Home Blog Page 311

ಪೋಷಣ್ ಮಾಸಾಚರಣೆಯ ಅರಿವು ಕಾರ್ಯಕ್ರಮ

0

ಶಿಶು ಅಭಿವೃದ್ಧಿ ಇಲಾಖೆಯಿಂದ ನಗರದ ಸ್ತ್ರೀಶಕ್ತಿ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯೂಷ್ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಪೋಷಣ್ ಮಾಸಾಚರಣೆಯ ಅರಿವು ಕಾರ್ಯಕ್ರಮ ಮತ್ತು ಪೌಷ್ಠಿಕ ಶಿಬಿರವನ್ನು ಉದ್ಘಾಟಿಸಿ ಮಹಿಳಾ ಮತ್ತು ಮಕ್ಕಳಾಭಿವೃದ್ದಿ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿದರು.

ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸಬೇಕು. ಈ ವರ್ಷ ಕೋವಿಡ್-19 ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಪೋಷಣೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ವರ್ಷದ ಪೋಷಣ್ ಮಾಸಾಚರಣೆಯನ್ನು ಯಶಸ್ವಿಗೊಳಿಸಿ ಪೌಷ್ಠಿಕ ಕರ್ನಾಟಕ ನಿರ್ಮಿಸಲು ದೃಢ ಸಂಕಲ್ಪ ಮಾಡಬೇಕೆಂದರು.

 ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರಿಂದ ಪೌಷ್ಠಿಕಾಂಶದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮನೆ ಬೇಟಿ ನೀಡಿ ಅರಿವು ಮೂಡಿಸುವುದು, ಮಕ್ಕಳ ಬೆಳವಣಿಗೆಯ ಕುರಿತು ಪರಿಶೀಲಿಸಿ ಎಲ್ಲಾ ಅಂಗನವಾಡಿಗಳಲ್ಲಿ ಪೌಷ್ಠಿಕ ಕೈತೋಟ ನಿರ್ಮಾಣ ಮಾಡಲು ಸಿದ್ಧತೆಯನ್ನು ನಡೆಸಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಅಂಗನವಾಡಿ ಕಾರ್ಯಕರ್ತರಿಗೆ ಸೂಚಿಸಿದರು.

 ಈ ಸಂದರ್ಭದಲ್ಲಿ ಅಯೂಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಎಸ್.ಸಿ ಪದ್ಮರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೌತಾಜ್, ಪೋಷಣ್ ಅಭಿಯಾನ್ ಯೋಜನೆಯ ಜಿಲ್ಲಾ ಸಂಯೋಜಕ ವಿ.ಶರತ್‍ಬಾಬು, ಜಿಲ್ಲಾ ಸಂಯೋಜಕರು, ಮೇಲ್ವಿಚಾರಕಿಯರು, ಅಯೂಷ್ ಅಧಿಕಾರಿಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ನಿಖಿಲ್ ಕುಮಾರಸ್ವಾಮಿ ಅವರಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಗೆ ಚಾಲನೆ

0

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆ ಮತ್ತು ಜೆಡಿಎಸ್ ಮುಖಂಡ ಬಿ.ಎನ್. ರವಿಕುಮಾರ್ ಅವರ ಅಧಿಕೃತ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನತೆಯ ಕಷ್ಟ, ಸುಖ, ನೋವು, ನಲಿವು, ತೊಂದರೆ, ಕುಂದು-ಕೊರತೆಗಳನ್ನು ಆಲಿಸಲು ಹಾಗೂ ಜನರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಲು ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆ ತುಂಬಾ ಸಹಾಯಕ. ಜನಸೇವೆಗೆ ತಾಂತ್ರಿಕ ಸ್ಪರ್ಶ ಅತ್ಯಗತ್ಯ ಎಂದು ಅವರು ತಿಳಿಸಿದರು.

https://www.facebook.com/SidlaghattaJdsOfficial/
https://www.facebook.com/BNRaviofficial/
https://twitter.com/bnraviofficial?s=11

ಈ ಸಂದರ್ಭದಲ್ಲಿ ಬಿ.ಎನ್.ರವಿಕುಮಾರ್ ಅವರ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸುತ್ತಾ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಜೆಡಿಎಸ್ ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಕರೆ ನೀಡಿದರು.

 ಜೆಡಿಎಸ್ ಯುವ ಮುಖಂಡರಾದ ಬಿ.ಎನ್ ಸಚಿನ್ , ಮಳ್ಳೂರು ರಾಜೇಶ್ ಹಾಜರಿದ್ದರು.

