Home Blog Page 318

Sidlaghatta Cocoon Market Watch – 31/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 31/08/2020

CB Lots: 607
Qty: 32742 Kgs
Max: 370
Min: 200
Avg: 292
BV Lots: 02
Qty: 167 Kgs
Max: 336
Min: 335
AVG: 336
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟದ ಶಾಲೆಯಲ್ಲಿ ನೂತನ ಬೋಧನಾ ಕ್ರಮ ಅಳವಡಿಕೆ

0

ಕೋವಿಡ್ ಕಾರಣದಿಂದ ಅನೇಕ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ತರಗತಿಗಳ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಕೆಲವೆಡೆಯಂತೂ ಫೀಸ್ ಪಡೆಯಲು ಕದ್ದೂ ಮುಚ್ಚಿ ಮಕ್ಕಳನ್ನು ಶಾಲೆಗೆ ಕರೆಸಿ ಪಾಠ ನಡೆಸುವ ನಾಟಕವೂ ನಡೆದಿದೆ.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಇರುವುದಿಲ್ಲ, ಒಂದೇ ಮನೆಯಲ್ಲಿ ಇಬ್ಬರು ಮೂವರು ಮಕ್ಕಳಿದ್ದಾಗ ಮೊಬೈಲ್ ಹಂಚಿಕೊಳ್ಳುವ ಸಮಸ್ಯೆ, ಪಾಠ ತಪ್ಪಿಸಿಕೊಂಡರೆ ಮತ್ತೆ ಕೇಳಲಾಗದು, ಮಕ್ಕಳು ಎಷ್ಟು ಕಲಿತಿದ್ದಾರೆ ತಿಳಿಯಲಾಗದು. ಮಕ್ಕಳ ಹಾಜರಾತಿಯಿಲ್ಲ, ಇಂಟರ್ ನೆಟ್ ಗಾಗಿ ಮಾಡುವ ಖರ್ಚು ಮುಂತಾದ ತೊಂದರೆಗಳಿಂದ ಆನ್ ಲೈನ್ ಶಿಕ್ಷಣ ನೀರಿನ ಮೇಲಿನ ಗುಳ್ಳೆಯಾಗಿದೆ.
ಮಕ್ಕಳು ಶಾಲೆಗೆ ಬರಲಾಗದ ಈ ಪರಿಸ್ಥಿತಿಯಲ್ಲಿ ಶಾಲೆಯನ್ನೇ, ಪಾಠವನ್ನೇ, ಶಿಕ್ಷಕರ ಜೊತೆಗೆ ಮಕ್ಕಳ ಬಳಿ ತೆಗೆದುಕೊಂಡು ಹೋಗುವ ವಿನೂತನ ತಂತ್ರಾಂಶವನ್ನು ಶಿಡ್ಲಘಟ್ಟದ ದಿ ಕ್ರೆಸೆಂಟ್ ಶಾಲೆ “ಆಪ್ಟಿಮಾ ಸಾಫ್ಟ್ ವೇರ್ ಸೊಲ್ಯೂಷನ್ಸ್” ಅವರ ಸಹಯೋಗದಲ್ಲಿ ಅಭಿವೃದ್ದಿ ಪಡಿಸಿದೆ. ಆನ್ ಲೈನ್ ಮತ್ತು ಆಫ್ ಲೈನ್ ಎರಡರ ಸಕಾರಾತ್ಮಕ ಗುಣಗಳನ್ನು ಜೊತೆಗೂಡಿಸಿಕೊಂಡು ಒಂದು ಹೈಬ್ರಿಡ್ ಮಾದರಿಯ ವರ್ಚುವಲ್ ತರಗತಿಯ ತಾಂತ್ರಿಕತೆಯನ್ನು ಸಿದ್ಧಪಡಿಸಿದೆ. ಈ ವರ್ಚುವಲ್ ತರಗತಿ ತಂತ್ರಾಂಶ ಮತ್ತು ವೀಡಿಯೋ ಪಠ್ಯವನ್ನು ಉಚಿತವಾಗಿ ಸರ್ಕಾರಿ ಶಾಲೆಗಳೊಂದಿಗೆ ಹಂಚಿಕೊಳ್ಳಲೂ ಅವರು ಸಿದ್ಧರಿದ್ದಾರೆ.
ಪುನರ್ ಕಲಿಕೆ, ಪುನರ್ ಮನನ, ಪ್ರತಿ ಪಾಠದ ನಂತರ ಪರೀಕ್ಷೆ ಈ ತರಗತಿಯ ಮುಖ್ಯ ಲಕ್ಷಣಗಳು. ಪ್ರತಿ ಮಗುವಿಗೂ ಯೂಸರ್ ಐಡಿ, ಪಾಸ್ ವರ್ಡ್ ಇದ್ದು, ಮಕ್ಕಳ ಶೈಕ್ಷಣಿಕ ಚಲನವಲನಗಳನ್ನು ಶಿಕ್ಷಕರು ತಿಳಿಯಬಹುದಾದ್ದರಿಂದ ಮಕ್ಕಳಿಗೆ ತಮ್ಮನ್ನು ಗಮನಿಸುವವರಿದ್ದಾರೆಂಬ ಎಚ್ಚರಿಕೆ ಇರುತ್ತದೆ. ಇಂಟರ್ ನೆಟ್ ಹೆಚ್ಚು ಬಳಕೆಯಾಗದು, ಮಗುವು ತನ್ನದೇ ಸಮಯದಲ್ಲಿ ಪಾಠ ಕೇಳಬಹುದು. ಇದರಿಂದ ಪೋಷಕರಿಗೆ ಕೂಡ ಹೊರೆಯಾಗದು.
ಪ್ರತಿಯೊಂದು ವಿಷಯದ ಪಾಠಗಳನ್ನು ಚಿತ್ರ, ಧ್ವನಿ, ವೀಡಿಯೋ ರೂಪದಲ್ಲಿ 15 ನಿಮಿಷಕ್ಕಿಂತ ಹೆಚ್ಚಿರದ ಹಾಗೆ ಸಿದ್ಧಪಡಿಸಲಾಗಿದೆ. ಪ್ರತಿ ಪಾಠ ಕಲಿತ ನಂತರ ಮಕ್ಕಳು ಮುಂದಿನ ಪಾಠವನ್ನು ಅಭ್ಯಾಸ ಮಾಡಲು ಹಿಂದಿನ ಪಾಠದ ಘಟಕ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಪ್ರತಿಯೊಂದು ಪಾಠದ ನಂತರ ಟಿಪ್ಪಣಿಗಳು ಸಹ ಪಿಡಿಎಫ್ ಮೂಲಕ ನೀಡಲಾಗುತ್ತಿದೆ.
ಕೋವಿಡ್ ನಂತರ ಎಂದಿನಂತೆ ಶಾಲೆಗಳು ನಡೆಯುವಂತಾದಾಗ ಈಗಿನ ಪಾಠಗಳ ವೀಡಿಯೋಗಳನ್ನು ಬಳಕೆ ಮಾಡಿಕೊಳ್ಳಬಹುದು. ಮಕ್ಕಳು, ಶಿಕ್ಷಕರು ಮತ್ತು ಪೋಷಕರ ನಡುವಿನ ಕೊಂಡಿಯಂತೆ ಡಿಜಿಟಲ್ ಡೈರಿಯನ್ನು ಸಿದ್ಧಪಡಿಸುವ ಯೋಜನೆಯಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರಿಗೆ ಶರಣ ಸಾಧಕ ಪ್ರಶಸ್ತಿ

