Tatahalli, Sidlaghatta : ಮಕ್ಕಳ ಪುಸ್ತಕಗಳು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿವೆ. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿರುವ ಮಕ್ಕಳು ಇರುವ ಸಮಾಜ ಆರೋಗ್ಯವಂತ ಸಮಾಜವಾಗಿರುತ್ತದೆ ಎಂದು ಪ್ರಥಮ್ ಬುಕ್ಸ್ ನ ಕನ್ನಡ ವಿಭಾಗದ ಸಂಪಾದಕಿ ಭಾರ್ಗವಿ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ್ ಬುಕ್ಸ್ ಪ್ರಕಾಶನದ ವತಿಯಿಂದ ತಾತಹಳ್ಳಿ, ಹೇಮಾರ್ಲಹಳ್ಳಿ ಹಾಗೂ ಕನ್ನಪ್ಪನಹಳ್ಳಿ ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ತಾತಹಳ್ಳಿ ಶಾಲೆಯ ಶಾಲಾಪತ್ರಿಕೆ ಅವಲಕ್ಕಿ ಪವಲಕ್ಕಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.
ಪ್ರಥಮ್ ಬುಕ್ಸ್ ನ ಹೇಮಾ ಖುರ್ಸಾಪುರ, ಮುಖ್ಯಶಿಕ್ಷಕಿ ಎಚ್. ಎಂ.ಸರಸ್ವತಮ್ಮ, ಶಿಕ್ಷಕರಾದ ವೆಂಕಟನರಸಪ್ಪ, ಬಿ.ಎನ್.ಬಸವರಾಜ್, ಪಿ.ಸುದರ್ಶನ, ಎಸ್.ಕಲಾಧರ, ಕೆ.ಎ.ನಾಗರಾಜ, ವಿ.ಶಾಂತಮ್ಮ ಹಾಜರಿದ್ದರು.