ಶಿಡ್ಲಘಟ್ಟ ನಗರದಲ್ಲಿ ಮತ್ತೆ ೨ ಕೊರೊನ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ತಾಲ್ಲೂಕಿನಲ್ಲಿ ೮ಕ್ಕೆ ಏರಿದೆ
Sidlaghatta Cocoon Market Watch – 22/06/2020
Sidlaghatta Cocoon Market Watch
Date: 22/06/2020
CB Lots: 483
Qty: 27495 Kgs
Max: 300
Min: 196
Avg: 240
BV Lots: 02
Qty: 164 Kgs
Max: 273
Min: 273
AVG: 273
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ನಗರದ ಪ್ರಥಮ ಕೊರೊನ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರೆಲ್ಲರೂ corona -ve
ಶಿಡ್ಲಘಟ್ಟ ನಗರದ ಹಳೆಯ ಪೋಸ್ಟ್ ಆಫೀಸ್ ರಸ್ತೆ, ಕಾಂಗ್ರೆಸ್ ಭವನದ ಬಳಿಯ ಪ್ರಥಮ ಕೊರೊನ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳೆಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಎಲ್ಲರ ಕೊರೊನ ಪರೀಕ್ಷೆ ವರದಿ corona -ve ಎಂದು ಬಂದಿದೆ
ಶಿಡ್ಲಘಟ್ಟದಲ್ಲಿ ಕೂರೋನ ಪಾಸಿಟಿವ್ ಹಿನ್ನೆಲೆ, ಅಂಗಡಿ ಮುಂಗಟ್ಟುಗಳು ಸಂಜೆ 4 ಕ್ಕೆ ಬಂದ್
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೂರೋನ ಪಾಸಿಟಿವ್ ವರದಿಯಾದ ಕಾರಣ ನಗರದ ದಿನಸಿ ವರ್ತಕರು, ಜವಳಿ ವರ್ತಕರು, ಜುವೆಲ್ಲರಿ ವರ್ತಕರು, ಹಾರ್ಡ್ವೇರ್ ವರ್ತಕರು, ಫ್ಯಾನ್ಸಿ ಸ್ಟೋರ್ ಮಾಲೀಕರು ಸಭೆ ಸೇರಿ, ಸಭೆಯಲ್ಲಿ ದಿನಾಂಕ 23- 6 -2020 ನೇ ಮಂಗಳವಾರದಿಂದ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮಾತ್ರ ವ್ಯಾಪಾರ ವಹಿವಾಟುಗಳನ್ನು ನಡೆಸಲು, ಸಂಜೆ 4 ಗಂಟೆಯ ನಂತರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಶಿಡ್ಲಘಟ್ಟ ನಗರದ ವರ್ತಕರು ತಿಳಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಬಾಣಂತಿ ಕೊರೊನಾ ಪಾಸಿಟೀವ್
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಬಾಣಂತಿ ಮತ್ತು ಗಂಜಿಗುಂಟೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೊಳಪಟ್ಟ ತಲಕಾಯಲ ಬೆಟ್ಟ ಪಂಚಾಯಿತಿಯ ಮಾದೇನಹಳ್ಳಿಯ ಯುವಕನೋರ್ವ ಕೊರೊನಾ ಪಾಸಿಟೀವ್ ಎಂದು ತಿಳಿದುಬಂದಿದ್ದು, ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೇರಿದೆ.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿಯ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 19 ರಂದು ಮಗುವಿಗೆ ಜನ್ಮವಿತ್ತ ಆಕೆ ಜೂನ್ 20 ರಂದು ವಾಪಸ್ ಸ್ವಗ್ರಾಮಕ್ಕೆ ತೆರಳಿದ್ದರು. ಪರೀಕ್ಷೆಯ ವರದಿಯಲ್ಲಿ ಪಾಸಿಟೀವ್ ಎಂದು ತಿಳಿದು ಬಂದೊಡನೆ ಆಕೆ ಮತ್ತು ಎಳೆಮಗುವನ್ನು ಚಿಕ್ಕಬಳ್ಳಾಪುರದ ಕೋವಿಡ್ ವಾರ್ಡ್ ಗೆ ಕಳುಹಿಸಿಕೊಟ್ಟಿದ್ದಾರೆ. ನಗರಸಭೆಯವರು ಸರ್ಕಾರಿ ಆಸ್ಪತ್ರೆ ಹಾಗೂ ಸುತ್ತಲಿನ ಆವರಣವನ್ನು ಕ್ರಿಮಿನಾಶಕಗಳಿಂದ ಸಿಂಪಡಿಸಿ ಶುಚಿಗೊಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಹೆರಿಗೆ ವಾರ್ಡ್ ನ ಸಿಬ್ಬಂದಿಯ ಸ್ವಾಬ್ ಪರಿಕ್ಷೆಗೆ ಕಳುಹಿಸಿದ್ದು, ನೆಗೆಟೀವ್ ಎಂದು ಬಂದಿರುವುದರಿಂದ ವೈದ್ಯರು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ತಾಲ್ಲೂಕು ಆಡಳಿತ, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರು ಕೊತ್ತನೂರು ಹಾಗೂ ಮಾದೇನಹಳ್ಳಿ ಗ್ರಾಮಗಳಲ್ಲಿ ಸೀಲ್ ಡೌನ್ ಮಾಡಿ, ಜನರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸೀಲ್ ಡೌನ್ ಪ್ರದೇಶದಲ್ಲಿ ವಾಸಿಸುವವರ ಬೇಕುಬೇಡಗಳನ್ನು ಪರಿವೀಕ್ಷಿಸುವಂತೆ ಆಯಾ ಗ್ರಾಮ ಪಂಚಾಯಿತಿ ಪಿ.ಡಿ.ಒ ಗಳಿಗೆ ಜವಾಬ್ದಾರಿ ವಹಿಸಲಾಗಿದೆ.
Sidlaghatta Cocoon Market Watch – 21/06/2020
Sidlaghatta Cocoon Market Watch
Date: 21/06/2020
CB Lots: 491
Qty: 27848 Kgs
Max: 300
Min: 180
Avg: 239
BV Lots: 01
Qty: 65 Kgs
Max: 266
Min: 266
AVG: 266
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಅನ್ನದಾತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಕೋರಿ ರೈತ ಸಂಘದ ಮನವಿ
ರೈತರ ಹಿತದೃಷ್ಠಿಯಿಂದ ಭೂ ಸುಧಾರಣೆ ಕಾಯಿದೆ ಹಾಗೂ ಎಪಿಎಂಸಿ ಸುಗ್ರೀವಾಜ್ಞೆಯನ್ನು ಸರ್ಕಾರ ಹಿಂಪಡೆಯಬೇಕು ಮತ್ತು ಅನ್ನದಾತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ) ಪದಾಧಿಕಾರಿಗಳು ತಹಶೀಲ್ದಾರ್ ಕೆ.ಅರುಂಧತಿ ಅವರ ಮುಖಾಂತರ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.
ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ ಮಾತನಾಡಿ, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದರೂ ಕೃಷಿಕರು ದೇಶವನ್ನು ಮುನ್ನಡೆಸುವಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಜನಾಭಿಪ್ರಾಯ, ಚರ್ಚೆಯಿಲ್ಲದೇ ಸರ್ಕಾರ 1961 ರ ಭೂ ಸುಧಾರಣೆ ಕಾಯಿದೆಯ 79 ಎ, ಬಿ, ಸಿ ಮತ್ತು 80 ನೇ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದು ಪಡಿಸಿ 63 ನೇ ಕಲಮಿಗೆ ತಿದ್ದುಪಡಿ ಮಾಡಿರುವುದು ರೈತವಿರೋಧಿ ಧೋರಣೆಯಾಗಿದೆ. ಇದರಿಂದ ರೈತರ ಭೂಮಿ ಕೈಗಾರಿಕೋಧ್ಯಮಿಗಳ, ಬಂಡವಾಳಶಾಹಿಗಳ ಪಾಲಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಬೀದಿಗೆ ಬೀಳುತ್ತಾರೆ. ಹಾಗಾಗಿ ರೈತ ವಿರೋಧಿ ಮಸೂದೆಯನ್ನು ಕೂಡಲೇ ಸರ್ಕಾರ ವಾಪಸ್ ಪಡೆಯಬೇಕು ಎಂದರು.