0

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತು, ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು ಜಂಟಿಯಾಗಿ ಶರಣಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ವಿಜಯಪುರದ ಗಂಗಾತಾಯಿ ದೇವಾಲಯದ ಆವರಣದಲ್ಲಿ ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವಚನದಿನಾಚರಣೆ, ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಕಳೆದ 25 ವರ್ಷಗಳಿಂದ ಎಚ್.ಎಸ್.ರುದ್ರೇಶಮೂರ್ತಿ ಅವರು ಶರಣಸಾಹಿತ್ಯ ಚಿಂತನೆಯಲ್ಲಿ ತೊಡಗಿದ್ದು, ನಿರಂತರವಾಗಿ ಶರಣರ ಆದರ್ಶಗಳು, ವಚನಸಾಹಿತ್ಯದಲ್ಲಿನ ಮೌಲ್ಯಗಳ ಕುರಿತು 150 ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದು, ಶರಣಸಾಹಿತ್ಯ ಪ್ರಸಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಮಾರ್ಚ್‌ನಿಂದೀಚೆಗೆ ಕೊರೋನಾ ಕುರಿತ ಜಾಗೃತಿ, ಆನ್‌ಲೈನ್ ತರಬೇತಿಗಳಲ್ಲಿ ಸಂಪನ್ಮೂಲವ್ಯಕ್ತಿಗಳಾಗಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ, ಅಗತ್ಯವಿರುವವರಿಗೆ ದಿನಸಿ ಮತ್ತು ಔಷಧಿಕಿಟ್‌ಗಳ ವಿತರಣೆ, ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳು, ಉಚಿತ ಮಾಸ್ಕ್ ಗಳ ವಿತರಣೆ, ಮಕ್ಕಳಿಗಾಗಿ ರಜಾಕಾಲದಲ್ಲಿ ಉಚಿತ ಗಾಂಧಿಪುಸ್ತಕಗಳ ಹಂಚಿಕೆ ಮತ್ತು ಮನೆಯಲ್ಲಿಯೇ ಸುರಕ್ಷಿತವಾಗಿದ್ದು ಬಹುಮಾನಗಳ ಗೆಲ್ಲಬಲ್ಲ ವಿವಿಧ ಸ್ಪರ್ಧೆಗಳ ಆಯೋಜನೆ, ಮಹಾತ್ಮಗಾಂಧಿ ನ್ಯಾಶನಲ್ ಕೌನ್ಸಿಲ್ ಆಫ್ ರೂರಲ್ ಎಜುಕೇಶನ್, ರಾಜ್ಯ ಎನ್‌.ಎಸ್‌.ಎಸ್ ಕೋಶಗಳ ವತಿಯಿಂದ ನಡೆದ ಸ್ವಚ್ಚತಾ ಕ್ರಿಯಾಯೋಜನೆ ಕಾರ್ಯಾಗಾರ, ಸ್ಪಿಟ್ ಫ್ರೀ ಇಂಡಿಯಾ ಮೂವ್‌ಮೆಂಟ್‌ನಲ್ಲಿ ಪಾಲ್ಗೊಳ್ಳುವಿಕೆಯಂತಹ ವಿವಿಧ ಸೃಜನಾತ್ಮಕಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ಅವರ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಬಿಹಾರ ರಾಜ್ಯ ಕಾಶಿಪುರ ಜಿಲ್ಲಾ ಸಮಷ್ಟಿಪುರದ ಪ್ರಗತಿ ಆದರ್ಶ್ ಸೇವಾಕೇಂದ್ರವು ಇಂಡಿಯನ್ ಕೊರೊನಾ ವಾರಿಯರ್ಸ್ ಪ್ರಶಸ್ತಿ ನೀಡಿ ಗೌರವಿಸಿತ್ತು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಾನುವಾರ 3 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ 3 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ಚಿಕ್ಕದಿಬ್ಬೂರಹಳ್ಳಿಯ 32 ವರ್ಷದ ಗಂಡಸು,
  2. ಗಂಜಿಗುಂಟೆ ವೇಮಗಲ್ ನ 16 ವರ್ಷದ ಯುವತಿ, 20 ವರ್ಷದ ಯುವತಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 30/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 30/08/2020

