ಎಳೆಯ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ಸಂದೇಶವನ್ನು ತುಂಬಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಪರಿವರ್ತಿಸುವಲ್ಲಿ ಭಾರತ ಸೇವಾದಳದ ಕಾರ್ಯ ಅಭಿನಂದನೀಯ ಎಂದು ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಭಾಸ್ಕರರೆಡ್ಡಿ ತಿಳಿಸಿದರು.
ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಭಾರತೀಯ ಸೇವಾದಳ ಶಾಖೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ತರಬೇತಿ, ಶಿಕ್ಷಣ, ಸೇವೆ, ರಾಷ್ಟ್ರೀಯತೆ, ಸಾರ್ವಜನಿಕ ರಕ್ಷಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳು ಸೇವಾದಳದ ಮೂಲಕ ನಡೆಯುತ್ತಿವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಶಿಸ್ತುಬದ್ಧ ಜೀವನರೂಢಿಸುವ ಅಗತ್ಯವಿದೆ. ನಾಲ್ಕು ಗೋಡೆಗಳ ನಡುವಿನ ಶಿಕ್ಷಣ ಪರಿಪೂರ್ಣವಲ್ಲ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಾಗಿ ಸೇವಾದಳದಂತಹ ಸಂಘಟನೆಗಳಲ್ಲಿ ತೊಡಗಿಕೊಳ್ಳುವುದರಿಂದ ಉತ್ತಮ ನಾಗರಿಕರಾಗಲು ಸಾಧ್ಯವಿದೆ ಎಂದರು ಹೇಳಿದರು.
ಭಾರತೀಯ ಸೇವಾದಳ ಜಿಲ್ಲಾ ಸಂಘಟಕ ಎಚ್.ಮಹೇಶ್‌ಗೌಡ ಮಾತನಾಡಿ, ಸಮವಸ್ತ್ರವು ಎಲ್ಲರೂ ಸಮಾನರು ಎಂಬುದರ ಪ್ರತೀಕವಾಗಿದೆ. ಸ್ವಚ್ಛತೆ, ಸಾಮಾಜಿಕ ಕಳಕಳಿ, ಮಾನವತ್ವ, ದೈಹಿಕ ಆರೋಗ್ಯ, ಶಿಸ್ತು, ದೇಶಭಕ್ತಿ ಮುಂತಾದವುಗಳು ಎಳೆಯ ವಯಸ್ಸಿನಲ್ಲಿ ಮನದಲ್ಲಿ ಅಂಕುರವಾದಲ್ಲಿ ಜೀವನ ಪರ್ಯಂತ ಜೊತೆಯಾಗಿರುತ್ತದೆ. ಇದುವೇ ಭಾರತೀಯ ಸೇವಾದಳ ಶಾಖೆಯ ಸ್ಥಾಪನೆಯ ಹಿಂದಿನ ಉದ್ದೇಶ ಎಂದು ನುಡಿದರು.
ಸೇವಾದಳ ವೆಂಕಟರೆಡ್ಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಸಿಆರ್‌ಪಿ ಶಿವಪ್ಪ, ಎನ್.ಬಾಲಪ್ಪ, ಮುಖ್ಯ ಶಿಕ್ಷಕ ಎಸ್.ಎಂ.ಆದಿನಾರಾಯಣ, ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ್, ಶಿಕ್ಷಕರಾದ ಜಿ.ಎನ್.ಶ್ರೀನಿವಾಸ, ರವಿ, ಬೈರಾರೆಡ್ಡಿ, ಈಶ್ವರಪ್ಪ, ವನಜಾಕ್ಷಿ, ಶ್ವೇತ, ನಾಗೇಶ್‌ಕುಮಾರ್, ರಾಮರೆಡ್ಡಿ, ಸೇವಾದಳ ವೆಂಕಟರೆಡ್ಡಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -