19.1 C
Sidlaghatta
Friday, December 26, 2025
Home Blog Page 19

ಕೋಡಿ ಹರಿದ ರಾಮಸಮುದ್ರ ಕೆರೆ – ಹಳ್ಳಿಗಳ ರಸ್ತೆ ಸಂಪರ್ಕ ಕಡಿತ!

0
Sidlaghatta Ramasamudra Lake Full Transportation to villages Cut

S Devaganahalli, Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿಯ ಪ್ರಸಿದ್ಧ ರಾಮಸಮುದ್ರ ಕೆರೆ ಬುಧವಾರ ಕೋಡಿ ಹರಿದು ಉಕ್ಕಿ ಹರಿಯಿತು. ಈ ಕೆರೆ ಶಿಡ್ಲಘಟ್ಟ ತಾಲ್ಲೂಕಿನ ಅತಿದೊಡ್ಡ ಕೆರೆಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಎರಡನೇ ಅತಿದೊಡ್ಡ ಕೆರೆ ಎನ್ನಿಸಿಕೊಂಡಿದೆ.

ಮೈಸೂರು ಸಂಸ್ಥಾನದ ಕಾಲದ ದಿವಾನ ಸರ್ ಮಿರ್ಜಾ ಇಸ್ಮಾಯಿಲ್ ಅವರ ಕಾಲದಲ್ಲಿ, ಸುಮಾರು 130 ವರ್ಷಗಳ ಹಿಂದೆ ನಿರ್ಮಿಸಲಾದ ಈ ಕೆರೆ ಸುಮಾರು 900 ಎಕರೆಯಷ್ಟು ವ್ಯಾಪ್ತಿ ಹೊಂದಿದೆ. ಇದರಲ್ಲಿ 800 ಎಕರೆಯಷ್ಟು ಶಿಡ್ಲಘಟ್ಟ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಾಗೂ ಉಳಿದ 100 ಎಕರೆಯಷ್ಟು ಚಿಕ್ಕಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇದೆ.

ಇತ್ತೀಚಿನ ಭಾರಿ ಮಳೆಯಿಂದ ಕೆರೆ ಉಕ್ಕಿ ಹರಿಯುತ್ತಿದ್ದು, ಬೋಯನಹಳ್ಳಿ–ಕೂತನಹಳ್ಳಿ–ಪೆರೇಸಂದ್ರ ಮಾರ್ಗದ ರಸ್ತೆ ನೀರಿನಲ್ಲಿ ಮುಳುಗಿದೆ, ಇದರಿಂದ ಹಲವು ಹಳ್ಳಿಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಎಸ್.ಗುಂಡ್ಲಹಳ್ಳಿ, ಎರ್ರನಾಗೇನಹಳ್ಳಿ, ಕೊಂಡಪ್ಪಗಾರಹಳ್ಳಿ, ನಳಪ್ಪನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಸಂಚಾರದಲ್ಲಿ ತೊಂದರೆ ಉಂಟಾಗಿದೆ.

“ಪ್ರತಿದಿನ ಟೊಮೆಟೋ, ತರಕಾರಿ, ಹೂವು ಮುಂತಾದ ರೈತ ಉತ್ಪನ್ನಗಳನ್ನು ಸಾಗಿಸಲು ಬಳಸುವ ಈ ದಾರಿ ಈಗ ಸಂಪೂರ್ಣ ಮುಚ್ಚಿದೆ. ಶಾಶ್ವತ ಪರಿಹಾರವಾಗಿ ಸೇತುವೆ ನಿರ್ಮಿಸಬೇಕು,” ಎಂದು ಸ್ಥಳೀಯರು ಬೇಡಿಕೊಂಡಿದ್ದಾರೆ.

