Home Blog Page 313

ನರ್ಸರಿ ಹಾಗೂ ಪಾಲಿ ಹೌಸ್‌ ರಚನೆ ಕುರಿತ ತರಬೇತಿ

0

ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ರೇಷ್ಮೆ ಹುಳು ಸಾಕಾಣಿಕಾ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ನರ್ಸರಿ ಮತ್ತು ಪಾಲಿ ಹೌಸ್‌ ರಚನೆಯ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಮಾತನಾಡಿದರು.

 ನರ್ಸರಿಯನ್ನು ಮಾಡಿದರೆ ಹೆಚ್ಚು ಲಾಭವನ್ನು ಗಳಿಸಲು ಅವಕಾಶವಿದೆ. ಆದರೆ ವೈಜ್ಞಾನಿಕವಾಗಿ ನರ್ಸರಿ ಅಥವಾ ಪಾಲಿಹೌಸ್‌ ರಚನೆ ಮಾಡಬೇಕಾದರೆ ತಾಂತ್ರಿಕ ಮಾಹಿತಿ ಅಗತ್ಯವಿರುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ಪಡೆದುಕೊಳ್ಳಬೇಕು ಎಂದು  ಅವರು ತಿಳಿಸಿದರು.

 ತಾಂತ್ರಿಕ ತರಬೇತಿಯನ್ನು ತೋಟಗಾರಿಕೆ ಇಲಾಖೆಯ ತರಬೇತಿ ಸಂಸ್ಥೆಯಲ್ಲಿ ನೀಡಲಾಗುವುದು. ಇದರ ಪ್ರಯೋಜನ ಪಡೆದುಕೊಳ್ಳಿ. ನರ್ಸರಿ ಹಾಗೂ ಪಾಲಿಹೌಸ್‌ ರಚನೆ ಮಾಡಿದರೆ ಇಲಾಖೆಯಿಂದ ಸಹಾಯಧನವನ್ನು ನೀಡಲಾಗುವುದು. ಆಸಕ್ತ ಯುವಕ ಮತ್ತು ಯುವತಿಯರು ಮುಂದೆ ಬರಬೇಕೆಂದು ಕರೆ ನೀಡಿದರು.

 ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿ ಕೀರ್ತಿ ಮಾತನಾಡಿ, ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆ ಮಾಡುವಾಗ ನೇರವಾಗಿ ಮಾರುಕಟ್ಟೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು. ರೈತರು ಸ್ವಂತ ಬೆಳೆಗಾರರ ತಂಡವನ್ನು ರಚಿಸಿಕೊಂಡು ತಂಡದಿಂದ ಒರ್ವ ಮಾರುಕಟ್ಟೆ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಅವರ ಮೂಲಕ ನೇರ ಮಾರುಕಟ್ಟೆ ಮಾಡಿದರೆ ಹೆಚ್ಚು ಆದಾಯ ಗಳಿಸಬುಹುದೆಂದು ಸಲಹೆ ನೀಡಿದರು.

 ಆತ್ಮಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಅಶ್ವತ್ಥನಾರಾಯಣ ಮಾತನಾಡಿ, ಆತ್ಮಯೋಜನೆಯ ಅಡಿಯಲ್ಲಿ ಕೃಷಿ ಇಲಾಖೆಯ ಮೂಲಕ ರೈತರಿಗೆ ಮಣ್ಣಿನ ಆರೋಗ್ಯವನ್ನು ಕಾಪಾಡಲು ಜೈವಿಕ ಜೀವಾಣು ಗೊಬ್ಬರಗಳಾದ ಅಜೋಸ್ಪೇರಿಯಂ, ಟ್ರೈಕೋಡರ್ಮ, ಪಿ ಎಸ್ ಪಿ ಗೊಬ್ಬರಗಳನ್ನು ರೈತರಿಗೆ ಕೃಷಿ ಇಲಾಖೆಯ ಮೂಲಕ ಉಚಿತವಾಗಿ ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

 ಆತ್ಮಯೋಜನೆಯ ಅಡಿಯಲ್ಲಿ ಮಾದರಿ ಸಾವಯವ ಕುಟುಂಬಗಳನ್ನು ಆಯ್ಕೆ ಮಾಡಲಗಿದೆ. ಅಂತಹ ಮಾದರಿ ಸಾವಯವ ತೋಟಗಳಿಗೆ ರೈತರನ್ನು ಕೃಷಿ ಅಧ್ಯಯನ ಪ್ರವಾಸ ಮಾಡಿಸಿ ಮಹಿತಿ ಕೊಡಿಸಲಾಗಿದೆ ಎಂದು ತಿಳಿಸಿದರು.

 ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೃಷಿ ಮೇಲ್ವಿಚಾರಕರಾದ ಹರೀಶ್‌ಕುಮಾರ್‌ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ರೈತರಿಗೆ ದೊರಕುವ ಸಹಾಯಧನಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

 ಪ್ರಗತಿಪರ ಕೃಷಿಕ ಗೋಪಾಲಗೌಡ ಮಾತನಾಡಿ, ಪ್ರತಿಯೊಬ್ಬಕೃಷಿಕರು ಒಂದೇ ಕೃಷಿಯನ್ನು ನಂಬಿಕೊಳ್ಳದೇ ಸಮಗ್ರವಾಗಿ ಹಲವಾರು ಬೆಳೆಗಳನ್ನು ಬೆಳೆದರೆ ಹೆಚ್ಚು ಲಾಭವನ್ನು ಗಳಿಸಬಹದು. ಅದರೊಟ್ಟಿಗೆ ಕುರಿ, ಮೇಕೆ, ಹಸು ಸಾಕಣೆ, ನಾಟಿ ಮೊಟ್ಟೆ ಕೋಳಿ ಸಾಕಣೆ ಮಾಡಿದರೆ ಇನ್ನು ಹೆಚ್ಚು ಆದಾಯವನ್ನು ಗಳಿಸಬಹದುದೆಂದು ಸಲಹೆ ನೀಡಿದರು.

ವಲಯ ಮೇಲ್ವಿಚಾರಕಿ ಜ್ಯೋತಿ, ಸೇವಾಪ್ರತಿನಿಧಿ ವೆಂಕಟಲಕ್ಷ್ಮೀ ಹಾಜರಿದ್ದರು.

Chikkaballapura Agriculture Market Watch – 16/09/2020

0

ಚಿಕ್ಕಬಳ್ಳಾಪುರ ಕೃಷಿ ಮಾರುಕಟ್ಟೆ ಧಾರಣೆ

Date: 16/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಹುರುಳಿಕಾಯಿ (ವೋಲ್)6030005500
ಬೀಟ್ರೂಟ್6010001400
ಹಾಗಲಕಾಯಿ3520002200
ಸೋರೆಕಾಯಿ1712001300
ಬದನೆಕಾಯಿ855001000
ಗೋರಿಕಾಯಿ1118002000
ಎಲೆಕೋಸು200700900
ದಪ್ಪ ಮೆಣಸಿನಕಾಯಿ6018002000
ಕ್ಯಾರೆಟ್15024003300
ಹೂಕೋಸು1512001500
ಚಪ್ಪರದವರೆ520002200
ಬಜ್ಜಿ ಮೆಣಸಿನಕಾಯಿ2318002000
ತೆಂಗಿನಕಾಯಿ20000800018000
ಸೌತೆಕಾಯಿ11012001500
ಹಸಿರು ಮೆಣಸಿನಕಾಯಿ6030005000
ಈರುಳ್ಳಿ30024002600
ಆಲೂಗಡ್ಡೆ (ಸ್ಥಳೀಯ)10026003400
ಮೂಲಂಗಿ5010001200
ಹೀರೇಕಾಯಿ2326002800
ಸೀಮೆ ಬದನೆಕಾಯಿ45700800
ಪಡವಲಕಾಯಿ12600800
ತೊಂಡೆಕಾಯಿ308001200
ಟೊಮ್ಯಾಟೊ49410003700

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಹೈನುಗಾರಿಕೆಯಲ್ಲಿನ ಸಾಧನೆಯನ್ನು ಗುರುತಿಸಿ ಸನ್ಮಾನ

0

ಹೈನುಗಾರಿಕೆಯಲ್ಲಿನ ಸಾಧನೆಯನ್ನು ಗುರುತಿಸಿ ಕೋಮುಲ್ ವತಿಯಿಂದ ಮಳ್ಳೂರಿನ ಮಂಜುನಾಥ್ ಅವರನ್ನು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಪಾಲ ವಾಜೂಬಾಯಿ ವಾಲ, ಸಚಿವರಾದ ಲಕ್ಷ್ಮಣ ಸವದಿ ಹಾಜರಿದ್ದರು.