 
 
 

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ 6 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 6 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ದೇಶದಪೇಟೆಯ 35 ವರ್ಷದ ಮಹಿಳೆ, 3 ವರ್ಷದ ಹುಡುಗಿ,
  2. ಹಳೇ ಪೋಸ್ಟ್ ಆಫೀಸ್ ರಸ್ತೆಯ 58 ವರ್ಷದ ಗಂಡಸು,
  3. ಭಕ್ತರಹಳ್ಳಿಯ 70 ವರ್ಷದ ಗಂಡಸು, 56 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
  4. ಸೋಂಕಿತ 61 ವರ್ಷದ ಗಂಡಸಿನ ವಿಳಾಸ ಇನ್ನೂ ಪತ್ತೆಯಾಗಿಲ್ಲ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 25/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 25/09/2020

CB Lots: 638
Qty: 33730 Kgs
Max: 320
Min: 140
Avg: 252
BV Lots: 02
Qty: 151 Kgs
Max: 317
Min: 265
Avg: 301
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (24/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಪುರಾಣ ಪ್ರಸಿದ್ದ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಹಣ ಎಣಿಕೆ

0

ತಾಲ್ಲೂಕಿನ ತಲಕಾಯಲಬೆಟ್ಟದ ಪುರಾಣ ಪ್ರಸಿದ್ದ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಹಣವನ್ನು ಗುರುವಾರ ಎಣಿಕೆ ಮಾಡಲಾಗಿದ್ದು  (8,84,020) 8 ಲಕ್ಷ 84 ಸಾವಿರದ 20 ರೂ ಸಂಗ್ರಹವಾಗಿದೆ.

ತಹಶೀಲ್ದಾರ್ ಕೆ.ಅರುಂಧತಿ ನೇತೃತವದ ಕಂದಾಯ ಇಲಾಖೆ ಅಧಿಕಾರಿಗಳಿಂದ ಹುಂಡಿ ಹಣ ಎಣಿಕೆ ಕಾರ್ಯ ಗುರುವಾರ ಬೆಳಗ್ಗೆಯಿಂದಲೇ ನಡೆಯಿತು.

ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿದೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಣ ಮಾಸದಲ್ಲಿ ಆಗಮಿಸಿ ಪೂಜೆ ಸಲ್ಲಿಸುವ ಜೊತೆಗೆ ದೇವರಿಗೆ ಸಮರ್ಪಿಸಿದ್ದ ಕಾಣಿಕೆ ಹಣದ ಹುಂಡಿ ತುಂಬಿದ್ದ ಹಿನ್ನಲೆಯಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ನಡೆಯಿತು.

ಕಳೆದ ಮಾರ್ಚ್ 16 ರಂದು ಹುಂಡಿ ಹಣ ಎಣಿಕೆ ಮಾಡಲಾಗಿತ್ತು. ಆರು ತಿಂಗಳ ನಂತರ ಇಂದು ಗುರುವಾರ ಹುಂಡಿ ಎಣಿಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಸಾದಲಿ ನಾಡಕಚೇರಿಯ ಉಪ ತಹಸೀಲ್ದಾರ್ ವಿದ್ಯಾಲತಾ, ರಾಜಸ್ವ ನಿರೀಕ್ಷಕರಾದ ಸೊಣ್ಣೇಗೌಡ, ರವಿ, ಮುಜರಾಯಿ ಶಾಖೆಯ ದ್ವಿ,ದ,ಸಹಾಯಕ ಅಂಬರೀಶ್, ದೇವಾಲಯ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಪೊಲೀಸ್ ಹಾಗೂ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 13 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಲೇಔಟ್ ನ 18 ವರ್ಷದ ಗಂಡಸು,
  2. ಆನೂರಿನ 21 ವರ್ಷದ ಗಂಡಸು,
  3. ಮುಮ್ನಹಳ್ಳಿಯ 43 ವರ್ಷದ ಮಹಿಳೆ,
  4. ಚೊಕ್ಕಂಡಹಳ್ಳಿಯ 38 ವರ್ಷದ ಮಹಿಳೆ, 17 ವರ್ಷದ ಮಹಿಳೆ,
  5. ಹೊಸಪೇಟೆಯ 40 ವರ್ಷದ ಮಹಿಳೆ,
  6. ಸಾದಲಿಯ 54 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
  7. ಸೋಂಕಿತ 50 ವರ್ಷದ ಗಂಡಸು, 28 ವರ್ಷದ ಮಹಿಳೆ, 65 ವರ್ಷದ ಗಂಡಸು, 56 ವರ್ಷದ ಮಹಿಳೆ, 45 ವರ್ಷದ ಮಹಿಳೆ, 33 ವರ್ಷದ ಗಂಡಸಿನ ವಿಳಾಸ ಇನ್ನೂ ಪತ್ತೆಯಾಗಿಲ್ಲ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 24/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 24/09/2020

CB Lots: 720
Qty: 37659 Kgs
Max: 310
Min: 175
Avg: 249
BV Lots: 06
Qty: 292 Kgs
Max: 341
Min: 330
Avg: 333
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (23/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Daily Panchangam – ಪಂಚಾಂಗ 24 September 2020

0

Daily Panchangam – ಪಂಚಾಂಗ (24 September 2020, ಗುರುವಾರ)

