26.9 C
Sidlaghatta
Friday, December 6, 2024

ರಾಷ್ಟ್ರವಿರೋಧಿ ಸಂಘಟನೆಗಳನ್ನು ಬೆಳೆಸಿದ್ದು ಕಾಂಗ್ರೆಸ್ ಸರ್ಕಾರ – ಜೆ ಪಿ ನಡ್ಡಾ

Nadda blames Congress for allowing controversial organization PFI to grow

- Advertisement -
- Advertisement -

Sidlaghatta : ಕಾಂಗ್ರೆಸ್ ಪಕ್ಷ ರಾಜ್ಯದ ಅಭಿವೃದ್ಧಿಯ ಮತ್ತು ವಿಕಾಸದ ವಿರೋಧಿಯಾಗಿದೆ. ಸಿದ್ಧರಾಮಯ್ಯನವರ ಸರ್ಕಾರವಿದ್ದಾಗ ಪಿ.ಎಫ್.ಐ ನ ಗೂಂಡಾಗಳು ನಾಡಿಕೆ ಕಂಟಕಪ್ರಾಯರಾಗಿ ಬೆಳೆದಿದ್ದರು. ಇದರಿಂದ ರಾಜ್ಯದಲ್ಲಿ ಜನ ಸಾಮಾನ್ಯರು ಭಯಭೀತರಾಗಿದ್ದರು. ಈ ರೀತಿಯ ಸಂಘಟನೆಗಳನ್ನು ಬೆಳೆಯಲು ಬಿಟ್ಟವರು ಕಾಂಗ್ರೆಸ್ಸಿಗರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆರೋಪಿಸಿದರು.

ಶಿಡ್ಲಘಟ್ಟ ನಗರಕ್ಕೆ ಸೋಮವಾರ ಶಿಡ್ಲಘಟ್ಟದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡರ ಪರವಾಗಿ ಪ್ರಚಾರ ನಡೆಸಿ ರೋಡ್ ಶೋ ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾವು ಪಿಎಫ್ಐ ಸಂಘಟನೆಯನ್ನು ಆಧಾರಸಹಿತವಾಗಿ ರಾಷ್ಟ್ರವಿರೋಧಿ ಸಂಘಟನೆ ಅಂತ ನಿಷೇಧ ಮಾಡಿದ್ದೇವೆ. ಆದರೆ, ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಪಿಎಫ್ಐ ಮೇಲೆ ದಾಖಲಾಗಿದ್ದ 170 ಕೇಸ್ ವಾಪಾಸ್ ಪಡೆದಿದ್ದರು. 1750 ಜನರನ್ನು ಜೈಲಿನಿಂದ ಬಿಡುಗಡೆ ಮಾಡಿದರು. ಈ ರೀತಿಯ ಸರ್ಕಾರ ನಮಗೆ ಬೇಕೆ. ಪಿಎಫ್ ಐ ನಿಷೇಧ ಮುಂದುವರೆಯಲು ಬಿಜೆಪಿ ಬೆಂಬಲಿಸಿ ಎಂದರು.

ಎಸ್ ಸಿ ಎಸ್ ಟಿ ಒಕ್ಕಲಿಗ ಲಿಂಗಾಯತ ಸೇರಿ ಹಲವು ಸಮುದಾಯಗಳ ಮೀಸಲಾತಿ ಹೆಚ್ಚಳ ಮಾಡಿದ್ದು ಬೊಮ್ಮಾಯಿ ಸರ್ಕಾರ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಧಿಕಾರಕ್ಕೆ‌ಬಂದ್ರೆ ಮೀಸಲಾತಿ ವಾಪಾಸ್ ಪಡಿತಿವೆ ಅಂತಾರೆ. ಇಂತಹವರು ಅಧಿಕಾರಕ್ಕೆ‌ ಬರಬೇಕಾ? ಎಂದು ಜನರನ್ನು ಪ್ರಶ್ನಿಸಿದರು.

ಕೇಂದ್ರದ ಯೋಜನೆ ತಡೆ ಹಿಡಿದ ಕುಮಾರಸ್ವಾಮಿ :

ರಾಜ್ಯದಲ್ಲಿ ಕುಮಾರಸ್ವಾಮಿ ಅವರ ಜೊತೆಗೂಡಿ ಬಿಜೆಪಿ ಸರ್ಕಾರ ರಚಿಸಿದಾಗ ಯಶಸ್ವಿನಿ ಸೇರಿದಂತೆ ಹಲವು ಯೋಜನೆಗಳನ್ನು ಅವರು ಸ್ಥಗಿತಗೊಳಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಕೇಂದ್ರದ ಯೋಜನೆಗಳನ್ನು ತಡೆಹಿಡಿದುದೇ ಕುಮಾರಸ್ವಾಮಿ ಸರ್ಕಾರದ ಸಾಧನೆ. ಸಿದ್ಧರಾಮಯ್ಯನವರೂ ಸಹ ಕೇಂದ್ರದ ಯೋಜನೆಗಳು ಜಾರಿಯಾದರೆ ಮೋದಿಯವರಿಗೆ ಹೆಸರು ಬರುತ್ತದೆಂದು ಜನರಿಗೆ ತಲುಪದಂತೆ ತಡೆಹಿಡಿದರು ಎಂದು ಆರೋಪಿಸಿದರು.