Sidlaghatta Cocoon Market Watch – 16/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 16/09/2020

CB Lots: 564
Qty: 28445 kgs
Max: 315
Min: 150
Avg: 248
BV Lots: NILL
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (15/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 10 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಉಲ್ಲೂರುಪೇಟೆಯ 70 ವರ್ಷದ ಮಹಿಳೆ, 42 ವರ್ಷದ ಮಹಿಳೆ,
  2. ಗಾಂಧಿನಗರದ 61 ವರ್ಷದ ಗಂಡಸು,
  3. ಕದರಿಪಾಳ್ಯದ 20 ವರ್ಷದ ಗಂಡಸು,
  4. ಸಾದಲಿಯ 23 ವರ್ಷದ ಮಹಿಳೆ,
  5. ಇದ್ಲೂಡಿನ 30 ವರ್ಷದ ಮಹಿಳೆ,
  6. J ವೆಂಕಟಾಪುರದ 40 ವರ್ಷದ ಗಂಡಸು,
  7. ಮಿತ್ತನಹಳ್ಳಿಯ 33 ವರ್ಷದ ಗಂಡಸು,
  8. ಮಳಮಾಚನಹಳ್ಳಿಯ 25 ವರ್ಷದ ಗಂಡಸು,
  9. ತಾದೂರಿನ 53 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Chintamani Agriculture Market Watch – 16/09/2020

0

ಚಿಂತಾಮಣಿ ಕೃಷಿ ಮಾರುಕಟ್ಟೆ ಧಾರಣೆ

Date: 16/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಜೋಳ (ಬಿಳಿ)9016001800
ಅಕ್ಕಿ (ಹಂಸ)4020002300
ಅಕ್ಕಿ (ಸೋನ)14338005000


SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಪೋಷಣ್ ಅಭಿಯಾನದ ಜಾಥಾಗೆ ಚಾಲನೆ

0

ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ವಕೀಲರ ಸಂಘ, ಸಿಡಿಪಿಒ ಇಲಾಖೆ ಆಯೋಜಿಸಿದ್ದ ಪೋಷಣ್ ಅಭಿಯಾನದ ಜಾಥಾಗೆ ಚಾಲನೆ ನೀಡಿ, “ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ” ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.

 ಗರ್ಭಿಣಿಯರು, ಬಾಣಂತಿಯರು ಯಾವುದೇ ಕಾರಣಕ್ಕೂ ಅಪೌಷ್ಟಿಕತೆಯಿಂದ ಹಾಗೂ ರಕ್ತಹೀನತೆಯಿಂದ ಬಳಲದಂತೆ ಸದಾ ನಿಗಾವಹಿಸಬೇಕು ಎಂದು ಅವರು ತಿಳಿಸಿದರು.

 ಪೋಷಣ್ ಅಭಿಯಾನ ಜಾಥಾ ಮೂಲಕ ಗರ್ಭಿಣಿಯರು, ಮಕ್ಕಳು ಹಾಗೂ ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಿದ್ದೇವೆ. ಹಕ್ಕುಗಳ ನಿಜವಾದ ಮೂಲ ಇರುವುದು ಕರ್ತವ್ಯಗಳಲ್ಲಿ. ನಾವೆಲ್ಲರೂ ಕರ್ತವ್ಯಗಳನ್ನು ನಿಭಾಯಿಸಿದರೆ ಹಕ್ಕುಗಳು ದೂರವಾಗುವುದಿಲ್ಲ. ಕರ್ತವ್ಯಗಳನ್ನು ನಿಭಾಯಿಸದೆ ಹಕ್ಕುಗಳ ಹಿಂದೆ ಓಡಿದರೆ ಅವು ಕೈಗೆ ಸಿಗುವುದಿಲ್ಲ. ಮೂಲಭೂತ ಕರ್ತವ್ಯಗಳು ಜನರಿಗೆ ಅವರ ನೈತಿಕ ಹೊಣೆಗಾರಿಕೆಗಳನ್ನು ನೆನಪಿಸಿಕೊಡುತ್ತವೆ ಎಂದರು.

 ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಪೊಚ್ಚಾಪುರೆ, ಸಿಡಿಪಿಒ ನಾಗವೇಣಿ, ಮಹೇಶ್, ವಕೀಲ ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸಿದ ಪೊಲೀಸರು

0

ನಗರದ ಬಸ್ ನಿಲ್ದಾಣ ದಲ್ಲಿ ಮಂಗಳವಾರ ಮಾದಕ ವಸ್ತುಗಳ ವಿರುದ್ಧ ಜನರಿಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಮಾತನಾಡಿದರು.
ಸಮಾಜಕ್ಕೆ ಮಾರಕವಾದ ಮಾದಕ ವಸ್ತು ಮತ್ತು ಮಾನವ ಸಾಗಾಣಿಕೆ ಕುರಿತಂತೆ ಜಾಗೃತಿ ಮೂಡಿಸಿ ಸಮಾಜದಲ್ಲಿ ಅರಿವು ಮೂಡಿಸಲು ಪೊಲೀಸ್‌ ಇಲಾಖೆಯೊಂದಿಗೆ ಎಲ್ಲರು ಕೈಜೋಡಿಸಬೇಕು, ಮಾದಕ ವಸ್ತು ಸೇವನೆ, ಸಾಗಾಣಿಕೆ, ಮಾರಾಟದಂತಹ ಸಾಮಾಜಿಕ ಪಿಡುಗನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಎಂದರು.

 ಕೋವಿಡ್‌ ವೈರಸ್‌ ಅತ್ಯಂತ ಅಪಾಯಕಾರಿಯಾಗಿ ಹರಡುತ್ತಿದೆ. ಮುಂಜಾಗ್ರತಾ ಕ್ರಮಗಳಿಂದ ಮಾತ್ರ ಈ ವೈರಸ್‌ ನಿಯಂತ್ರಿಸಬಹುದು. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು. ಇಷ್ಟಾಗಿಯೂ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿ ಸಾರ್ವಜನಿಕವಾಗಿ ಓಡಾಟ ನಡೆಸುವುದು ಎಲ್ಲರ ಆರೋಗ್ಯದ ಕಾಳಜಿಯಿಂದ ಸರಿಯಲ್ಲ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಮನವಿ ಮಾಡಿಕೊಂಡರು.

 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೀಪ್‍ಗಳಲ್ಲಿ ನಗರ ಸಂಚಾರ ಕೈಗೊಂಡು ಯುವಜನರಿಗೆ ಮಾರಕವಾಗಿರುವ ಮಾದಕ ವಸ್ತುಗಳ ಸೇವನೆಯನ್ನು ಕೈಬಿಡಿ-ಮಾದಕ ವಸ್ತುಗಳ ಪತ್ತೆಗಾಗಿ ಪೊಲೀಸರೊಂದಿಗೆ ಕೈಜೋಡಿಸಿ ಎಂಬ ಘೋಷವಾಕ್ಯಗೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.

 ನಗರ ಠಾಣೆಯ ಪಿಎಸ್ಐ ಸಂಗಮೇಶ್ ಮೇಟಿ ಹಾಗೂ ಪೊಲೀಸ್ ಸಿಬ್ಬಂದಿ ನಗರಸಭೆ ಸದಸ್ಯರುಗಳು ಮತ್ತು ಆಟೋ ಚಾಲಕರು ಹಾಜರಿದ್ದರು.

Daily Panchangam – ಪಂಚಾಂಗ 16 September 2020

0

Daily Panchangam – ಪಂಚಾಂಗ (16 September 2020, ಬುಧವಾರ)

ಪಂಚಾಂಗ

ಸಂವತ್ಸರಶಾರ್ವರಿ
ಮಾಸಭಾದ್ರಪದ
ಪಕ್ಷಕೃಷ್ಣಪಕ್ಷ
ತಿಥಿಚತುರ್ದಶಿ – 07:58:17 PM ವರೆಗೆ
ನಕ್ಷತ್ರಮಾಘಾ – 12:20:37 PM ವರೆಗೆ
ಯೋಗಸಿದ್ದಿ – 07:39:25 AM ವರೆಗೆ, ಸಾಧ್ಯ 03:53:12 AM (ಗುರುವಾರ) ವರೆಗೆ
ಕರಣವಿಷ್ಟಿ (ಭದ್ರ) – 09:33:33 AM ವರೆಗೆ, ಶಕುನಿ – 07:58:17 PM ವರೆಗೆ
ಋತುಶರದ್

ಸೂರ್ಯೋದಯ

ಸೂರ್ಯೋದಯ06:07:31 AM
ಸೂರ್ಯಾಸ್ತ06:18:42 PM
ಚಂದ್ರ ರಾಶಿಸಿಂಹ

ಕಾಲ

ರಾಹು ಕಾಲ12:13:06 PM ರಿಂದ 01:44:30 PM
ಯಮಗಂಡ07:38:54 AM ರಿಂದ 09:10:18 AM
ಗುಳಿಕ ಕಾಲ10:41:42 PM ರಿಂದ 12:13:06 PM

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ತಾಲ್ಲೂಕು ಕಸಾಪ ವತಿಯಿಂದ ಕಾಚಹಳ್ಳಿ ಗ್ರಾಮದ ಎಂಜಿನಿಯರುಗಳಿಗೆ ಸನ್ಮಾನ

0

ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಸಾಪ ವತಿಯಿಂದ ನಡೆದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.

 ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, ಭಾರತದ ಭಾಗ್ಯ ವಿಧಾತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನಮ್ಮ ಜಿಲ್ಲೆಯಲ್ಲಿ ಜನಿಸಿದ್ದು ನಮ್ಮೆಲ್ಲರ ಭಾಗ್ಯ ಎಂದು ಅವರು ತಿಳಿಸಿದರು.

 102 ವರ್ಷಗಳ ತುಂಬು ಬದುಕಿನಲ್ಲಿ ವಿಶ್ವೇಶ್ವರಯ್ಯ ನಾಡಿಗಾಗಿಯೇ ದುಡಿದವರು. ಇಂದು ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾದರೆ ಅದಕ್ಕೆ ವಿಶೇಶ್ವರಯ್ಯ ಅವರ ಕಠಿಣ ಪರಿಶ್ರಮ ಮತ್ತು ದೂರದೃಷ್ಟಿಯೇ ಮುಖ್ಯ ಅಡಿಪಾಯ.  ದೂರದೃಷ್ಟಿಯುಳ್ಳ ಗ್ರಾಮೀಣ ಪ್ರಗತಿಯ ಯೋಜನೆಯನ್ನು ಅವರು ರೂಪಿಸಿದ್ದರು. ಮೇಲೂರಿನಿಂದ ಕಂಬದಹಳ್ಳಿಗೆ ಹೋಗುವ ರಸ್ತೆಯಲ್ಲಿ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕಾರ್ಖಾನೆ, ಕಿಸಾನ್ ಸಿಲ್ಕ್ ಇಂಡಸ್ಟ್ರಿ ಯನ್ನು 1952ರಲ್ಲಿ ವಿಶ್ವೇಶ್ವರಯ್ಯ ಅವರೇ ಉದ್ಘಾಟನೆ ಮಾಡಿದ್ದರು ಎಂದರು.

 ಈ ಸಂದರ್ಭದಲ್ಲಿ ಕಾಚಹಳ್ಳಿ ಗ್ರಾಮದ ಎಂಜಿನಿಯರುಗಳಾದ ಚೇತನ್ ಬಾಬು, ಹೇಮಂತ್ ಮತ್ತು ಅಶೋಕ್ ಕುಮಾರ್ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.

 ಕಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ, ಶಿಕ್ಷಕ ವಿ.ಚಂದ್ರಶೇಖರ್, ಗ್ರಾಮಸ್ಥರಾದ ಮುನಿಯಪ್ಪ, ಮುನಿರಾಜಪ್ಪ, ದೇವಿಕ, ಸಂಪಂಗಮ್ಮ, ಗಾಯಿತ್ರಮ್ಮ, ಶಾರದಮ್ಮ, ಭವ್ಯ ಹಾಜರಿದ್ದರು.

Sidlaghatta Cocoon Market Watch – 15/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 15/09/2020

CB Lots: 478
Qty: 23657 Kgs
Max: 325
Min: 199
Avg: 260
BV Lots: 04
Qty: 236 Kgs
Max: 300
Min: 220
AVG: 274
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (13/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ 10 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಜೌಗುಪೇಟೆಯ 47 ವರ್ಷದ ಗಂಡಸು,
  2. ಜಂಗಮಕೋಟೆಯ 60 ವರ್ಷದ ಮಹಿಳೆ, 15 ವರ್ಷದ ಹುಡುಗ,
  3. J ವೆಂಕಟಾಪುರದ 27 ವರ್ಷದ ಗಂಡಸು, 75 ವರ್ಷದ ಮಹಿಳೆ,
  4. ಸಾದಲಿಯ 31 ವರ್ಷದ ಗಂಡಸು,
  5. ಸೊಣ್ಣಗಾನಹಳ್ಳಿ (ಸಾದಲಿ)ಯ 50 ವರ್ಷದ ಮಹಿಳೆ,
  6. ಕುಂದಲಗುರ್ಕಿಯ 41 ವರ್ಷದ ಗಂಡಸು,
  7. ಜೋಡಿಕಾಚಹಳ್ಳಿಯ 35 ವರ್ಷದ ಗಂಡಸು,
  8. ಅಬ್ಲೂಡಿನ 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Chintamani Agriculture Market Watch – 15/09/2020

