ನಾಡು ನುಡಿಯ ಬಗ್ಗೆ ಜಾಗೃತಿ ಕಾರ್ಯಕ್ರಮ

- Advertisement -
- Advertisement -

ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಬಗೆಗೆ ಪ್ರೀತಿ, ಅಭಿಮಾನ, ಗೌರವವನ್ನು ಹೊಂದೋಣ. ಕನ್ನಡ ಮತ್ತು ಕರ್ನಾಟಕದ ಏಳಿಗೆಯಲ್ಲಿ ನಮ್ಮ ಏಳಿಗೆಯಿದೆ ಎಂದು ದೊಡ್ಡಬಳ್ಳಾಪುರ ನಾಗದಳ ಮತ್ತು ತಾಲ್ಲೂಕು ಬಳಕೆದಾರರ ಹಿತರಕ್ಷಣಾ ಸಂಘದ ಟ್ರಸ್ಟ್‌ ಸದಸ್ಯರು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಗರದ ಡಾಲ್ಫಿನ್‌ ವಿದ್ಯಾಸಂಸ್ಥೆಗೆ ಸೈಕಲ್‌ ಜಾಥಾ ಮೂಲಕ ದೊಡ್ಡಬಳ್ಳಾಪುರದಿಂದ ಗುರುವಾರ ಆಗಮಿಸಿದ್ದ ಅವರು ಕನ್ನಡ ಭಾಷೆಯ ಹಿರಿಯ ಕುರಿತಂತೆ ಮಾತನಾಡಿದರು.
ಕನ್ನಡ ರಾಜ್ಯೋದಯದ ವಜ್ರ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ನಾವು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಾಲೆಗಳಿಗೆ ಸೈಕಲ್‌ ಜಾಥಾ ಮೂಲಕ ತೆರಳಿ ನಮ್ಮ ಭಾಷೆ, ನಮ್ಮ ನಾಡಿನ ಹಿರಿಮೆಯ ಬಗ್ಗೆ ವಿವರಿಸುತ್ತಿದ್ದೇವೆ. ಕನ್ನಡ ನುಡಿಯ ವಿಚಾರ ಬಂದಾಗ ಸಡಗರದ ವೇದಿಕೆಗಳಲ್ಲೀ ಸಂಕಟದ, ವೇದನೆಯ ಮಾತುಗಳನ್ನು ಆಡಲಾಗುತ್ತದೆ. ಹಾಗಾಗಿ ಕನ್ನಡ ಭಾಷೆಯ ಸಾಧನೆಗಳನ್ನು ಜನತೆಗೆ ತಿಳಿಸಿ ಅವರ ಅಭಿಮಾನ ಕ್ರಿಯಾಶೀಲವಾಗುವಂತೆ ಮಾಡಲೆಂದು ಗಡಿನಾಡಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೈಕಲ್‌ ಜಾಥ ಹಮ್ಮಿಕೊಂಡಿದ್ದೇವೆ.
ಅತ್ಯಂತ ಪ್ರಾಚೀನ ಮತ್ತು ಸುಂದರ ಲಿಪಿಯನ್ನು ಹೊಂದಿರುವ ಕನ್ನಡ ಭಾಷೆ. ಭಾಷೆ ಬೆಳೆಯುವುದು ನಾವು ಬಳಸಿದಾಗ ಮಾತ್ರ. ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಅಭಿಮಾನವನ್ನು ಹೊಂದಬೇಕು. ಆದಷ್ಟೂ ಕನ್ನಡದಲ್ಲೇ ಸಂಭಾಷಿಸಿ. ಮೊಬೈಲ್‌, ಇಂಟರ್‌ನೆಟ್‌ ಮೊದಲಾದೆಡೆ ಕನ್ನಡವನ್ನೇ ಬಳಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಕರ್ನಾಟದಕ ಬಗ್ಗೆ ವಿವಿಧ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ನಂತರ ಪ್ರಶ್ನೆಗಳನ್ನು ಕೇಳಿ ಸರಿಯುತ್ತರ ನೀಡಿದವರಿಗೆ ಬಹುಮಾನವಾಗಿ ಪುಸ್ತಕವನ್ನು ನೀಡಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!