CB Lots: 552
Qty: 30714 Kgs
Max: 340
Min: 210
Avg: 292
BV Lots: 01
Qty: 91 Kgs
Max: 370
Min: 370
AVG: 370
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಹಳ್ಳಿಯಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಬಿಪಿ ಶುಗರ್ ಪರೀಕ್ಷೆ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಬಿ.ಪಿ, ಶುಗರ್ ಪರೀಕ್ಷೆ ಮಾಡುವ ವಿಧಾನವನ್ನು ತಿಳಿಸಿ ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರಮೇಶ್ ಮಾತನಾಡಿದರು.

 ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಾರಕ್ಕೊಮ್ಮೆ ಸರದಿಯಂತೆ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಆರೋಗ್ಯ ತಪಾಸಣೆಯನ್ನು ನಡೆಸಬೇಕು ಎಂದು ಅವರು ತಿಳಿಸಿದರು.

 ತಮ್ಮ ದೈನಂದಿನ ಕಷ್ಟ ಕಾರ್ಪಣ್ಯಗಳ ನಡುವೆ ಗ್ರಾಮೀಣ ಜನತೆ ಆರೋಗ್ಯದ ಕಡೆ ಗಮನ ನೀಡುವುದು ಕಡಿಮೆ. ಹಾಗಾಗಿ ಬಿಪಿ, ಶುಗರ್ ಪರೀಕ್ಷೆಗಾಗಿ  ಹಳ್ಳಿಗಳಿಗೇ ಆರೋಗ್ಯ ಅಭಿಯಾನ ಹೊರಟಿದೆ. ಅದನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಯಶಸ್ವಿಯಾಗಿ ನಡೆಸಬೇಕಿದೆ.
ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಸಂಸ್ಥೆ ಗ್ರಾಮೀಣ ಜನರ ಆರೋಗ್ಯ ಸ್ಥಿತಿಗತಿ ಕುರಿತು ಈಚೆಗೆ ಅಧ್ಯಯನ ನಡೆಸಿ ಹಳ್ಳಿಗಳಲ್ಲೂ ಬಿಪಿ ಮತ್ತು ಮಧುಮೇಹ ಕಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿತ್ತು. ಗ್ರಾಮೀಣ ಜನತೆಗೆ ಈ ಬಗ್ಗೆ ನಿರ್ಲಕ್ಷ್ಯವಿದೆ ಎಂದು ವರದಿ ಪ್ರಸ್ತಾಪಿಸಿತ್ತು. ಈ ವರದಿ ಆಧರಿಸಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲೇ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. 30 ವರ್ಷ ದಾಟಿದ ಎಲ್ಲರಿಗೂ ಉಚಿತವಾಗಿ ಬಿಪಿ, ಮಧುಮೇಹ ಪರೀಕ್ಷಿಸಲಾಗುತ್ತದೆ ಎಂದರು.
ಪರೀಕ್ಷೆ ಕುರಿತು ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಹಳ್ಳಿಯ ಮನೆಮನೆಗೆ ಹೋಗಿ ವಿಷಯ ಮುಟ್ಟಿಸಬೇಕು. ಅತ್ಯಾಧುನಿಕ ಸರಳ ಯಂತ್ರವು ಸ್ಟ್ರಿಪ್ ಮಾದರಿಯಲ್ಲಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಪರೀಕ್ಷಿಸುತ್ತದೆ. ಮಾಮೂಲಿ ವಿಧಾನದ ಮೂಲಕ ಬಿಪಿ ಪರೀಕ್ಷೆಯನ್ನೂ ಮಾಡುತ್ತಾರೆ. ಪರೀಕ್ಷೆಯಿಂದ ಸಮಸ್ಯೆ ಕಂಡುಬಂದರೆ ಆ ವ್ಯಕ್ತಿಗೆ ತಿಳಿಸಿ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಯಾವುದಾದರೂ ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವಂತೆ ಸೂಚಿಸಬೇಕು. ಕೆಲಸದ ಒತ್ತಡದಲ್ಲಿ ಆರೋಗ್ಯ ಪರೀಕ್ಷೆಗೆ ಹೋಗದ, ಹಣದ ಸಮಸ್ಯೆಯಿಂದ ಹಿಂಜರಿಯುತ್ತಿದ್ದ ಹಾಗೂ ನಿರ್ಲಕ್ಷ್ಯದಲ್ಲಿದ್ದ ಗ್ರಾಮೀಣ ಜನರಿಗೆ ಈ ವ್ಯವಸ್ಥೆ ವರದಾನವಾಗಿದೆ ಎಂದು ಹೇಳಿದರು.

