32.1 C
Sidlaghatta
Tuesday, March 28, 2023

2023 ಚಿಣ್ಣರ ಸಂಭ್ರಮ ಕಾರ್ಯಕ್ರಮ

- Advertisement -
- Advertisement -

Gowdanahalli, sidlaghatta : ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಉತ್ತಮ ವಿದ್ಯಾಭ್ಯಾಸದ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ ಎಂದು ತಾ.ಪಂ EO ಜಿ.ಮುನಿರಾಜು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾಭಿವೃದ್ದಿ ಸಮಿತಿ ಹಾಗು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ “2023 ಚಿಣ್ಣರ ಸಂಭ್ರಮ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಓದಿನ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸುವುದು ಸರ್ಕಾರಿ ಶಾಲೆಯಿಂದ ಮಾತ್ರ ಸಾದ್ಯ. ಹಾಗಾಗಿ ಇಲ್ಲಿ ಓದಿ ಉನ್ನತ ಮಟ್ಟಕ್ಕೇರಿದ ವಿದ್ಯಾರ್ಥಿಗಳು ತಾವು ಹುಟ್ಟಿದ ಊರು ಹಾಗೂ ಓದಿದ ಶಾಲೆಯ ಬಗ್ಗೆ ವಿಶೇಷ ಕಾಳಜಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.

ಜಿ ಪಂ ಮಾಜಿ ಸದಸ್ಯೆ ಸುನಿತ ಶ್ರೀನಿವಾಸ ರೆಡ್ಡಿ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗೌಡನಹಳ್ಳಿಯ ಶಾಲೆ ಮಾದರಿಯಾಗಿದೆ. ಇದರ ಪ್ರಗತಿಗಾಗಿ ಶ್ರಮಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸ ಬೇಕು ಎಂದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಮಾತನಾಡಿ, ಮನುಷ್ಯ ಹುಟ್ಟಿದ ಮೇಲೆ ಏನೋ ಒಂದು ಸಾಧನೆ ಮಾಡಬೇಕು. ಹಾಗೆಯೇ ಗೌಡನಹಳ್ಳಿ ಗ್ರಾಮದ ಕೆಲ ಯುವಕರು ಸೇರಿದಂತೆ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿ ಗ್ರಾಮದ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಪಣತೊಟ್ಟು ಅಭಿವೃದ್ದಿ ಪಡಿಸುತ್ತಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಹಳೆಯ ವಿದ್ಯಾರ್ಥಿಗಳ ಸಹಕಾರ ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಇಲ್ಲಿನ ಶಿಕ್ಷಕರ ಶ್ರಮ ಅಭಿನಂದನೀಯ ಎಂದರು.

ದುರ್ಗಂ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಊಟದ ಭವನ, ಶಿಥಿಲಗೊಂಡಿದ್ದ ಎರಡು ಕೊಠಡಿಗಳನ್ನು ಗ್ರಾಮದ ಜಿ.ಆರ್. ನಾಗರಾಜ್, ಸೋಮಲ ಮತ್ತು ಸುನಿತ ಆನಂದ್ ರವರ ನೆರವಿನಿಂದ ನವೀಕರಣಗೊಳಿಸಿ ಶಾಲಾಬಳಕೆಗೆ ಗಣ್ಯರು ಉದ್ಘಾಟನೆ ಮಾಡಿದರು. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಮಕ್ಕಳು ವಿವಿಧ ನೃತ್ಯಗಳನ್ನು ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ನೆರದಿದ್ದ ಪೋಷಕರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ದೇವರಾಜ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಲಕ್ಷ್ಮೀಪತಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ.ಬಿ.ಚಂದ್ರು, ಕ್ಷೇತ್ರ ಸಮನ್ವಯಾಧಿಕಾರಿ ತ್ಯಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯೆ ಸೌಮ್ಯಶ್ರೀ ಮಂಜುನಾಥ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜ್, ನಿವೃತ್ತ ಉಪ ತಹಸೀಲ್ದಾರ್ ನಾರಾಯಣಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಶ್ರೀನಿವಾಸ್, ಪ್ರಭಾರಿ ಬಿಆರ್‌ಸಿ ಬಾಬು, ಶಾಲೆಯ ಸಿಬ್ಬಂದಿ, ನಿವೃತ್ತ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.


Government Schools Provide Education and Values

Gowdanahalli, sidlaghatta : Government schools provide not only good education, but also instill important life values in their students, according to EO G. Muniraju. Speaking at the “2023 Chinnara Sabhram” school Annual Day program organized by the School Development Committee and Alumni Association at Gaudanahalli Government Senior Primary School in Sidlaghatta taluk, Muniraju praised the school for its efforts in teaching values alongside education.

Muniraju also urged students to participate in sports and cultural activities to become well-rounded individuals and good citizens of society. Former member of GPM, Sunitha Srinivasa Reddy, commended the Gaudanahalli school as a model, and retired Field Education Officer G. Raghunath Reddy praised the efforts of teachers, old students, and villagers in developing the school.

As part of the anniversary celebration, dignitaries inaugurated a lunch house built by the Durgam Charitable Trust and renovated two dilapidated rooms for school use. Children entertained parents with various dances, and School Headmaster Devaraj, School Development Committee President Lakshmipati, and Alumni Association President GB Chandru, among others, were in attendance.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!