ಸಮಾಜದಲ್ಲಿ ಶಾಂತಿ, ಸೌಹಾರ್ಧ, ಸಾಮರಸ್ಯ, ಸಹಬಾಳ್ವೆ ಮತ್ತು ಸಾಮಾಜಿಕ ಕಳಕಳಿ ಮೂಡಿಸುವುದು ಇಫ್ತಿಯಾರ್ ಕೂಟದ ಮೂಲ ಉದ್ದೇಶವಾಗಿದೆ ಎಂದು ಎಸ್.ಎನ್ ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಬಿಎಸ್‌ಎಂ ಶಾದಿ ಮಹಲ್‌ನಲ್ಲಿ ಶುಕ್ರವಾರ ಎಸ್.ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಮುಸ್ಲಿಂ ಬಾಂಧವರಿಗೆ ಉಚಿತವಾಗಿ ಅಕ್ಕಿ, ಎಣ್ಣೆ, ಶಾವಿಗೆ, ಬೇಳೆ, ಸಕ್ಕರೆ ಮುಂತಾದ ಪಡಿತರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡವರ ಸಂತೋಷದಲ್ಲಿ ನಾವು ಸಂತೋಷವನ್ನು ಕಾಣಬೇಕು. ಮುಸ್ಲಿಂ ಬಾಂಧವರು ಒಂದು ತಿಂಗಳ ಕಾಲ ದ್ವೇಷ, ವ್ಯಾಮೋಹ, ಮತ್ಸರಗಳನ್ನು ಬಿಟ್ಟು ಉಪವಾಸವಿದ್ದು ದೇವರ ಪ್ರಾರ್ಥನೆಯಲ್ಲಿ ತಲ್ಲೀನವಾಗಿರುತ್ತಾರೆ, ಇಂತಹ ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಬಡವರಿಗೆ ಪಡಿತರ ವಿತರಣೆಯನ್ನು ಮಾಡುತ್ತಿರುವುದು ಸಂತೋಷಕರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಿಕ ಸೇವೆಗಳನ್ನು ಕೈಗೊಳ್ಳುವುದರ ಮೂಲಕ ಬಡವರ ಸೇವೆ ಮಾಡಲಾಗುವುದು ಎನ್ನುತ್ತಾ ತಾಲ್ಲೂಕಿನ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಬಾಷಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಸುಮಾರು ೨,೦೦೦ ಹೆಚ್ಚು ಬಡ ಮುಸ್ಲಿಂ ಬಾಂಧವರಿಗೆ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆನೂರು ದೇವರಾಜ್, ಅಬ್ದುಲ್ ಅಜೀಜ್, ಬಾಷಾ ಸಾಬ್, ರಿಯಾಜ್‌ಬಾಷ, ಪೀರಾನ್‌ಸಾಬ್, ಅಕ್ಬರ್ ಸಾಬ್, ಅತಾವುಲ್ಲಾ ಸಾಬ್, ಚಾಂದ್‌ಪಾಷ, ಬಷೀರ್‌ಸಾಬ್, ವಜೀರ್‌ಪಾಷ, ಫಕೀರ್‌ಖಾನ್ ಫರ್ವರಿ, ಸರ್ದಾರ್‌ಖಾನ್, ಸೈಯದ್, ಮುನಿರ್‌ಸಾಬ್, ಅಮ್ಜದ್, ಅಕ್ಬರ್‌ಸಾಬ್, ಮುಸ್ತಿರ ಮಹಮದ್ ಸಾಬ್, ಶಫಿವುಲ್ಲಾ ಸಾಬ್, ದಸ್ತಗಿರಿ ಸಾಬ್, ಅಯುಬ್, ಮದೀನ್ ಸಾಬ್ ಹಾಜರಿದ್ದರು.
- Advertisement -
- Advertisement -
- Advertisement -