20.6 C
Sidlaghatta
Tuesday, July 15, 2025

ಬಯಲು ಸೀಮೆ ರೈತ ಮಕ್ಕಳ ಯುವಶಕ್ತಿಯ ಗರ್ಜನೆ – ಬೃಹತ್‌ ಬೈಕ್‌ ರ್ಯಾಬಲಿ

- Advertisement -
- Advertisement -

ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾರ್ಗದರ್ಶನದಲ್ಲಿ ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಬಯಲು ಸೀಮೆ ರೈತ ಮಕ್ಕಳ ಯುವಶಕ್ತಿಯ ಗರ್ಜನೆ ಡಿಸೆಂಬರ್‌ 17ರ ಶನಿವಾರ ಕೋಲಾರದ ಸರ್ವಜ್ಞ ಪಾರ್ಕ್‌ನ ನಿರಂತರ ಧರಣಿ ವೇದಿಕೆಯಲ್ಲಿ ಮೊಳಗಲಿದೆ ಎಂದು ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಭೆಯನ್ನು ಸೇರಿದ್ದ ಯುವಶಕ್ತಿ ಸದಸ್ಯರು ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರೊಂದಿಗೆ ಚರ್ಚಿಸಿದ ನಂತರ ಅವರು ಮಾತನಾಡಿದರು.
ನಿರಂತರ ಬರಗಾಲಕ್ಕೆ ತುತ್ತಾಗಿರುವ ಬಯಲು ಸೀಮೆಯ ನಮ್ಮ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಾಗಿ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರ್ಕಾರದಿಮದ ನಮಗೆ ನ್ಯಾಯ ದೊರಕಿಲ್ಲ. ಅಂತರ್ಜಲ ಈಗಾಗಲೇ ಪಾತಾಳಕ್ಕೆ ಕುಸಿದಿದ್ದು, ಶುದ್ಧ ಕುಡಿಯುವ ನೀರು ಮತ್ತು ಕೃಷಿಗಾಗಿ ನೀರಿನ ಭದ್ರತೆಯಿಲ್ಲದೆ ಜನರು ಕಷ್ಟದಲ್ಲಿದ್ದಾರೆ.
ಕೊಳವೆ ಬಾವಿಗಳ ಮೂಲಕ ಸಾಲಕ್ಕೆ ಸಿಲುಕಿ ನಮ್ಮ ರೈತರು ಆತ್ಮಹತ್ಯೆಯ ದಾರಿಯಲ್ಲಿದ್ದಾರೆ. ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತು ಬಯಲುಸೀಮೆಯ ವಿದ್ಯಾವಂತ ಯುವಜನತೆ ಮತ್ತು ರೈತ ಮಕ್ಕಳ ಸಂಘಟನೆಯಾದ ಯುವಶಕ್ತಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾರ್ಗದರ್ಶನದಲ್ಲಿ ನೀರಾವರಿ ಹೋರಾಟಕ್ಕೆ ಧುಮುಕಿದ್ದು, ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನ ರೈತ ಮಕ್ಕಳ ಸಮಾವೇಶ ಸೇರಿದಂತೆ ವಿವಿಧ ಹೋರಾಟಗಳಲ್ಲಿ ಭಾಗವಹಿಸಿ ನೀರಿಗಾಗಿ ಯುವಜನತೆಯನ್ನು ಸಂಘಟಿಸುವ ಕಾರ್ಯದಲ್ಲಿ ನಿರತವಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರಗಳನ್ನು ಬಡಿದೆಬ್ಬಿಸಲು ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕೋಲಕಾರದಲ್ಲಿ ನಡೆಯುತ್ತಿರುವ ನಿರಂತರ ಧರಣಿಗೆ ಬೆಂಬಲವಾಗಿ ಡಿಸೆಂಬರ್‌ 17 ರ ಶನಿವಾರದಂದು ಎಲ್ಲಾ ತಾಲ್ಲೂಕುಗಳಿಂದ ಬೃಹತ್‌ ಬೈಕ್‌ ರ್ಯಾವಲಿಯನ್ನು ಆಯೋಜಿಸಲಾಗಿದೆ. ವಿದ್ಯಾವಂತ ಯುವಜನತೆ ಮತ್ತು ರೈತ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಳ್ಳೂರು ಹರೀಶ್‌, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ಆನೂರು ದೇವರಾಜ್‌, ನಾರಾಯಣದಾಸರಹಳ್ಳಿ ಕೃಷ್ಣಪ್ಪ, ಎಂ.ಸುನಿಲ್‌. ಎಂ.ರಮೇಶ್‌, ಮಂಜುನಾಥ್‌, ಅಶೋಕ್‌, ರವಿಚಂದ್ರ, ಮನೋಜ್‌ಕುಮಾರ್‌, ಸುಮಂತ್‌ನಾಯಕ್‌, ಸುಧಾಕರ್‌, ಕುಮಾರ್‌, ಶೇಖರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!