ವಿಕಾಸದ ಹಾದಿಯಲ್ಲಿ ನಡೆಯಲು ಬಿಜೆಪಿ ಬೆಂಬಲಿಸಿ :

ಈ ವಿಧಾನಸಭೆ ಚುನಾವಣೆ ಕೇವಲ ಸೀಕಲ್ ರಾಮಚಂದ್ರಗೌಡರು ಅಥವಾ ಡಾ.ಸುಧಾಕರ್ ಅವರದ್ದಲ್ಲ, ಇಡೀ ಕರ್ನಾಟಕವನ್ನು ವಿಕಾಸದ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದ ಚುನಾವಣೆಯಾಗಿದೆ.

ಡಬಲ್ ಎಂಜಿನ್ ಸರ್ಕಾರವನ್ನು ಅಭಿವೃದ್ಧಿಯ ಪಥದಲ್ಲಿ ದ್ವಿಗುಣ ವೇಗದಲ್ಲಿ ಮುನ್ನಡೆಸುವ ಅವಕಾಶವಿದೆ. ಕೇಂದ್ರದಲ್ಲಿ ಮೋದಿಯವರ ಸರ್ಕಾರವಿದ್ದಾಗ ಕರ್ನಾಟಕದಲ್ಲಿ ಅಭಿವೃದ್ಧಿ ಚೆನ್ನಾಗಿ ನಡೆದಿದೆ. ಇದಕ್ಕೆ ಯಡಿಯೂರಪ್ಪನವರ ಹಾಗೂ ಬೊಮ್ಮಾಯಿಯವರ ಕೊಡುಗೆಗಳೂ ಸಾಕಷ್ಟಿವೆ.

ಕರ್ನಾಟಕವನ್ನು ವಿಕಾಸದ ಹಾದಿಯಲ್ಲಿ ನಡೆಸಬೇಕಾದರೆ ಮತ್ತೆ ಬೊಮ್ಮಾಯಿ ಸರ್ಕಾರವನ್ನು ಅಧಿಕಾರಕೆ ತರಬೇಕು ಹಾಗೂ ಸೀಕಲ್ ರಾಮಚಂದ್ರಗೌಡ ಮತ್ತು ಸುಧಾಕರ್ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಶಿಡ್ಲಘಟ್ಟದ ನೆಹರು ಕ್ರೀಡಾಂಗಣಕ್ಕೆ ಹೆಲಿಕಾಪ್ಟಾರ್ ಮೂಲಕ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ಇತರೆ ಮುಖಂಡರೊಂದಿಗೆ ಬಿಜೆಪಿ ಸೇವಾ ಸೌಧದಿಂದ ಅರಳೇಪೇಟೆ ಬಸವಣ್ಣ ದೇವಸ್ಥಾನದವರೆಗೂ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆರೋಗ್ಯ ಸಚಿವ ಡಾ.ಸುಧಾಕರ್, ಸಂಸದ ಎಸ್. ಮುನಿಸ್ವಾಮಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್‌ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ ಹಾಜರಿದ್ದರು.


BJP National President JP Nadda Alleges Congress Hindering Karnataka’s Development

Sidlaghatta : BJP National President JP Nadda recently campaigned for the Sidlaghatta BJP candidate Seekal Ramchandra Gowda, where he alleged that the Congress party was hindering the development and progress of the state of Karnataka. Nadda also accused former Chief Minister Siddaramaiah of allowing the growth of the Popular Front of India (PFI), a controversial organization, during his tenure. He claimed that the BJP had banned PFI as an anti-national organization, but Siddaramaiah withdrew 170 cases filed against PFI during his tenure, leading to the release of 1750 people from jail.

Nadda also highlighted the efforts made by the Bommai government to increase the reservation of several communities, including SCST, Okkaliga, and Lingayat. He criticized Congress leaders D.K. Sivakumar and Siddaramaiah for allegedly reversing these efforts. Nadda also blamed former Chief Minister Kumaraswamy for stalling several projects, including Yashasvini and the Prime Minister’s Kisan Samman Nidhi.

Nadda stressed that the upcoming assembly election was not just about Seikal Ramachandra Gowda or Dr. Sudhakar, but about leading the entire state of Karnataka on the path of development. He claimed that the double engine of the BJP and the central government had the potential to speed up the development process. Nadda urged people to support the BJP and bring the Bommai government back to power to continue the state’s progress.

Nadda’s speech was delivered during a roadshow that began at BJP Seva Soudha and ended at Aralepet Basavanna Temple. The event was attended by several BJP leaders, including Karnataka State President Nalin Kumar Kateel, Health Minister Dr. Sudhakar, MP S. Muniswami, BJP state in-charge Arun Singh, BJP candidate Seikal Ramachandra Gowda, and former MLA M. Rajanna.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!