ಪಂಚಾಂಗ

ಸಂವತ್ಸರಶಾರ್ವರಿ
ಮಾಸಆಶ್ವೀಜ
ಪಕ್ಷಶುಕ್ಲ
ತಿಥಿಅಷ್ಟಮಿ – 05:03:23 PM ವರೆಗೆ
ನಕ್ಷತ್ರಮೂಲ – 06:09:56 PM ವರೆಗೆ
ಯೋಗಸೌಭಾಗ್ಯ – 09:53:08 PM ವರೆಗೆ
ಕರಣವಿಷ್ಟಿ (ಭದ್ರ) – 07:26:13 AM ವರೆಗೆ, ಭವ – 07:03:23 PM ವರೆಗೆ
ಋತುಶರದ್

ಸೂರ್ಯೋದಯ

ಸೂರ್ಯೋದಯ06:07:40 AM
ಸೂರ್ಯಾಸ್ತ06:12:55 PM
ಚಂದ್ರ ರಾಶಿಧನು

ಕಾಲ

ರಾಹು ಕಾಲ01:40:56 PM ರಿಂದ 03:11:363 PM
ಯಮಗಂಡ06:07:40 AM ರಿಂದ 07:38:19 AM
ಗುಳಿಕ ಕಾಲ09:08:58 AM ರಿಂದ 10:39:38 PM

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಜನಸ್ನೇಹಿ ಪೊಲೀಸ್ ಪೇದೆಗೆ ಆತ್ಮೀಯ ಬೀಳ್ಕೊಡುಗೆ

0

ಸಾಮಾನ್ಯವಾಗಿ ಪೊಲೀಸರಿಗೆ ಅಭಿಮಾನಿಗಳು ಇರುವುದು ವಿರಳ. ಅದರಲ್ಲೂ ಪೊಲೀಸ್ ಪೇದೆಗಳಿಗೆ ಇರುವುದೇ ಇಲ್ಲ. ಆದರೆ ಶಿಡ್ಲಘಟ್ಟದ ನಗರ ಠಾಣೆಯ ಪೊಲೀಸ್ ಪೇದೆ ಎನ್.ಧನಂಜಯ್ ಎಂದರೆ ಯುವಕರಿಗೆ ಅಚ್ಚುಮೆಚ್ಚು. ನಗರದ ಹಲವು ಮಂದಿ ಯುವಕರು ಸೇರಿ “ಧನು ಅಭಿಮಾನಿಗಳ ಸಂಘ”ವನ್ನೇ ಸ್ಥಾಪಿಸಿಕೊಂಡಿದ್ದಾರೆ.

  ಎನ್.ಧನಂಜಯ್ ಅವರು ಎಸ್ಸೆಸ್ಸೆಲ್ಸಿ ವರೆಗೂ ಬಾಗೇಪಲ್ಲಿಯ ಸರ್ಕಾರಿ ಶಾಲೆಯಲ್ಲಿ ಓದಿ, ಪದವಿಯನ್ನು ನ್ಯಾಷನಲ್ ಕಾಲೇಜಿನಲ್ಲಿ ಪೂರೈಸಿದರು. ಬೆಂಗಳೂರಿನ ಆಕ್ಸ್ ಫರ್ಡ್ ಕಾಲೇಜಿನಲ್ಲಿ ಎಂ.ಎಸ್.ಡಬ್ಲು ಮಾಡಿ 2015 ರಲ್ಲಿ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿ ಖಾನಾಪುರದಲ್ಲಿ ತರಬೇತಿ ಪಡೆದು 2016 ರಲ್ಲಿ ಶಿಡ್ಲಘಟ್ಟದ ನಗರ ಠಾಣೆಗೆ ಕರ್ತವ್ಯಕ್ಕೆ ಹಾಜರಾದರು. ನಾಲ್ಕು ವರ್ಷ ಸೇವೆ ಸಲ್ಲಿಸಿ ಇದೀಗ ಬಾಗೇಪಲ್ಲಿಯ ಠಾಣೆಗೆ ವರ್ಗಾವಣೆಯಾಗಿದ್ದಾರೆ.

 ಕಳೆದ ನಾಲ್ಕು ವರ್ಷಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ರೂಪಿಸಿದ್ದ ಪೊಲೀಸ್ ತಂಡದಲ್ಲಿದ್ದು, ಉತ್ತಮ ಕರ್ತವ್ಯ ನಿರ್ವಹಣೆ ಮಾಡಿದ್ದಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಇವರು ಅಂತರ್ ಇಲಾಖೆಗಳ ಕ್ರಿಕೆಟ್ ಪಂದ್ಯದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

