24.1 C
Sidlaghatta
Sunday, July 14, 2024

ಬಿಜೆಪಿ ಅಭ್ಯರ್ಥಿ ರಾಮಚಂದ್ರಗೌಡ ದೇವಾಲಯಗಳಿಗೆ ಭೇಟಿ

BJP Candidate Visits Temples and Expresses Confidence in Winning Election

- Advertisement -
- Advertisement -

Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಸೀಕಲ್ ರಾಮಚಂದ್ರಗೌಡ ಅವರ ಹೆಸರನ್ನು ಬಿಜೆಪಿ ಪಕ್ಷ ಅಧಿಕೃತವಾಗಿ ಬುಧವಾರ ರಾತ್ರಿ ಪ್ರಕಟಿಸಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಪಕ್ಷದ ಮುಖಂಡರೊಂದಿಗೆ ಗುರುವಾರ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ವೀರಾಪುರ ಗ್ರಾಮದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ಸಲ್ಲಾಪುರಮ್ಮ, ಕೃಷ್ಣಸ್ವಾಮಿ, ಕೋಟೆ ಆಂಜನೇಯ ಸ್ವಾಮಿ, ವೇಣುಗೋಪಾಲಸ್ವಾಮಿ, ಸಾಯಿಬಾಬಾ, ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ನಗರೇಶ್ವರ ಸ್ವಾಮಿ, ದ್ವಿಮುಖ ಗಣಪತಿ, ಶಂಕರ ಮಠದ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗಾರ್ಡನ್ ರಸ್ತೆಯಲ್ಲಿರುವ ಪುರಾತನ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಬಿಜೆಪಿ ಪಕ್ಷದ ವರಿಷ್ಠರು ತನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿದ್ದಾರೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಕೈ-ತೆನೆಗಳಿಗೆ ಪೈಪೋಟಿ ನೀಡುವುದು ಶತಸ್ಸಿದ್ಧ. ಬದಲಾವಣೆ ಬಯಸಿರುವ ಜನರು, ಅಭ್ಯರ್ಥಿ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಸಂಭ್ರಮ, ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಂತೂ ಚುನಾವಣೆ ಗೆದ್ದಷ್ಟು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ಬಿಜೆಪಿ ಪಕ್ಷವನ್ನು ಸ್ವಯಂಪ್ರೇರಿತರಾಗಿ ಬಂದು ಸೇರುತ್ತಿದ್ದಾರೆ. ಮಾಜಿ ಶಾಸಕ ಎಂ.ರಾಜಣ್ಣ ಅವರ ಸಹಕಾರದೊಂದಿಗೆ ಈ ಬಾರಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಜಯಗಳಿಸಲಿದ್ದು, ರಾಜ್ಯದಲ್ಲಿಯೂ ಪೂರ್ಣ ಬಹುಮತದೊಂದಿಗೆ ಪಕ್ಷವು ಅಧಿಕಾರಕ್ಕೆ ಬರಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಂ.ರಾಜಣ್ಣ, ಸೀಕಲ್ ಆನಂದ ಗೌಡ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ. ನಂದೀಶ್, ರಮೇಶ್ ಬಾಯರಿ, ಯುವ ಮೋರ್ಚಾ ಅಧ್ಯಕ್ಷ ಭರತ್ ಕುಮಾರ್, ದಾಮೋದರ್, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ರತ್ನಮ್ಮ, ನೇಕಾರ ಪ್ರಕೋಷ್ಠ ಜಿಲ್ಲಾ ಸಹ ಸಂಚಾಲಕ ನಾಗೇಶ್, ಬಜರಂಗದಳ ತಾಲ್ಲೂಕು ಸಂಯೋಜಕ ವೆಂಕಟೇಶ್ ಹಾಜರಿದ್ದರು.


BJP Announces Seekal Ramachandra Gowda as Candidate for Sidlaghatta Constituency

Sidlaghatta : The Bharatiya Janata Party (BJP) has officially named Seekal Ramachandra Gowda as their candidate for the Sidlaghatta assembly constituency. In light of this announcement, Gowda visited several temples in the city on Thursday, accompanied by party leaders, to offer special prayers.

Gowda and his entourage began their temple visits by offering pooja at the Ganapati temple in Veerapura village. They then proceeded to offer special pooja at several other temples including Sallapuramma, Krishnaswamy, Kote Anjaneya Swami, Venugopalaswamy, Saibaba, Lakshmi Venkateswara Swami, Nagareshwara Swami, Dwimukha Ganapati, and Sri Raghavendra Swamy of Sankara Mutt. The group also visited the ancient Syed Sarmast Hussaini Shawali Dargah on Garden Road to offer prayers.

During his visit to the temples, Gowda spoke about the trust placed in him by the BJP party leaders and expressed confidence in his ability to compete effectively in the Sidlaghatta assembly constituency. He noted that people who want change are expressing happiness with the announcement of the candidates, and BJP workers are expressing their happiness after winning the election. Gowda added that people in every village of the constituency are coming and joining the BJP party voluntarily.

Gowda also expressed his confidence in winning the Sidlaghatta constituency with the cooperation of former MLA M. Rajanna. He believes that the BJP party will come to power with a full majority in the state.

Former MLA M. Rajanna, Seekal Anand Gowda, BJP Rural Mandal President Surendra Gowda, Urban Planning Authority Chairman B.C. Nandish, Ramesh Bayari, Yuva Morcha President Bharat Kumar, Damodar, Mahila Morcha District Vice President Ratnamma, Nekara Prakostha District Co-Convenor Nagesh, and Bajrangdal Taluk Coordinator Venkatesh were also present during the temple visits.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!