ಎಪಿಎಂಸಿ ಸುಗ್ರೀವಾಜ್ಞೆಯನ್ನು ಜನಾಭಿಪ್ರಾಯ ಪಡೆದು ವಿದಾನಸಭೆಯಲ್ಲಿ ಚರ್ಚೆಗೆ ಇಟ್ಟು ನಂತರ ಅನುಷ್ಟಾನ ಗೊಳಿಸಬೇಕು, ಅನಾಧಿ ಕಾಲದಿಂದಲೂ ರೇಷ್ಮೆ ಇಲಾಖೆ ಸ್ವತಂತ್ರ ಇಲಾಖೆಯಾಗಿದ್ದು ಇದೀಗ ಕೊರೋನಾ ಸಂದರ್ಭದಲ್ಲಿ ಇಲಾಖೆಯನ್ನು ಬೇರೆ ಇಲಾಖೆಯೊಂದಿಗೆ ವಿಲೀನ ಮಾಡುವುದನ್ನು ಕೈ ಬಿಡಬೇಕು, ರೇಷ್ಮೆ ಗೂಡು ಪ್ರತಿ ಕೆಜಿಗೆ 150 ರೂ, ಹಾಗು ಹಿಪ್ಪುನೇರಳೆ ಬೆಳೆಯುವ ಬೆಳೆಗಾರರಿಗೆ ಎಕರೆಗೆ ೨೫ ಸಾವಿರ ಸಹಾಯಧನ ನೀಡಬೇಕು. ಹೈನುಗಾರಿಕೆ ಮಾಡುವ ರೈರು ಉತ್ಪಾದಿಸುವ ಹಾಲಿಗೆ ಪ್ರತಿ ಲೀ ಗೆ 40 ರೂ ನಿಗಧಿ ಮಾಡಬೇಕು, ಕಂದಾಯ ಇಲಾಖೆಯಲ್ಲಿ ಈ ಹಿಂದೆ ದಾಖಲೆಗಳನ್ನು ಪಡೆಯಲು ಇದ್ದ ಕ್ರಮವನ್ನೇ ಮುಂದೆಯೂ ಅನುಸರಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕೆ.ಅರುಂಧತಿ ರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಭಕ್ತರಹಳ್ಳಿ ಪ್ರತೀಶ್, ಕೆ.ಅಂಬರೀಷ, ಬಿ.ಅಭಿಲಾಷ್, ಆರ್.ಹುಸೇನ್‌ಸಾಬ್, ಡಿ.ವಿ.ನಾರಾಯಣಸ್ವಾಮಿ, ಗುಂಡಪ್ಪ, ಕೆ.ಎನ್.ಮಂಜುನಾಥ, ಬಿ.ವಿ.ನಾರಾಯಣಸ್ವಾಮಿ, ಚೌಡಪ್ಪ, ಮುನಿಯಪ್ಪ ಹಾಜರಿದ್ದರು.
Sidlaghatta Cocoon Market Watch – 20/06/2020
Sidlaghatta Cocoon Market Watch
Date: 20/06/2020
CB Lots: 493
Qty: 27864 Kgs
Max: 305
Min: 200
Avg: 251
BV Lots: 02
Qty: 121 Kgs
Max: 270
Min: 216
AVG: 257
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಶಿಡ್ಲಘಟ್ಟದ ನಗರದಲ್ಲಿ ಮೊದಲನೆಯ +ve ಪ್ರಕರಣ ದಾಖಲು
ಶಿಡ್ಲಘಟ್ಟ ನಗರದಲ್ಲಿ ಮೊದಲನೆಯ ಕೊರೊನ +ve ಪ್ರಕರಣ ದಾಖಲಾಗಿದ್ದು ಸೋಂಕಿತರು ನಗರದ ನಿವಾಸಿಯಾಗಿದ್ದು, ಇದರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ.
ಶಿಡ್ಲಘಟ್ಟದಲ್ಲಿ ಮೂರನೆಯ ಕೊರೊನ +ve ಪ್ರಕರಣ ದಾಖಲು
ಶಿಡ್ಲಘಟ್ಟದಲ್ಲಿ ಮೂರನೆಯ ಕೊರೊನ +ve ಪ್ರಕರಣ ದಾಖಲಾಗಿದ್ದು ಸೋಂಕಿತರು ಜಂಗಮಕೋಟೆಯಲ್ಲಿ ಈ ಮೊದಲು ವರದಿಯಾಗಿದ್ದ ಮೊದಲನೆಯ ಸೋಂಕಿತ ವ್ಯಕ್ತಿಯ ಸಹೋದರ ಎಂದು ಗುರುತಿಸಲಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಕೊರೊನಾ ಪ್ರಕರಣ ಬುಧವಾರ ದಾಖಲಾಗಿತ್ತು. ತಾಲ್ಲೂಕಿನ ಜಂಗಮಕೋಟೆ ನಿವಾಸಿ ಯುವಕನೋರ್ವ ಕೊರೋನಾ ಪಾಸಿಟಿವ್ ವ್ಯಕ್ತಿಯಾಗುವ ಮೂಲಕ ಮೊದಲು ಕೊರೊನಾ ತಾಲ್ಲೂಕಿಗೆ ಪ್ರವೇಶ ಪಡೆದಿತ್ತು. ನಂತರ ಪರೀಕ್ಷೆಗೆ ಕಳುಹಿಸಿದ್ದವರಲ್ಲಿ ಅವರ ನೆರೆಯ ಸಂಬಂಧಿ +ve ಎಂದು ವರದಿ ಬಂದಿತ್ತು.
ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮ
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ, ಮುತ್ತ ಕೊಳಚೆ ನೀರು ನಿಂತುಕೊಳ್ಳದಂತೆ ಜಾಗೃತಿವಹಿಸುವುದು, ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸುವುದು ಹಾಗೂ ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ರಕ್ಷಣೆ ಮಾಡಿಕೊಳ್ಳುವುದರಿಂದ ಮಲೇರಿಯಾ ತಡೆಗಟ್ಟಬಹುದು ಎಂದು ಅವರು ತಿಳಿಸಿದರು.
ಸಾಂಕ್ರಾಮಿಕ ಕಾಯಿಲೆಗಳಲ್ಲಿ ಮಲೇರಿಯಾ ಒಂದು. ಸಾಂಕ್ರಾಮಿಕ ಕಾಯಿಲೆಗಳು ಸೊಳ್ಳೆಗಳಿಂದ ಹರಡುತ್ತವೆ.ಅನಾಫಿಲಸ್ ಜಾತಿಗೆ ಸೇರಿದ ಹೆಣ್ಣು ಸೊಳ್ಳೆಗಳಿಂದ ಮಲೇರಿಯಾ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಮಲೇರಿಯಾ ಕಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ವಿಶ್ವ ಮಲೇರಿಯಾ ದಿನಾಚರಣೆಯನ್ನು ಆಚರಿಸುವ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಲಾರ್ವಾ ಪರೀಕ್ಷೆ ಮಾಡಿ, ವಾರಕ್ಕೊಮ್ಮೆ ಒಣಗಲು ದಿನವನ್ನು ಆಚರಿಸುವಂತೆ ತಿಳಿಹೇಳುವರು ಎಂದರು.
ಹರಿಯದೆ ನಿಂತುಕೊಳ್ಳುವ ಕೊಳಚೆ ನೀರು, ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿ ಮಲೇರಿಯಾ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆ ಒಬ್ಬನಿಂದ ಮತ್ತೊಬ್ಬನಿಗೆ ಕಡಿಯುವ ಮೂಲಕ ಮಲೇರಿಯಾ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಚಳಿ-ಜ್ವರ ಬರುವ ಲಕ್ಷ ಣ ಕಾಣಿಸಿಕೊಳ್ಳುತ್ತದೆ. ಕೂಡಲೇ ಹತ್ತಿರದಲ್ಲಿರುವ ಆಸ್ಪತ್ರೆಗೆ ಹೋಗಿ ವೈದ್ಯರಿಂದ ರಕ್ಷ ಪರೀಕ್ಷೆ ಮಾಡಿಸಿಕೊಳ್ಳುವುದರ ಜತೆಯಲ್ಲಿ ಅವರ ಸೂಚನೆಯಂತೆ ಚಿಕಿತ್ಸೆ ಗೆ ಒಳಗಾಗಬೇಕು ಎಂದು ಸಲಹೆ ನೀಡಿದರು.
ಸಿ.ಡಿ.ಪಿ.ಒ ಅಧಿಕಾರಿ ನಾಗಮಣಿ, ಸರ್ಕಾರಿ ಆಸ್ಪತ್ರೆ ಮೇಲ್ವಿಚಾರಕಿ ಮುನಿಲಕ್ಷ್ಮಮ್ಮ, ವಿಜಯಮ್ಮ, ಲೋಕೇಶ್, ಕೀರ್ತಿ, ಟಿ.ಟಿ.ನರಸಿಂಹಪ್ಪ ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ಎರಡನೇ ಕೊರೊನ +ve ಪ್ರಕರಣ ದಾಖಲು
ಶಿಡ್ಲಘಟ್ಟದಲ್ಲಿ ಎರಡನೇ ಕೊರೊನ +ve ಪ್ರಕರಣ ದಾಖಲಾಗಿದ್ದು ಸೋಂಕಿತರು ಜಂಗಮಕೋಟೆಯಲ್ಲಿ ಈ ಮೊದಲು ವರದಿಯಾಗಿದ್ದ ಸೋಂಕಿತ ವ್ಯಕ್ತಿಯ ಸಂಬಂಧಿಕ ಹಾಗೂ ನೆರೆಯ ಮನೆಯವರು ಎಂದು ಗುರುತಿಸಲಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಕೊರೊನಾ ಪ್ರಕರಣ ಬುಧವಾರ ದಾಖಲಾಗಿತ್ತು. ತಾಲ್ಲೂಕಿನ ಜಂಗಮಕೋಟೆ ನಿವಾಸಿ ಯುವಕನೋರ್ವ ಕೊರೋನಾ ಪಾಸಿಟಿವ್ ವ್ಯಕ್ತಿಯಾಗುವ ಮೂಲಕ ಮೊದಲು ಕೊರೊನಾ ತಾಲ್ಲೂಕಿಗೆ ಪ್ರವೇಶ ಪಡೆದಿತ್ತು.
