Sidlaghatta : ಕಳೆದ ಶುಕ್ರವಾರ ಸಾಮೂಹಿಕ ನಾಯಕತ್ವದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭಕ್ತರಹಳ್ಳಿ ಪ್ರತೀಶ್ ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಸಾಮೂಹಿಕ ನಾಯಕತ್ವದ ರೈತ ಸಂಘದ ಸದಸ್ಯರು ಭಾನುವಾರ ಗ್ರಾಮಾಂತರ ಪೊಲೀಸ್ ಎಸ್.ಐ ಸತೀಶ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಭಕ್ತರಹಳ್ಳಿ ಪ್ರತೀಶ್ ಅವರ ಮೇಲೆ ಪ್ರಾಣಾಂತಿಕವಾಗಿ ಅದೇ ಗ್ರಾಮದ ಐವರು ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಶಿವರಾಜ್ ಹಾಗೂ ಕುಟುಂಬದ ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ. ಪ್ರತೀಶ್ ಅವರು ಆಸ್ಪತ್ರೆಯಲ್ಲಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ಆಧಾರದ ಮೇಲೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಅವರ ಕುಟುಂಬಕ್ಕೆ ರಕ್ಷಣೆ ಸಹ ನೀಡಬೇಕೆಂದು ಮನವಿ ಮಾಡಿದರು.
ಸಾಮೂಹಿಕ ನಾಯಕತ್ವದ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮುನಿಕೆಂಪಣ್ಣ, ಬಾಬು, ಎಚ್.ಎನ್.ಕದಿರೇಗೌಡ, ಭೀಮಣ್ಣ, ನಾರಾಯಣಸ್ವಾಮಿ, ಆಂಜಿನಪ್ಪ, ರಾಮಾಂಜಿನಪ್ಪ, ಲಕ್ಷ್ಮಮ್ಮ, ತಾಯಮ್ಮ, ರಾಮಾಂಜಪ್ಪ, ವರದರಾಜು ಹಾಜರಿದ್ದರು.