ತಾಲ್ಲೂಕಿನ ಪ್ರಗತಿಪರ ರೈತರೊಬ್ಬರಿಗೆ ಕನ್ನಡ ಚಲನಚಿತ್ರವೊಂದರ ಸಿಡಿ ಬಿಡುಗಡೆಗೊಳಿಸುವ ಅವಕಾಶ ಈಚೆಗೆ ಲಭಿಸಿದೆ.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಚ್.ಜಿ.ಗೋಪಾಲಗೌಡ ಅವರು ಈಚೆಗೆ ವಿಧಾನಸೌಧದ ಮುಂದೆ ‘ಧೈರ್ಯ‘ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಮಾಡಿದರು.
‘ಒಬ್ಬ ರೈತ, ಯೋಧ ಮತ್ತು ವಿದ್ಯಾರ್ಥೀಯನ್ನು ಕರೆಸಿ ಗೌರವಿಸಿ ಸಿಡಿ ಬಿಡುಗಡೆ ಮಾಡಿದರು. ಅದರಲ್ಲೂ ವಿಧಾನಸೌಧದ ಮುಂಭಾಗದಲ್ಲಿಯೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಿನಿಮಾ ರಂಗದವರು ನನ್ನಂಥ ಹಳ್ಳಿಯಲ್ಲಿರುವ ರೈತನನ್ನು ಕರೆಸಿದ್ದು ಗೌರವಿಸಿದ್ದು ಸಂತಸ ತಂದಿದೆ’ ಎನ್ನುತ್ತಾರೆ ಎಚ್.ಜಿ.ಗೋಪಾಲಗೌಡ.
ನಿರ್ಮಾಪಕ ಡಾ.ಕೆ.ರಾಜು, ನಿರ್ದೇಶಕ ಶಿವತೇಜಸ್, ನಾಯಕ ನಟ ಅಜಯ್‌ರಾವ್, ನಾಯಕಿ ಅದಿತಿ ಪ್ರಭುದೇವ, ಸಂಗೀತ ನಿರ್ದೇಶಕ ಎಮಿಲ್, ಯೋಧ ಗುರುಪ್ರಸಾದ್, ವಿದ್ಯಾರ್ಥಿ ಲಿಖಿತ್‌ರಾಜ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -