20.1 C
Sidlaghatta
Sunday, December 4, 2022

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

- Advertisement -
- Advertisement -

ನಗರದ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಕಸ್ತೂರಿ ಕರ್ನಾಟಕ ಜನಪದ ವೇದಿಕೆ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತರಾದ ಮಾಲತಿ, ಮನೋರ್ ಮಣಿ, ಹಾಗೂ ದಾವೂದ್ ಪಾಷಾ ಅವರನ್ನು ಸನ್ಮಾನಿಸಲಾಯಿತು.
ಕೇಕ್ ಕತ್ತರಿಸಿ ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್,ರಿಯಲ್ ಸ್ಟಾರ್ ಉಪೇಂದ್ರ, ಹಾಗೂ ಶೃತಿರವರ ಹುಟ್ಟು ಹಬ್ಬವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಚಲನಚಿತ್ರಗಳು ಹಾಗೂ ಸಾಧನೆಗಳನ್ನು ಮೆಲುಕು ಹಾಕಿದರು ಮತ್ತು ನಮ್ಮ ಶಿಡ್ಲಘಟ್ಟದ ಸಮೀಪದ ಕೇಶವಾರ ಆರ್.ಚಂದ್ರು ನಿರ್ದೇಶನದಲ್ಲಿ ರೀಯಲ್ ಸ್ಟಾರ್‌ ಉಪೇಂದ್ರ ರವರ ನಟನೆಯಲ್ಲಿ 7 ಭಾಷೆಯಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರವು ಯಶಸ್ವಿಯಾಗಲಿ ಎಂದು ಶುಭ ಕೋರಿದರು. ಶೃತಿ ಅವರಿಗೆ ಇನ್ನು ಹೆಚ್ಚು ಅವಕಾಶಗಳನ್ನು ದೊರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಲಾವಿದರಾದ ಸಿ.ಎನ್.ಮುನಿರಾಜು, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕು ಅಧ್ಯಕ್ಷ ರಾಮಾಂಜನೇಯ, ಧಾರವಾಹಿ ಸಂಯೋಜಕ ಎಲ್.ಮುತ್ತಕದಹಳ್ಳಿಯ ಮಧು ಎಮ್ ಗೌಡ, ನಗರಸಭಾ ಸದಸ್ಯ ಎಸ್.ಎನ್.ನಾರಾಯಣಸ್ವಾಮಿ,  ಮೆಗಾಸ್ಟಾರ್ ಚಿರಂಜೀವಿ ಸಂಘದ ದಿನೇಶ್ ಬಾಬು, ನಾರಾಯಣಸ್ವಾಮಿ, ರಾಮದಾಸ, ರಾಧಾಕೃಷ್ಣ, ದಾಮೋದರ್, ಮುನಿರಾಜು, ದೊಡ್ಡ ದಾಸರಹಳ್ಳಿ ದೇವರಾಜ್, ಕಲಾವಿದ ನಾಗಭೂಷಣ್, ರಂಗಭೂಮಿ ಕಲಾವಿದ ವಿಶ್ವಕರ್ಮ ಶ್ರೀನಿವಾಸ್, ದೇವರಮಳ್ಳೂರು ಮನೋಹರ್, ಶಿಕ್ಷಕರಾದ ವೆಂಕಟೇಶ್, ಸಾಧಿಕ್, ನೃತ್ಯ ನಿರ್ದೇಶಕಿ ಧನುಶ್ರೀ, ವೈಭವಿ, ಶಾಂತಮ್ಮ, ನವನೀತ, ಯಶಸ್ವಿನಿ, ಆಶಾಕಿರಾಣ ಶಾಲೆಯ ಸಿಬ್ಬಂದಿ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!