0

ಚಿಂತಾಮಣಿ ಕೃಷಿ ಮಾರುಕಟ್ಟೆ ಧಾರಣೆ

Date: 15/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಗೋಡಂಬಿ – ಲೋಕಲ್ (ರಾ)29650010500
ಧನಿಯಾ (ಸ್ಥಳೀಯ)850007500
ರಾಗಿ (ಸ್ಥಳೀಯ)4018002000
ಅಕ್ಕಿ (ಹಂಸ)2020002300
ಅಕ್ಕಿ (ಸೋನ)5538005000


SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Daily Panchangam – ಪಂಚಾಂಗ 15 September 2020

0

Daily Panchangam – ಪಂಚಾಂಗ (15 September 2020, ಮಂಗಳವಾರ)

ಪಂಚಾಂಗ

ಸಂವತ್ಸರಶಾರ್ವರಿ
ಮಾಸಭಾದ್ರಪದ
ಪಕ್ಷಕೃಷ್ಣಪಕ್ಷ
ತಿಥಿತ್ರಯೋದಶಿ – 11:01:38 PM ವರೆಗೆ
ನಕ್ಷತ್ರಆಶ್ಲೇಷ – 02:25:17 PM ವರೆಗೆ
ಯೋಗಶಿವ – 11:01:00 AM ವರೆಗೆ
ಕರಣಗರಜ – 12:21:15 PM ವರೆಗೆ, ವಾಣಿಜ – 11:01:38 PM ವರೆಗೆ
ಋತುಶರದ್

ಸೂರ್ಯೋದಯ

ಸೂರ್ಯೋದಯ06:07:30 AM
ಸೂರ್ಯಾಸ್ತ06:19:25 PM
ಚಂದ್ರ ರಾಶಿಕರ್ಕಾಟಕ 02:25:18 PM ವರೆಗೆ

ಕಾಲ

ರಾಹು ಕಾಲ05:16:26 PM ರಿಂದ 04:47:55 PM
ಯಮಗಂಡ09:10:28 AM ರಿಂದ 10:41:58 PM
ಗುಳಿಕ ಕಾಲ12:13:27 PM ರಿಂದ 01:44:56 PM

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಮಹಾನಾಯಕ ದಾರವಾಹಿಯನ್ನು ಪ್ರಸಾರ ಮಾಡದಂತೆ ಬೆದರಿಕೆ ಹಾಕಿರುವವರನ್ನು ಕೂಡಲೇ ಬಂಧಿಸಿ – ದಸಂಸ

0

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರ ಜೀವನಾಧಾರಿತ ಮಹಾನಾಯಕ ದಾರವಾಹಿಯನ್ನು ಪ್ರಸಾರ ಮಾಡದಂತೆ ವಾಹಿನಿಯೊಂದರ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಸಂಸ ವತಿಯಿಂದ ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ದಸಂಸ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್ ಮಾತನಾಡಿ ದೇಶ ಕಂಡ ಅಪ್ರತಿಮ, ಮಾನವತಾವಾದಿಗಳಲ್ಲಿ ಒಬ್ಬರಾದ ಡಾ.ಅಂಬೇಡ್ಕರ್ ಅವರು ರಚಿಸಿದಂತಹ ಸಂವಿಧಾನದಡಿಯಲ್ಲಿ ನಡೆಯುತ್ತಿರುವ ದೇಶದಲ್ಲಿ ಅವರ ಜೀವನಾಧಾರಿತ ದಾರವಾಹಿಯನ್ನು ಪ್ರಸಾರ ಮಾಡುವುದನ್ನು ವಿರೋಧಿಸಿ ಕೆಲ ಕಿಡಿಗೇಡಿಗಳು ವಾಹಿನಿಯ ಮುಖ್ಯಸ್ಥನಿಗೆ ಬೆದರಿಕೆ ಹಾಕಿರುವ ಕ್ರಮ ಸರಿಯಲ್ಲ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಶಿರಸ್ತೇದಾರ್ ಕೆ.ಎನ್.ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಘಟನಾ ಸಂಚಾಲಕರಾದ ಟಿ.ಎ.ಚಲಪತಿ, ಎಲ್.ವೆಂಕಟೇಶ್, ಹುಜಗೂರು ವೆಂಕಟೇಶ್, ನಗರ ಸಂಚಾಲಕ ನರೇಶ್, ಪದಾಧಿಕಾರಿಗಳಾದ ವೆಂಕಟರಾಜು, ಮುರಳಿ, ಸುಂದರರಾಜು,ದೊಡ್ಡತಿರುಮಲಯ್ಯ, ಮುನಿಕೃಷ್ಣಪ್ಪ, ಶಿವು ಮತ್ತಿತರರು ಪಾಲ್ಗೊಂಡಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 01 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