ಮೊದಲು ಪಾಸಿಟೀವ್ ಬಂದ ವ್ಯಕ್ತಿ ಯಲಹಂಕದಲ್ಲಿದ್ದು ಬಂದಿದ್ದರೆ, ಶುಕ್ರವಾರ ಪಾಸಿಟೀವ್ ಆದ ವ್ಯಕ್ತಿ ಕೆ.ಆರ್.ಪುರಂ ನಲ್ಲಿ ಆಟೋಮೊಬೈಲ್ಸ್ ಅಂಗಡಿಯಲ್ಲಿ ಕೆಲಸ ಕಲಿಯಲು ಹೋಗಿದ್ದ ಎಂದು ತಿಳಿದುಬಂದಿದೆ. ಆಗಿಂದಾಗ್ಗೆ ಜ್ವರ ಬರುತ್ತಿದ್ದುದರಿಂದ ಜಂಗಮಕೋಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ತಾಲ್ಲೂಕು ಆಡಳಿತ ಅಧಿಕಾರಿಗಳು ಜಂಗಮಕೋಟೆಗೆ ಭೇಟಿ ನೀಡಿ, ಕೊರೊನಾ ಪಾಸಿಟೀವ್ ಆದ ಯುವಕನನ್ನು ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರದ ಕೋವಿಡ್ ವಾರ್ಡ್ ಗೆ ಕಳುಹಿಸಿದ್ದಾರೆ.
ಬುಧವಾರದಂದು ಪಾಸಿಟೀವ್ ಬಂದ ಯುವಕನ ಕುಟುಂಬದವರು ಸೇರಿದಂತೆ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಾದ 38 ಮಂದಿಯ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಅವರಲ್ಲಿ 15 ಮಂದಿಯ ವರದಿ ಬಂದಿದ್ದು, ಅವರಲ್ಲಿ ಒಬ್ಬ ವ್ಯಕ್ತಿ ಪಾಸಿಟೀವ್ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.
Sidlaghatta Cocoon Market Watch – 19/06/2020
Sidlaghatta Cocoon Market Watch
Date: 19/06/2020
CB Lots: 437
Qty: 24674 Kgs
Max: 305
Min: 201
Avg: 254
BV Lots: 07
Qty: 492 Kgs
Max: 327
Min: 222
AVG: 247
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಮಾಸ್ಕ್ ದಿನಾಚರಣೆ ಅಂಗವಾಗಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಪ್ರಾತ್ಯಕ್ಷಿಕೆ
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯಿಂದ ವಿಭಿನ್ನವಾಗಿ ಮಾಸ್ಕ್ ದಿನವನ್ನು ಆಚರಿಸಲಾಯಿತು. ಕೇವಲ ಜಾಥಾ ನಡೆಸದೇ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಪ್ರತಿ ಮನೆಗೂ ಹೋಗಿ ಅರಿವು ಮೂಡಿಸಿದರು.
ಹಂಡಿಗನಾಳ ಗ್ರಾಮದಲ್ಲಿ ಮಾಸ್ಕ್ ದಿನಾಚರಣೆ ಅಂಗವಾಗಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ, ಕೈತೊಳೆಯುವುದು, ನೈರ್ಮಲ್ಯತೆಯನ್ನು ಕಾಪಾಡುವುದು ಹಾಗೂ ಅಂತರ ಕಾಯ್ದುಕೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಜನರಲ್ಲಿ ತಿಳುವಳಿಕೆಯನ್ನು ಮೂಡಿಸಲಾಯಿತು.
ಗ್ರಾಮ ಪಂಚಾಯಿತಿಯ ವತಿಯಿಂದ ಮಾಸ್ಕ್ ವಿತರಿಸಿದರು. ಆಗಿಂದಾಗ್ಗೆ ಕೈ ತೊಳೆಯುವುದು, ಸ್ಯಾನಿಟೈಜರ್ ಬಳಕೆ, ಅಂತರ ಕಾಯ್ದುಕೊಳ್ಳುವ ಅಗತ್ಯತೆಯನ್ನು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗೃಹಿಣಿಯರಿಗೆ ತಿಳಿಸಿದರು.
ಪಿ.ಡಿ.ಒ ಅಂಜನ್ ಕುಮಾರ್, ಸದಸ್ಯ ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಶ್ರೀನಿವಾಸ್, ಮೋಹನ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾಸ್ಕ್
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಸಲುವಾಗಿ ಹಾಗೂ ಮಾಸ್ಕ್ ದಿನಾಚರಣೆ ಅಂಗವಾಗಿ ಗುರುವಾರ ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ ಅವರು 2,500 ಮಾಸ್ಕ್ ಗಳನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಶ್ರೀನಿವಾಸ್ ಅವರಿಗೆ ಹಸ್ತಾಂತರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಅವರು ಮಾತನಾಡಿ, “ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇಲಾಖೆ ಹಾಗೂ ಸರ್ಕಾರ ನೀಡಿರುವ ಸೂಚನೆಗಳನ್ನೆಲ್ಲಾ ಪಾಲಿಸುತ್ತಿದ್ದೇವೆ. ದಾನಿಗಳು ಮಕ್ಕಳ ಸುರಕ್ಷತೆಗಾಗಿ ನೆರವನ್ನು ನೀಡಿ ಶಿಕ್ಷಣ ಇಲಾಖೆಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ” ಎಂದರು.
ಈ ಸಂದರ್ಭದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತ ಪ್ರಕಾಶ್, ಸಿ.ಆರ್.ಪಿ.ಗಳಾದ ನಾಗರಾಜು, ನರಸಿಂಹರಾಜು ಹಾಜರಿದ್ದರು.