 ಆರೋಗ್ಯ ಸಹಾಯಕಿ ಭಾಗ್ಯಲಕ್ಷ್ಮಿ, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 12 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಮಹಬೂಬ್ ನಗರದ 30 ವರ್ಷದ ಮಹಿಳೆ,
  2. ಕೋಟೆ ವೃತ್ತದ 40 ವರ್ಷದ ಗಂಡಸು, 24 ವರ್ಷದ ಗಂಡಸು,
  3. ಅಂಜನಾದ್ರಿ ಲೇಔಟ್ ನ 17 ವರ್ಷದ ಯುವತಿ,
  4. ವಂಟೂರಿನ 26 ವರ್ಷದ ಮಹಿಳೆ, 4 ವರ್ಷದ ಹುಡುಗ, 78 ವರ್ಷದ ಗಂಡಸು, 60 ವರ್ಷದ ಮಹಿಳೆ, 35 ವರ್ಷದ ಗಂಡಸು,
  5. ವೇಮಗಲ್, ಗಂಜಿಗುಂಟೆಯ 68 ವರ್ಷದ ಗಂಡಸು,
  6. ಕಲಿಪುರದ 22 ವರ್ಷದ ಗಂಡಸು,
  7. ಅಂಬಿಗನಹಳ್ಳಿಯ 26 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

BESCOM ಗ್ರಾಹಕರು ವಿದ್ಯುತ್ ಬಿಲ್ಲಿಗೆ ರೇಷನ್ ಕಾರ್ಡ್ ಜೋಡಣೆ ಮಾಡಲು ಸೂಚನೆ

0

BESCOM ಮಾಪಕ ಓದುಗರು ಗ್ರಾಹಕರಿಗೆ ಬಿಲ್ ನೀಡುವ ಸಂದರ್ಭದಲ್ಲಿ ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲಿಗೆ ರೇಷನ್ ಕಾರ್ಡ್ ಜೋಡಣೆ ಮಾಡಲು ತಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಅವರಿಗೆ ನೀಡಿ ನೋಂದಣಿ ಪ್ರಕ್ರಿಯೆಗೆ ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
BESCOM Ration Card Linking Notification Sidlaghatta

Sidlaghatta Cocoon Market Watch – 29/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 29/08/2020

CB Lots: 509
Qty: 31351 Kgs
Max: 350
Min: 200
Avg: 294
BV Lots: 05
Qty: 348 Kgs
Max: 352
Min: 255
AVG: 329
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಇಂದಿರಾಗಾಂಧಿ ವಸತಿಶಾಲೆಯ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರು

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು 24 ಕೋಟಿ 75 ಲಕ್ಷ ರೂಗಳ ವೆಚ್ಚದಲ್ಲಿ ಇಂದಿರಾಗಾಂಧಿ ವಸತಿಶಾಲೆಯನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಕೆ.ಸಿ.ರಾಜಕಾಂತ್ ತಿಳಿಸಿದರು.

 ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಇಂದಿರಾಗಾಂಧಿ ವಸತಿ ಶಾಲೆಯ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು. ಜಾತಿ ಮತ ಭೇದ ಇಲ್ಲದೇ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳು ಮತ್ತು ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲಾಗುತ್ತಿದ್ದು ಪೋಷಕರು ತಮ್ಮ ತಮ್ಮ ಮಕ್ಕಳನ್ನು ಈ ವಸತಿ ಶಾಲೆಗಳಿಗೆ ಸೇರಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದರು.

 ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಅಗ್ರಸ್ಥಾನ ಹೊಂದಿದೆ. ಜಿಲ್ಲೆಯ 6 ವಸತಿಯುತ ಶಾಲೆಗಳು ಮತ್ತು 30 ಸರ್ಕಾರಿ ವಿದ್ಯಾರ್ಥಿನಿಲಯಗಳು ಶೇಕಡ ನೂರರಷ್ಟು ಫಲಿತಾಂಶ ದಾಖಲಿಸಿವೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತೇವೆ. ಜೊತೆಗೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಎಲ್ಲಾ ರೀತಿಯ ನೆರವು ಕಲ್ಪಿಸುತ್ತೇವೆ ಎಂದರು.

 ಕೊರೊನಾ ಸೋಂಕು ನಿಯಂತ್ರಿಸಲು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳನ್ನು ಬಳಕೆ ಮಾಡುತ್ತಿದ್ದೇವೆ. ನಾಗರಿಕರು ತ್ವರಿತವಾಗಿ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಕೆಲವೊಂದು ವಸತಿಶಾಲೆಗಳನ್ನು ಕೋವಿಡ್ ಕೇಂದ್ರಗಳಾಗಿ ಪರಿವರ್ತಿಸಿದ್ದೇವೆ. ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ ಎಂದರು.

 ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತೇಜಾನಂದ್‌ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳು ಉತ್ತಮವಾಗಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸೋಪ್‌ಕಿಟ್ಸ್-ನೋಟ್ ಬುಕ್ಸ್, ಶೂ ಸಾಕ್ಸ್, 3 ಜೊತೆ ಸಮವಸ್ತ್ರ ನೀಡಲಾಗುತ್ತದೆ. ವಸತಿಯುತ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಸಹ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್-ಪ್ರಯೋಗಾಲಯ ಮತ್ತು ಗ್ರಂಥಾಲಯದ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.

 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿಯ ಸದಸ್ಯೆ ಕಮಲಮ್ಮ, ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಶೇಷಾದ್ರಿ, ನಾರಾಯಣಸ್ವಾಮಿ ಹಾಜರಿದ್ದರು.

Sidlaghatta Cocoon Market Watch – 28/08/2020

0

Date: 28/08/2020

CB Lots: 549
Qty: 29895
Kgs Max: 333
Min: 211
Avg: 292

BV Lots: NILL

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻 https://www.facebook.com/sidlaghatta

Instagram 📷 https://www.instagram.com/sidlaghatta

Youtube ▶️ https://www.youtube.com/c/sidlaghatta

Website 🌐 https://www.sidlaghatta.com

📱 Join WhatsApp https://wa.me/917406303366?text=Hi

ಶಿಕ್ಷಣಾಧಿಕಾರಿಯಿಂದ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಅಭಿನಂದನೆ

0

ಶಿಡ್ಲಘಟ್ಟ ತಾಲ್ಲೂಕಿನ ಕದಿರಿನಾಯಕನಹಳ್ಳಿಯ ಎಸ್.ಆರ್.ಇ.ಟಿ ಪ್ರೌಢಶಾಲೆಯ ವಿದ್ಯಾರ್ಥಿ ಪಿ.ಅರುಣ್ ಕುಮಾರ್ ಗ್ರಾಮೀಣ ಭಾಗದ ಬಡಕುಟುಂಬದ ಹಿನ್ನೆಲೆಯವನಾದರೂ ಎಸ್ಸೆಸ್ಸೆಲ್ಸಿಯ ಇಂಗ್ಲಿಷ್ ಭಾಷೆಯಲ್ಲಿ 99 ಅಂಕಗಳನ್ನು ಗಳಿಸಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಅವರ ಮನೆಗೆ ಹೋಗಿ ಅಭಿನಂದಿಸಿದರು

ಸಾಧನಾಸ್ಫೂರ್ತಿ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಅಭಿನಂದನೆ

0

ನಗರದದ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ಶಾಲಾ ಆವರಣದಲ್ಲಿ ಗುರುವಾರ ಜಿಲ್ಲಾ ಸಾರ್ವಜನಿಕಶಿಕ್ಷಣ ಇಲಾಖೆ, ಶಿಕ್ಷಕರ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ಸಾಧನಾಸ್ಫೂರ್ತಿ ಶಿಕ್ಷಕರ ಅಭಿನಂದನಾ ಕಾರ್ಯಕ್ರಮ, ವಿದ್ಯಾಗಮ ಕಾರ್ಯಕ್ರಮ ಅನುಷ್ಟಾನ ಪ್ರಗತಿಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾ ಸಾರ್ವಜನಿಕಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ನಾಗೇಶ್ ಮಾತನಾಡಿದರು.