ಇದೇ ವೇಳೆ ತಾಲ್ಲೂಕಿನ ಹಳೇಹಳ್ಳಿ ಕೆರೆಯೂ ಮಳೆಯಿಂದ ಕೋಡಿ ಹರಿಯುತ್ತಿದ್ದು, ತಲಕಾಯಲಬೆಟ್ಟದ ನೀರು ಕರಿಯಪ್ಪನಹಳ್ಳಿ ಮತ್ತು ಚೇಳೂರಿನ ಮೂಲಕ ಕಂದುಕೂರು ಕೆರೆಗೆ ಸೇರುತ್ತಿದೆ. “ಆರು ವರ್ಷಗಳ ಬಳಿಕ ಮತ್ತೆ ಹಳೇಹಳ್ಳಿ ಕೆರೆ ಕೋಡಿ ಹರಿದಿರುವುದು ಸಂತಸದ ಸಂಗತಿ,” ಎಂದು ಗ್ರಾಮಸ್ಥ ಎಚ್.ಬಿ. ಕೃಷ್ಣಾ ರೆಡ್ಡಿ ಹೇಳಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಮುತ್ತೂರು ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಉತ್ಸವ ಸಂಭ್ರಮ

0
Sidlaghatta Muttur Sri Anjaneya Swamy Utsava

Muttur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿಯ ವಾರ್ಷಿಕ ಉತ್ಸವವನ್ನು ಭಕ್ತಿ, ಸಡಗರ ಮತ್ತು ಸಾಮರಸ್ಯದ ವಾತಾವರಣದಲ್ಲಿ ಗ್ರಾಮಸ್ಥರು ಆಚರಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮಸ್ಥರು ಒಟ್ಟಾಗಿ ಸೇರಿ ಹೂವಿನ ಅಲಂಕಾರದಿಂದ ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿತರಿಸಿದರು. ನಂತರ ಉತ್ಸವ ಮೂರ್ತಿಯನ್ನು ಡೋಳು, ನಾದಸ್ವರದ ಸದ್ದುಗಳಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಉತ್ಸವದ ವೇಳೆ ಮನೆ ಮನೆಗಳಲ್ಲೂ ಸ್ವಾಮಿಗೆ ಭಕ್ತಿಪೂರ್ವಕ ಸ್ವಾಗತ ಮತ್ತು ಪೂಜೆ ಸಲ್ಲಿಸಲಾಯಿತು.
ಗ್ರಾಮದ ಹಿರಿಯ ಮುಖಂಡ ಮುತ್ತೂರು ಜಯರಾಜ್ ಮಾತನಾಡಿ, “ನಮ್ಮ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಾತಿ, ಮತ, ಪಕ್ಷದ ಭೇದವಿಲ್ಲದೆ ಎಲ್ಲರೂ ಒಂದಾಗಿ ಭಾಗವಹಿಸುವುದು ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ. ಕೆರೆ ಅಂಚಿನ ಆಂಜನೇಯಸ್ವಾಮಿ ನಮ್ಮ ಊರಿನ ರಕ್ಷಕ. ಕೇಳಿದ ವರವನ್ನೆಲ್ಲಾ ಕೊಡುತ್ತಾನೆ,” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಮುಖಂಡರು ಎಂ.ಎಸ್. ಬೈರಪ್ಪ, ಎಂ.ಬಿ. ಬೈರಾರೆಡ್ಡಿ, ಶ್ರೀನಿವಾಸ್, ಕೆ.ಎಂ. ಜಯರಾಜ್, ದೋಬಿ ವೆಂಕಟೇಶಪ್ಪ ಹಾಗೂ ಅನೇಕ ಗ್ರಾಮಸ್ಥರು ಭಾಗವಹಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ

