ಸಮತಾ ಸೈನಿಕ ದಳ ನಾರಾಯಣದಾಸರಹಳ್ಳಿ ಗ್ರಾಮ ಶಾಖೆ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ

Sidlaghatta Samata Party Chikkadasarahalli

ಬಡತನಗಳಿಂದ ಬದುಕುತ್ತಿರುವ ತಳ ಸಮುದಾಯಗಳ ಜನರು ಗೌರವದಿಂದ ಎಲ್ಲರಂತೆ ಬದುಕಿ ಬಾಳಲು ಶಿಕ್ಷಣದ ಅಸ್ತ್ರವನ್ನು ಹೊಂದಬೇಕು. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯುವ ಮೂಲಕ ಸ್ವಾಭಿಮಾನದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸಮತಾ ಸೈನಿಕ ದಳ ತಾಲ್ಲೂಕು ಅಧ್ಯಕ್ಷ ಈ ಧರೆ ಪ್ರಕಾಶ್ ತಿಳಿಸಿದರು.

 ತಾಲ್ಲೂಕು ಸಮತಾ ಸೈನಿಕ ದಳ ವತಿಯಿಂದ ನಾರಾಯಣದಾಸರಹಳ್ಳಿ ಗ್ರಾಮದಲ್ಲಿ ಗ್ರಾಮ ಶಾಖೆ ರಚನೆ ಮಾಡಿ, ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

 ಪ್ರತಿಯೊಬ್ಬರೂ ಸಮಾನತೆಯಿಂದ ಬದುಕಲೆಂದು ವಿಶ್ವಶ್ರೇಷ್ಠ ಸಂವಿಧಾನವನ್ನು ಕೊಡುಗೆ ನೀಡಿದ  ಜ್ಞಾನ ಜ್ಯೋತಿ ಡಾ. ಬಿ.ಆರ್ ಅಂಬೇಡ್ಕರ್ ರವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಅವರ ತತ್ವ ಸಿದ್ದಾಂತಗಳನ್ನು ಅರಿಯಲು ಅವರ ಜೀವನ ಚರಿತ್ರೆಯನ್ನು ಓದಿ ತಿಳಿಯಬೇಕಿದೆ. ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಸಮತಾ ಸೈನಿಕದಳ ಗೌರವಾಧ್ಯಕ್ಷ ಪಿಂಡಿಪಾಪನಹಳ್ಳಿ ಮುನಿಆಂಜಿನಪ್ಪ, ಪ್ರಧಾನಕಾರ್ಯದರ್ಶಿ ಜೆ.ವೆಂಕಟಾಪುರ ವಿಜಯಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೊಣ್ಣೇನಹಳ್ಳಿ ವೆಂಕಟೇಶಪ್ಪ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಡಿ.ಸಿ ನರಸಿಂಹಮೂರ್ತಿ, ತಾಲ್ಲೂಕು ಯುವ ಘಟಕ ಅಧ್ಯಕ್ಷ ವೈ ಹುಣಸೇನಹಳ್ಳಿ ವೇಣುಗೋಪಾಲ್, ಜಂಗಮಕೋಟೆ ಹೋಬಳಿ ಪ್ರಧಾನಕಾರ್ಯದರ್ಶಿ ಬಾಲಚಂದ್ರ, ಗ್ರಾಮದ ಹಿರಿಯ ಮುಖಂಡರಾದ ನಾರಾಯಣಪ್ಪ, ಚಿಕ್ಕಮುನಿಯಪ್ಪ ಹಾಜರಿದ್ದರು.

 ಪದಾಧಿಕಾರಿಗಳ ಆಯ್ಕೆ :

ಅಧ್ಯಕ್ಷರಾಗಿ ಚೌಡಪ್ಪ, ಗೌರವಾಧ್ಯಕ್ಷ ಗಂಗರೆಡ್ಡಿ, ಕಾರ್ಯಾಧ್ಯಕ್ಷ ಆರ್. ಬಾಲಾಜಿ, ಪ್ರಧಾನ ಕಾರ್ಯದರ್ಶಿ ರಾಜು, ಖಜಾಂಚಿ ಮಾರೇಶ, ಉಪಧ್ಯಕ್ಷರಾಗಿ ಹರಿಪ್ರಸಾದ್, ನಿತೀನ್ ಕುಮಾರ್, ರವಿಕುಮಾರ್, ಪ್ರಶಾಂತ್. ವಿ, ಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾಗಿ ದೇವರಾಜ್, ಆನಂದ್, ಅಶೋಕ್, ನವೀನ್ ಆಯ್ಕೆಯಾದರು.

Leave a Reply

Your email address will not be published. Required fields are marked *

error: Content is protected !!