ಕೊರೋನಾ ಸಂಕಷ್ಟಕಾಲದಲ್ಲಿಯೂ ವಿದ್ಯಾರ್ಥಿಗಳು ಕಠಿಣಶ್ರಮವಹಿಸಿ ಸ್ವಕಲಿಕೆಯಲ್ಲಿ ತೊಡಗಿ ಓದಿ ಪರಿಶ್ರಮವಹಿಸಿದ್ದಾರೆ. ಶಿಕ್ಷಕರು ಮಕ್ಕಳ ಮನೆಗಳ ಬಳಿಗೆ ತೆರಳಿ, ಆನ್‌ಲೈನ್ ಮೂಲಕ, ವೀಡಿಯೋ ಪಾಠಗಳ ಮೂಲಕ ಪ್ರೇರೇಪಿಸಿದ ಫಲವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು ಪ್ರಥಮಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.

ಶಾಲೆಗಳಿಗೆ ರಜೆ ಇದ್ದರೂ ಮಕ್ಕಳು ನಿರಂತರವಾಗಿ ಕಲಿಯಲು ಪ್ರೇರೇಪಿಸಿದ ಶಿಕ್ಷಕರ ಶ್ರಮವು ಶ್ಲಾಘನೀಯವಾದುದು. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಉತ್ತಮ ಎಸ್‌ಒಪಿ ಮುಂಜಾಗ್ರತಾಕ್ರಮಗಳನ್ನು ಅನುಸರಿಸಲಾಗಿತ್ತು. ಯಾವುದೇ ಅಡೆತಡೆಗಳಾಗದಂತೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜಿಲ್ಲೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಿದೆ ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿರುವುದು ಶಿಕ್ಷಕರ ಕಾರ್ಯವೈಖರಿಗೆ ಸಿಕ್ಕ ಪ್ರೋತ್ಸಾಹವಾಗಿದ್ದು, ಮುಂದಿನ ಸಾಲಿನ ಫಲಿತಾಂಶ ಉತ್ತಮಪಡಿಸಲು ಈಗಾಗಲೇ ಯೋಜನೆ ರೂಪಿಸಿಕೊಳ್ಳಲಾಗಿದೆ. ಕಳೆದ ಸಾಲಿನ ಆರಂಭದಿಂದಲೇ ಯೋಜನೆ ರೂಪಿಸಿ ಅನುಷ್ಟಾನಗೊಳಿಸಿ, ಉತ್ತಮ ಫಲಿತಾಂಶ ಬರಲು ವಿದ್ಯಾರ್ಥಿಗಳ, ಪೋಷಕರ, ಶಿಕ್ಷಕರ, ಅಧಿಕಾರಿಗಳ ಸಂಘಟಿತ ಪ್ರಯತ್ನವಾಗಿದೆ ಎಂದರು.

ವಿದ್ಯಾಗಮ ಸಹಕಾರಿ: ಕೋವಿಡ್ ಹಿನ್ನೆಲೆಯಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ಕನಿಷ್ಟಗೊಳಿಸಿ ಮಕ್ಕಳನ್ನು ನಿರಂತರ ಕಲಿಕೆಯತ್ತ ಪ್ರೋತ್ಸಾಹಿಸಲು ವಿದ್ಯಾಗಮ ಯೋಜನೆಯು ಸಹಕಾರಿಯಾಗಿದ್ದು, ತಾಲ್ಲೂಕಿನಲ್ಲಿ ಉತ್ತಮವಾಗಿ ಅನುಷ್ಟಾನಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

 ಈ ಸಂದರ್ಭದಲ್ಲಿ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರನ್ನು ಅಭಿನಂದಿಸಲಾಯಿತು.

ಜಿಲ್ಲಾ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ವಿಷಯಪರಿವೀಕ್ಷಕಿ ಕೃಷ್ಣಕುಮಾರಿ, ಅಕ್ಷರದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕ ಆಂಜನೇಯ, ಶಿಕ್ಷಣಸಂಯೋಜಕ ಭಾಸ್ಕರಗೌಡ, ಪರಿಮಳಾ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಮಹದೇವ್, ವಿವಿಧ ವಿಷಯಗಳ ಸಂಪನ್ಮೂಲ ಶಿಕ್ಷಕರ ತಂಡದ ಸದಸ್ಯರು, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಆಡಳಿತಮಂಡಳಿಯ ಪದಾಧಿಕಾರಿಗಳು, ತಮೀಮ್ ಅನ್ಸಾರಿ, ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 22 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 22 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ 12 ವರ್ಷದ ವ್ಯಕ್ತಿ, 31 ವರ್ಷದ ಮಹಿಳೆ,
  2. ನಗರ್ತಪೇಟೆಯ 67 ವರ್ಷದ ಮಹಿಳೆ,  47 ವರ್ಷದ ಗಂಡಸು, 37 ವರ್ಷದ ಮಹಿಳೆ,
  3. ದೇಶದಪೇಟೆಯ 30 ವರ್ಷದ ಮಹಿಳೆ, 45 ವರ್ಷದ ಗಂಡಸು,
  4. ಕೋಟೆಯ 65 ವರ್ಷದ ಮಹಿಳೆ, 35 ವರ್ಷದ ಮಹಿಳೆ,
  5. 2ನೇ ಕಾರ್ಮಿಕ ನಗರದ 27 ವರ್ಷದ ಮಹಿಳೆ,
  6. ಗಾಂಧಿನಗರದ 74 ವರ್ಷದ ಮಹಿಳೆ,
  7. ಹನುಮಂತಪುರದ 50 ವರ್ಷದ ಮಹಿಳೆ, 17 ವರ್ಷದ ಯುವಕ, 19 ವರ್ಷದ ಯುವಕ, 7 ವರ್ಷದ ಹುಡುಗಿ,
  8. ಜಂಗಮಕೋಟೆಯ 74 ವರ್ಷದ ಮಹಿಳೆ, 74 ವರ್ಷದ ಮಹಿಳೆ,
  9. ದೇವರಮಳ್ಳೂರು – ಸೊಣ್ಣೇನಹಳ್ಳಿಯ 62 ವರ್ಷದ ಮಹಿಳೆ,
  10. ಮಳ್ಳೂರಿನ 40 ವರ್ಷದ ಗಂಡಸು,
  11. ವರದನಾಯಕನಹಳ್ಳಿಯ 21 ವರ್ಷದ ಮಹಿಳೆ,
  12. ಸೊಣ್ಣಗಾನಹಳ್ಳಿಯ 76 ವರ್ಷದ ಗಂಡಸು,
  13. ಕಾಕಚೊಕ್ಕಂಡಹಳ್ಳಿಯ 41 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 27/08/2020