0
Sidlaghatta Kitturu Rani Chennamma Jayanti

Sidlaghatta : “ಬ್ರಿಟಿಷರ ವಿರುದ್ಧ ಹೋರಾಡಿ ದೇಶಾಭಿಮಾನ ಮೆರೆದ ಕಿತ್ತೂರು ರಾಣಿ ಚನ್ನಮ್ಮ ಅವರ ತ್ಯಾಗ, ಇಂದಿನ ಯುವಜನತೆಗೆ ಸ್ಫೂರ್ತಿ ಮತ್ತು ಶಕ್ತಿಯ ಮೂಲವಾಗಬೇಕು” ಎಂದು ಗ್ರೇಡ್–2 ತಹಶೀಲ್ದಾರ್ ರಾಜೇಂದ್ರ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ರಾಜೇಂದ್ರ ಅವರು, “ಕಿತ್ತೂರು ರಾಣಿ ಚನ್ನಮ್ಮ ತಮ್ಮ ರಾಜ್ಯದ ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ನಿಂತು ಹೋರಾಟ ಮಾಡಿದ ಪ್ರಥಮ ವೀರಮಹಿಳೆ. ‘ಸೂರ್ಯ ಮುಳುಗದ ನಾಡಿನವರು’ ಎಂದು ಕರೆಯಲ್ಪಡುತ್ತಿದ್ದ ಬ್ರಿಟಿಷರನ್ನು ಸದೆಬಡಿಯುವ ಮೂಲಕ, ವಿಶ್ವವೇ ನಿಬ್ಬೆರಗಾಗಿ ನೋಡುವಂತಹ ಸಾಹಸ ತೋರಿದರು. ದೇಶಸೇವೆಗೆ ಜೀವ ತ್ಯಾಗ ಮಾಡಿದ ಅವರ ಬಲಿದಾನವನ್ನು ಸದಾ ಸ್ಮರಿಸಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪುರಸ್ಕಾರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಸಿ. ನಂದೀಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಖಾದಿ ನಿಗಮ ಮಂಡಳಿ ಅಧ್ಯಕ್ಷ ಗಣೇಶ್, ಲಕ್ಷಣ್ ರಾಜು, ಬಸವರಾಜು, ಚಂದ್ರಶೇಖರ್ ಬಾಬು ಹಾಗೂ ಇತರರು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-23/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 23/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 394
Qty: 20218 Kg
Mx : 681
Mn: 322
Avg: 516

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 08
Qty: 396 Kg
Mx : ₹ 706
Mn: ₹ 542
Avg: ₹ 636


For Daily Updates WhatsApp ‘HI’ to 7406303366

ಕೋಡಿ ಹರಿದು ಜೀವಂತವಾದ ಶಿಡ್ಲಘಟ್ಟ ತಾಲ್ಲೂಕಿನ ಅತಿದೊಡ್ಡ ರಾಮಸಮುದ್ರ ಕೆರೆ

0
Sidlaghatta Taluk Largest Lake Ramasamudra Lake Full

S Devaganahalli, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಅತಿ ದೊಡ್ಡ ಮತ್ತು ಜಿಲ್ಲೆಯಲ್ಲಿಯೇ ಎರಡನೇ ಅತಿದೊಡ್ಡ ಕೆರೆ ಎನ್ನಲಾಗುವ ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆ ಬುಧವಾರ ಕೋಡಿ ಹರಿದಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈ ಪ್ರಾಚೀನ ಕೆರೆ ಮತ್ತೆ ಜೀವಂತಗೊಂಡಿದ್ದು, ಸ್ಥಳೀಯರಲ್ಲಿ ಆನಂದದ ವಾತಾವರಣ ನಿರ್ಮಾಣವಾಗಿದೆ.

