22.1 C
Sidlaghatta
Friday, June 2, 2023

ಸಂಭ್ರಮದ ಶ್ರೀನಿವಾಸ ಕಲ್ಯಾಣೋತ್ಸವ

Seekal Ramachandra Gowda's Sribalaji Seva Trust Organizes Spectacular Festivities

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ನೆಹರು ಕ್ರೀಡಾಂಗಣದಲ್ಲಿ ಸೀಕಲ್ ರಾಮಚಂದ್ರ ಗೌಡ ಅವರ ಶ್ರೀಬಾಲಾಜಿ ಸೇವಾ ಟ್ರಸ್ಟ್‌ ನಿಂದ ಶನಿವಾರ ಕಲಿಯುಗದ ಪ್ರತ್ಯಕ್ಷ ದೇವರೆಂದೇ ಭಕ್ತರಿಂದ ಕರೆಯಲ್ಪಡುವ ಶ್ರೀನಿವಾಸ ಸ್ವಾಮಿಗೆ, ಕಲ್ಯಾಣೋತ್ಸವವು ಸಂಭ್ರಮ ಮತ್ತು ಅದ್ಧೂರಿಯಿಂದ ನಡೆಯಿತು. ಕಲ್ಯಾಣೋತ್ಸವದ ಅಂಗವಾಗಿ ನಗರದ ಟಿಬಿ ರಸ್ತೆಗಳಲ್ಲಿ ಭಗವಾಧ್ವಜಗಳು ಹಾರಾಡಿದ್ದವು.

ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಮಾದರಿಯಲ್ಲಿ ವೇದಿಕೆ ನಿರ್ಮಿಸಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಭಕ್ತರು ಶ್ರೀ ವೆಂಕಟರಮಣ ದೇವರ ದರ್ಶನ ಪಡೆದು ಪುನೀತರಾದರು.

ಶಿಡ್ಲಘಟ್ಟ ಕ್ಷೇತ್ರದ ಗ್ರಾಮೀಣ ಭಾಗಗಳಿಂದ ಕಲ್ಯಾಣೋತ್ಸವಕ್ಕೆ ಬರಲು ಭಕ್ತರಿಗೆ ಸಾರಿಗೆ ಸೌಲಭ್ಯ ‌‌ವ್ಯವಸ್ಥೆ ಕಲ್ಪಿಸಲಾಗಿತ್ತು. ಆಯಾ ಸ್ಥಳೀಯ ಮುಖಂಡರಿಗೆ ಜನರ ಕರೆತರುವ ಜವಾಬ್ದಾರಿ ವಹಿಸಲಾಗಿತ್ತು.

ನೂರಾರು ಭಕ್ತರ ನಡುವೆ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ಮಂಟಪಕ್ಕೆ ಕರೆತರಲಾಯಿತು‌. ಬಳಿಕ ಶ್ರೀನಿವಾಸ ಸ್ವಾಮಿಯನ್ನು ತೊಟ್ಟಿಲಿನಲ್ಲಿರಿಸಿ ಚಾಮರ ಸೇವೆ ನಡೆಸಲಾಯಿತು. ಭಕ್ತರು ಈ ವೇಳೆ ಗೋವಿಂದ ನಾಮಸ್ಮರಣೆಯನ್ನು ಮಾಡುತ್ತಾ ಪುನೀತರಾದರು.

ಸಂಜೆ ಆರಂಭವಾದ ಕಲ್ಯಾಣೋತ್ಸವ ರಾತ್ರಿ 9ರ ಸುಮಾರಿಗೆ ಪೂರ್ಣಗೊಂಡಿತು. ಸೀಕಲ್ ರಾಮಚಂದ್ರಗೌಡ ದಂಪತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರ ಕುಟುಂಬ ಸದಸ್ಯರು, ಬಂಧು ಬಳಗವೂ ಹಾಜರಿತ್ತು. ದಂಪತಿ ಕನ್ಯಾದಾನದ ಸಂಕಲ್ಪವನ್ನು ಮಾಡಿದರು. ಅರ್ಚಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೂ ಸಾಮೂಹಿಕ ಸಂಕಲ್ಪ ಮಾಡಿಸಿದರು. 300ಕ್ಕೂ ಹೆಚ್ಚು ಅರ್ಚಕರು ಕಲ್ಯಾಣೋತ್ಸವದಲ್ಲಿ ವೇದ ಮಂತ್ರ ಪಠಿಸಿದರು.

ಕಲ್ಯಾಣೋತ್ಸವದಲ್ಲಿ ಭಾಗಿ ಆಗಿದ್ದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರೆಲ್ಲರಿಗೂ ತಿರುಪತಿ ಪ್ರಸಾದ(ಲಡ್ಡು) ವಿತರಿಸಲಾಯಿತು. ಸಹಸ್ರಾರು ಜನರು ಕಲ್ಯಾಣೋತ್ಸವ ಕಣ್ತುಂಬಿಕೊಂಡರು.

