20.9 C
Sidlaghatta
Tuesday, July 15, 2025

ಸರ್.ಎಂ.ವಿ ಮನುಕುಲದ ಮಾರ್ಗದರ್ಶಕ

- Advertisement -
- Advertisement -

ದೇಶ ಕಟ್ಟಿದ ವಿಶ್ವಮಾನ್ಯ ವಿಶ್ವೇಶ್ವರಯ್ಯ ನವ ಭಾರತ ಶಿಲ್ಪಿ. ಸಮಾಜಕ್ಕಾಗಿ ದುಡಿದ ಮೇಧಾವಿ. ಮನುಕುಲದ ಮಾರ್ಗದರ್ಶಕ ಎಂದು ಕಸಾಪ ಮಾಜಿ ಜಿಲ್ಲಾ ಕಾರ್ಯದರ್ಶಿ ಅಮೃತ್ ಕುಮಾರ್ ತಿಳಿಸಿದರು.
ನಗರದ ನಗರೇಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ಶನಿವಾರ ತಾಲ್ಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕೆಲಸವೇ ಪೂಜೆ, ರಾಷ್ಟ್ರಸೇವೆಯೇ ಶಿಕ್ಷಣ ಮತ್ತು ಜ್ಞಾನ ಸಂಪಾದನೆಯ ಗುರಿಯಾಗಲಿ’ ಎಂದು ಸಂದೇಶ ನೀಡಿರುವ ಸರ್.ಎಂ.ವಿ ಅವರ ಶ್ರದ್ಧೆ, ವೈಚಾರಿಕ ಪ್ರಜ್ಞೆ, ಪ್ರಾಮಾಣಿಕತೆ, ಧೈರ್ಯ, ನಿಷ್ಠುರತೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ನಾವು ಮಾಡುವ ಕೆಲಸದ ಬಗ್ಗೆ ನಮಗಿರಬೇಕಾದ ಶ್ರದ್ದೆಯ ಕುರಿತು ಅತ್ಯಂತ ಪರಿಣಾಮಕಾರಿಯಾಗಿ ಅವರು ತಿಳಿಸಿಕೊಟ್ಟಿದ್ದಾರೆ. 1915ರಲ್ಲಿಯೇ ಕನ್ನಡ ಸಾಹಿತ್ಯ ಪರಿಶತ್ತನ್ನು ಶುರುವಿಡುವ ಮೂಲಕ ಕನ್ನಡ ನುಡಿಗೊಂದು ಗಟ್ಟಿ ಅಡಿಪಾಯವನ್ನು ಹಾಕಿಕೊಟ್ಟ ಈ ಮಹಾ ಚೇತನನ್ನು ಕಡ್ಡಾಯವಾಗಿ ಕನ್ನಡಿಗರು ನೆನೆಯಲೇಬೇಕು ಎಂದು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕು ಕಸಾಪ ಘಟಕದ ವತಿಯಿಂದ ನಗರೇಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸರ್.ಎಂ.ವಿ ಅವರ ಬದುಕು ಸಾಧನೆ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ತಾಲ್ಲೂಕಿನ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಶಿಡ್ಲಘಟ್ಟ ತಾಲ್ಲೂಕು ಕಸಾಪ ಘಟಕದ ವತಿಯಿಂದ ನಗರೇಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸರ್.ಎಂ.ವಿ ಅವರ ಬದುಕು ಸಾಧನೆ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ತಾಲ್ಲೂಕಿನ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ತುಕ್ಕು ಹಿಡಿದು ಹೋಗಬೇಡಿ, ಜೀವನವನ್ನು ಕಾಯಕನಿಷ್ಠೆಯಿಂದ ಗಂಧ ತೇಯ್ದು ಕಂಪನ್ನು ಬೀರುವಂತೆ ಜೀವಿಸುವಂತೆ ಸರ್.ಎಂ.ವಿ ತಿಳಿಸಿದ್ದಾರೆ. ವಿಶ್ವೇಶ್ವರಯ್ಯ ಅವರ ಬದುಕನೊಮ್ಮೆ ಗಮನಿಸಿದಾಗ ಒಬ್ಬರ ಬದುಕಿನಲ್ಲಿ ಇಷ್ಟೊಂದೆಲ್ಲಾ ಸಾದನೆಗಳನ್ನು ಮಾಡಲು ಸಾದ್ಯವೇ ಎಂದು ಉದ್ಗಾರವೂ ಮೂಡುತ್ತದೆ. ಇಂತಹ ಸಾರ್ಥಕ ಜೀವನವೊಂದನ್ನು ನಡೆಸಿದ ಅವರ ಜೀವನವೇ ಒಂದು ಪಾಠಶಾಲೆಯಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಾದ ಬುಡ್ಡೂಸಾಬಿ, ಎಂ.ಎನ್.ಮಂಜುನಾಥ್ ಮತ್ತು ಕಳೆದ ಸಾಲಿನ ಪ್ರಶಸ್ತಿ ವಿಜೇತ ಶಿಕ್ಷಕ ಹನುಮಂತಪ್ಪ ಅವರನ್ನು ತಾಲ್ಲೂಕು ಕಸಾಪ ಘಟಕದ ದತ್ತಿ ಕಾರ್ಯಕ್ರಮದ ಅಡಿಯಲ್ಲಿ ಸನ್ಮಾನಿಸಲಾಯಿತು.
‘ಸರ್.ಎಂ.ವಿಶ್ವೇಶ್ವರಯ್ಯ ಅವರ ಬದುಕು ಮತ್ತು ಸಾಧನೆ’ ಕುರಿತಂತೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ತಾಲ್ಲೂಕಿನ ತುಮ್ಮನಹಳ್ಳಿ, ಚೀಮಂಗಲ, ಕುಂದಲಗುರ್ಕಿ, ವರದನಾಯಕನಹಳ್ಳಿ ಯೂನಿವರ್ಸಲ್ ಶಾಲೆ, ಮೇಲೂರು ಮುತ್ತೂರು, ಕ್ರೆಸೆಂಟ್, ವಾಸವಿ, ನಡಿಪಿನಾಯಕನಹಳ್ಳಿ ಪ್ರೌಢಶಾಲೆಗಳ ತಲಾ ಮೂವರು ವಿದ್ಯಾರ್ಥಿಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಕಸಾಪ ಜಂಗಮಕೋಟೆ ಹೋಬಳಿ ಘಟಕದ ಉಪಾಧ್ಯಕ್ಷ ಬೆಳ್ಳೂಟಿ ರಮೇಶ್ ಕಾರ್ಯಕ್ರಮದಲ್ಲಿ ಹಾಜರಿದ್ದ ಐ.ಟಿ.ಐ ವಿದ್ಯಾರ್ಥಿಗಳು ಹಾಗೂ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸರ್.ಎಂ.ವಿ ಅವರ ಜನ್ಮದಿನಾಚರಣೆಯ ಪ್ರಯುಕ್ತ ಸಿಹಿ ವಿತರಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಖಜಾಂಚಿ ಸತೀಶ್, ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಸದಸ್ಯರಾದ ಮುನಿರಾಜು, ಸ್ನೇಕ್ ನಾಗರಾಜು, ಮುನಿಯಪ್ಪ, ರಮೇಶ್, ದೇವರಾಜು, ವಿ.ಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!