20.1 C
Sidlaghatta
Tuesday, December 10, 2024

ಬಾಲ್ಯವಿವಾಹ ನಿಷೇಧದ ಕುರಿತು ಬೃಹತ್ ಸಮುದಾಯ ಜಾಗೃತಿ ಜಾಥಾ

Officials, Staff, and Organizations Collaborate to Tackle Social Issue

- Advertisement -
- Advertisement -

Sidlaghatta : ದೇಶದ ಸಾಮಾಜಿಕ ಪಿಡುಗುಗಳಲ್ಲೊಂದಾದ ಬಾಲ್ಯವಿವಾಹ ತಡೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿ ಮಾತ್ರ ಶ್ರಮಿಸಿದರೆ ಸಾಲದು ಬದಲಿಗೆ ಪ್ರತಿಯೊಬ್ಬ ಸಾರ್ವಜನಿಕರು ಬಾಲ್ಯವಿವಾಹ ತಡೆಗಟ್ಟಲು ಸಹಕರಿಸಬೇಕು ಎಂದು ತಹಸೀಲ್ದಾರ್ ಬಿ.ಎನ್.ಸ್ವಾಮಿ ಹೇಳಿದರು.

ಶಿಡ್ಲಘಟ್ಟ ತಾಲ್ಲೂಕು ಆಡಳಿತ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧದ ಕುರಿತು ಬೃಹತ್ ಸಮುದಾಯ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಅನಾಧಿ ಕಾಲದಿಂದಲೂ ಬಾಲ್ಯವಿವಾಹ ಎನ್ನುವುದು ದೇಶಕ್ಕೆ ಕಾಡುತ್ತಿರುವ ಸಾಮಾಜಿಕ ಸಮಸ್ಯೆಯಾಗಿದೆ. ಇದರಿಂದ ಪ್ರೌಡಾವಸ್ಥೆಗೆ ಬರುವ ಮುನ್ನವೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದರಿಂದ ಅವರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮದಿಂದ ಆ ಹೆಣ್ಣು ಮಕ್ಕಳು ಜೀವನವಿಡೀ ಅನಾರೋಗ್ಯದಿಂದ ಬಳಲುವುದು ಸೇರಿದಂತೆ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಹೆಚ್ಚುತ್ತದೆ. ಹಾಗಾಗಿ ಯಾರೊಬ್ಬರೂ ಬಾಲ್ಯವಿವಾಹ ಮಾಡುವುದನ್ನು ಪ್ರೋತ್ಸಾಹಿಸಬಾರದು ಎಂದರು.

ತಾ.ಪಂ ಇಓ ಜಿ.ಮುನಿರಾಜ ಮಾತನಾಡಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಅವರ ಜೀವನ ಅವರು ರೂಪಿಸಿಕೊಳ್ಳುವ ಸಾವಿರಾರು ಅವಕಾಶಗಳಿವೆ. ಹಾಗಾಗಿ ಯಾರೊಬ್ಬರೂ ಹೆಣ್ಣು ಮಕ್ಕಳಿಗೆ 18 ವರ್ಷಕ್ಕಿಂತ ಮೊದಲು ವಿವಾಹ ಮಾಡಬಾರದು. ತಮ್ಮ ಸುತ್ತ ಮುತ್ತಲೂ ಯಾರಾದರೂ ಬಾಲ್ಯವಿವಾಹ ಮಾಡಲು ಮುಂದಾಗುತ್ತಿರುವುದು ಕಂಡುಬಂದಲ್ಲಿ ಬಾಲ್ಯವಿವಾಹ ತಡೆಯಲು ಉಚಿತ ಮಕ್ಕಳ ಸಹಾಯವಾಣಿ ೧೧೨ ಗೆ ಪೋನ್ ಮಾಡಿ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಾಥಾ ಮೂಲಕ ಸಾಗಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗು ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಬದಲ್ಲಿ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಗ್ರೇಡ್ 2 ತಹಸೀಲ್ದಾರ್ ಶ್ರೀನಿವಾಸಲುನಾಯ್ಡು, ಆರೋಗ್ಯ ನಿರೀಕ್ಷಕರಾದ ದೇವರಾಜ್, ಲೋಕೇಶ್, ಮಕ್ಕಳ ಹಕ್ಕುಗಳ ಸಂಸ್ಥೆಯ ನಾಗಸಿಂಹ ಜಿ ರಾವ್, ಕಾಂತರಾಜ್, ಟಿ.ವೆಂಕಟೇಶ್, ರಾಮಕೃಷ್ಣಪ್ಪ, ರವೀಂದ್ರನಾಥ್ ಹಾಜರಿದ್ದರು.


Awareness March to Combat Child Marriage

Sidlaghatta : On Wednesday, a community awareness march was held in Sidlaghatta taluk to address the issue of child marriage, which has long been a pressing social problem in India. Various officials and staff from different departments, such as the taluk administration, taluk panchayat, women and child development department, and health department, collaborated with multiple organizations for this initiative.

During the event, Tehsildar B.N. Swami highlighted that preventing child marriage is not solely the responsibility of concerned department officials and staff. Instead, it requires cooperation from the public to effectively tackle this social issue. Marrying off girls before they reach puberty can lead to adverse health effects and increased mortality rates for both mothers and children. Thus, it is essential for everyone to work towards preventing child marriage.

To raise awareness about the Prohibition of Child Marriage Act, Asha workers, health workers, and other participants actively participated in the march. TAPM EO G. Muniraja also emphasized the importance of providing quality education to girls, as it can offer numerous opportunities to shape their lives. He urged everyone to refrain from marrying girls before they turn 18 and to report any child marriage attempts to the free child helpline number 112.

The event was attended by several prominent figures, including Municipal Commissioner R. Srikanth, Grade 2 Tehsildar Srinivasalunaidu, Health Inspectors Devaraj and Lokesh, and members of the Child Rights Organization Nagasinha G. Rao, Kantaraj, and T. Venkatesh. Overall, the march aimed to educate and engage the community in the fight against child marriage and promote the importance of protecting children’s rights.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!