33.6 C
Sidlaghatta
Saturday, April 20, 2024

ಅಪನಗಧೀಕರಣವು ಈ ಶತಮಾನದ ಮೇರು ಆರ್ಥಿಕ ಸುಧಾರಣೆ; ವ್ಯವಸ್ಥೆಯ ಸುಧಾರಣೆಯ ಆರಂಭವಿದು, ಅಂತ್ಯವಲ್ಲ

- Advertisement -
- Advertisement -

ಅಪನಗಧೀಕರಣವು ಈ ಶತಮಾನದ ಮೇರು ಆರ್ಥಿಕ ಸುಧಾರಣೆ. ಆರ್ಥಿಕ ಕ್ಷೇತ್ರವಷ್ಟೇ ಅಲ್ಲ, ಆಡಳಿತ ವ್ಯವಸ್ಥೆಯನ್ನು ಕೂಡ ಇದರಿಂದ ಶುದ್ಧೀಕರಣವಾಗುತ್ತದೆ. ಹಣಚೆಲ್ಲಿ ಜನಪ್ರತಿನಿಧಿಗಳಾಗವವರು ಇಲ್ಲವಾಗುತ್ತಾರೆ. ಒಟ್ಟಾರೆ ಲಾಭವು ಜನಸಾಮಾನ್ಯರಿಗಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಯುವಮೋರ್ಚಾ ಮತ್ತು ತಾಲ್ಲೂಕು ಮಂಡಲದಿಂದ ಆಯೋಜಿಸಲಾಗಿದ್ದ ‘ನೋಟು ಬದಲು – ದೇಶ ಮೊದಲು’ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಯೋತ್ಪಾದನೆ, ಕಾಳಧನ, ಬ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರುವ ಅನುದಾನಗಳ ಸೋರಿಕೆ ತಪ್ಪುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು 1000 ರೂಗಳ ಅಪನಗಧೀಕರಣ ಮಾಡಿರದಿದ್ದರೆ ದೇಶ ಆರ್ಥಿಕ ಗುಲಾಮಗಿರಿಗೆ ಸಿಲುಕುತ್ತಿತ್ತು. ದೇಶದಲ್ಲಿ ಸುಮಾರು 15 ಲಕ್ಷ ಕೋಟಿ ರೂಗಳಷ್ಟು ಇದ್ದ 500 ಮತ್ತು 1000 ರೂಗಳ ನೋಟುಗಳಲ್ಲಿ ಬಹುತೇಕ ಕಾಳಧನವಾಗಿ ಮಾರ್ಪಟ್ಟಿತ್ತು. ಕಲ್ಲಿದ್ದಲು, 2ಜಿ ಮೊದಲಾದ ವಿವಿಧ ಹಗರಣಗಳ ಕಪ್ಪು ಹಣವೇ 13 ಲಕ್ಷ ಕೋಟಿಗೂ ಹೆಚ್ಚೆಂದು ಅಂದಾಜಿಸಲಾಗಿದೆ. ಪ್ರಧಾನಿಯವರು ಕೈಗೊಂಡ ದಿಟ್ಟ ನಿಲುವಿನಿಂದ ಕಪ್ಪುಹಣ ಹೆಣವಾಯಿತು, ಅದನ್ನಿಟ್ಟುಕೊಂಡವರು ಅಳುತ್ತಿದ್ದರೆ, ಬಡವರು ನೋಡಿ ನಗುವಂತಾಯಿತು ಎಂದು ಹೇಳಿದರು.
ಇನ್ನು ಮುಂದೆ ಚಿನ್ನದ ವ್ಯವಹಾರವಾಗಲಿ, ರಿಯಲ್‌ ಎಸ್ಟೇಟ್‌ ಉದ್ದಿಮೆಯಾಗಲಿ ಲೆಕ್ಕ ತಪ್ಪಿಸಲು ಸಾಧ್ಯವಿಲ್ಲ. ಇದರಿಂದ ಚಿನ್ನದ ಬೆಲೆಯೂ ಕುಸಿಯುತ್ತದೆ, ಗಗನಕ್ಕೇರಿರುವ ಭೂಮಿಯ ಬೆಲೆಯೂ ಇಳಿಯಲಿದೆ. ಇದೊಂದು ರೀತಿಯ ಆರ್ಥಿಕ ಸುಧಾರಣೆ. ನಮ್ಮ ದೇಶದಲ್ಲಿ ಈವರೆಗೂ ಶೇ.1.78 ರಷ್ಟು ಮಂದಿ ಮಾತ್ರ ತೆರಿಗೆ ಪಾವತಿಸುವವರಿದ್ದಾರೆ. ಇನ್ನು ಮುಂದೆ ತೆರಿಗೆ ಪಾವತಿಸುವವರೂ ಹೆಚ್ಚಾಗುತ್ತದೆ ಮತ್ತು ತೆರಿಗೆಯನ್ನು ಕಡಿತಗೊಳಿಸುವ ಆಲೋಚನೆಯೂ ಸರ್ಕಾರದ ಮಟ್ಟದಲ್ಲಿದೆ. ಸರ್ಕಾರಕ್ಕೆ ಬರುವ ಈ ಹೆಚ್ಚುವರಿ ಹಣದಿಂದ ಆಸ್ಪತ್ರೆ, ಬಡವರ ಮನೆ, ರಸ್ತೆ, ಶಾಲೆ ಮೊದಲಾದ ಮೂಲಭೂತ ಸೌಕರ್ಯಗಳು ಹೆಚ್ಚಲಿವೆ. ಈಗಾಗುತ್ತಿರುವುದು ತಾತ್ಕಾಲಿಕ ತೊಂದರೆಯಷ್ಟೆ. ಸಾಮಾನ್ಯ ಜನರ ಬದುಕು ಹಸನಾಗಲಿದೆ ಎಂದರು.
