ನಗರಸಭೆಗೆ ಬಿಡುಗಡೆ ಆದ ವಿವಿಧ ಬಾಬ್ತಿನ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಜತೆಗೆ ಸಕಾಲಕ್ಕೆ ಪ್ರಗತಿಯ ವರದಿಯನ್ನು ಸಲ್ಲಿಸಿಲ್ಲ. ಹಾಗಾಗಿ ಶಿಡ್ಲಘಟ್ಟ ನಗರಸಭೆಗೆ ಅನುದಾನ ನಿಲ್ಲಿಸುವುದಾಗಿ ಯೋಜನಾ ನಿರ್ದೆಶಕರು ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ತುರ್ತು ಸಭೆಯನ್ನು ಕರೆಯಲಾಗಿತ್ತು.
ನಗರಸಭೆ ಅಧ್ಯಕ್ಷ ಬಿ.ಅಪ್ಸರ್‌ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್ ಉಪಸ್ಥಿತಿಯಲ್ಲಿ ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿ ಪ್ರಗತಿಯ ವರದಿಯನ್ನು ನೀಡಲು ಗಡುವು ನೀಡಿ ಎಲ್ಲ ಅಧಿಕಾರಿಗಳಿಗೂ ನೊಟೀಸ್ ನೀಡಲಾಯಿತು.
ಸ್ವಚ್ಚ ಭಾರತ್, ಎಸ್‌ಎಫ್‌ಸಿ ಅನುದಾನ, ನಗರೋತ್ಥಾನ ಯೋಜನೆ ೨ನೇ ಹಂತ, ಶೇ ೨೪.೧೦ ಸೇರಿದಂತೆ ವಿವಿದ ಯೋಜನೆಗಳ ಅನುದಾನವನ್ನು ಬಳಸಿಕೊಳ್ಳದ ಹಾಗೂ ಪ್ರಗತಿಯ ವರದಿಯನ್ನು ಸಲ್ಲಿಸದ ಬಗ್ಗೆ ಅಧಿಕಾರಿಗಳ ವಿರುದ್ದ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
‘ನಿಮ್ಮಿಂದಾಗಿ ನಾವು ತಲೆ ತಗ್ಗಿಸಬೇಕಾಗಿದೆ. ನಿಮ್ಮಿಂದ ಕೆಲಸ ಮಾಡಲು ಆಗದಿದ್ದರೆ ದಯ ಮಾಡಿ ವರ್ಗಾವಣೆ ಮಾಡಿಸಿಕೊಂಡು ಬೇರೆ ಎಲ್ಲಾದರೂ ಹೋಗಿ, ನಾವು ಬೇರೆ ಅಧಿಕಾರಿಗಳಿಂದ ಕೆಲಸ ತೆಗೆಸಿಕೊಳ್ಳುತ್ತೇವೆ’ ಎಂದು ಅಧ್ಯಕ್ಷ ಬಿ.ಅಪ್ಸರ್ ಪಾಷ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು.
ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಹರೀಶ್, ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ನಗರಸಭೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.
- Advertisement -
- Advertisement -
- Advertisement -