 ನಗರದ 12 ನೇ ವಾರ್ಡ್ (ಗಾಂಧಿ ನಗರ) ಬೀಟ್ ಪೊಲೀಸ್ ಆಗಿ ಕಾರ್ಯ ನಿರ್ವಹಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಲ್ಲದೆ, ವಾರ್ಡಿನ ನಾಗರಿಕರ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ವಿದ್ಯಾರ್ಥಿಗಳಿಗೆ ಅದರಲ್ಲೂ ಸರ್ಕಾರಿ ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗೆ ಪುಸ್ತಕಗಳನ್ನು ಕೊಡಿಸಿ, ತಾವೇ ಪಾಠ ಹೇಳಿಕೊಟ್ಟು ಪ್ರೋತ್ಸಾಹಿಸಿದ್ದಾರೆ. ಹಿಂದೂ ಮುಸ್ಲಿಂ ಹಬ್ಬಗಳಲ್ಲಿ ಎರಡೂ ಸಮುದಾಯದವರನ್ನು ಒಟ್ಟಿಗೆ ಸೇರಿಸಿ ಸಾಮರಸ್ಯ ಬೆಳೆಯಲು ನೆರವಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿಯೂ ಅನೇಕರಿಗೆ ನೆರವಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕೆಲವಾರು ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಮಾಡಿ ವ್ಯಸನ ಮುಕ್ತರನ್ನಾಗುವಂತೆ ಮಾಡಿರುವರು.

 “ನಾವು ಬಡ ಕುಟುಂಬಗಳ ಹಿನ್ನೆಲೆಯ ಹುಡುಗರು. ಚಿಕ್ಕ ವಯಸ್ಸಿಗೇ ದುಡಿಯಬೇಕಾದ ಅನಿವಾರ್ಯತೆ ನಮ್ಮದು. ನಮಗೆಲ್ಲಾ ಧನು ಅಣ್ಣ ಮಾರ್ಗದರ್ಶನ ಮಾಡಿದ್ದಾರೆ. ಪರೀಕ್ಷೆ ಬರೆಯಲು ನೆರವಾಗಿದ್ದಾರೆ. ಕೆಟ್ಟ ಚಟಕ್ಕೆ ಬಲಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಜೀವನದಲ್ಲಿ ಹೇಗೆ ಸಾಧನೆ ಮಾಡಬೇಕು ಎಂದು ಸದಾ ಬುದ್ಧಿಹೇಳುತ್ತಿರುತ್ತಾರೆ” ಎನ್ನುತ್ತಾನೆ ಲೋಕೇಶ್.

 ಬಾಗೇಪಲ್ಲಿಗೆ ವರ್ಗಾವಣೆಯಾದ ಧನಂಜಯ್ ಅವರನ್ನು ಅವರ ಅಭಿಮಾನಿಗಳು, ರೀಲರ್ಸ್ ಸಂಘದ ಸದಸ್ಯರು ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ.

  ರೀಲರ್ಸ್ ಸಂಘದ ಶ್ರೀನಿವಾಸ್, ಧನು ಅಭಿಮಾನಿಗಳ ಸಂಘದ ಶ್ರೀನಾಥ್, ಲೋಕೇಶ್, ಅನಿಲ್, ದಯಾನಂದ್, ವೇಣುಗೋಪಾಲ್ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 17 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 17 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ಶಿಡ್ಲಘಟ್ಟದ 35 ವರ್ಷದ ಗಂಡಸು,
  2. ನಗರದ ದೇಶದಪೇಟೆಯ 70 ವರ್ಷದ ಗಂಡಸು, 48 ವರ್ಷದ ಮಹಿಳೆ, 65 ವರ್ಷದ ಮಹಿಳೆ,
  3. ವಾಸವಿ ರಸ್ತೆಯ 22 ವರ್ಷದ ಮಹಿಳೆ, 28 ವರ್ಷದ ಗಂಡಸು, 54 ವರ್ಷದ ಮಹಿಳೆ, 63 ವರ್ಷದ ಗಂಡಸು, 80 ವರ್ಷದ ಮಹಿಳೆ,
  4. ಗೆಜಿಗಾನಹಳ್ಳಿಯ 30 ವರ್ಷದ ಗಂಡಸು,
  5. ಹನುಮಂತಪುರದ 70 ವರ್ಷದ ಗಂಡಸು,
  6. ಹಂಡಿಗನಾಳದ 51 ವರ್ಷದ ಗಂಡಸು,
  7. ತಿಮ್ಮನಾಯಕನಹಳ್ಳಿಯ 40 ವರ್ಷದ ಮಹಿಳೆ,
  8. ಹುಜುಗೂರಿನ 36 ವರ್ಷದ ಗಂಡಸು,
  9. ಜಂಗಮಕೋಟೆಯ 56 ವರ್ಷದ ಗಂಡಸು,
  10. ಮೇಲೂರಿನ 65 ವರ್ಷದ ಮಹಿಳೆ,
  11. ದೊಣ್ಣಹಳ್ಳಿಯ 28 ವರ್ಷದ ಮಹಿಳೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 23/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 23/09/2020

