Sidlaghatta : ಕನ್ನಡ ಸಾಹಿತ್ಯ ಹಾಗೂ ಸಂಶೋಧನಾ ಲೋಕಕ್ಕೆ ಅಪಾರವಾದ ಕೊಡುಗೆ ಕೊಟ್ಟಂತಹ ಮಂತ ಲೇಖಕಿ, ಸಂಶೋಧಕಿ ನಮ್ಮ ಜಿಲ್ಲೆಯ ಹೆಮ್ಮೆಯ ಹೆಣ್ಣು ಮಗಳಾದ ಕಮಲಾ ಹಂಪನ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ಅಪಾರವಾದ ನಷ್ಟವಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.
ನಗರದ ವಾಸವಿ ಶಾಲೆಯಲ್ಲಿ ಶನಿವಾರ ದಿ.ಕಮಲಾ ಹಂಪನಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ನ ಶಿಡ್ಲಘಟ್ಟ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಅವರು ಈ ಸಮಾಜಕ್ಕೆ ಕೊಟ್ಟ ಕೃತಿ, ಸಾಹಿತ್ಯ, ಸಂದೇಶ ಮತ್ತು ಕನ್ನಡ ನಾಡು ನುಡಿ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಮಾತ್ರ ಶಾಶ್ವತ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನ ಆಚರಿಸಿ ಶ್ರದ್ದಾಂಜಲಿ ಅರ್ಪಿಸಿದರು.
ಕಮಲಾ ಹಂಪನಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿ ನಮಿಸಿದರು. ಕಸಾಪ ಮಾಜಿ ಅಧ್ಯಕ್ಷ ರೂಪಸಿ ರಮೇಶ್, ಕೃ.ನಾ.ಶ್ರೀನಿವಾಸ್, ಶಿಕ್ಷಕ ವೆಂಕಟಸ್ವಾಮಿ, ಟಿ.ಟಿ.ನರಸಿಂಹಪ್ಪ, ಶಿವಕುಮಾರ್, ಹರೀಶ್, ಅಮರನಾಥ್, ಸಂಜೀವ್ ರೆಡ್ಡಿ ಹಾಜರಿದ್ದರು.