ಬ್ಯಾಸೆಟ್‌ಹೌಂಡ್‌ ನಾಯಿ ಮರಿಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

- Advertisement -
- Advertisement -

ತನ್ನ ಪಾಲಕರಿಂದ ತಪ್ಪಿಹೋಗಿ ದಾರಿಕಾಣದೆ ಕಂಗಾಲಾಗಿದ್ದ ಅಪರೂಪದ ಬ್ಯಾಸೆಟ್‌ಹೌಂಡ್‌ ನಾಯಿ ಮರಿಯನ್ನು ಅಗ್ನಿಶಾಮಕ ಅಧಿಕಾರಿ ಸಂತೋಷ್‌ ಮತ್ತು ಸಿಬ್ಬಂದಿ ರಕ್ಷಿಸಿರುವ ಘಟನೆ ಶುಕ್ರವಾರ ನಡೆದಿದೆ.
ತಮ್ಮ ಕಚೇರಿಯ ಬಳಿ ಶುಕ್ರವಾರ ಮುಂಜಾನೆ ಬ್ಯಾಸೆಟ್‌ಹೌಂಡ್‌ ನಾಯಿ ಮರಿಯನ್ನು ಕಂಡ ಅಗ್ನಿಶಾಮಕ ಸಂತೋಷ್‌ ಅದಕ್ಕೆ ಆಶ್ರಯ ನೀಡಿ ಹಾಲು ನೀಡಿದ್ದಾರೆ. ನಂತರ ಶಿಡ್ಲಘಟ್ಟ ಡಾಟ್‌ ಕಾಮ್‌ ವ್ಯಾಟ್ಸ್ ಅಪ್‌ ಗ್ರೂಪಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅದರ ಮೂಲಕ ನಾಯಿಯ ಮಾಲಿಕ ಇಬ್ರಾಹಿಂ ಬಂದು ತಮ್ಮ ನಾಯಿ ಮರಿಯನ್ನು ಪಡೆದಿದ್ದಾರೆ.
‘ಬೆಳಿಗ್ಗೆ ಈ ನಾಯಿ ಮರಿಯನ್ನು ನೋಡಿದೊಡನೆ ಅಪರೂಪದ್ದು ಅನ್ನಿಸಿತು. ತಕ್ಷಣ ಅದನ್ನು ಕರೆತಂದು ಹಾಲು ನೀಡಿದೆ. ನಮ್ಮ ಸಹೋದ್ಯೋಗಿಗಳು ಕೂಡ ಸಹಕರಿಸಿದರು. ಶಿಡ್ಲಘಟ್ಟ ಡಾಟ್‌ ಕಾಮ್‌ ಮೂಲಕ ಅದರ ಮಾಲೀಕರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು’ ಎಂದು ಅಗ್ನಿಶಾಮಕ ಸಂತೋಷ್‌ ತಿಳಿಸಿದರು.
‘ಬ್ಯಾಸೆಟ್‌ಹೌಂಡ್‌ ನಾಯಿ ಮರಿಗೆ ಒಂಭತ್ತು ತಿಂಗಳು ಒಂದು ತಿಂಗಳ ಮರಿಯಿಂದ ಅದನ್ನು ಸಾಕುತ್ತಿದ್ದೇನೆ. ಸಂಜೆ ವೇಳೆ ಅದನ್ನು ತಿರುಗಾಡಲು ಬಿಡುವುದು ರೂಢಿ. ನಿನ್ನೆ ಸಂಜೆ ತಪ್ಪಿಸಿಕೊಂಡಿತು. ಎಲ್ಲೆಡೆ ಸುತ್ತಾಡಿದರೂ ಸಿಗಲಿಲ್ಲ. ಬೆಳಿಗ್ಗೆ ನನ್ನ ತಂಗಿ ವ್ಯಾಟ್ಸ್ ಅಪ್ನಲ್ಲಿ ತೋರಿಸಿದಾಗ ತುಂಬ ಆನಂದವಾಯಿತು. ಅಗ್ನಿಶಾಮಕ ಅಧಿಕಾರಿಗಳಿಗೆ ಮತ್ತು ಶಿಡ್ಲಘಟ್ಟ ಡಾಟ್‌ ಕಾಮ್‌ಗೆ ಕೃತಜ್ಞತೆಗಳು’ ಎನ್ನುತ್ತಾರೆ ಪೊಲೀಸ್‌ಕ್ವಾಟರ್ಸ್‌ ಬಳಿಯ ವಾಸಿ ಇಬ್ರಾಹಿಂ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!