CB Lots: 517
Qty: 26762 Kgs
Max: 320
Min: 186
Avg: 266
BV Lots: NILL
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (22/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟದ ಪೌರ ಕಾರ್ಮಿಕರ ಶ್ರಮ ಜೀವನದ ಅವಲೋಕನ

0

“ದೇಶದ ರಕ್ಷಣೆಗೆ ಸೈನಿಕರು ಹಗಲಿರುಳು ಸೇವೆ ಸಲ್ಲಿಸಿದ ರೀತಿಯಲ್ಲಿ ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ಶ್ರಮಿಸುತ್ತಾರೆ” ಎಂದು ಎಲ್ಲರೂ ಮೆಚ್ಚುವ ಪೌರ ಕಾರ್ಮಿಕರ ದಿನಾಚರಣೆಯನ್ನು ಇಂದು ಎಲ್ಲೆಡೆ ಆಚರಿಸಲಾಗುತ್ತಿದೆ.

 ಕಾರ್ಮಿಕರ ಅನೇಕ ವರ್ಷಗಳ ಹೋರಾಟದಿಂದ ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗೆ ರಜೆ ಘೋಷಿಸಿ ಪೌರ ಕಾರ್ಮಿಕರ ದಿನಾಚರಣೆ ಆಚರಿಸುತ್ತಿದೆ. ಅವರ ಸಮಸ್ಯೆಗಳು, ಬೇಡಿಕೆಗಳು, ಕುಂದು ಕೊರತೆಗಳು, ಸುರಕ್ಷತೆ, ಆರೋಗ್ಯ, ಶಿಕ್ಷಣ, ಸೌಲಭ್ಯಗಳ ಕಡೆಗೆ ಸಿಂಹಾವಲೋಕನ ಮಾಡುವ ಅಗತ್ಯವನ್ನು ಈ ದಿನ ಸಾರಿದೆ.

ಪೌರ ಕಾರ್ಮಿಕರ ದಿನಾಚರಣೆ

ಶಿಡ್ಲಘಟ್ಟದ ನಗರಸಭೆ ಉದ್ಯಾನವನದಲ್ಲಿ ಇಂದು ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ, ಆರು ಮಂದಿ ಹಿರಿಯ ಪೌರ ಕಾರ್ಮಿಕರಿಗೆ ಸನ್ಮಾನ, ಪೌರ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದು ಪರಿಸರ ಎಂಜಿನಿಯರ್ ವೈಶಾಲಿ ಪ್ರಸಾದ್ ತಿಳಿಸಿದ್ದಾರೆ

 “ಪೌರ ಕಾರ್ಮಿಕರಾದ ನಮ್ಮದು ಅತ್ಯಲ್ಪ ಬೇಡಿಕೆಗಳಷ್ಟೆ. ನೀಡಬೇಕಾದ ವೇತನ, ಭತ್ಯೆ, ಸ್ವಚ್ಚತಾ ಕಾರ್ಯಕ್ಕೆ ಅಗತ್ಯವಾದ ಸಲಕರಣೆ, ರಜೆ, ಆರೋಗ್ಯ ಸೌಲಭ್ಯ, ಕಾಯಂ ನೌಕರಿ, ಪ್ರತಿ ತಿಂಗಳ ವೇತನ ಬಿಡುಗಡೆ ಮುಂತಾದವುಗಳನ್ನು ಮಾತ್ರ ಕೇಳುತ್ತೇವೆ. ನಮ್ಮ ಸಂಕಷ್ಟ, ನಮ್ಮ ಮೇಲಾಗುತ್ತಿರುವ ದೌರ್ಜನ್ಯ, ವೇತನ ಜಮೆ ಆಗದಿರುವುದು, ಪೌರಕಾರ್ಮಿಕರ ಮೇಲಿನ ಒತ್ತಡ ಮತ್ತಿತರ ವಿಷಯಗಳ ಕುರಿತಾಗಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರೆ ಅಷ್ಟೇ ಸಾಕು” ಎನ್ನುತ್ತಾರೆ ಪೌರಕಾರ್ಮಿಕ ನಾರಾಯಣಸ್ವಾಮಿ.

ಶಿಡ್ಲಘಟ್ಟದ ಪೌರಕಾರ್ಮಿಕರ ವಿವರ

ಖಾಯಂ ಸಿಬ್ಬಂದಿ : 40
ಕ್ಷೇಮಾಭಿವೃದ್ಧಿ ನೌಕರರು : 10
ಕನಿಷ್ಠ ವೇತನದ ನೌಕರರು : 10
ಹೊರಗುತ್ತಿಗೆ ನೌಕರರು : 15