ತಾಲ್ಲೂಕಿನ ಉತ್ತರ ಭಾಗವು ಬೆಟ್ಟ ಗುಟ್ಟಗಳ ಸಾಲಿನಿಂದ ಕೂಡಿದ್ದು, ಸಣ್ಣಪುಟ್ಟ ಕೆರೆಗಳ ಸರಪಳಿಯಾಗಿದೆ. ಆದರೆ ಅವುಗಳ ಪೈಕಿ ಪ್ರಮುಖವಾದ ತಲಕಾಯಲಬೆಟ್ಟದ ವೆಂಕಟೇಶ್ವರ ಸಾಗರ ಮತ್ತು ರಾಮಸಮುದ್ರ ಕೆರೆ ಮಾತ್ರ ದೊಡ್ಡ ಪ್ರಮಾಣದ ನೀರು ಸಂಗ್ರಹಿಸಬಲ್ಲುವವು. ಈ ಬಾರಿ ಸಣ್ಣ ಕೆರೆಗಳು ಮೊದಲೇ ಕೋಡಿ ಹರಿದಿದ್ದರೂ, ರಾಮಸಮುದ್ರ ಕೆರೆಯ ಕೋಡಿ ಹರಿವು ತಾಲ್ಲೂಕಿನ ಜನರಿಗೆ ವಿಶೇಷ ಸಂತೋಷ ತಂದಿದೆ.

ಇತಿಹಾಸ ಪ್ರಕಾರ, ಮೈಸೂರು ಸಂಸ್ಥಾನದ ಚಾಮರಾಜ ಒಡೆಯರ್ ಕಾಲದಲ್ಲಿ ದಿವಾನ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮಾರ್ಗದರ್ಶನದಲ್ಲಿ ಸುಮಾರು 130 ವರ್ಷಗಳ ಹಿಂದೆ ನಿರ್ಮಿಸಲಾದ ರಾಮಸಮುದ್ರ ಕೆರೆ ಸುಮಾರು 900 ಎಕರೆಯ ಅಚ್ಚುಕಟ್ಟನ್ನು ಹೊಂದಿದೆ.

ಈ ಕೆರೆ ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕುಗಳ ಗಡಿಯಲ್ಲಿ ನೆಲಸಿದ್ದು, ಸುಮಾರು 800 ಎಕರೆ ಶಿಡ್ಲಘಟ್ಟ ಭಾಗದಲ್ಲಿದ್ದು, ಉಳಿದ 100 ಎಕರೆ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿದೆ.

ಅಷ್ಟು ವಿಶಾಲವಾದ ಈ ಕೆರೆ ಸುತ್ತಮುತ್ತಲಿನ ಏಳುಕ್ಕೂ ಹೆಚ್ಚು ಗ್ರಾಮಗಳಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಕೃಷಿ ನೀರಿನ ಆಶಾಕಿರಣವಾಗಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-22/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 21/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 441
Qty: 23407 Kg
Mx : 622
Mn: 300
Avg: 477

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 13
Qty: 850 Kg
Mx : ₹ 666
Mn: ₹ 455
Avg: ₹ 570


For Daily Updates WhatsApp ‘HI’ to 7406303366

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಉತ್ತಮ ಮಳೆ: ಕೋಡಿ ಹರಿದ ಹಳೇಹಳ್ಳಿ ಕೆರೆ

0
Sidlaghatta Halehalli Lake full

Sidlaghatta : ಇತ್ತೀಚಿನ ಉತ್ತಮ ಮಳೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಹಳೇಹಳ್ಳಿ ಕೆರೆ ಮತ್ತೆ ಜೀವಂತವಾಗಿ ಹರಿಯುತ್ತಿದೆ. ಆರು ವರ್ಷಗಳ ಬಳಿಕ ಹಳೇಹಳ್ಳಿ ಕೆರೆ ಕೋಡಿ ಹರಿಯುತ್ತಿರುವುದು ಗ್ರಾಮಸ್ಥರಲ್ಲಿ ಆನಂದ ಮೂಡಿಸಿದೆ.

