24.1 C
Sidlaghatta
Friday, June 9, 2023

’ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮ

V.J. Rajput Urges Citizens to Participate in Polling Process for a Stronger Nation

- Advertisement -
- Advertisement -

Sidlaghatta : ಮತದಾನ ಎಂಬುದು ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿರುವ ಒಂದು ವರ.  ಮತದಾನದ ದಿನವನ್ನು ನಾವೆಲ್ಲರೂ ಹಬ್ಬದ ಸಂಭ್ರಮಾಚರಣೆಯಂತೆ ಭಾವಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಎಂದು ತಾಲ್ಲೂಕು ಮತಗಟ್ಟೆ ಕ್ಷೇತ್ರಗಳ ವೀಕ್ಷಕರಾದ ವಿ.ಜೆ. ರಜಪೂತ್ ತಿಳಿಸಿದರು.

 ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ’ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

 ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜನತೆ ಯಾವುದೇ ಆಸೆ ಆಮಿಷೆಗಳಿಗೆ ಒಳಗಾಗದೇ ಪ್ರತಿಯೊಬ್ಬರೂ ಕಡ್ಡಾಯವಾಗಿ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

 ಬೆಳಗ್ಗೆ ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮತದಾನ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲಾಯಿತು.

 ಈ ಸಂದರ್ಭದಲ್ಲಿ ತಾಲ್ಲೂಕು ಚುನಾವಣಾಧಿಕಾರಿ ಜಾವಿದ ನಸೀಮಾ ಖಾನಮ್, ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ ಇಓ ಮುನಿರಾಜ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಸಿಡಿಪಿಓ ನೌತಾಜ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ  ತಿಮ್ಮರಾಜು, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವೆಂಕಟೇಶ್ ಹಾಜರಿದ್ದರು.


Strengthening Democracy: Embracing Voting as a Festive Celebration

Sidlaghatta : “Voting is a constitutional right bestowed upon every citizen, and V.J. Rajput, the observer of taluk polling stations, encouraged everyone to treat the polling day as a joyous celebration and contribute to strengthening the country’s democracy by actively participating in the voting process. Rajput expressed these sentiments while addressing the gathering at the ‘Namma Nade Matatgatteya Kade’ event, organized on Sunday by the Taluk Sweep Committee, Taluk Administration, and Taluk Panchayat, held at the premises of a prestigious college in the city.

As a means to raise awareness among voters regarding their respective polling booths, the ‘Nade polling booth’ program has been implemented across all polling stations in the state, adopting a festive and national pattern. Rajput urged the public to vote in the upcoming elections scheduled for May 10, emphasizing the importance of resisting any form of temptation.

In the morning, Rajput conducted the flag hoisting ceremony at the college premises, followed by the administration of the voter’s oath. Subsequently, awareness activities were carried out in the city’s main streets, aiming to educate and inform the public about the significance of voting.

Prominent figures present at the event included Javida Naseema Khanam, the Taluk Electoral Officer, Muniraja, the President of the Taluk Sweep Committee, and EO (designation) at the Taluk Administration. Other notable attendees were BN Swamy, the Tehsildar, R. Srikanth, the Municipal Commissioner, Nautaj, the CDPO, Timmaraju, the Assistant Director of the Silk Department, and Venkatesh, the Principal of the First Class College.”

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!