15.1 C
Sidlaghatta
Thursday, December 25, 2025
Home Blog Page 5

ಮೊಬೈಲ್ ದೋಚಿದ ಆರೋಪಿಗಳ ವಾಹನ ಅಪಘಾತ; ಓರ್ವ ಸಾವು, ಮತ್ತೊಬ್ಬ ವಶಕ್ಕೆ

0
Sidlaghatta Mobile Phone Robbery Police Arrest

Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್ ಸಮೀಪ ಚಾಕು ತೋರಿಸಿ ಕಾರ್ಮಿಕರಿಂದ ಮೊಬೈಲ್‌ಗಳನ್ನು ದೋಚಿದ ಇಬ್ಬರು ಆರೋಪಿಗಳ ವಾಹನವು ಪರಾರಿಯಾಗುವ ಯತ್ನದಲ್ಲಿ ಅಪಘಾತಕ್ಕೀಡಾಗಿದೆ. ಪರಿಣಾಮವಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಘಟನೆ ವಿವರ

ಶಿಡ್ಲಘಟ್ಟ ತಾಲ್ಲೂಕು ಎಚ್.ಕ್ರಾಸ್ ಮಾರ್ಗದ ಹಾರಡಿ ಬಳಿ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ನಾಲ್ವರು ಕೂಲಿ ಕಾರ್ಮಿಕರು ರಾತ್ರಿ ವೇಳೆ ತಮ್ಮ ಊರಿಗೆ ತೆರಳಲು ಬಸ್‌ಗಾಗಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರ್ಮಿಕರಿಗೆ ಚಾಕು ತೋರಿಸಿ ಬೆದರಿಸಿ ಅವರ ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

ಅದೇ ಸಮಯಕ್ಕೆ ರಾತ್ರಿ ಗಸ್ತು ಮುಗಿಸಿ ಠಾಣೆಗೆ ಹಿಂದಿರುಗುತ್ತಿದ್ದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರ ಜೀಪನ್ನು ತಡೆದ ಕಾರ್ಮಿಕರು ನಡೆದ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಕಳುವಾದ ಮೊಬೈಲ್‌ಗಳ ಟವರ್ ಲೊಕೇಷನ್ ಮಾಹಿತಿ ಆಧರಿಸಿ ಆರೋಪಿಗಳ ವಾಹನವನ್ನು ಹಿಂಬಾಲಿಸಿದ್ದಾರೆ.

ದರೋಡೆ ಮಾಡಿ ಪರಾರಿಯಾಗುವ ಭರದಲ್ಲಿ ಆರೋಪಿಗಳಿದ್ದ ಕಾರು ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೋದಗೂರು-ಮಳಮಾಚನಹಳ್ಳಿ ಮಧ್ಯೆ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ 25 ವರ್ಷದ ಸಿದ್ದು ಅಲಿಯಾಸ್ ಸಿದ್ದೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆರೋಪಿಗಳ ಹಿನ್ನೆಲೆ:

ಮೃತ ಸಿದ್ದೇಶ್ ಆಂಧ್ರದ ಚಿತ್ತೂರಿನವನಾಗಿದ್ದು, ಲಾರಿ ಚಾಲಕನಾಗಿದ್ದನು. ಬಂಧಿತ ಮತ್ತೊಬ್ಬ ಆರೋಪಿ ಕನ್ನಮಂಗಲ ವಾಸಿ ವೈಶಾಖ್ ಸಹ ಲಾರಿ ಚಾಲಕನಾಗಿದ್ದು, ಇಬ್ಬರೂ ಪರಿಚಿತರಾಗಿದ್ದರು. ಇಬ್ಬರೂ ಲಾರಿ ಚಾಲಕ ಕೆಲಸದ ಜೊತೆಗೆ ದರೋಡೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ಎಸಗುವ ವೇಳೆ ಇಬ್ಬರೂ ಮದ್ಯ ಸೇವಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಪಿ ಕುಶಲ್ ಚೌಕ್ಸೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಎಲ್ಲ ಆಯಾಮಗಳಲ್ಲಿಯೂ ತನಿಖೆ ಮುಂದುವರೆಸುವಂತೆ ಸೂಚಿಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಇ-ಫವತಿ ಆಂದೋಲನಕ್ಕೆ ಚಾಲನೆ: ಮನೆ ಬಾಗಿಲಿಗೆ ಕಂದಾಯ ಸಿಬ್ಬಂದಿ

