Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎನ್.ನಾಗರಾಜ್ (ಟೈಲರ್) ಹಾಗೂ ಉಪಾಧ್ಯಕ್ಷರಾಗಿ ಬಿ.ಕೆಂಪೇಗೌಡ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 13 ಸಂಖ್ಯಾ ಬಲವಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಚುನಾವಣೆ ಬುಧವಾರ ನಡೆಯಿತು.
ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಎನ್.ವನಿತ ಕಾರ್ಯನಿರ್ವಹಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಎಂ.ಎಸ್.ರಮೇಶ್, ಎಸ್.ಟಿ.ಸುರೇಶ್, ಎಂ.ಶ್ರೀನಿವಾಸ್, ಎಂ.ಎನ್.ಶಿವಕುಮಾರ್, ಎಂ.ಆರ್.ಲಕ್ಷ್ಮೀಪತಿ, ಸುದರ್ಶನ್, ಎನ್.ಎಂ.ಶಿವಕುಮಾರ್, ಎಂ.ಟಿ.ಜಯದೇವ, ಬಿ.ಶ್ರೀನಿವಾಸಮೂರ್ತಿ, ನಾಗವೇಣಿ, ರತ್ನಮ್ಮ ಹಾಜರಿದ್ದರು.