ಅದ್ದೂರಿಯ ವೇದಿಕೆ: ‌

ಕಲ್ಯಾಣೋತ್ಸವಕ್ಕೆ ಅದ್ದೂರಿಯಾಗಿ ತಿರುಪತಿ ತಿರುಮಲ ದೇವಾಲಯದ ಪ್ರತಿರೂಪದ ವೇದಿಕೆ ಸಿದ್ಧಗೊಳಿಸಲಾಗಿತ್ತು. ಬೆಳಿಗ್ಗೆಯಿಂದಲೇ ಇಲ್ಲಿಗೆ ಬರುತ್ತಿದ್ದ ಭಕ್ತರು ಹಾಗೂ ಸಾರ್ವಜನಿಕರ ಗಮನ ಸೆಳೆಯಿತು. ಅದ್ಧೂರಿಯ ಸೆಟ್ ನೋಡಲು ಬಹಳಷ್ಟು ಜನರು ಬಂದಿದ್ದರು.

ಮಹರ್ಷಿ ಆನಂದ ಗುರೂಜಿ, ಮಾಜಿ ಶಾಸಕ ಎಂ.ರಾಜಣ್ಣ, ಚಲನಚಿತ್ರ ನಿರ್ದೇಶಕ ಆರ್.ಚಂದ್ರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ನಗರ ಮಂಡಲ ಅಧ್ಯಕ್ಷ ರಾಘವೇಂದ್ರ, ಡಾ.ಸತ್ಯನಾರಯಣರಾವ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ಹಸಿರಿನ ಸಮೃದ್ದಿ ಎಲ್ಲೆಡೆ ನೆಲೆಸಿ ಸುಖ ಶಾಂತಿ ನೆಮ್ಮದಿಯ ಬದುಕು ಎಲ್ಲರದ್ದಾಗಲಿ ಎಂದು ಬಯಸಿ ಲೋಕ ಕಲ್ಯಾಣಕ್ಕಾಗಿ ಶ್ರೀಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಲಾಗುತ್ತಿದೆ. ಬಡವ ಶ್ರೀಮಂತ ಅಕ್ಷರಸ್ಥ ಅನಕ್ಷರಸ್ಥ ಎನ್ನುವ ತಾರತಮ್ಯ ಇಲ್ಲದೆ ಭಾಷೆ ಗಡಿಯ ಬೇದಭಾವ ಇಲ್ಲದೆ ಎಲ್ಲರನ್ನೂ ಕೈ ಬೀಸಿ ಕರೆಯುವ ಕಲಿಯುಗದ ಪ್ರತ್ಯಕ್ಷ ದೈವ ಪದ್ಮಾವತಿ ಸಮೇತ ಶ್ರೀತಿಮ್ಮಪ್ಪನ ದರ್ಶನ ಪಡೆದು, ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡ ತಿರುಪತಿಯ ಲಡ್ಡು ಸವಿಯುವ ಅವಕಾಶ ಶಿಡ್ಲಘಟ್ಟ ಕ್ಷೇತ್ರದ ಜನತೆಗೆ ಲಭಿಸಿದೆ

ಮಹರ್ಷಿ ಆನಂದ ಗುರೂಜಿ

Live : ಶಿಡ್ಲಘಟ್ಟ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನೇರ ಪ್ರಸಾರ


Grand Kalyanotsava Ceremony Honoring Srinivasa Swami Held in Sidlaghatta

Sidlaghatta : On Saturday, Seekal Ramachandra Gowda’s Sribalaji Seva Trust held a grand Kalyanotsava ceremony in honor of Srinivasa Swami, also known as the Pratyaksha Deva of Kaliyuga, at the Nehru Stadium in Sidlaghatta city. The event was attended by hundreds of devotees who witnessed the grand procession of Lord Srinivasa and Sridevi Bhudevi, accompanied by the chanting of Vedic mantras by more than 300 priests.

The event featured a replica stage of the sanctum sanctorum of the Tirupati temple, where the idol of Tirupati Thimmappa was enshrined. Devotees were able to get darshan of Lord Sri Venkataramana and seek blessings by performing Namasmarana to Govinda.

Transportation facilities were arranged for rural devotees to attend the event, and local leaders were tasked with bringing people from their respective areas. The Kalyanotsava ceremony started in the evening and lasted until around 9 pm, during which time the cradle ceremony was performed and Chama Seva was offered to Srinivasa Swami.

Seikal Ramachandra Gowda and his family participated in the pooja program, and the couple took the vow of Kanyadana. Lunch was provided for all the participants, and Tirupati Prasad (Laddu) was distributed to the devotees.

The event was attended by prominent figures such as Maharshi Ananda Guruji, former MLA M. Rajanna, film director R. Chandru, and BJP leaders and workers. The grand stage and festivities attracted the attention of both devotees and the general public who came to witness the event throughout the day.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!