Sidlaghatta Cocoon Market Watch – 18/06/2020
Sidlaghatta Cocoon Market Watch
Date: 18/06/2020
CB Lots: 390
Qty: 21010 Kgs
Max: 320
Min: 200
Avg: 257
BV Lots: 16
Qty: 908 Kgs
Max: 290
Min: 175
AVG: 259
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ದ್ವಿತೀಯ ಪಿಯುಸಿ ಕಡೆಯ ಪರೀಕ್ಷೆಗೆ ಸಿದ್ಧಗೊಂಡ ಪರೀಕ್ಷಾ ಕೇಂದ್ರಗಳು
ದ್ವಿತೀಯ ಪಿಯುಸಿ ಆಂಗ್ಲ ಭಾಷೆಯ ಪರೀಕ್ಷೆ ಗುರುವಾರ ನಡೆಯಲಿದ್ದು, ಶಿಡ್ಲಘಟ್ಟ ತಾಲ್ಲೂಕಿನ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1,671 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.
ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಮಳ್ಳೂರಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿವೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1,030 ವಿದ್ಯಾರ್ಥಿಗಳಿದ್ದರೆ, ಮಳ್ಳೂರಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 641 ವಿದ್ಯಾರ್ಥಿಗಳಿದ್ದಾರೆ.
“ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದ್ದೇವೆ. ನಗರಸಭೆ ಹಾಗೂ ಗ್ರಾಮ ಪಂಚಾಯಿತಿಯವರ ಸಹಕಾರದೊಂದಿಗೆ ಕಳೆದ ಮೂರು ದಿನಗಳಿಂದ ಪರೀಕ್ಷಾ ಕೇಂದ್ರಗಳು, ಆವರಣ, ಸಂಬಂದಿಸಿದ ಕೋಣೆ, ವರಾಂಡ ಎಲ್ಲ ಕಡೆಯೂ ಕ್ರಿಮಿನಾಶಕದ ಸಿಂಪಡನೆ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿಯ ಸಹಕಾರ ಪಡೆದು ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡಿಸಲಾಗುವುದು, ಸ್ಯಾನಿಟೈಜ್ ಮಾಡಿ, ಅಂತರ ಕಾಯ್ದುಕೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಜ್ವರ, ನೆಗಡಿ, ಕೆಮ್ಮು ಇದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಲಾಗುವುದು. ಚಿಕ್ಕ ಕೊಠಡಿಯಾದರೆ 12 ಮಂದಿ, ದೊಡ್ಡ ಕೊಠಡಿಯಲ್ಲಿ 24 ಮಂದಿ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುವುದು” ಎಂದು ಪ್ರಾಂಶುಪಾಲ ಆನಂದ್ ತಿಳಿಸಿದರು.
“ಪರೀಕ್ಷಾ ಮೇಲ್ವಿಚಾರಕರಿಗೆ ಮಾಸ್ಕ್, ಸ್ಯಾನಿಟೈಜರ್, ಗ್ಲೌಜ್ ನೀಡಲಾಗುವುದು. ಶಿಡ್ಲಘಟ್ಟದಲ್ಲಿ ಒಂದು ಸಾವಿರ ಮಂದಿ ವಿದ್ಯಾರ್ಥಿಗಳಿರುವುದರಿಂದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರಗಳಿರುತ್ತವೆ. ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಬರಬೇಕು” ಎಂದು ಅವರು ಹೇಳಿದರು.
ರೈತರ ಶ್ರಮದ ಫಲವನ್ನು ಮಧ್ಯವರ್ತಿಗಳು ಅನುಭವಿಸುತ್ತಾರೆ
ತಾಲ್ಲೂಕಿನ ಕಂಬದಹಳ್ಳಿಯ ಸುರೇಂದ್ರಗೌಡ ಅವರ ಮಾವಿನ ತೋಟದಲ್ಲಿ ಮಂಗಳವಾರ ಕ್ಷೇತ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ ಡಾ.ಹಿತ್ತಲಮನಿ ಮಾತನಾಡಿದರು.
ಮಾವಿನ ಹಣ್ಣನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಾ, ವ್ಯವಸ್ಥಿತವಾಗಿ ಸ್ವತಃ ರೈತರೇ ಗ್ರಾಹಕರಿಗೆ ಮಾರಾಟ ಮಾಡಿದಾಗ ಹೆಚ್ಚಿನ ಆದಾಯ ಸಿಗುತ್ತದೆ ಎಂದು ಅವರು ತಿಳಿಸಿದರು.