  1. ಅಬ್ಲೂಡಿನ 58 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 14/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 14/09/2020

CB Lots: 551
Qty: 27765 Kgs
Max: 330
Min: 133
Avg: 251
BV Lots: NILL
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (13/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಬೆಳೆ ಸಮೀಕ್ಷೆ ಯೋಜನೆಯನ್ನು ಯಶಸ್ವಿಗೊಳಿಸಲು ಸಹಕರಿಸಿ – ತಹಶೀಲ್ದಾರ್ ಕೆ.ಅರುಂಧತಿ

0

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ರೈತರಿಗೆ ತಲುಪಿಸುವ ಸಲುವಾಗಿ ಆರಂಭಿಸಿರುವ ಬೆಳೆ ಸಮೀಕ್ಷೆ ಯೋಜನೆಯನ್ನು ಯಶಸ್ವಿಗೊಳಿಸಲು ರೈತರು ಸಹಕರಿಸಬೇಕೆಂದು ತಹಶೀಲ್ದಾರ್ ಕೆ.ಅರುಂಧತಿ ಮನವಿ ಮಾಡಿದರು.

 ಬಶೆಟ್ಟಹಳ್ಳಿ ಹೋಬಳಿಯ ಗಡಿಮಿಂಚೇನಹಳ್ಳಿ ಹಾಗೂ ಶೆಟ್ಟಿಹಳ್ಳಿ ಗ್ರಾಮದಲ್ಲಿ ರೈತರ ತೋಟದಲ್ಲಿ ಬೆಳೆ ಸಮೀಕ್ಷೆ ನಡೆಸಿ ಮಾತನಾಡಿದ ಅವರು ರೈತರು ತಮ್ಮ ತಮ್ಮ ಮೊಬೈಲ್ ಮೂಲಕ ಕೃಷಿ ಇಲಾಖೆ ಸಿದ್ದಪಡಿಸಿರುವ ಆಪ್ ಬಳಸಿಕೊಂಡು ಬೆಳೆಯನ್ನು ನೊಂದಣಿ ಮಾಡಿಸಿಕೊಂಡಲ್ಲಿ ಸರ್ಕಾರಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ರೈತರಲ್ಲಿ ಅರಿವು ಮೂಡಿಸಿದರು.

 ಸರ್ಕಾರದ ಮಹತ್ವಾಕಾಂಕ್ಷೀಯ ಯೋಜನೆಯಲ್ಲಿ ಒಂದಾದ ಬೆಳೆ ಸಮೀಕ್ಷೆಯಲ್ಲಿ ಶೇಕಡ ನೂರರಷ್ಟು ಪ್ರಗತಿ ಸಾಽಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ರೈತ ಮುಖಂಡರೊಂದಿಗೆ ಬೆಳೆ ಸಮೀಕ್ಷೆ ಅಭಿಯಾಯನ ಕುರಿತು ಸಭೆ ನಡೆಸಿ ಸಮಾಲೋಚನೆ ನಡೆಸಿದ್ದೇವೆ. ಜೊತೆಗೆ ರೈತರ ತೋಟಗಳಿಗೆ ಭೇಟಿ ನೀಡಿ ರೈತರಿಂದಲೇ ಬೆಳೆ ಸಮೀಕ್ಷೆ ನಡೆಸಲು ಕ್ರಮ ಕೈಗೊಂಡಿದ್ದೇವೆ ಎಂದರು.

 ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ್ ಮಾತನಾಡಿ, ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಬೆಳೆ ಸಮೀಕ್ಷೆ ಯೋಜನೆಯನ್ನು ಯಶಸ್ವಿಗೊಳಿಸಲು ರೈತರು ಸಹ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಇನ್ನೂ ಹೆಚ್ಚಾಗಿ ಸಹಕಾರ ನೀಡಿ ಇಲಾಖೆ ನೀಡಿರುವ ಅವಧಿಯೊಳಗೆ ಬೆಳೆ ಸಮೀಕ್ಷೆ ಅಭಿಯಾನ ಯಶಸ್ವಿಗೊಳಿಸಬೇಕೆಂದು ಕೋರಿದರು.