0

Date: 27/08/2020

CB Lots: 467
Qty: 25307 Kgs
Max: 351
Min: 200
Avg: 294

BV Lots: 12
Qty: 646 Kgs
Max: 322
Min: 245
AVG: 277

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻 https://www.facebook.com/sidlaghatta

Instagram 📷 https://www.instagram.com/sidlaghatta

Youtube ▶️ https://www.youtube.com/c/sidlaghatta

Website 🌐 https://www.sidlaghatta.com

📱 Join WhatsApp https://wa.me/917406303366?text=Hi

Sidlaghatta Cocoon Market Watch – 26/08/2020

0

Date: 26/08/2020

CB Lots: 447
Qty: 24360 Kgs
Max: 340
Min: 205
Avg: 296

BV Lots: 05
Qty: 429 Kgs
Max: 316
Min: 215
AVG: 265

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻 https://www.facebook.com/sidlaghatta

Instagram 📷 https://www.instagram.com/sidlaghatta

Youtube ▶️ https://www.youtube.com/c/sidlaghatta

Website 🌐 https://www.sidlaghatta.com

📱 Join WhatsApp https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 19 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರದ ನಗರ್ತಪೇಟೆಯ ಕೊರೊನಾ ಸೋಂಕಿತ 45 ವರ್ಷದ ಮಹಿಳೆ ಬುಧವಾರ ಮೃತಪಟ್ಟಿದ್ದಾರೆ. ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 19 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ 44 ವರ್ಷದ ವ್ಯಕ್ತಿ, 50 ವರ್ಷದ ಮಹಿಳೆ,
  2. ನಗರ್ತಪೇಟೆಯ 60 ವರ್ಷದ ಗಂಡಸು,
  3. ದೇಶದಪೇಟೆಯ 65 ವರ್ಷದ ಗಂಡಸು, 45 ವರ್ಷದ ಮಹಿಳೆ, 44 ವರ್ಷದ ಮಹಿಳೆ,
  4. ಕೋಟೆಯ 46 ವರ್ಷದ ಗಂಡಸು,
  5. ಗಂಗಮ್ಮ ದೇವಸ್ಥಾನದ ಬಳಿಯ 74 ವರ್ಷದ ಗಂಡಸು,
  6. ಹನುಮಂತಪುರದ 42 ವರ್ಷದ ಗಂಡಸು, 35 ವರ್ಷದ ಗಂಡಸು,
  7. ಸೊಣ್ಣೇನಹಳ್ಳಿಯ 65 ವರ್ಷದ ಗಂಡಸು,
  8. ಅಂಬಿಗಾನಹಳ್ಳಿಯ 45 ವರ್ಷದ ಗಂಡಸು,
  9. ಭಕ್ತರಹಳ್ಳಿಯ 64 ವರ್ಷದ ಮಹಿಳೆ, 23 ವರ್ಷದ ಮಹಿಳೆ, 59 ವರ್ಷದ ಮಹಿಳೆ,
  10. ತಾಯಪರ್ತಿಯ 37 ವರ್ಷದ ಗಂಡಸು, 34 ವರ್ಷದ ಮಹಿಳೆ,
  11. ವಂಟೂರಿನ 32 ವರ್ಷದ ಗಂಡಸು,
  12. ಆನೂರಿನ 65 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ EO

0

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಲು ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ಅರಿವು ಮೂಡಿಸಿರುವ ಹಿನ್ನಲೆ ಸ್ವತಃ ಪೊರಕೆ ಹಿಡಿದು ಕಸ ಗೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಬಿ.ಶಿವಕುಮಾರ್ ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸ್ವಚ್ಛ ಮತ್ತು ಹಸಿರು ಪರಿಸರವನ್ನು ಉಂಟು ಮಾಡಲು ಜಿಲ್ಲಾ ಪಂಚಾಯಿತಿ ಸಿಇಓ ಫೌಜಿಯಾ ತರುನಮ್ ಅವರು ಧೃಢ ಸಂಕಲ್ಪ ಮಾಡಿದ್ದು, ಅವರ ನಿರ್ದೇಶನದಂತೆ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮತ್ತು ಅರಿವು ಮೂಡಿಸಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.