0
Sidlaghatta e-pauti khata Campaign Tehsildar Gagana Sindhu

Sidlaghatta : ಮೃತಪಟ್ಟ ಹಿರಿಯರ ಹೆಸರಿನಲ್ಲಿರುವ ಆಸ್ತಿ ದಾಖಲೆಗಳನ್ನು ಅವರ ವಾರಸುದಾರರ ಹೆಸರಿಗೆ ಸುಲಭವಾಗಿ ಮತ್ತು ಶೀಘ್ರವಾಗಿ ಬದಲಾಯಿಸಲು ಕಂದಾಯ ಇಲಾಖೆ ಹಮ್ಮಿಕೊಂಡಿರುವ ‘ಇ-ಫವತಿ ಆಂದೋಲನ’ದ ಸದುಪಯೋಗ ಪಡೆದುಕೊಳ್ಳುವಂತೆ ತಹಶೀಲ್ದಾರ್ ಗಗನ ಸಿಂಧು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲ ಅಶ್ವತ್ಥಕಟ್ಟೆ ಬಳಿ ಬುಧವಾರ ಈ ಆಂದೋಲನದ ಕುರಿತು ಜನರಲ್ಲಿ ಅರಿವು ಮೂಡಿಸಿ ಅವರು ಮಾತನಾಡಿದರು.

ಫವತಿ ಖಾತೆ ಆಂದೋಲನದ ಉದ್ದೇಶ

ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ತಾಲ್ಲೂಕಿನಲ್ಲಿ ಅನೇಕ ಕುಟುಂಬಗಳಿಗೆ ಸಂಬಂಧಿಸಿದ ಆಸ್ತಿ ದಾಖಲೆಗಳು ಮೃತಪಟ್ಟ ಹಿರಿಯರ ಹೆಸರಿನಲ್ಲೇ ಉಳಿದುಕೊಂಡಿವೆ. ವರ್ಷಗಳೇ ಕಳೆದರೂ ಅವು ವಾರಸುದಾರರಾದ ಮಕ್ಕಳು ಅಥವಾ ಮೊಮ್ಮಕ್ಕಳ ಹೆಸರಿಗೆ ಬದಲಾಗಿಲ್ಲ.

ಇದರಿಂದಾಗಿ ಆಸ್ತಿಯ ವಿಭಾಗ, ಪಾಲುದಾರಿಕೆ, ಮಾರಾಟ, ಬ್ಯಾಂಕ್‌ನಲ್ಲಿ ಅಡ ಇಟ್ಟು ಸಾಲ ಪಡೆಯುವುದು ಅಥವಾ ದಾಖಲೆಗಳನ್ನು ಭದ್ರಪಡಿಸಿಕೊಳ್ಳುವಂತಹ ಕೆಲಸಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಆಸ್ತಿ ವಿವಾದಗಳು ಒಂದೇ ಕುಟುಂಬದ ಸದಸ್ಯರ ನಡುವೆ ಕಲಹಗಳಿಗೂ ಕಾರಣವಾಗುತ್ತಿದೆ.

ಈ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರವು ಕಂದಾಯ ಇಲಾಖೆ ಮೂಲಕ ‘ಫವತಿ ಖಾತೆ ಆಂದೋಲನ’ ಹಮ್ಮಿಕೊಂಡಿದೆ. ಎಂದು ತಿಳಿಸಿದರು

ಜನರಿಗೆ ಸಿಗುವ ಪ್ರಯೋಜನಗಳು

‘ಇ-ಫವತಿ’ ಆಂದೋಲನದಡಿ ಕಂದಾಯ ಇಲಾಖೆ ಸಿಬ್ಬಂದಿ ಸ್ವತಃ ಜನರ ಮನೆ ಬಾಗಿಲಿಗೆ ಬಂದು ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಇದರಿಂದ ಜನರಿಗೆ ಈ ಕೆಳಗಿನ ಪ್ರಯೋಜನಗಳಿವೆ:

  • ತಾಲ್ಲೂಕು ಕಚೇರಿ ಅಲೆದಾಟ ತಪ್ಪುತ್ತದೆ: ಫವತಿ ಖಾತೆಗಾಗಿ ವಿನಾಕಾರಣ ತಾಲ್ಲೂಕು ಕಚೇರಿ ಅಥವಾ ನಾಡ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ.
  • ಸಮಯ ಮತ್ತು ಹಣ ಉಳಿತಾಯ: ಅನಗತ್ಯ ಖರ್ಚು ಮತ್ತು ಅಮೂಲ್ಯ ಸಮಯ ಉಳಿತಾಯವಾಗುತ್ತದೆ.
  • ಆಸ್ತಿ ಭದ್ರತೆ: ಆಸ್ತಿ ದಾಖಲೆಗಳನ್ನು ಅಧಿಕೃತವಾಗಿ ಮತ್ತು ಕಾನೂನುಬದ್ಧವಾಗಿ ವಾರಸುದಾರರ ಹೆಸರಿಗೆ ಭದ್ರಪಡಿಸಿಕೊಳ್ಳಬಹುದು.

ಜನರು ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ, ಕುಟುಂಬದ ಎಲ್ಲರ ಒಮ್ಮತದಿಂದ ಇ-ಫವತಿ ಖಾತೆ ಮಾಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಮನವಿ ಮಾಡಿದರು.

ಈ ವೇಳೆ ಉಪ ತಹಶೀಲ್ದಾರ್ ಚೇತನ್, ಕಸಬಾ ಕಂದಾಯ ಅಧಿಕಾರಿ ವೇಣುಗೋಪಾಲ್, ವಿ.ಎ. ನಾಗರಾಜ್, ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-10/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 10/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 296
Qty: 15227 Kg
Mx : 777
Mn: 410
Avg: 690

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 15
Qty: 952 Kg
Mx : ₹ 968
Mn: ₹ 666
Avg: ₹ 829


For Daily Updates WhatsApp ‘HI’ to 7406303366

ನಿಧನವಾರ್ತೆ – ನಾಗರಾಜ್

0
Sidlaghatta Dibburahalli Police PSI Nagaraj demise

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಎ.ಎಸ್‌.ಐ ಆಗಿದ್ದ ಶಿಡ್ಲಘಟ್ಟ ನಗರ ನಲ್ಲಿಮರದಹಳ್ಳಿಯ ವಾಸಿ ನಾಗರಾಜ್(57) ಸೋಮವಾರ ಮೃತಪಟ್ಟಿದ್ದು ಮಂಗಳವಾರ ನಗರದ ಹೊರವಲಯದ ಸ್ಮಶಾನದಲ್ಲಿ ಅವರ ಅಂತಿಮ ಕಾರ್ಯ ನೆರವೇರಿತು.

ಪತ್ನಿ, ಮಗ ಮತ್ತು ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇತ್ತೀಚೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂಸದೆ ಮೃತಪಟ್ಟಿದ್ದಾರೆ. ನಲ್ಲಿಮರದಹಳ್ಳಿ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಎಸ್ಪಿ ಕುಶಲ್ ಚೌಕ್ಸೆ, ಡಿವೈಎಸ್ಪಿ ಮುರಳೀಧರ್, ಎಸ್‌.ಐ ರಾಜೇಶ್ವರಿ ಸೇರಿದಂತೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ದರ್ಶನ ಪಡೆದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಡಿ13 ರಂದು ರಾಷ್ಟ್ರೀಯ ಲೋಕ್ ಅದಾಲತ್; ರಾಜಿ ಮೂಲಕ ಪ್ರಕರಣ ಇತ್ಯರ್ಥಕ್ಕೆ ಕರೆ

0
Sidlaghatta Lok Adalat on December 13

Sidlaghatta : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (KSLSA) ವತಿಯಿಂದ ಇದೇ ಡಿಸೆಂಬರ್ 13 ರಂದು ರಾಷ್ಟ್ರೀಯ ಲೋಕ್ ಅದಾಲತ್ (National Lok Adalat) ಹಮ್ಮಿಕೊಳ್ಳಲಾಗಿದೆ. ನಾಗರಿಕರು ರಾಜಿ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಂಡು, ಸಮಯ ಮತ್ತು ಹಣವನ್ನು ಉಳಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಅವರು ಸಾರ್ವಜನಿಕರಿಗೆ ಕರೆ ನೀಡಿದರು.

ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಲೋಕ್ ಅದಾಲತ್‌ನಲ್ಲಿ ಇತ್ಯರ್ಥವಾಗುವ ಪ್ರಕರಣಗಳು

ಲೋಕ್ ಅದಾಲತ್ ಮೂಲಕ ರಾಜಿ ಸಂಧಾನಕ್ಕೆ ಯೋಗ್ಯವಾದ ಅನೇಕ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು. ಮುಖ್ಯವಾಗಿ ಈ ಕೆಳಗಿನ ಪ್ರಕರಣಗಳ ಕಕ್ಷಿದಾರರು ಇದರ ಪ್ರಯೋಜನ ಪಡೆಯಬಹುದು:

ಕೌಟುಂಬಿಕ ವ್ಯಾಜ್ಯಗಳು: ವಿಚ್ಛೇದನ, ಜೀವನಾಂಶ ಇತ್ಯಾದಿ ಕೌಟುಂಬಿಕ ಪ್ರಕರಣಗಳು.

ಸಿವಿಲ್ ಪ್ರಕರಣಗಳು: ಭೂ ವಿವಾದ, ಆಸ್ತಿ ಹಕ್ಕುಗಳಂತಹ ಸಿವಿಲ್ ವ್ಯಾಜ್ಯಗಳು.

ಹಣಕಾಸಿನ ವಿಚಾರಗಳು: ಬ್ಯಾಂಕ್‌ಗಳಿಂದ ಪಡೆದ ಸಾಲಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳು.

ವ್ಯಾಜ್ಯಪೂರ್ವ ಪ್ರಕರಣಗಳು: ನ್ಯಾಯಾಲಯಕ್ಕೆ ಬರುವುದಕ್ಕಿಂತ ಮೊದಲು ರಾಜಿ ಮಾಡಿಕೊಳ್ಳಲು ಇಚ್ಛಿಸುವ ಪ್ರಕರಣಗಳು.

ನ್ಯಾಯಾಲಯದಲ್ಲಿ ರಾಜಿ ಸಂಧಾನದ ಪ್ರಯೋಜನಗಳು

ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಅವರು ರಾಜಿ ಸಂಧಾನದ ಮಹತ್ವವನ್ನು ವಿವರಿಸಿದರು. ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡರೆ ಕಕ್ಷಿದಾರರಿಗೆ ಈ ಕೆಳಗಿನ ಪ್ರಯೋಜನಗಳಿವೆ:

ಸಮಯ ಮತ್ತು ಹಣ ಉಳಿತಾಯ: ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಲಯದಲ್ಲಿ ಅಲೆಯುವುದು ತಪ್ಪುತ್ತದೆ.

ಕೇವಲ ಕಾನೂನು ಇತ್ಯರ್ಥ ಮಾತ್ರವಲ್ಲದೆ, ಮಾನವ ಸಂಬಂಧಗಳು, ಮೌಲ್ಯಗಳು ಮತ್ತು ಶಾಂತಿ-ನೆಮ್ಮದಿಯ ವಾತಾವರಣ ಮರುಸ್ಥಾಪನೆಯಾಗುತ್ತದೆ. ಕಕ್ಷಿದಾರರು ಸ್ವಯಂ ಪ್ರೇರಿತರಾಗಿ, ತಮ್ಮ ವಕೀಲರ ಮೂಲಕ ಅಥವಾ ಖುದ್ದಾಗಿ ಹಾಜರಾಗಿ ರಾಜಿ ಮಾಡಿಕೊಳ್ಳಬಹುದು.

ಕಕ್ಷಿದಾರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ನ್ಯಾಯಾಧೀಶರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್., ಸರ್ಕಾರಿ ಸಹಾಯಕ ಅಭಿಯೋಜಕ ಮೊಹಮ್ಮದ್ ಖಾಜಾ ಮತ್ತು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-09/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 09/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 284
Qty: 14638 Kg
Mx : 782
Mn: 400
Avg: 686

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 24
Qty: 1285 Kg
Mx : ₹ 888
Mn: ₹ 420
Avg: ₹ 740


For Daily Updates WhatsApp ‘HI’ to 7406303366

ಶ್ರೀ ಮಳ್ಳೂರಾಂಭ ದೇವಾಲಯದಲ್ಲಿ ಸಂಭ್ರಮದ ಉಯ್ಯಾಲೋತ್ಸವ

0
Devaramallur Sri Malluramba Temple Uyyalotsava

Devaramallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಪಂಚಶಕ್ತಿ ದೇವತೆಗಳ ದಿವ್ಯ ಕ್ಷೇತ್ರವಾದ ಶ್ರೀಮಳ್ಳೂರಾಂಭ ದೇವಾಲಯದಲ್ಲಿ ಸೋಮವಾರ ವಿಜೃಂಭಣೆಯಿಂದ ಉಯ್ಯಾಲೋತ್ಸವ ಆಚರಣೆ ನಡೆಯಿತು.

