ಹಾಲಿನ ಗುಣಮಟ್ಟ ಕಾಪಾಡುವ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಂದಿನಿ ಹಾಲಿನ ಬೇಡಿಕೆಯನ್ನು ಹೆಚ್ಚಿಸಬೇಕು. ಇದರಿಂದ ರೈತರಿಗೆ ಲಾಭವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಗುಡ್ಲನರಸಿಂಹನಹಳ್ಳಿ ಗ್ರಾಮದಲ್ಲಿ ಸೋಮವಾರ ಗುಡ್ಲನರಸಿಂಹನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ೬.೫ ಲಕ್ಷರೂಗಳ ವೆಚ್ಚದ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳು ಬರಪೀಡಿತ ಪ್ರದೇಶವಾಗಿದ್ದು, ನೀರಿಗೆ ಕೊರತೆಯಿದ್ದರೂ ಹಾಲಿಗೆ ಕೊರತೆಯಿಲ್ಲ, ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದು, ಪೂರೈಸುತ್ತಿರುವ ಹಾಲಿನ ಗುಣಮಟ್ಟವು ಒಕ್ಕೂಟವು ನಿಗಧಿಪಡಿಸಿರುವ ಕನಿಷ್ಠ ಎಸ್.ಎನ್.ಎಫ್ ೮.೫ ಕ್ಕಿಂತ ಹೆಚ್ಚಿಗೆ ಎಲ್ಲಾ ಸರತಿಗಳಲ್ಲಿಯೂ ಇವೆ. ಗುಣಮಟ್ಟದ ಸಾಮರ್ಥ್ಯ ಕುಸಿಯದಂತೆ ಇನ್ನೂ ಉತ್ತಮ ಪಡಿಸಲು ಅವಶ್ಯಕ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದ್ದಕ್ಕೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿದ್ದು, ಗುಣಮಟ್ಟದ ಕಡೆಗೆ ಗಮನ ಕೋಡಬೇಕೆಂದು ಕೋರಿದರು.
ಕೋಚಿಮುಲ್ ಉಪ ವ್ಯವಸ್ಥಾಪಕ ಬಿ.ಎಸ್.ಹುನುಂತರಾವ್ ಮಾತನಾಡುತ್ತಾ, ಜೂನ್ ತಿಂಗಳಿನಲ್ಲಿ ರಾಸುಗಳ ವಿಮೆ ಪ್ರಾರಂಭವಾಗುತ್ತಿದ್ದು, ಒಂದು ರಾಸುವಿನ ವಿಮೆ ಕಂತು ೨೨೫ರೂಗಳು ಇದ್ದು, ಎಲ್ಲಾ ರೈತರು ರಾಸುಗಳ ವಿಮೆ ತಪ್ಪದೆ ಮಾಡಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕೋಚಿಮುಲ್‌ನ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ಕೋಚಿಮುಲ್‌ನ ವಿಸ್ತರಣಾಧಿಕಾರಿ ಮಂಜುನಾಥ್, ವಿ.ಶ್ರೀನಿವಾಸ್, ಸಂತೋಷ್, ಮುನೇಗೌಡ, ಆನಂದ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಜಿ.ಕೆ.ದೇವರಾಜು, ನಿರ್ದೇಶಕರಾದ ಸುಶೀಲಮ್ಮ, ನಾರಾಯಣಪ್ಪ, ನರಸಿಂಹಪ್ಪ ಸಿಂಗಪ್ಪ, ತಮ್ಮಣ್ಣ ಹಾಜರಿದ್ದರು.
- Advertisement -
- Advertisement -
- Advertisement -