ತಲಕಾಯಲಬೆಟ್ಟದ ಹಿಂಭಾಗದಲ್ಲಿ ಸುರಿದ ಮಳೆಯ ನೀರು ಕರಿಯಪ್ಪನಹಳ್ಳಿ ಕೆರೆಗೆ ಸೇರುತ್ತದೆ. ಅದು ತುಂಬಿದ ಬಳಿಕ ಹಳೇಹಳ್ಳಿ ಕೆರೆಗೆ ಹರಿದು ಬರುತ್ತದೆ. ಅಲ್ಲಿಂದ ನೀರು ಶೆಟ್ಟಿಕೆರೆ, ಚೇಳೂರು ಮಾರ್ಗವಾಗಿ ಕಂದುಕೂರು ಕೆರೆ ಕಡೆಗೆ ಹರಿಯುತ್ತದೆ. ಈ ಪ್ರಕೃತಿಯ ನದಿ-ಕೆರೆ ಸರಪಳಿ ಇದೀಗ ಮಳೆ ನೀರಿನಿಂದ ತುಂಬಿ ಹರಿಯುತ್ತಿರುವುದು ದೃಶ್ಯವೈಭವವನ್ನೇ ತಂದಿದೆ.

ಸ್ಥಳೀಯರು ಈಗಾಗಲೇ ಕೆರೆಯ ಸಂರಕ್ಷಣೆ ಮತ್ತು ಹೂಳೆತ್ತುವ ಕಾರ್ಯಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಮನವಿ ಸಲ್ಲಿಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

JDS-BJP ಮೈತ್ರಿ ಮತ್ತೆ ಅಧಿಕಾರಕ್ಕೆ; ಕುಮಾರಸ್ವಾಮಿ ಮುಖ್ಯಮಂತ್ರಿ ಖಚಿತ: ಬಿ.ಎನ್. ರವಿಕುಮಾರ್

0
Sidlaghatta MLA B N Ravikumar

Sidlaghatta, chikkaballapur : ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿ ಚುನಾವಣೆಗೆ ಹೋದರೆ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚನೆ ಖಚಿತ, ಹಾಗೂ ಎಚ್‌.ಡಿ. ಕುಮಾರಸ್ವಾಮಿ ಮೂರನೇ ಬಾರಿ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಶಿಡ್ಲಘಟ್ಟ ಶಾಸಕರಾದ ಬಿ.ಎನ್. ರವಿಕುಮಾರ್ ಹೇಳಿದರು.

ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದಿಲ್ಲ, ಬದಲಿಗೆ ಬಿಜೆಪಿ ಸರ್ಕಾರದ ಕೆಲವು ನಿರ್ಧಾರಗಳು ಮತದಾರರ ಮನಸ್ಸು ಬದಲಾಯಿಸಿದವು ಎಂದರು.

“ಕಾಂಗ್ರೆಸ್‌ಗೆ ಜನರು 136 ಸ್ಥಾನ ನೀಡಿದರೂ, ಕೇವಲ ಒಂದೂವರೆ ವರ್ಷಗಳಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ 143 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ, ಇದು ಜನರ ನಿಜವಾದ ಅಭಿಪ್ರಾಯವನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.

ರವಿಕುಮಾರ್ ಅವರು, “2028ರ ವೇಳೆಗೆ ರಾಜ್ಯದ ಜನರ ವಿಶ್ವಾಸ ಮತ್ತೆ ಎನ್‌ಡಿಎ ಕಡೆಗೆ ಬರುವದು ಖಚಿತ” ಎಂದು ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 24ರಂದು ಶಿಡ್ಲಘಟ್ಟಕ್ಕೆ ಆಗಮಿಸುತ್ತಿದ್ದಾರೆ, ಆ ಸಂದರ್ಭದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ, ರಾಮಸಮುದ್ರ ಕೆರೆಯಿಂದ ಕುಡಿಯುವ ನೀರು ಯೋಜನೆ, ಒಳಚರಂಡಿ ಹಂತ-2 ಕಾಮಗಾರಿಗಳು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಅದೇ ವೇಳೆ 22 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳು ಹಾಗೂ ಉತ್ತರ ವಿಶ್ವವಿದ್ಯಾಲಯದ 2ನೇ ಹಂತದ 95 ಕೋಟಿ ವೆಚ್ಚದ ಯೋಜನೆಗೂ ಗುದ್ದಲಿಪೂಜೆ ನಡೆಯಲಿದೆ ಎಂದರು.

