ಸಾಮಾಜಿಕ ಪರಿಶೋಧನೆ ಸಮಿತಿ ಸಭೆ

0
375
Sidlaghatta Taluk Panchayat Grama Sabha Meeting

Sidlaghatta : ಗ್ರಾಮ ಸಭೆಗಳನ್ನು ನಡೆಸುವುದಕ್ಕೂ ಮುನ್ನವೇ ರಿಕವರಿ ಪ್ರಕರಣಗಳನ್ನ ಪರಿಪೂರ್ಣವಾಗಿ ಅಭ್ಯಾಸ ಮಾಡಿ ಗ್ರಾಮಸಭೆಯಲ್ಲಿ ಮಂಡಿಸಬೇಕೆಂದು ಶಿಡ್ಲಘಟ್ಟ Taluk Panchayat EO ಚಂದ್ರಕಾಂತ್ ಅವರು PDOಗಳಿಗೆ ತಾಕೀತು ಮಾಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾಜಿಕ ಪರಿಶೋಧನಾ Ad hoc ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಪರಿಶೋಧನೆ ಸಮಿತಿಯವರು ಕುಟುಂಬವಾರು ನಡೆಸುವ ಸಮೀಕ್ಷೆಯಲ್ಲಿ ಮೃತಪಟ್ಟವರು, ಊರು ಬಿಟ್ಟವರು ಹಾಗೂ ಅನರ್ಹರ ಖಾತೆಗೆ ಹಣ ಜಮೆ ಆಗುವುದು ಕಂಡು ಬಂದಲ್ಲಿ ಅದನ್ನು ಗ್ರಾಮಸಭೆಯಲ್ಲಿ ಮಂಡಿಸಬೇಕು.

ಗ್ರಾಮಸಭೆಯಲ್ಲಿ ಅನರ್ಹರಿಂದ ಹಣ ರಿಕವರಿ ಮಾಡುವ ಬಗ್ಗೆ ತೀರ್ಮಾನ ಆದಲ್ಲಿ ಕೂಡಲೆ ಕಾರ‍್ಯಪ್ರವೃತ್ತರಾಗಬೇಕೆಂದು ತಿಳಿಸಿದರು.

ದಿಬ್ಬೂರಹಳ್ಳಿ, ಕುಂದಲಗುರ್ಕಿ, ಬಶೆಟ್ಟಹಳ್ಳಿ ಇನ್ನಿತರೆ ಗ್ರಾಮಪಂಚಾಯಿತಿಗಳಲ್ಲಿ ರಿಕವರಿ ಆಗಬೇಕಿರುವ ಪ್ರಕರಣಗಳು ಹೆಚ್ಚು ಇದ್ದು ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ನರೇಗಾ ಸಹಾಯಕ ನಿರ್ಧೇಶಕ ಚಂದ್ರಪ್ಪ, ಜಿಲ್ಲಾ ಸಾಮಾಜಿಕ ಪರಿಶೋಧಕರಾದ ಅನಿತ, ತಾಲ್ಲೂಕು ಸಾಮಾಜಿಕ ಪರಿಶೋಧಕ ಮಹೇಶ್ ಸೇರಿದಂತೆ ಪಿಡಿಒಗಳು ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!