ಉತ್ತಮವಾಗಿ ಮಾವನ್ನು ಬೆಳೆದ ರೈತರು ಮಧ್ಯವರ್ತಿಗಳಿಗೆ ನೀಡಿ ತಮ್ಮ ಶ್ರಮದ ಫಲವನ್ನು ಅವರು ತಿನ್ನುವಂತೆ ಮಾಡುತ್ತಾರೆ. ಅದು ತಪ್ಪು. ಸ್ವಯಂ ಗ್ರಾಹಕರಿಗೆ ಮಾರಾಟ ಮಾಡಬೇಕು. ರೈತರೇ ಗುಣಮಟ್ಟಕ್ಕೆ ತಕ್ಕಂತೆ ಬೇರ್ಪಡಿಸಿ, ಡಬ್ಬದಲ್ಲಿ ಹಾಕಿ, ತಮ್ಮದೇ ಹೆಸರಿನ ಬ್ರಾಂಡ್ ಮಾಡಿ ಮಾರಾಟ ಮಾಡಿ, ಹೆಚ್ಚು ಹಣವನ್ನು ಪಡೆಯಬೇಕು. ಸ್ವಯಂ ಮಾರಾಟದಲ್ಲಿ ಶಕ್ತಿಯಿದೆ, ಲಾಭವಿದೆ, ರೈತರ ಹಿತವಿದೆ ಎಂದರು.
ಮಾವು ಬೆಳೆಗಾರರು ತಳಿಗಳ ಬಗ್ಗೆ ಚಿಂತಿಸುವ ಸಮಯವಿದು. ಇಷ್ಟು ದಿನ ಬಾದಾಮಿ, ಬಂಗನಪಲ್ಲಿ, ತೋತಾಪುರಿ ಉತ್ಪಾದನೆ ಹೆಚ್ಚಾಗಿ ಬೆಲೆ ಕುಸಿತ ಕಂಡಿವೆ. ಈಗಿರುವ ಮಾವಿನ ತೋಟಗಳಲ್ಲಿ ಗಿಡ ಒಣಗಿದರೆ ಮಲ್ಲಿಕಾ, ದಶೇರಿ, ಇಮಾಮ್ ಪಸಂದ್ ರೀತಿಯ ತಳಿಗಳನ್ನು ಹಾಕಿ. ಇಮಾಮ್ ಪಸಂದ್ ತಳಿಗಂತೂ ಅತಿ ಹೆಚ್ಚಿನ ಬೇಡಿಕೆಯಿದ್ದು, ಕಂಬದಹಳ್ಳಿಯ ಸುರೇಂದ್ರಗೌಡ ಅವರು ತಾವೇ ಭತ್ತದ ಒಣಹುಲ್ಲಿನಲ್ಲಿಟ್ಟು ಹಣ್ಣಾಗಿಸಿ ಒಂದು ಕೆ.ಜಿ.ಗೆ ಇನ್ನೂರು ರೂಗಳಿಗೆ ಮಾರುತ್ತಿದ್ದಾರೆ. ನಮ್ಮ ಜಿಲ್ಲೆಗಳ ವಿಶೇಷತೆಯೆಂದರೆ ಹಲವು ತಳಿಗಳನ್ನು ಬೆಳೆಯುವರು. ಹೀಗಾಗಿ ಮಾರುಕಟ್ಟೆಯನ್ನು ಆರು ತಿಂಗಳುಗಳ ಕಾಲ ನಡೆಸಿಕೊಂಡು ಹೋಗುವ ಸಾಮರ್ಥ್ಯ ನಮ್ಮ ರೈತರಿಗಿದೆ ಎಂದು ಹೇಳಿದರು.
ಚಿಂತಾಮಣಿ ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪನಿರ್ದೇಶಕ ಕೆ.ಬಿ.ಕೃಷ್ಣಮೂರ್ತಿ ಮಾತನಾಡಿ, ಮಾವು ಅಭಿವೃದ್ಧಿ ಕೇಂದ್ರದ ವತಿಯಿಂದ ಕಳೆದ ವರ್ಷ ಬಿ ಟು ಸಿ ಪೋರ್ಟಲ್ ಪ್ರಾರಂಭಿಸಿದ್ದೇವೆ. ಅದರಲ್ಲಿ 120 ಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ. ರೈತರು ತಾವು ಬೆಳೆದ ಮಾವಿನ ಹಣ್ಣಿನ ತಳಿಗಳು, ಗುಣಮಟ್ಟ, ಬೆಲೆಯನ್ನು ನಮೂದಿಸುವರು. ಗ್ರಾಹಕರು ಅದನ್ನು ಆನ್ ಲೈನ್ ನಲ್ಲಿ ಖರೀದಿಸುತ್ತಾರೆ. ಹಣ್ಣನ್ನು ಸುರಕ್ಷಿತವಾಗಿ ಬಾಕ್ಸ್ ನಲ್ಲಿರಿಸಿ ನಾವು ಅಂಚೆ ಇಲಾಖೆಯ ಸಹಯೋಗದೊಂದಿಗೆ ಮನೆಗಳಿಗೆ ತಲುಪಿಸುತ್ತೇವೆ.