“ಕೋವಿಡ್ 19 ನಮ್ಮ ಶಿಡ್ಲಘಟ್ಟ ನಗರವನ್ನು ಪ್ರವೇಶಿಸದಂತೆ ತಡೆಯುವಲ್ಲಿ ನಮ್ಮ ಪೌರಕಾರ್ಮಿಕರ ಪಾತ್ರ ಮಹತ್ವದ್ದು. ಲಾಕ್ ಡೌನ್ ಸಡಿಲಿಕೆ ಆಗುವವರೆಗೂ ಅಂದರೆ ಜುಲೈ ತಿಂಗಳವರೆಗೂ ಶಿಡ್ಲಘಟ್ಟಕ್ಕೆ ಕೊರೊನಾ ಬರದಂತೆ ಶ್ರಮಿಸಿದ್ದಾರೆ. ಪೌರ ಕಾರ್ಮಿಕರ ಸುರಕ್ಷತೆಗೆ ಗಮ್ ಬೂಟ್, ಗ್ಲೌಸ್, ಮಾಸ್ಕ್, ಪಿಪಿ ಕಿಟ್, ಆರೋಗ್ಯ ಪರೀಕ್ಷೆ ಬಗ್ಗೆ ಆದ್ಯತೆ ನೀಡಿದ್ದೇವೆ. ಎಲ್ಲಾ ಪೌರ ಕಾರ್ಮಿಕರಿಗೂ ವಿಮೆ ಮಾಡಿಸಿದ್ದೇವೆ. ಖಾಯಂ ಸಿಬ್ಬಂದಿಗೆ 3,500 ರೂ ವಿಶೇಷ ಭತ್ಯೆ ನೀಡುತ್ತಿದ್ದೇವೆ” ಎನ್ನುತ್ತಾರೆ ಆರೋಗ್ಯ ನಿರೀಕ್ಷಕಿ ಶೋಭಾ.

 

ವೇತನಕ್ಕೆ ಆದ್ಯತೆ

Sidlaghatta Municipal commissioner Srinivas

“ಶಿಡ್ಲಘಟ್ಟ ನಗರಸಭೆ ಪೌರಾಯುಕ್ತನಾಗಿ ಎರಡು ತಿಂಗಳಾಯಿತು. ನಾನು ಬಂದಾಗ ಪೌರ ಕಾರ್ಮಿಕರಿಗೆ 18 ತಿಂಗಳ ವೇತನ ಬಾಕಿಯಿತ್ತು. ಅವರ ವೇತನಕ್ಕೆ ಮೊದಲ ಆದ್ಯತೆ ನೀಡಿ 15 ತಿಂಗಳ ವೇತನ, ಸುಮಾರು 81 ಲಕ್ಷ ರೂಗಳಷ್ಟು ನೀಡಿದ್ದೇವೆ. 15 ಮಂದಿ ಹೊರಗುತ್ತಿಗೆ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅನುಮೋದನೆ ಸಿಗಬೇಕಿದೆ. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ಗೃಹಭಾಗ್ಯ ಯೋಜನೆಯಡಿ 20 ಮಂದಿಗೆ ಗೃಹ ನಿರ್ಮಾಣ ಮಾಡಿಸಿಕೊಡಲಾಗಿದೆ. ನಿವೇಶನರಹಿತರಿಗೆ ನಿವೇಶನ ನೀಡಲಾಗುವುದು”

– ಶ್ರೀನಿವಾಸ್, ಪೌರಾಯುಕ್ತ

ಜನರ ಮನೋಭಾವ ಬದಲಾಗಬೇಕು

“ನಾನೂ ಸೇರಿದಂತೆ ನಾಲ್ವರನ್ನು ಸರ್ಕಾರ ಎರಡು ವರ್ಷಗಳ ಹಿಂದೆ ಸಿಂಗಪೂರಿಗೆ ಕಳುಹಿಸಿಕೊಟ್ಟಿತ್ತು. ಅಲ್ಲಿನ ತ್ಯಾಜ್ಯದ ವರ್ಗೀಕರಣ, ನೀರಿನ ಸದ್ಭಳಕೆ, ಮರುಬಳಕೆ, ಶುದ್ಧೀಕರಣ ಮುಂತಾದವು ಆಧುನಿಕವಾಗಿವೆ. ಇಲ್ಲಿ ಅವೆಲ್ಲಾ ಅಳವಡಿಸುವುದು ಕಷ್ಟಸಾಧ್ಯ. ಮುಖ್ಯವಾಗಿ ಜನರ ಮನೋಭಾವ ಬದಲಾಗಬೇಕು. ಕಸವನ್ನು ಎಲ್ಲೆಂದರಲ್ಲಿ ಹಾಕಬಾರದು. ನಮ್ಮ ಊರನ್ನು ನಮ್ಮ ಮನೆಯ ರೀತಿ ಜನರು ಭಾವಿಸಿದರೆ ನಮ್ಮ ಕೆಲಸ ಸುಲಭವಾಗುತ್ತದೆ”

 – ಯಲ್ಲಮ್ಮ, ಪೌರಕಾರ್ಮಿಕರು

 
– ಡಿ.ಜಿ.ಮಲ್ಲಿಕಾರ್ಜುನ

Daily Panchangam – ಪಂಚಾಂಗ 23 September 2020

0

Daily Panchangam – ಪಂಚಾಂಗ (23 September 2020, ಬುಧವಾರ)

