಪನಹಳ್ಳಿಯ ರೈತರಾದ ಮಲ್ಲಪ್ಪ, ಬೈಯನ್ನಗಾರಿ ಆನಂದ, ಚಿನ್ನಪ್ಪಯ್ಯ ಮತ್ತು ನಾರಾಯಣಸ್ವಾಮಿಯವರ ಕೊಳವೆ ಬಾವಿಯಲ್ಲಿ ಅಂತರ್ಜಲ ವೃದ್ಧಿಯಾದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಇವುಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.
Sidlaghatta Cocoon Market-09/01/2021
ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ
Date: 09/01/2021
CB Lots: 292
Qty: 15309 Kgs
Max: 433
Min: 100
Avg: 333
BV Lots: Nil





















