ವಿಶ್ವ ಭ್ರಾತತ್ವವನ್ನು ಬೆಸೆದವರು ಸ್ವಾಮಿ ವಿವೇಕಾನಂದರು

- Advertisement -
- Advertisement -

ವಿಶ್ವಕ್ಕೆ ಸಹೋದರತ್ವ ಹಾಗೂ ಭಾರತೀಯ ಸಂಸ್ಕೃತಿ ಪರಂಪರೆ ಪರಿಚಯಿಸಿ, ವಿಶ್ವ ಭ್ರಾತತ್ವವನ್ನು ಬೆಸೆದವರು ಸ್ವಾಮಿ ವಿವೇಕಾನಂದರು ಎಂದು ಜೆಎಂಎಫ್‌ಸಿ ಹಾಗೂ ಸಿವಿಲ್‌ ನ್ಯಾಯಾಧೀಶರಾದ ಟಿ.ಎಲ್‌.ಸಂದೀಶ್‌ ತಿಳಿಸಿದರು.
ನಗರದ ಐಟಿಐ ಕಾಲೇಜಿನ ಆವರಣದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ‘ವಿಶ್ವ ಯುವ ದಿನಾಚರಣೆ’ ಅಂಗವಾಗಿ ನಡೆಸಲಾದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಮಹಂಸರ ಶಿಷ್ಯನಾಗಿ ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿ, ಪರಂಪರೆ ಪರಿಚಯಿಸಿದ ಮಹಾನ್ ವ್ಯಕ್ತಿ ವಿವೇಕಾ ನಂದ. ಜಾತಿ, ಮತ, ಪಂಥ, ಭೇದ ಗಳನ್ನು ಮೆಟ್ಟಿ ನಿಂತ ಅವರ ಆದರ್ಶ ಗುಣಗಳು ಎಲ್ಲಾ ಕಾಲಕ್ಕೂ ಸಲ್ಲುವಂಥದ್ದು. ಅವರ ಆದರ್ಶ ಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿ ಕೊಂಡು, ಉತ್ತಮ ಪ್ರಜೆಗಳಾಗಿ, ದೇಶದ ಆಸ್ತಿಯಾಗಬೇಕು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಕ್ರಿಯಾಶೀಲತೆ ಮತ್ತು ನೈತಿಕ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುವತ್ತ ವಿವೇಕಾನಂದರ ಸಂದೇಶಗಳು ಪ್ರಸ್ತುತವಾಗಿ ಅಗತ್ಯವಾಗಿವೆ.ಯುವ ಜನಾಂಗದಲ್ಲಿ ರಾಷ್ಟ್ರ ಕಟ್ಟುವ ಮತ್ತು ದೇಶದ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವಲ್ಲಿ ಯುವ ಜನರ ಶಕ್ತಿ ಮಹತ್ತರವಾದುದು ಎಂದು ಹೇಳಿದರು.
ಸಂಪನ್ಮೂಲ ಭಾಷಣಕಾರರಾಗಿ ಆಗಮಿಸಿದ್ದ ವಕೀಲ ಟಿ.ವಿ.ಚಂದ್ರಶೇಖರಗೌಡ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಮಾತನಾಡಿದರು.
ಹಿರಿಯ ವಕೀಲ ಜಿ.ಎನ್‌.ವಿಶ್ವನಾಥಪ್ಪ, ಐಟಿಐ ಶಿಕ್ಷಕ ಶ್ರೀನಿವಾಸ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಐಟಿಐ ಶಿಕ್ಷಕರಾದ ಮಂಜುನಾಥ, ಸುವರ್ಣಕುಮಾರಿ, ಸುಜಾತ, ವಿಶ್ವನಾಥ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!