ಅಪನಗಧೀಕರಣವು ಶುದ್ಧೀಕರಣದ ಆರಂಭವಷ್ಟೆ. ಕಾಳಧನಿಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪ್ರಧಾನಿಯ ಉದ್ದೇಶ ದೇಶವನ್ನು ಬದಲಿಸುವುದು, ಗುರಿಯಿರುವುದು ವ್ಯವಸ್ಥೆಯ ಸುಧಾರಣೆ. ನಮ್ಮ ದೇಶದಲ್ಲಿ 80 ಕೋಟಿ ಮೊಬೈಲ್‌ಗಳಿವೆ. 40 ಕೋಟಿ ಸ್ಮಾರ್ಟ್‌ ಫೋನ್‌ಗಳಿವೆ. ನಮ್ಮಲ್ಲಿ ಅನಕ್ಷರಸ್ಥರಿರಬಹುದು ಆದರೆ ದಡ್ಡರಿಲ್ಲ. ವ್ಯವಸ್ಥೆಯ ಸುಧಾರಣೆಗಾಗಿ ನಗದುರಹಿತ ವ್ಯವಹಾರವನ್ನು ರೂಢಿಸಿಕೊಳ್ಳಬೇಕು. ಇಂದಿರಾಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಿದರು. ಅದರ ಉಪಯೋಗ ಬಡವರಿಗಾಗಲಿಲ್ಲ. ಲಾಭ ಆಗಿದ್ದು, ಕೋಟ್ಯಾಂತರ ಸಾಲ ಮಾಡಿ ದೇಶಬಿಡುವಂಥಹ ಮೋಸಗಾರರಿಗೆ. ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರು ಜನಧನ ಯೋಜನೆ ಜಾರಿಗೆ ಬಡವರು ಬ್ಯಾಂಕ್‌ ಖಾತೆ ಹೊಂದುವಂತಾಯಿತು. ಮುಂದೆ ಬ್ಯಾಂಕ್‌ಗಳಿಂದ ಸುಲಭವಾಗಿ ಕಡಿಮೆ ಬಡ್ಡಿಗೆ ಸಾಲ ಸಿಗಲಿದೆ ಎಂದರು.
ಬಿಜೆಪಿ ಯುವಮೋರ್ಚಾದ ಆನಂದ್‌, ನಗದುರಹಿತ ವ್ಯವಹಾರಗಳು, ಮೊಬೈಲ್‌ನಿಂದ ಹಣ ಕಳುಹಿಸುವ ವ್ಯವಸ್ಥೆಯ ಬಗ್ಗೆ ವಿವರಿಸಿದರು.
ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಭರತ್‌ರೆಡ್ಡಿ, ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್‌, ಪ್ರಧಾನ ಕಾರ್ಯದರ್ಶಿ ತರಬಳ್ಳಿ ಭಾಸ್ಕರರೆಡ್ಡಿ, ತಮ್ಮೇಗೌಡ, ತೇಜಸ್ವಿ ಸೂರ್ಯ, ಜ್ಯೋತಿರೆಡ್ಡಿ, ಆನಂದ್‌, ಶ್ರೀರಾಮರೆಡ್ಡಿ, ಗೋಪಿನಾಥ್‌, ಮುರಳೀಧರ್‌, ಮುನಿರಾಜು, ಎಚ್‌.ಸುರೇಶ್‌, ಸುರೇಂದ್ರಗೌಡ, ಬೈರಾರೆಡ್ಡಿ, ಡಾ.ಡಿ.ಟಿ.ಸತ್ಯನಾರಾಯಣ್‌, ಪ್ರತಾಪ್‌, ನರೇಶ್‌, ಸಿ.ವಿ.ಲೋಕೇಶ್‌ಗೌಡ, ರಾಮರೆಡ್ಡಿ, ಬೈರೇಗೌಡ, ಸದಾಶಿವ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಎತ್ತಿನಹೊಳೆ ಶ್ವೇತಪತ್ರ ಹೊರಡಿಸಿ: ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಯಲು ಸೀಮೆಯ ಭಾಗಕ್ಕೆ ನೀರು ಬೇಕಿದೆ. ಬಿಜೆಪಿ ಪಕ್ಷವು ಇದನ್ನು ಬೆಂಬಲಿಸುತ್ತದೆ. ಎತ್ತಿನಹೊಳೆ ಯೋಜನೆ ದುಡ್ಡು ಹೊಡೆಯುವ ಯೋಜನೆ ಆಗಬಾರದು. ಇದರ ಖರ್ಚು ವೆಚ್ಚಗಳ ಲೆಕ್ಕಪತ್ರವನ್ನು ಶ್ವೇತಪತ್ರ ಹೊರಡಿಸುವ ಮೂಲಕ ಜನರಿಗೆ ತಿಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.
2000 ರೂ ನೋಟಿಗೂ ಆಯಸ್ಸು ಕಡಿಮೆ: ‘2000 ರೂ ನೋಟುಗಳನ್ನೇ ಏಕೆ ಮಾಡಿದರು ಎಂದು ಆಲೋಚನೆ ಮಾಡಿ. ಇದಕ್ಕೂ ಆಯಸ್ಸು ನಿಗದಿಯಾಗಿದೆ. ರಂಗೋಲಿ ಕೆಳಗೆ ನುಸುಳುವವರು ಈ ನೋಟುಗಳನ್ನು ಕ್ರೂಡೀಕರಿಸುತ್ತಿದ್ದರೆ ಅಥಹವರ ಕಡಿವಾಣಕ್ಕೆ ಎಲ್ಲ ಸಿದ್ಧತೆ ನಡೆದಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!