ಮೂಲತಃ ನವೆಂಬರ್ 8ರಂದು ಕಾರ್ಯಕ್ರಮ ನಿಗದಿಯಾಗಿದ್ದರೂ ಕನಕ ಜಯಂತಿ ಇರುವ ಕಾರಣ, ಅದನ್ನು ಮುಂದೂಡಲಾಗಿದೆ ಎಂದು ಅವರು ವಿವರಿಸಿದರು.

ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಚ್‌.ಡಿ. ದೇವೇಗೌಡರು ಅನಾರೋಗ್ಯದಿಂದ ಸಂಪೂರ್ಣ ಗುಣಮುಖರಾಗಿದ್ದು, ಶೀಘ್ರದಲ್ಲೇ ಪಕ್ಷ ಸಂಘಟನೆಗೆ ಮರುಪ್ರವೇಶಿಸಲಿದ್ದಾರೆ. ಅವರ ಆಶೀರ್ವಾದದಿಂದ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಧಾರ್ಮಿಕ ಕಾರ್ಯಗಳಲ್ಲಿ ಜಾತಿ, ಮತ, ಪಕ್ಷವನ್ನು ಬಿಟ್ಟು ಎಲ್ಲರೂ ಒಗ್ಗೂಡಬೇಕು

0
Sidlaghatta Sri Someshwaraswamy temple MLA MP Visit

Sidlaghatta, Chikkaballapur : ಧಾರ್ಮಿಕ ಕಾರ್ಯಗಳಲ್ಲಿ ಜಾತಿ, ಮತ, ಪಕ್ಷಭೇದ ಮರೆತು ಎಲ್ಲರೂ ಒಗ್ಗೂಡಬೇಕು, ಇದರಿಂದ ಸಮಾಜದಲ್ಲಿ ಸಾಮರಸ್ಯ ಮೂಡಿ ಅಭಿವೃದ್ಧಿಗೆ ದಾರಿ ತೆರೆದಿಡುತ್ತದೆ, ಎಂದು ಸಂಸದ ಎಂ. ಮಲ್ಲೇಶ್ ಬಾಬು ಅವರು ಶಿಡ್ಲಘಟ್ಟದ ನಾಗರಿಕರಿಗೆ ಮನವಿ ಮಾಡಿದರು.

ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಂಡು ಜೀರ್ಣೋದ್ಧಾರಕ್ಕೆ ಸಿದ್ದವಾಗುತ್ತಿರುವ ಸಂದರ್ಭದಲ್ಲಿ, ಸಂಸದ ಮಲ್ಲೇಶ್ ಬಾಬು ಅವರು ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಅವರೊಂದಿಗೆ ಮಂಗಳವಾರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಐದು ಲಕ್ಷ ರೂ. ದೇಣಿಗೆ ನೀಡಿದರು.

ಈ ವೇಳೆ ಮಾತನಾಡಿದ ಮಲ್ಲೇಶ್ ಬಾಬು ಅವರು, “ಶಿಡ್ಲಘಟ್ಟ ನಗರದಲ್ಲಿನ ಶತಮಾನಗಳ ಇತಿಹಾಸ ಹೊಂದಿದ ದೇವಾಲಯವನ್ನು ಸುಂದರವಾಗಿ ಪುನರ್ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಎಲ್ಲರೂ ಕೈಜೋಡಿಸಿದರೆ, ಸಮಾಜದಲ್ಲಿ ಪ್ರೀತಿ, ಶಾಂತಿ ಮತ್ತು ಏಕತೆ ಮೂಡುತ್ತದೆ,” ಎಂದರು.