ತಾಲ್ಲೂಕಿನಲ್ಲಿ ನಗರ ಪ್ರದೇಶದ ಮಾದರಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲೂ ಸಹ ಕಸ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ಪಂಚಾಯಿತಿ ಕೇಂದ್ರಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿ ಗ್ರಾಮ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಸ್ವಚ್ಛತೆ ಕಾಪಾಡಲು ಜಿಲ್ಲಾ ಪಂಚಾಯಿತಿ ಹಾಗೂ ಸರ್ಕಾರದೊಂದಿದೆ ನಾಗರಿಕರು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯಿಂದ ಅಭಿಯಾನ ನಡೆಸಲಾಗುವುದು ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಳೆ ನೀರು ಸಂರಕ್ಷಣೆ ಮಾಡಲು ಬಹು ಕಮಾನ್ ಚೆಕ್ ಡ್ಯಾಂ ಗಳು ದನ ಕರುಗಳಿಗಾಗಿ ಗೋ ಕುಂಟೆಗಳು ಕೆರೆ ಕಲ್ಯಾಣಿಗಳನ್ನು ಅಭಿವೃದ್ಧಿ ಮಾಡಲಾಗುವುದು. ಅದೇ ರೀತಿಯಲ್ಲಿ ಸ್ವಚ್ಚ ಭಾರತ್ ಅಭಿಯಾನ ಯೋಜನೆಯಡಿ ಕಸ ವಿಲೇವಾರಿ ಘಟಕಗಳನ್ನು ನಿರ್ಮಿಸಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಪ್ರಥಮ ಆದ್ಯತೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ 24 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 24 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಕೆ.ಕೆ.ಪೇಟೆಯ 42 ವರ್ಷದ ಮಹಿಳೆ, 20 ಮತ್ತು 18 ವರ್ಷದ ಇಬ್ಬರು ಯುವತಿಯರು,
  2. ನಗರ್ತರಪೇಟೆಯ 70 ವರ್ಷದ ವೃದ್ಧ,
  3. ಮಳ್ಳೂರಿನ 24 ವರ್ಷದ ಮಹಿಳೆ,
  4. ಶಂಕರಮಠದ ಬೀದಿಯ 55 ವರ್ಷದ ಮಹಿಳೆ,
  5. ಕಾಮಾಟಿಗರಪೇಟೆಯ 61 ವರ್ಷದ ಗಂಡಸು, 55 ವರ್ಷದ ಮಹಿಳೆ,
  6. ಹಂಡಿಗನಾಳದ 55 ವರ್ಷದ ಗಂಡಸು, ಚೌಡಸಂದ್ರದ 22 ವರ್ಷದ ಗಂಡಸು,
  7. ಜಂಗಮಕೋಟೆಯ 55 ವರ್ಷದ ಮಹಿಳೆ,
  8. ನೆಲ್ಲೀಮರದಹಳ್ಳಿಯ 29 ವರ್ಷದ ಗಂಡಸು, 52 ವರ್ಷದ ಗಂಡಸು, 23 ವರ್ಷದ ಮಹಿಳೆ, 40 ವರ್ಷದ ಮಹಿಳೆ,
  9. ಹನುಮಂತಪುರದ 50 ವರ್ಷದ ಗಂಡಸು,
  10. ಭಕ್ತರಹಳ್ಳಿಯ 74 ವರ್ಷದ ವೃದ್ಧ, 54 ವರ್ಷದ ಗಂಡಸು,
  11. ಅಂಬಿಗಾನಹಳ್ಳಿಯ 28 ವರ್ಷದ ಮಹಿಳೆ, 31 ವರ್ಷದ ಮಹಿಳೆ, 8 ವರ್ಷದ ಬಾಲಕ, 18 ವರ್ಷದ ಯುವಕ, 48 ವರ್ಷದ ಮಹಿಳೆ,
  12. ಇದ್ಲೂಡಿನ 40 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

Sidlaghatta Cocoon Market Watch – 25/08/2020

0

Date: 25/08/2020

CB Lots: 442
Qty: 23439 Kgs
Max: 330
Min: 182
Avg: 278

BV Lots: 04
Qty: 305 Kgs
Max: 350
Min: 200
AVG: 228

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
https://www.facebook.com/sidlaghatta

Instagram 📷
https://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
https://www.sidlaghatta.com

📱 Join WhatsApp
https://wa.me/917406303366?text=Hi