Sidlaghatta : ನಗರದ ಉಲ್ಲೂರುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 12 ಮಂದಿ ನಿರ್ದೇಶಕರು ಚುನಾಯಿತರಾದರು.
ಸಾಮಾನ್ಯ ಸ್ಥಾನದಿಂದ ಪುರುಶೋತ್ತಮ್.ಆರ್, ನಾಗರಾಜ.ಎಸ್.ವಿ, ಬಿ.ನಾರಾಯಣಸ್ವಾಮಿ, ತೇಜಸ್.ಎಂ, ಕಿರಣ್‌ಕುಮಾರ್, ಕೆ.ಮುನಿರೆಡ್ಡಿ, ವೇಣುಗೋಪಾಲ.ವಿ, ಹಿಂದುಳಿದ ವರ್ಗ ಎ ಸ್ಥಾನದಿಂದ ರಮೇಶ್, ಹಾಗು ಕೆ.ನಾರಾಯಣಸ್ವಾಮಿ(ನಾರಾಯಣ), ಪರಿಶಿಷ್ಟ ಪಂಗಡದ ಸ್ಥಾನದಿಂದ ಕೆ.ಟಿ.ನಟರಾಜ್, ಮಹಿಳಾ ಮೀಸಲು ಸ್ಥಾನದಿಂದ ಅಶ್ವತ್ಥಮ್ಮ, ನಳಿನಿ ಎಸ್.ಜಿ ಆಯ್ಕೆಯಾಗಿದ್ದು ಪರಿಶಿಷ್ಟ ಜಾತಿ ಸ್ಥಾನ ಖಾಲಿ ಉಳಿದಿದೆ.
ಚುನಾವಣಾಧಿಕಾರಿಯಾಗಿ ಲೀಲಾವತಿ.ಬಿ.ಎನ್ ಕಾರ್ಯನಿರ್ವಹಿಸಿದರು.