ಅವರು ಮುಂದುವರೆದು, “ನಾನು ಕೋಲಾರ ಕ್ಷೇತ್ರದ ಸಂಸದನಾದರೂ, ಶಿಡ್ಲಘಟ್ಟದ ಜನರ ಸಂಪರ್ಕದಲ್ಲಿದ್ದೇನೆ. ಶಾಸಕರಾದ ರವಿ ಅಣ್ಣ ಅವರು ಈ ಭಾಗದ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ನೋಡಿಕೊಳ್ಳುತ್ತಿದ್ದಾರೆ. ದೇವಾಲಯದ ನಿರ್ಮಾಣಕ್ಕೆ ನನ್ನ ಭಾಗದ ನೆರವನ್ನು ನೀಡಲು ಸಂತೋಷವಾಗುತ್ತಿದೆ,” ಎಂದರು.

ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ಶಿಡ್ಲಘಟ್ಟ ನಗರ ನಿರ್ಮಾತೃ ಅಲಸೂರಮ್ಮ ಹಾಗೂ ಅವರ ಪುತ್ರ ಶಿವನೇಗೌಡ ಅವರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಈಗ ಪುನರ್ ನಿರ್ಮಾಣಗೊಂಡಿದ್ದು, ಎಲ್ಲರ ಸಹಕಾರದಿಂದ ಈ ಪುಣ್ಯ ಕಾರ್ಯ ಸಾಧ್ಯವಾಗಿದೆ,” ಎಂದು ಹೇಳಿದರು.

ಸೋಮೇಶ್ವರಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಎ. ನಾಗರಾಜ್ ಅವರು, “ನವೆಂಬರ್ 1ರಿಂದ 3 ದಿನಗಳ ಕಾಲ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಸುಮಾರು 5,000 ಭಕ್ತರ ಪಾಲ್ಗೊಳ್ಳುವಿಕೆ ನಿರೀಕ್ಷಿಸಲಾಗಿದೆ. ಎಲ್ಲರಿಗೂ ಪ್ರಸಾದ ಮತ್ತು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ,” ಎಂದು ತಿಳಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ವಿವಿಧ ಸಮಿತಿ, ನಿಗಮಗಳಲ್ಲಿ ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಅವಕಾಶ ಕಲ್ಪಿಸಲು DCMಗೆ ಮನವಿ

0
Sidlaghatta Congress Rajeev gowda D K Shivakumar Meet

Sidlaghatta : ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಮುಖಂಡ ಬಿ.ವಿ. ರಾಜೀವ್ ಗೌಡ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ದೀಪಾವಳಿ ಹಬ್ಬದ ಸಿಹಿ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.

ಸಭೆಯಲ್ಲಿ ರಾಜೀವ್ ಗೌಡ ಅವರು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರಿಗೆ ವಿಭಿನ್ನ ನಿಗಮ ಮಂಡಳಿ ಮತ್ತು ಸಮಿತಿಗಳಲ್ಲಿ ನಾಮನಿರ್ದೇಶನ ನೀಡುವ ವಿಚಾರ ಪ್ರಸ್ತಾಪಿಸಿದರು. ಈಗಾಗಲೇ ಕೆಲ ಸ್ಥಾನಗಳಿಗೆ ನಾಮನಿರ್ದೇಶನ ಮಾಡಿರುವುದಾಗಿ ತಿಳಿಸಿ, ಪಕ್ಷಕ್ಕಾಗಿ ಶ್ರಮಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಕೂಡ ಅವಕಾಶ ನೀಡುವಂತೆ ವಿನಂತಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಕಿ ಇರುವ ಎಲ್ಲ ಸಮಿತಿಗಳಿಗೂ ಶೀಘ್ರದಲ್ಲೇ ನಾಮನಿರ್ದೇಶನ ಮಾಡಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ, ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸಂಘಟಿತವಾಗಿ ಸಿದ್ಧತೆ ನಡೆಸುವಂತೆ ನಿರ್ದೇಶಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ನರೇಂದ್ರ, ದೊಡ್ಡತೇಕಹಳ್ಳಿ ಮೂರ್ತಿ, ಆನೂರು ಚಲಪತಿ, ಮನು, ಶ್ರೇಯಸ್ ಮತ್ತು ಅನಿಲ್ ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!