Chintamani Agriculture Market Watch – 14/09/2020

0

ಚಿಂತಾಮಣಿ ಕೃಷಿ ಮಾರುಕಟ್ಟೆ ಧಾರಣೆ

Date: 14/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಧನಿಯಾ (ಸ್ಥಳೀಯ)850007500
ರಾಗಿ (ಸ್ಥಳೀಯ)50018002000
ಅಕ್ಕಿ (ಹಂಸ)3020002300
ಅಕ್ಕಿ (ಸೋನ)12038005000


SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿ ಮಾಡಲು ಆದ್ಯತೆ ನೀಡಿ – ತಾಲ್ಲೂಕು ಪಂಚಾಯಿತಿ ಇಒ

0

ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು ಹಾಗೂ ಹೋಟೆಲುಗಳಿಂದ ತೆರಿಗೆ ವಸೂಲಿ ಮಾಡಲು ಆದ್ಯತೆ ನೀಡಬೇಕೆಂದು ತಾಲ್ಲೂಕು ಪಂಚಾಯಿತಿ ಇಒ ಬಿ.ಶಿವಕುಮಾರ್ ಸೂಚಿಸಿದರು.

 ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಅಡ್ಹಾಕ್ ಸಮಿತಿಯ ಸಭೆಯಲ್ಲಿ ಅವರು  ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರುವ ಅನುದಾನಗಳನ್ನು ಖರ್ಚು ಮಾಡುವಾಗ ಸರ್ಕಾರ ನೀಡಿರುವ ಮಾರ್ಗಸೂಚಿಗಳು ಮತ್ತು ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ಖರ್ಚು ಮಾಡಿ ಕಡತಗಳನ್ನು ಮತ್ತು ದಾಖಲೆಗಳನ್ನು ನಿರ್ವಹಿಸಬೇಕೆಂದು ಸೂಚಿಸಿದರು.

 ಸಭೆಯಲ್ಲಿ ರಾಜ್ಯ ಲೆಕ್ಕಪತ್ರ ಇಲಾಖೆ ನೀಡಿದಂತಹ ಆಕ್ಷೇಪಣೆ ಮತ್ತು ವಸೂಲಾತಿ ಮೊತ್ತಗಳಿಗೆ ಕುರಿತಂತೆ ಅನುಪಾಲನಾ ವರದಿಗಳನ್ನು ಪರಿಶೀಲಿಸಿ, 14-15 ನೇ ಸಾಲಿನ ಅನುದಾನಕ್ಕೆ ಸಂಬಂಧಿಸಿದಂತೆ, 14ನೇ ಹಣಕಾಸು ಅನುದಾನ ಬಳಕೆ ಮಾಡಿರುವ ಸಂಬಂಧ ಪ್ರಗತಿ ವರದಿಗಳನ್ನು ಪಿಡಿಓಗಳು ಮಂಡಿಸಿದರು.

 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೋವಿಡ್ ನಿಯಂತ್ರಿಸಲು ಸ್ಥಾಪಿಸಿರುವ ಸಹಾಯವಾಣಿ ಕೇಂದ್ರಗಳ ಕುರಿತು ಜನರಲ್ಲಿ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸಿ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಪಿಡಿಒಗಳು ಅಭಿಯಾನ ನಡೆಸಬೇಕು. ಸಹಾಯವಾಣಿ ಕೇಂದ್ರಕ್ಕೆ ಸ್ವೀಕರಿಸಿರುವ ಕರೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಇಲಾಖಾ ಹಿರಿಯ ಅಽಕಾರಿಗಳ ಗಮನಕ್ಕೆ ತರಬೇಕೆಂದು ಸೂಚಿಸಿದರು.

 ಜಿಲ್ಲಾ ಸ್ಥಳೀಯ ಲೆಕ್ಕ ಪರಿಶೋಧನೆ ಇಲಾಖೆಯ ಚಿಕ್ಕಬಳ್ಳಾಪುರ ಜಿಲ್ಲಾ ಉಪನಿರ್ದೇಶಕ ಮೃಗೇಶ್, ಜಿಲ್ಲಾ ಪಂಚಾಯಿತಿ ಲೆಕ್ಕ ಪರಿಶೋಧನೆಯ ಶಾಖೆಯ ರೋಷನ್, ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಸದಾಶಿವಕುಮಾರ್ ಹಾಜರಿದ್ದರು.