Kakachokkandahalli, Sidlaghatta : ವಿಶೇಷಚೇತನರ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ನಿವಾರಿಸಲು ಪ್ರಥಮ ಆದ್ಯತೆ ನೀಡುವುದಾಗಿ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿಯಲ್ಲಿ ಮಂಗಳವಾರ ಎಸ್.ಸಿ.ಐ ನವಜೀವನ ಸಂಘ, ಸೆವೆನ್ತ್ ಹಿಲ್ ಎಂಟರ್ ಪ್ರೈಸ್, ಎಂ.ಆರ್.ಡಬ್ಲ್ಯೂ ಮತ್ತು ವಿ.ಆರ್.ಡಬ್ಲ್ಯೂ ಸಹಯೋಗದಲ್ಲಿ ನಎದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ವಿಶೇಷಚೇತನರಿಗೆ ಪ್ರಥಮ ಪ್ರಾಶಸ್ತ್ಯ ಸಿಗಬೇಕು. ಅವರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರಕಬೇಕು. ಆದಷ್ಟೂ ನಿಮ್ಮ ಮನೆ ಬಾಗಿಲಿಗೇ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡುತ್ತೇನೆ. ವಿಶೇಷಚೇತನರಿಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರು ವಿಶೇಷಚೇತನರಿಗೆ ಸಿಹಿಯನ್ನು ತಿನ್ನಿಸಿದರು.
ಸೆವೆನ್ತ್ ಹಿಲ್ ಎಂಟರ್ ಪ್ರೈಸ್ ಸಂಸ್ಥೆಯ ಕೆ.ಎನ್.ವೆಂಕಟಮೂರ್ತಿ, ತಾದೂರು ರಘು, ನವಜೀವನ ಸಂಘದ ಅಧ್ಯಕ್ಷ ಬೆಳ್ಳೂಟಿ ಎನ್.ಮುನಿರಾಜು, ಕಾರ್ಯದರ್ಶಿ ಕೆ.ಪಿ.ರವಿ, ರಾಮಚಂದ್ರ, ಮಂಜುನಾಥ, ಡಿ.ಟಿ.ರಾಮಚಂದ್ರ ಸೇರಿದಂತೆ 50 ಕ್ಕೂ ಹೆಚ್ಚು ವಿಶೇಷಚೇತನರು ಹಾಜರಿದ್ದರು.