21.1 C
Sidlaghatta
Saturday, July 27, 2024

ಸ್ವಾಭಿಮಾನಿ ಮತದಾರರ ವಿಶ್ವಾಸ ಗಳಿಸಲು ಅಭಿವೃದ್ಧಿ ಯೋಜನೆಗಳು  

- Advertisement -
- Advertisement -

Ganjigunte, Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿನ ಸ್ವಾಭಿಮಾನಿ ಮತದಾರಿಗೆ ಕುಮಾರಣ್ಣನವರ ಅಭಿವೃದ್ಧಿಪರ ಚಿಂತನೆಗಳನ್ನು, ಪಂಚರತ್ನ ಯೋಜನೆಯ ಬಗ್ಗೆ ವಿವರಿಸುವ ಮೂಲಕ ಜನರ ವಿಶ್ವಾಸ ಗಳಿಸುವ ಉದ್ದೇಶದಿಂದ ಪ್ರತಿಯೊಂದು ಹಳ್ಳಿ ಹಾಗೂ ಪಂಚಾಯಿತಿಗೆ ಭೇಟಿ ಕೊಡುವುದಾಗಿ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಗುರುವಾರ ಗಂಜಿಗುಂಟೆಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆ ಹಾಗೂ ಚುನಾವಣಾ ಪ್ರಚಾರದ ಸಭೆಯಲ್ಲಿ ಅವರು ಮಾತನಾಡಿದರು.

ಕುಮಾರಣ್ಣನವರು ಗ್ರಾಮೀಣ ಭಾಗದ ಬಡ ಜನರ ಅನುಕೂಲಕ್ಕಾಗಿ ಪಂಚರತ್ನ ಯೋಜನೆಯನ್ನು ರೂಪಿಸಿದ್ದಾರೆ. ವಸತಿ, ಆರೋಗ್ಯ, ಯುವ ನವಮಾರ್ಗ, ಮಹಿಳಾ ಸಬಲೀಕರಣ, ಶಿಕ್ಷಣ, ರೈತ ಚೈತನ್ಯ ಸೇರಿದಂತೆ, ವಿಧವಾ ವೇತನ ಹೆಚ್ಚಳ, ವೃದ್ಧಾಪ್ಯ ವೇತನ ಹೆಚ್ಚಳ, ರೈತರಿಗೆ ಪ್ರೋತ್ಸಾಹ ಧನ, ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವ ಯೋಜನೆ ರೂಪಿಸಿದ್ದಾರೆ. ಕುಮಾರಣ್ಣನವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ, ರೈತರ ಸಾಲ ಮಾಡಿರುವ ಬಗ್ಗೆ ಹಾಗೂ ದೇವೇಗೌಡರ ಜನೋಪಯೋಗಿ ನಿಲುವುಗಳನ್ನು ಪ್ರತಿಯೊಬ್ಬರಿಗೂ ತಿಳಿಸಲಿದ್ದೇವೆ ಎಂದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಮನೆಗೆ ಯೋಜನೆಯ ಅನುಕೂಲಗಳ ಕುರಿತಂತೆ ಕರಪತ್ರ ತಲುಪಿಸುವ ಕೆಲಸವನ್ನು ಮಾಡುತ್ತಾ, ಸ್ಥಳೀಯ ಸಮಸ್ಯೆಗಳನ್ನು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಹರಿಸುತ್ತೇವೆ ಎಂದರು.

ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮೇಲೆ ಜನರು ವಿಶ್ವಾಸ ಕಳೆದು ಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ಮಾತ್ರವೇ ಗ್ರಾಮೀಣಪ್ರದೇಶಗಳ ಅಭಿವೃದ್ಧಿ ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಪಂಚರತ್ನ ಯೋಜನೆಗಳ ಅನುಕೂಲಗಳಿಂದ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದರು.

ಶಿಡ್ಲಘಟ್ಟ ಸಂಪೂರ್ಣ ಅಭಿವೃದ್ಧಿಗಾಗಿ ಶ್ರಮಿಸಲು ನಿಮ್ಮ ಆಶೀರ್ವಾದ ಮತ್ತು ಸಂಪೂರ್ಣ ಬೆಂಬಲ ಇರಬೇಕು. ಜೆಡಿಎಸ್ ಪಕ್ಷವನ್ನು ಬೆಂಬಲಿಸಿ, ರಾಜ್ಯದಲ್ಲಿ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಲು ಶಿಡ್ಲಘಟ್ಟದಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಎಂಜಿನಿಯರಿಂಗ್ ಕಾಲೇಜು :

ನಾನು ಕೆಲಸಗಾರ, ಭರವಸೆ ನೀಡಿ ಭಾಷಣ ಮಾಡಿ ಮೋಸ ಮಾಡುವವನಲ್ಲ, ಕೆಲಸ ಮಾಡಲೆಂದೇ ಬಂದವನು. ಕುಮಾರಣ್ಣನವರು ಮುಖ್ಯಮಂತ್ರಿ ಆದರೆ ಶಿಡ್ಲಘಟ್ಟ ಕ್ಷೇತ್ರಕ್ಕೆ ಶುಕ್ರದೆಸೆ ಪ್ರಾರಂಭವಾದಂತೆ. ಅವರ ಕೈಕಾಲು ಹಿಡಿದು ಅನುದಾನ ತರುತ್ತೇನೆ. ಎಂಜಿನಿಯರಿಂಗ್ ಕಾಲೇಜು ಮಾಡಿಸುತ್ತೇನೆ. ಅಭಿವೃದ್ಧಿ ಕಾರ್ಯಗಳನ್ನು ಮಾಡುವುದೇ ನನ್ನ ಗುರಿ. ನಾನು ಮಾತಿಗೆ ತಪ್ಪಿದರೆ, ಮುಂದಿನ ಚುನಾವಣೆಗೆ ನಿಮಗೆ ಮುಖ ತೋರಿಸುವುದಿಲ್ಲ ಎಂದರು.

ಸೇರ್ಪಡೆ :

ಗಂಜಿಗುಂಟೆ ಪಂಚಾಯಿತಿ ವ್ಯಾಪ್ತಿಯ ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್ ಗೆ ಸೇರ್ಪಡೆಗೊಂಡರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ವಿ.ವೆಂಕಟೇಶ್, ಬಂಕ್ ಮುನಿಯಪ್ಪ, ಕೆ.ಲಕ್ಷ್ಮೀನಾರಾಯಣರೆಡ್ಡಿ, ಮುನಿವೆಂಕಟಸ್ವಾಮಿ, ಹುಜಗೂರು ರಾಮಣ್ಣ, ನಂದನವನ ಶ್ರೀರಾಮರೆಡ್ಡಿ, ಭಕ್ತರಹಳ್ಳಿ ನಾರಾಯಣಸ್ವಾಮಿ, ಜೆ.ವಿ.ಸದಾಶಿವ, ಕುಂದಲಗುರ್ಕಿ ಚಂದ್ರಶೇಖರ್,ಈತಿಮ್ಮಸಂದ್ರ ಶಿವಾರೆಡ್ಡಿ, ಭಕ್ತರಹಳ್ಳಿ ರಮೇಶ್, ಗ್ರಾಂ.ಪಂ.ಅಧ್ಯಕ್ಷೆ ಸರಸ್ವತಮ್ಮ, ಸಮೀಉಲ್ಲಾ, ರಾಮಾಂಜಿನಪ್ಪ, ಮೇಲೂರು ಮಂಜುನಾಥ್, ಟಿ.ಎನ್.ರಘುನಾಥ ರೆಡ್ಡಿ, ಗಂಜುಗುಂಟೆ ನರಸಿಂಹಮೂರ್ತಿ, ರಮೇಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ಚೀಮನಹಳ್ಳಿ ಗೋಪಾಲ್ ಹಾಜರಿದ್ದರು.


JDS Leader BN Ravikumar Launches Pro-Development Campaign in Sidlaghatta

Ganjigunte, Sidlaghatta : JDS leader BN Ravikumar has pledged to visit every village and panchayat in the Sidlaghatta assembly constituency, with the aim of gaining people’s trust and support by explaining H D Kumaraswamy’s pro-development thoughts and Pancharatna scheme.

Speaking at the JDS party’s Pancharatna Yojana and election campaign meeting, Ravikumar highlighted the benefits of the Pancharatna scheme, which includes provisions for housing, health, youth reform, women’s empowerment, education, farmers’ welfare, and debt waivers for women’s associations. He also emphasized the importance of informing everyone about the public welfare programs undertaken by H D Kumaraswamy when he was the Chief Minister, as well as the party’s commitment to addressing local problems.

Ravikumar expressed confidence in the JDS party’s ability to deliver development to rural areas, and urged the people of Sidlaghatta to support the JDS in the upcoming elections. He emphasized the need for local leaders to work together for the benefit of the community, and announced that leaders of various parties from the Ganjigunte panchayat area had joined the JDS.

In addition to promoting the Pancharatna scheme, Ravikumar also promised to work towards the establishment of an engineering college in the constituency, with the goal of fostering economic development and creating new opportunities for local youth. He pledged to be a worker rather than a mere promise-maker, and promised that he would not show his face in the next election if he failed to keep his word.

The JDS leader’s campaign has received significant support from local leaders, including JDS Taluk President D.V.Venkatesh and PLD Bank Chairman Narayanaswamy, Bunk Muniyappa, among others. With their backing and the promise of real, tangible development for the community, the JDS party will hope to win the support of the people of Sidlaghatta in the upcoming elections.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!