ಶಿಡ್ಲಘಟ್ಟ ನಗರದಲ್ಲಿ ಬೀಡಿ, ಸಿಗರೆಟ್ ಮಾರಾಟ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಆರೋಗ್ಯ, ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳ ಕೋಟ್ಟಾ ತನಿಖಾ ದಳ ತಂಡದ ಸದಸ್ಯರು, ದಂಡ ವಿಧಿಸುವ ಮೂಲಕ ಬೀಡಿ, ಸಿಗರೆಟ್ ಮಾರಾಟಗಾರರಿಗೆ ಬಿಸಿ ಮುಟ್ಟಿಸಿ ಕೋಟ್ಟಾ ತನಿಖಾ ದಳ ಜಿಲ್ಲಾ ಆಯೋಜಕ ರಾಘವೇಂದ್ರ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ-ಕಾಲೇಜುಗಳ ಬಳಿ ಹಾಗೂ ಚಿಕ್ಕ ಚಿಕ್ಕ ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕಿನ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಅಲ್ಲಿಯೇ ಸೇವನೆ ಮಾಡುವುದನ್ನು ನಿಷೇಧ ಮಾಡುವುದು ಅತ್ಯಗತ್ಯವಾಗಿದೆ. ಆರೋಗ್ಯ ಹಾಳು ಮಾಡುವ ತಂಬಾಕು ಸೇವನೆಯಿಂದ ದೂರ ಉಳಿದು ಆರೋಗ್ಯವಂತ ಸಮಾಜ ನಿರ್ಮಿಸಲು ನಾಗರಿಕರು ಸಹಕಾರ ನೀಡಬೇಕು. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ನಾಮಫಲಕಗಳನ್ನು ಪ್ರತಿ ಅಂಗಡಿ ಮಾಲಿಕರು ಅಳವಡಿಸಬೇಕೆಂದು ತಿಳಿಸಿದರು.
ಶಾಲಾ ಕಾಲೇಜುಗಳಲ್ಲಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ಅಪಾಯಗಳ ಬಗ್ಗೆ ವಿದ್ಯಾರ್ಥಿ, ಯುವ ಜನಾಂಗಕ್ಕೆ ಮನವರಿಕೆ ಮಾಡಬೇಕಾಗಿದೆ. ಚಿಲ್ಲರೆ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಬಗ್ಗೆ ಕಡ್ಡಾಯವಾಗಿ ಸಾರ್ವಜನಿಕರಿಗೆ ಅರಿವು ಉಂಟಾಗುವಂತೆ ಪ್ರದರ್ಶನ ಫಲಕಗಳನ್ನು ಹಾಕಬೇಕೆಂದು ಹೇಳಿದರು.
ನಗರದ ವಿವಿದೆಡೆ ದಿಢೀರ್ ದಾಳಿ ನಡೆಸಿ, ಬೀಡಿ, ಸಿಗರೆಟ್ ಸೇವನೆ ಮಾಡುತ್ತಿದ್ದ ನಾಗರಿಕರಿಗೆ ದಂಡ ವಿಧಿಸಿದರು. ನಂತರ ದಿನಸಿ ಅಂಗಡಿಗಳು ಹಾಗೂ ಗುಟ್ಕಾ ಮತ್ತು ಬೀಡಿ, ಸಿಗರೇಟ್ ಮಾರಾಟ ಅಂಗಡಿ, ಮಳಿಗೆಗಳ ಮೇಲೂ ದಾಳಿ ಮುಂದುವರಿಸಿ ವ್ಯಾಪಾರಸ್ಥರಿಗೆ ದಂಡ ವಿಧಿಸಿದರು. ಅಲ್ಲದೇ, ಮುಂದಿನ ದಿನಗಳಲ್ಲಿ ಮಾರಾಟ ಮಾಡಿದಲ್ಲಿ ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದರು.
ನಗರದಲ್ಲಿ ಒಟ್ಟು 20 ಅಂಗಡಿ ಮಾಲೀಕರಿಗೆ ದಂಡ ವಿಧಿಸಿ, 1320 ರೂ ದಂಡ ವಿಧಿಸಲಾಯಿತು.
ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ನಗರ ಸಭೆ ಆರೋಗ್ಯ ನಿರೀಕ್ಷಕ ರಾಜೇಶ್, ಶಿಕ್ಷಣ ಇಲಾಖೆಯ ತ್ಯಾಗರಾಜು, ಪೊಲೀಸ್ ಇಲಾಖೆಯ ನವಾಜ್ ಅಮ್ಮದ್, ಮೊಹಮ್ಮದ್ ಪಾಷ, ಧನಂಜಯ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi