Sidlaghatta : ಶಿಡ್ಲಘಟ್ಟ ನಗರದ ರೈಲ್ವೆ ಅಂಡರ್ ಪಾಸ್ (Railway Underpass) ಕೆಳ ರಸ್ತೆಯಲ್ಲಿ ಚಲಿಸುತಿದ್ದ ಕಾರಿನಲ್ಲಿ (Car) ಆಕಸ್ಮಿಕ ಬೆಂಕಿ (Fire) ಕಾಣಿಸಿಕೊಂಡು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದ ಸಂತೋಷ್ ನಗರದ ನಿವಾಸಿ ಮಜೀದ್ ಎಂಬುವರು ಮುರಗಮಲ್ಲ ಹೋಗಿ ತಮ್ಮ 800 ಕಾರಿನಲ್ಲಿ ವಾಪಸ್ ಆಗುತ್ತಿದ್ದಾಗ ಶಿಡ್ಲಘಟ್ಟ ನಗರದ ಟಿಬಿ ರಸ್ತೆಯ ರೈಲ್ವೆ ಅಂಡರ್ ಪಾಸ್ ಕೆಳ ರಸ್ತೆಯಲ್ಲಿ ಕಾರು ಹೋಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡ್ಡಿದ್ದು, ಕೂಡಲೇ ಕಾರಿನಲ್ಲಿದ್ದವರು ಡೋರ್ ತಗೆದು ಹೊರಗೆ ಬಂದಿದ್ದಾರೆ.
ಬೆಂಕಿ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದ್ದು,ಬೆಂಕಿಯಿಂದ ಭಾರೀ ಅನಾಹುತ ತಪ್ಪಿದೆ. ಕಣ್ಣು ಮುಂದೆ ಕಾರು ಧಗ ಧಗ ಉರಿದಿದ್ದು, ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡ್ರೈವರ್, ಒಬ್ಬ ಮಹಿಳೆ, ಇಬ್ಬರು ಮಕ್ಕಳು ಸೇರಿ ಒಟ್ಟು ನಾಲ್ಕು ಜನ ಕಾರಿನಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ.
ನೋಡುನೋಡುತ್ತಿದ್ದಂತೆ ಕಾರು ಧಗಧಗನೆ ಹೊತ್ತಿ ಉರಿದಿದ್ದು,ಕಾರು ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಡ್ಲಘಟ್ಟ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