ಕಳೆದ ಎರಡು ತಿಂಗಳಿನಲ್ಲಿ, ಕೊರೊನಾ ಅವಧಿಯಲ್ಲಿ, ಬೆಂಗಳೂರು 1.4 ಕೋಟಿ ರೂಗಳ ವಹಿವಾಟನ್ನು ಈ ಮೂಲಕ ನಡೆಸಿದ್ದೇವೆ. 1,500 ಅಪಾರ್ಟ್ ಮೆಂಟ್ ಸಂಘಗಳೊಡನೆ ಮಾತನಾಡಿ ರೈತರನ್ನು ಆಲ್ಲಿಗೇ ಕಳುಹಿಸಿ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಇದರಿಂದ ರೈತರಿಗೆ ಒಳ್ಳೆಯ ಧಾರಣೆ ದೊರಕಿದೆ. ಫ್ಲಿಪ್ ಕಾರ್ಟ್ ಎಂಬ ಪ್ರಸಿದ್ಧ ಆನ್ ಲೈನ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಇದರಿಂದ ಗ್ರಾಹಕರು ಮತ್ತು ರೈತರನ್ನು ಒಗ್ಗೂಡಿಸಿದ್ದೇವೆ ಎಂದರು.
ಕಂಬದಹಳ್ಳಿ ಸುರೇಂದ್ರಗೌಡ ಅವರು ಮಾತನಾಡಿ, ಕಳೆದ ನಾಲ್ಕು ವರ್ಷದ ಹಿಂದೆ ನಮ್ಮ ಮೂರೂವರೆ ಎಕರೆ ಜಮೀನಿನಲ್ಲಿದ್ದ ನೀಲಗಿರಿ ಮರಗಳನ್ನು ತೆಗೆದು ಮಾವು ಅಭಿವೃದ್ಧಿ ಕೇಂದ್ರದ ಅಧಿಕಾರಿಗಳ ಮಾರ್ಗದರ್ಶನದಂತೆ ಇಮಾಮ್ ಪಸಂದ್, ಮಲ್ಲಿಕಾ, ದಶೇರಿ, ಆಲ್ಫಾಂಜೋ ಮುಂತಾದ ಮಾವಿನ ತಳಿಗಳನ್ನು ಬೆಳೆದೆ. ಅಧಿಕಾರಿಗಳ ಮಾರ್ಗದರ್ಶನದಂತೆ ಬೆಳೆದ ಹಣ್ಣನ್ನು ಭತ್ತದ ಒಣಹುಲ್ಲಿನಲ್ಲಿಟ್ಟು ಮಾಗಿಸಿ, ಅವರೇ ರಿಯಾಯಿತಿ ದರದಲ್ಲಿ ಕೊಟ್ಟ ಬಾಕ್ಸ್ ನಲ್ಲಿಟ್ಟು ಸ್ವಯಂ ಮಾರಾಟ ಮಾಡುತ್ತಿದ್ದೇನೆ. ಇದರಿಂದ ಲಾಭದಾಯಕವಾಗಿದೆ ಎಂದರು.
ನಂದಿಬೆಟ್ಟದ ತೋಟಗಾರಿಕಾ ವಿಶೇಷ ಅಧಿಕಾರಿ ಗೋಪಾಲ್, ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಗೀತಾ, ರಮಾದೇವಿ, ಮಾವು ಸಲಹೆಗಾರ ಜಯಚಂದ್ರ, ಪ್ರಗತಿಪರ ರೈತರಾದ ಎಚ್.ಜಿ.ಗೋಪಾಲಗೌಡ, ಎಚ್.ಸುರೇಶ್, ಮೇಲೂರು ಪ್ರಕಾಶ್ ಹಾಜರಿದ್ದರು.
Sidlaghatta Cocoon Market Watch – 17/06/2020
Sidlaghatta Cocoon Market Watch
Date: 17/06/2020
CB Lots: 335
Qty: 18272 Kgs
Max: 320
Min: 207
Avg: 258
BV Lots: 05
Qty: 340 Kgs
Max: 281
Min: 203
AVG: 231
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಶಿಡ್ಲಘಟ್ಟದಲ್ಲಿ ಮೊದಲ ಕೊರೋನ ಪ್ರಕರಣ ದಾಖಲು
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊದಲ ಕೊರೋನ ಪ್ರಕರಣ ದಾಖಲಾಗಿದ್ದು, ಜಂಗಮಕೋಟೆಯ ನಿವಾಸಿ ತಾಲ್ಲೂಕಿನ ಮೊದಲ corona +ve ವ್ಯಕ್ತಿಯಾಗಿದ್ದಾರೆ. ಇಲ್ಲಿಯವರೆಗೆ ಕರೋನ ಮುಕ್ತವಾಗಿದ್ದ ಶಿಡ್ಲಘಟ್ಟ ಈ ಪ್ರಕರಣದಿಂದ corona +ve ಆಗಿದೆ