ಶ್ರೀ ಮಳ್ಳೂರಾಂಭೆಯ ಉತ್ಸವ ಮೂರ್ತಿಯನ್ನು ಅಲಂಕರಿಸಿ, ನಾದಸ್ವರ, ಡೋಲು ಮತ್ತು ಇನ್ನಿತರೆ ಜನಪದ ಕಲಾತಂಡಗಳೊಂದಿಗೆ ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ, ಉತ್ಸವ ಮೂರ್ತಿಯನ್ನು ಅಲಂಕೃತ ಉಯ್ಯಾಲೆ (ತೂಗು ಸೇವೆ)ಯಲ್ಲಿ ಪ್ರತಿಷ್ಠಾಪಿಸಿ ಛಾಮರದ ಸೇವೆ ಸಲ್ಲಿಸಿ, ಪೂಜಿಸಿ ನಮಿಸಲಾಯಿತು.

ದೇವಿಯನ್ನು ಕೂರಿಸಿದ್ದ ಉಯ್ಯಾಲೆಯನ್ನು ಮೂರು ಬಾರಿ ತೂರಿ, ಭಕ್ತರು ಮೂರು ಸುತ್ತು ಪ್ರದಕ್ಷಿಣೆ ಹಾಕಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ತಾಯಿಯಲ್ಲಿ ಭಕ್ತಿಯಿಂದ ಬೇಡಿಕೊಂಡರು.

ಸೇವೆ ಮತ್ತು ಅನ್ನಸಂತರ್ಪಣೆ:

ಉಯ್ಯಾಲೋತ್ಸವದ ಅಂಗವಾಗಿ, ಪಂಚಾಕ್ಷರಿರೆಡ್ಡಿ ಕುಟುಂಬದವರು ನೆರೆದಿದ್ದ ಎಲ್ಲ ಮಹಿಳಾ ಭಕ್ತರಿಗೂ ಅರಿಶಿಣ-ಕುಂಕುಮ ನೀಡಿ ವಸ್ತ್ರದಾನ ಮಾಡುವ ಮೂಲಕ ಸೇವೆ ಸಲ್ಲಿಸಿದರು. ಇದರ ಜೊತೆಗೆ, ಸಾಮೂಹಿಕ ಅನ್ನಸಂತರ್ಪಣೆಯೂ ನಡೆಯಿತು.

ದೇವರಮಳ್ಳೂರು ವಕೀಲ ಸುಬ್ರಮಣಿ ಕುಟುಂಬ ಮತ್ತು ಕೊತ್ತನೂರು ಪಂಚಾಕ್ಷರಿರೆಡ್ಡಿ ಕುಟುಂಬದವರು ಈ ಉಯ್ಯಾಲೋತ್ಸವವನ್ನು ನಡೆಸಿ ಕೊಟ್ಟರು.

ಶ್ರೀಮಳ್ಳೂರಾಂಭೆ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮುನಿರಾಜುಗೌಡ, ಕಾರ್ಯದರ್ಶಿ ವೇಣುಗೋಪಾಲ್, ಅರ್ಚಕ ಹರೀಶ್ ಸೇರಿದಂತೆ ಕೊತ್ತನೂರು ಪಂಚಾಕ್ಷರಿರೆಡ್ಡಿ, ಸ್ವರೂಪ್‌ ರೆಡ್ಡಿ ಮತ್ತು ಅನೇಕ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಹೈನುಗಾರಿಕೆ ಇನ್ನು ಉಪ ಕಸುಬಲ್ಲ; ನೂತನ ತಂತ್ರಜ್ಞಾನ ಬಳಸಿ ಹೆಚ್ಚು ಆದಾಯ ಗಳಿಸಿ

0
Sidlaghatta Devaramallur Cattle Fair

Devaramallur, Sidlaghatta : ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಹಾಲು ಉತ್ಪಾದನೆ ಆಗುತ್ತಿದ್ದು, ನಂದಿನಿ ಹಾಲು ಮತ್ತು ಇತರೆ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ ಎಂದು ಪ್ರಾಥಮಿಕ ಕೃಷಿ ಮತ್ತು ಸಹಕಾರ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಅವರು ತಿಳಿಸಿದರು.

ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರೀಮಳ್ಳೂರಾಂಭ ದೇವಿಯ ಬ್ರಹ್ಮ ರಥೋತ್ಸವದ ಅಂಗವಾಗಿ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (KOCHIMUL) ಮತ್ತು ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ಉತ್ತಮ ರಾಸುಗಳ ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯು ಕೇವಲ ಉಪ ಕಸುಬಾಗಿ ಉಳಿದಿಲ್ಲ. ಇದು ಒಂದು ಪ್ರಮುಖ ಉದ್ದಿಮೆಯಾಗಿ ವ್ಯಾಪಿಸುತ್ತಿದೆ. ಹಾಗಾಗಿ, ರೈತರು ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಹೈನುಗಾರಿಕೆ ಕೈಗೊಂಡು ಹೆಚ್ಚು ಆದಾಯ ಗಳಿಸಬೇಕು ಎಂದು ಮನವಿ ಮಾಡಿದರು.

ಸ್ಥಾನ ಕಳೆದುಕೊಂಡ ಕೋಚಿಮುಲ್:

ಕೋಚಿಮುಲ್ ಮಾಜಿ ನಿರ್ದೇಶಕ ಆರ್. ಶ್ರೀನಿವಾಸ್ ಮಾತನಾಡಿ, ನಮ್ಮಲ್ಲಿ ಬಹುತೇಕ ರೈತರು ರೇಷ್ಮೆ ಕೃಷಿ ಮತ್ತು ಸಾಮಾನ್ಯ ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಕೈಗೊಂಡಿದ್ದಾರೆ. ಆದರೆ ಕೆಲವರು ಇದನ್ನೇ ಮುಖ್ಯ ಕಸುಬನ್ನಾಗಿ ಮಾಡಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ನಂತರ ಮೊದಲು ಎರಡನೇ ಸ್ಥಾನದಲ್ಲಿದ್ದ ಕೋಚಿಮುಲ್, ಇದೀಗ ಹಾಸನ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ನಾವು ಮೂರನೇ ಸ್ಥಾನಕ್ಕೆ ಇಳಿದಿದ್ದೇವೆ ಎಂದು ವಿಷಾದಿಸಿದರು.

ಈ ಮೊದಲು ಜಾತ್ರೆಗಳಲ್ಲಿ ಸಾವಿರಾರು ಎತ್ತುಗಳು ಸೇರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾಂತ್ರೀಕರಣ ಹೆಚ್ಚಾದ ಕಾರಣ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗಿ, ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಜಾತ್ರೆಗಳಲ್ಲಿ ಜಾನುವಾರುಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಶ್ರೀನಿವಾಸ್ ಹೇಳಿದರು.

ವಿಮೆಯ ಮಹತ್ವ ಮತ್ತು ಹಾಲಿನ ಸೇವನೆ:

ಡಾ. ವಿ. ಶ್ರೀನಾಥರೆಡ್ಡಿ (ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕರು) ಮಾತನಾಡಿ, ಸಾಕಷ್ಟು ರೈತರು ಮಿಶ್ರ ತಳಿಯ ಸೀಮೆ ಹಸುಗಳಿಗೆ ವಿಮೆಯನ್ನು ಮಾಡಿಸಿಲ್ಲ. ಸೀಮೆ ಹಸು ಮೃತಪಟ್ಟರೆ ವಿಮೆ ಹಣವು ರೈತರಿಗೆ ನೆರವಾಗಲಿದೆ. ಬಹುತೇಕ ರೈತರು ತಾವೇ ಉತ್ಪಾದಿಸುವ ಹಾಲನ್ನು ಕುಡಿಯದೆ, ಮಕ್ಕಳಿಗೆ ನೀಡದೇ ಇರುವುದು ಬೇಸರದ ಸಂಗತಿ. ಎಲ್ಲರೂ ನಿತ್ಯ ಹಾಲು ಮತ್ತು ಮೊಟ್ಟೆ ಸೇವಿಸಿ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ರೂಪಿಸಿಕೊಳ್ಳಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು. ಮಿಶ್ರ ತಳಿ ಸೀಮೆ ಹಸು, ಎಮ್ಮೆ ಹಾಗೂ ನಾಟಿ ಹಸುಗಳ ವಿಭಾಗದಲ್ಲಿ ತಲಾ ಮೂವರಿಗೆ ಬಹುಮಾನ ವಿತರಿಸಲಾಯಿತು.

ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ಆನಂದ್, ಗ್ರಾ.ಪಂ. ಅಧ್ಯಕ್ಷೆ ಪವಿತ್ರದೇವರಾಜ್, ಕೋಚಿಮುಲ್ ವಿಸ್ತರಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ಡೇರಿ ನಿರ್ದೇಶಕರು ಮತ್ತು ರೈತರು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-08/12/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 08/12/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 327
Qty: 16973 Kg
Mx : 768
Mn: 300
Avg: 622

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 21
Qty: 1106 Kg
Mx : ₹ 888
Mn: ₹ 455
Avg: ₹ 727


For Daily Updates WhatsApp ‘HI’ to 7406303366

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ; ಆಟೋ ಚಾಲಕರು ಸಮವಸ್ತ್ರ ಧರಿಸಿ

0
Sidlaghatta Two Wheelers Helmet Compulsory

Sidlaghatta : ದ್ವಿಚಕ್ರ ವಾಹನ ಸವಾರರು ಕೇವಲ ಕಾನೂನಿನ ಭಯಕ್ಕೆ ಹೆಲ್ಮೆಟ್ ಧರಿಸುವುದರ ಬದಲು, ತಮ್ಮ ಮತ್ತು ತಮ್ಮ ಮೇಲೆ ಆಧಾರವಾಗಿರುವ ಕುಟುಂಬದವರ ಹಿತದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಎಂದು ನಗರ ಠಾಣೆ ಎಸ್‌.ಐ. ವೇಣುಗೋಪಾಲ್ ಅವರು ವಾಹನ ಸವಾರರಲ್ಲಿ ಮನವಿ ಮಾಡಿದರು.

ಹೆಲ್ಮೆಟ್ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ, ನಗರದ ರೇಷ್ಮೆ ಗೂಡಿನ ಮಾರುಕಟ್ಟೆ, ಕೆ.ಎಸ್‌.ಆರ್‌.ಟಿ.ಸಿ. ಬಸ್ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ದಾಖಲೆಗಳ ನಿರ್ವಹಣೆ ಕಡ್ಡಾಯ:

ಜಿಲ್ಲೆಯಲ್ಲಿ ಈಗಾಗಲೇ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಸವಾರರು ಹೆಲ್ಮೆಟ್ ಧರಿಸುವುದರ ಜತೆಗೆ, ವಾಹನಕ್ಕೆ ಸಂಬಂಧಿಸಿದ ಚಾಲನಾ ಪರವಾನಗಿ (DL), ವಿಮೆ ಮತ್ತು ಇನ್ನಿತರ ಸೂಕ್ತ ದಾಖಲೆಗಳನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳಬೇಕು. ದಾಖಲೆ ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಹೆಲ್ಮೆಟ್ ಧರಿಸುವುದರಿಂದ ಆಗುವ ಉಪಯೋಗಗಳು ಮತ್ತು ಧರಿಸದೆ ಇದ್ದರೆ ಅಪಘಾತ ಸಂದರ್ಭದಲ್ಲಿ ಆಗುವ ಅಪಾಯಗಳ ಬಗ್ಗೆ ಸವಾರರಿಗೆ ಮನವರಿಕೆ ಮಾಡಿಕೊಡಲಾಯಿತು.

ಆಟೋ ಚಾಲಕರು ಸಮವಸ್ತ್ರ ಧರಿಸಿ:

ಇದೇ ವೇಳೆ, ಆಟೋ ಚಾಲಕರಿಗೂ ನಿಯಮಗಳನ್ನು ಪಾಲಿಸುವಂತೆ ತಾಕೀತು ಮಾಡಲಾಯಿತು. ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ (Uniform) ಧರಿಸಬೇಕು ಮತ್ತು ಆಟೋಗಳ ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಎಸ್‌.ಐ. ವೇಣುಗೋಪಾಲ್ ಸೂಚಿಸಿದರು.

ಈ ಜಾಗೃತಿ ಅಭಿಯಾನದಲ್ಲಿ ನಗರ ಠಾಣೆಯ ಸಿಬ್ಬಂದಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!