News

ಮನೆ ಮನೆಗೆ ತೆರಳಿ ಮಹಿಳೆಯರ ಸಮಸ್ಯೆ ಆಲಿಕೆ: ಕಾಂಗ್ರೆಸ್ “ಮಾತೃಭಗಿನಿ ನಾರಿ ಶಕ್ತಿಗೆ ನಮನ” ಪಾದಯಾತ್ರೆ ಆರಂಭ

Congress leader handing a campaign packet to the priest at the Veeranjaneya Swamy temple with women and villagers gathered around at the start of the Nari Shakti ge Namana padayatra

Sidlaghatta : ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಅವರ ಆಶಯಗಳಿಗೆ ಸ್ಪಂದಿಸುವ ಹಾಗೂ ಜನರೊಂದಿಗೆ ನೇರ ಸಂಪರ್ಕ ಬೆಳೆಸುವ ಉದ್ದೇಶದಿಂದ ಕಾಂಗ್ರೆಸ್ ವತಿಯಿಂದ “ಮಾತೃಭಗಿನಿ ನಾರಿ ಶಕ್ತಿಗೆ ನಮನ” ಜನಸಂಪರ್ಕ ಮಹಾ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಪಾದಯಾತ್ರೆ ಆರಂಭವಾದದ್ದು ಹೇಗೆ?

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲಕಲನೇರ್ಪು ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ಅವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಯಿತು. ಮುಖಂಡರು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರು, ಹಿರಿಯರು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆ ಮತ್ತು ಅಹವಾಲುಗಳನ್ನು ಆಲಿಸಿದರು.

ಮಹಿಳೆಯರ ಧ್ವನಿಗೆ ವೇದಿಕೆ: ಸಹನಾ ರಾಜೀವ್ ಗೌಡ

ಸಹನಾ ರಾಜೀವ್ ಗೌಡ ಮಾತನಾಡಿ, ಮಹಿಳೆಯರು ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ; ಅವರ ಗೌರವ, ಸ್ವಾಭಿಮಾನ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಮಹಿಳೆಯರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಅವರ ಅಭಿಪ್ರಾಯ ಮತ್ತು ನಿರೀಕ್ಷೆಗಳನ್ನು ತಿಳಿಯುವುದು ಪಾದಯಾತ್ರೆಯ ಮುಖ್ಯ ಆಶಯ ಎಂದು ತಿಳಿಸಿದ ಅವರು, ಮಹಿಳೆಯರ ಧ್ವನಿಗೆ ವೇದಿಕೆ ಕಲ್ಪಿಸುವ ಜತೆಗೆ ಜನರೊಂದಿಗೆ ನಿರಂತರ ಸಂಪರ್ಕ ಹೊಂದುವ ಪ್ರಯತ್ನ ಇದು ಎಂದರು.

ಮನೆ ಬಾಗಿಲಿಗೆ ಹೋಗುವ ಅಭಿಯಾನ: ರಾಜೀವ್ ಗೌಡ

ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾತನಾಡಿ, ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ನೇರ ಸಂವಾದ ನಡೆಸುವುದು ಈ ಅಭಿಯಾನದ ಉದ್ದೇಶ. ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಅವರ ಅಹವಾಲುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಇಂತಹ ಜನಸಂಪರ್ಕ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಪಕ್ಷದ ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಸಂಬಂಧಿತ ಸುದ್ದಿ: ನಾನು ಅಲ್ಲ ನಾವು ಎಂಬ ವಿನಯ ಬೆಳೆಸಿಕೊಳ್ಳಿ : Congress ಮುಖಂಡ ರಾಜೀವ್ ಗೌಡ | ಹಾಲು ಉತ್ಪಾದಕರ ಮಹಿಳಾ ಸಂಘ ಚುನಾವಣೆ: 12ರಲ್ಲಿ 11 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.