ಪಂಚಾಂಗ

ಸಂವತ್ಸರಶಾರ್ವರಿ
ಮಾಸಆಶ್ವೀಜ
ಪಕ್ಷಶುಕ್ಲ
ತಿಥಿಸಪ್ತಮಿ – 07:58:39 PM ವರೆಗೆ
ನಕ್ಷತ್ರಜ್ಯೇಷ್ಟ – 06:25:15 PM ವರೆಗೆ
ಯೋಗಆಯುಷ್ಮಾನ್ – 11:38:48 PM ವರೆಗೆ
ಕರಣಗರಜ – 08:40:47 AM ವರೆಗೆ, ವಾಣಿಜ – 07:58:39 PM ವರೆಗೆ
ಋತುಶರದ್

ಸೂರ್ಯೋದಯ

ಸೂರ್ಯೋದಯ6:07:38 AM
ಸೂರ್ಯಾಸ್ತ6:13:38 PM
ಚಂದ್ರ ರಾಶಿವೃಷ್ಚಿಕ

ಕಾಲ

ರಾಹು ಕಾಲ12:10:38 PM ರಿಂದ 01:41:23 PM
ಯಮಗಂಡ07:38:23 AM ರಿಂದ 09:09:08 AM
ಗುಳಿಕ ಕಾಲ10:39:53 AM ರಿಂದ 12:10:38 PM

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 22/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 22/09/2020

CB Lots: 583
Qty: 30516 Kgs
Max: 324
Min: 166
Avg: 272
BV Lots: 02
Qty: 120 Kgs
Max: 320
Min: 277
Avg: 306
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (21/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Chikkaballapura Agriculture Market Watch – 22/09/2020

0

ಚಿಕ್ಕಬಳ್ಳಾಪುರ ಕೃಷಿ ಮಾರುಕಟ್ಟೆ ಧಾರಣೆ

Date: 22/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಹುರುಳಿಕಾಯಿ6050007000
ಬೀಟ್ರೂಟ್6014001600
ಹಾಗಲಕಾಯಿ520002200
ಸೋರೆಕಾಯಿ1114001600
ಬದನೆಕಾಯಿ3010001200
ಎಲೆಕೋಸು2208001000
ದಪ್ಪ ಮೆಣಸಿನಕಾಯಿ6720002400
ಕ್ಯಾರೆಟ್7530004000
ಹೂಕೋಸು1610001400
ಬಜ್ಜಿ ಮೆಣಸಿನಕಾಯಿ5520002500
ಸೌತೆಕಾಯಿ1707001000
ನವಿಲುಕೋಸು2015001800
ಮುೂಲಂಗಿ508001000
ಹೀರೇಕಾಯಿ3525003000
ಸೀಮೆ ಬದನೆಕಾಯಿ75700800
ಪಡವಲಕಾಯಿ158001000
ತೊಂಡೆಕಾಯಿ1824002800
ಟೊಮ್ಯಾಟೊ3754003070

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Chintamani Agriculture Market Watch – 22/09/2020

0

ಚಿಂತಾಮಣಿ ಕೃಷಿ ಮಾರುಕಟ್ಟೆ ಧಾರಣೆ

Date: 22/09/2020

ಪ್ರಮಾಣ: ಕ್ವಿಂಟಲ್, ವರ್ಗ: ಸರಾಸರಿ

ಉತ್ಪನ್ನಗಳು

ಆವಕ

ಕನಿಷ್ಠ

ಗರಿಷ್ಠ

ಗೋಡಂಬಿ – ಲೋಕಲ್ (ರಾ)14800011000
ನೆಲಗಡಲೆ (ಶೇಂಗಾ)2020003000
ಅಕ್ಕಿ (ಹಂಸ)2520002300
ಅಕ್ಕಿ (ಸೋನ)7038005000


SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ದಲಿತ ಸಂಘರ್ಷ ಸಮಿತಿ ವತಿಯಿಂದ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ

0

ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ನಡೆದಿರುವ ಅನುದಾನ ದುರುಪಯೋಗದ ಬಗ್ಗೆ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಬೇಕು, ಅನುದಾನ ದುರ್ಭಳಕೆ ಮಾಡಿಕೊಂಡಿರುವ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ದ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದಸಂಸ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್ ಒತ್ತಾಯಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ತಳ ಸಮುದಾಯಗಳ ಅಭಿವೃದ್ದಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿವರ್ಷ ಕೋಟ್ಯಾಂತರ ಹಣ ಅನುದಾನ ಮಂಜೂರು ಮಾಡುತ್ತಿದೆ. ಆದರೂ ಮಧ್ಯವರ್ತಿಗಳ ಹಾವಳಿಯಿಂದ ಯಾವುದೇ ಯೋಜನೆಯು ಅರ್ಹ ಫಲಾನುಭವಿಗೆ ತಲುಪುತ್ತಿಲ್ಲ. ಎಸ್‌ಸಿಪಿ ಹಾಗು ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾಗುವ ಅನುದಾನ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಉಪಯೋಗವಾಗುವ ಬದಲಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೇಬು ತುಂಬುತ್ತಿದೆ. ಇದರಿಂದ ದಲಿತರ ಕಾಲೋನಿಗಳಲ್ಲಿ ಮೂಲಭೂತ ಸವಲತ್ತುಗಳಡಿಯಲ್ಲಿ ನಿರ್ಮಾಣವಾಗುವ ಸಿಸಿ ರಸ್ತೆ, ಚರಂಡಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದರು.

