Sidlaghatta : ಸಹಕಾರ ಸಂಘಗಳು ಉಳಿದು ಬೆಳೆಯಬೇಕಾದರೆ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಅವಕಾಶ ನೀಡದೆ, ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು. ಶಿಡ್ಲಘಟ್ಟ ತಾಲ್ಲೂಕಿನ ಬಿನ್ನಮಂಗಲ ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಸ್ಥರಿಗೆ ಏನು ಪ್ರಯೋಜನ?
ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸುವಂತೆ ಕಳೆದ ಹತ್ತು ವರ್ಷಗಳಿಂದ ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿತ್ತು. ತಡವಾಗಿಯಾದರೂ ಇದೀಗ ಸಂಘ ಆರಂಭವಾಗಿರುವುದು ಸಂತಸದ ಸಂಗತಿ. ಇದುವರೆಗೆ ಉತ್ಪಾದಿಸಿದ ಹಾಲನ್ನು ಖಾಸಗಿ ಡೇರಿಗಳಿಗೆ ಸರಬರಾಜು ಮಾಡುತ್ತಿದ್ದ ಗ್ರಾಮಸ್ಥರು, ಇನ್ನು ಮುಂದೆ ತಮ್ಮದೇ ಸಹಕಾರ ಸಂಘದ ಮೂಲಕ ಹಾಲು ಪೂರೈಸುವುದರಿಂದ ಒಕ್ಕೂಟದಿಂದ ದೊರೆಯುವ ಪ್ರೋತ್ಸಾಹಧನದ ಜತೆಗೆ ಜಾನುವಾರುಗಳಿಗೆ ವಿಮೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಬಹುದು ಎಂದರು.
ಹಾಲು ಸಂಗ್ರಹದ ಗುರಿ ಏನು?
ಸಂಘ ಆರಂಭಗೊಂಡ ಮೊದಲ ದಿನವೇ ಸುಮಾರು 120 ಲೀಟರ್ ಹಾಲು ಸಂಗ್ರಹವಾಗಿದೆ. ಮುಂದಿನ ಒಂದು ವರ್ಷದೊಳಗೆ ಪ್ರತಿದಿನ ಒಂದು ಸಾವಿರ ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಬೇಕು. ಈ ಗುರಿ ಸಾಧನೆಗೆ ಒಕ್ಕೂಟದಿಂದ ದೊರೆಯುವ ಎಲ್ಲ ಸಹಕಾರವನ್ನು ಪ್ರಾಮಾಣಿಕವಾಗಿ ಗ್ರಾಮಸ್ಥರಿಗೆ ತಲುಪಿಸಲು ಬದ್ಧನಾಗಿರುವುದಾಗಿ ಅವರು ತಿಳಿಸಿದರು.
ಚಿಮುಲ್ ನಿರ್ದೇಶಕ ಹುಜಗೂರು ರಾಮಯ್ಯ, ಬಿನ್ನಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ. ನರಸಿಂಹಪ್ಪ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎನ್. ನಾಗೇಶ್, ಶಿಡ್ಲಘಟ್ಟ ಶಿಬಿರ ಕಚೇರಿ ಉಪವ್ಯವಸ್ಥಾಪಕ ರವಿಕಿರಣ್, ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಚಿಮುಲ್ ನಷ್ಟದ ಕುರಿತು ಸ್ವಂತ ಪ್ಯಾಕಿಂಗ್ ಘಟಕ ಇಲ್ಲದೆ ಚಿಮುಲ್‌ಗೆ ನಷ್ಟ: ನಿರ್ದೇಶಕ ಬಂಕ್ ಮುನಿಯಪ್ಪ, ಹಾಲಿನ ಗುಣಮಟ್ಟದ ಕುರಿತು ಗುಣಮಟ್ಟದ ಹಾಲು ಪೂರೈಸಿದರೆ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿ ಸಾಧ್ಯ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₹4.38 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಲೀಟರ್‌ಗೆ ₹1.80 ಬೋನಸ್ ವರದಿಗಳನ್ನೂ ಓದಿ.
In English: CHIMUL (Chikkaballapur Milk Union) director Bank Muniyappa inaugurated a newly started Milk Producers’ Cooperative Society at Binnamangala village in Sidlaghatta taluk, urging that cooperatives keep politics out and focus on producing quality milk. Villagers had been requesting a society for the past ten years and until now supplied their milk to private dairies; through their own society they can now get the milk union’s incentive, cattle insurance and incentives for students. About 120 litres of milk were collected on the first day, and he urged a target of 1,000 litres a day within a year. CHIMUL director Hujagur Ramaiah, society president B.M. Narasimhappa and Chikkaballapur Milk Union managing director N. Nagesh were present.