ತಾಲ್ಲೂಕಿನಾದ್ಯಂತ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಬಿ.ಆರ್.ಅಂಬೇಡ್ಕರ್ ಭವನ, ಜಗಜೀವನರಾಂ ಭವನ ಹಾಗೂ ವಾಲ್ಮೀಕಿ ಭವನಗಳನ್ನು ಯಾವುದೇ ವಿನ್ಯಾಸ ಅಥವ ನೈಪುಣ್ಯತೆಯಿಲ್ಲದ ಗೋಡೌನ್ ಗಳ ರೀತಿ ನಿರ್ಮಾಣ ಮಾಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ದಲಿತರ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ದಲಿತೇತರ ಹಣವಂತರಿಗೆ ಅನುಕೂಲ ಮಾಡಿಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ದಲಿತರ ಕಲ್ಯಾಣಕ್ಕಾಗಿ ಶ್ರಮಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ತನ್ನ ಜವಾಬ್ದಾರಿ ಮರೆತು ಭ್ರಷ್ಟ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಪರವಾಗಿ ಕೆಲಸ ಮಾಡುತ್ತಿರುವುದು ಖಂಡನೀಯ. ಹಾಗಾಗಿ ಕೂಡಲೇ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸಲು ಸರ್ಕಾರ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಸಂಘಟನಾ ಸಂಚಾಲಕರಾದ ಟಿ.ಎ.ಚಲಪತಿ, ಎಲ್.ವಿ.ವೆಂಕಟೇಶ್, ಡಿ.ಡಂ.ವೆಂಕಟೇಶ್, ಹುಜಗೂರು ವೆಂಕಟೇಶ್, ಸೊಣಗಾನಹಳ್ಳಿ ನರಸಿಂಹಯ್ಯ, ಶಿವು ಹಾಜರಿದ್ದರು.

Daily Panchangam – ಪಂಚಾಂಗ 22 September 2020

0

Daily Panchangam – ಪಂಚಾಂಗ (22 September 2020, ಮಂಗಳವಾರ)

ಪಂಚಾಂಗ

ಸಂವತ್ಸರಶಾರ್ವರಿ
ಮಾಸಆಶ್ವೀಜ
ಪಕ್ಷಶುಕ್ಲ
ತಿಥಿಷಷ್ಠಿ – 09:32:32 PM ವರೆಗೆ
ನಕ್ಷತ್ರಅನುರಾಧ – 07:18:38 PM ವರೆಗೆ
ಯೋಗಪ್ರೀತಿ – 01:55:15 AM (ಬುಧವಾರ) ವರೆಗೆ
ಕರಣಕೌಳವ – 10:33:42 AM ವರೆಗೆ, ತೈತುಲ – 09:32:32 PM ವರೆಗೆ
ಋತುಶರದ್

ಸೂರ್ಯೋದಯ

ಸೂರ್ಯೋದಯ6:07:37 AM
ಸೂರ್ಯಾಸ್ತ6:14:20 PM
ಚಂದ್ರ ರಾಶಿವೃಷ್ಚಿಕ

ಕಾಲ

ರಾಹು ಕಾಲ03:12:39 PM ರಿಂದ 04:43:30 PM
ಯಮಗಂಡ09:09:18 AM ರಿಂದ 10:40:08 AM
ಗುಳಿಕ ಕಾಲ12:10:58 PM ರಿಂದ 01:41:49 PM

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 8 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಕುರುಬರಪೇಟೆಯ 44 ವರ್ಷದ ಮಹಿಳೆ,
  2. ಹೇಮರ್ಲಹಳ್ಳಿಯ 26 ವರ್ಷದ ಮಹಿಳೆ, 32 ವರ್ಷದ ಮಹಿಳೆ, 12 ವರ್ಷದ ಮಹಿಳೆ, 29 ವರ್ಷದ ಮಹಿಳೆ, 62 ವರ್ಷದ ಮಹಿಳೆ, 60 ವರ್ಷದ ಗಂಡಸು, 6 ವರ್ಷದ ಹುಡುಗನಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 21/09/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 21/09/2020

CB Lots: 616
Qty: 32492 Kgs
Max: 330
Min: 156
Avg: 269
BV Lots: NILL
 

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ (20/09/2020)

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi