21.1 C
Sidlaghatta
Thursday, August 11, 2022

ಮಕ್ಕಳಿಗೆ ಸಂವೇದನಾಶೀಲ ಶಿಕ್ಷಣ ನೀಡಬೇಕು

- Advertisement -
- Advertisement -

ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮಕ್ಕಳಿಗೆ ಹೆಚ್ಚು ಸಂವೇದನಾಶೀಲ ಶಿಕ್ಷಣವನ್ನು ನೀಡಲು ಸಾಧ್ಯ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಆರ್. ಶ್ರೀನಿವಾಸ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಂಗಳೂರಿನ ರೋಟರಿ ಹಾಗೂ ರೋಟರ್‍ಯಾಕ್ಟ್ ಸಂಸ್ಥೆಯ ವತಿಯಿಂದ ಶಾಲೆಗೆ ಗ್ರಂಥಾಲಯ ಪರಿಕರಗಳನ್ನು ವಿತರಿಸುವ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಗ್ರಂಥಾಲಯದ ಪುಸ್ತಕಗಳನ್ನು ಮಕ್ಕಳು ಓದುವ ಮತ್ತು ಪುಸ್ತಕದ ಬಗ್ಗೆ ತಮ್ಮ ಭಾವವನ್ನು ಬರೆದಿಡುವ ರೂಢಿಯನ್ನು ಶಿಕ್ಷಕರು ಕನ್ನಮಂಗಲದ ಶಾಲೆಯಲ್ಲಿ ಬೆಳೆಸಿರುವುದು ಅಭಿನಂದನೀಯ. ಮಕ್ಕಳ ಬರಹಗಳ ‘ಶಾಮಂತಿ’ ಪುಸ್ತಕ ಪ್ರತಿವರ್ಷವೂ ಶಾಲೆಯಿಂದ ಹೊರತರುತ್ತಾ ಮಾದರಿಯಾಗಿದ್ದಾರೆ ಎಂದು ನುಡುದರು.
ರೋಟರ್‍ಯಾಕ್ಟ್್‌ನ ಅಧ್ಯಕ್ಷ ವೈಭವ ನಾಯಕ್ ಮಾತನಾಡಿ, ಮಕ್ಕಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಆಗ ಜೀವನದ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು. ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಈ ಶಾಲೆಯ ಮಕ್ಕಳು ಒಳ್ಳೆಯ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಗೆ ಗ್ರಂಥಾಲಯದ ಸಾಮಾಗ್ರಿಗಳಾದ ಕಪಾಟುಗಳು, ಮೇಜುಗಳು, ಕುರ್ಚಿಗಳು, ಕಂಪ್ಯೂಟರ್ ಹಾಗೂ ಮಕ್ಕಳಿಗೆ ಚಿತ್ರಕಲಾ ಕಿಟ್‌ಗಳನ್ನು ನೀಡಲಾಯಿತು. ಅಲ್ಲದೇ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಅಮೃತ, ಕಿರಣ್ ಹಾಗೂ ತೇಜಸ್ ರೋಟರ್‍ಯಾಕ್ಟ್್ ಸಂಸ್ಥೆಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು.
ತುಮ್ಮನಹಳ್ಳಿಯ ಗ್ರಾಮಪಂಚಾಯತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ, ಸದಸ್ಯ ದೇವರಾಜ್, ರೋಟರಿ ಸಂಸ್ಥೆಯ ಜಾನ್ ಬ್ರೂನೊ, ವೈಭವನಾಯಕ್, ಗೌತಮ್ ರಮೇಶ್, ಅರ್ಜುನ್ ಗುಬ್ಬಿ, ಕೆ.ಎಸ್‌.ಚೇತನ್, ಸುಕೃತ ಸುದರ್ಶನ್, ಸುಹಾಸ್, ಅನಿಲ್ ಕುಮಾರ್, ನಮ್ರತ, ಅಶ್ರಿತ್, ಹರೀಶ್, ಕೀರ್ತಿ ಪ್ರಸಾದ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಜ ಗೌಡ, ಕಾರ್ಯದರ್ಶಿ ರವಿಶಂಕರ್, ಸ್ನೇಹ ಯುವಕರ ಸಂಘದ ಕಾರ್ಯದರ್ಶಿ ವಾಸುದೇವ್, ನಾಗರಾಜ್, ಮೂರ್ತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮುನಿಆಂಜಿನಪ್ಪ ಸದಸ್ಯರಾದ ಸುಬ್ರಮಣಿ, ಕೆಂಪರೆಡ್ಡಿ, ದೊಡ್ಡಮುನಿಶಾಮಪ್ಪ, ದೊಡ್ಡ ಲಕ್ಷ್ಮಯ್ಯ, ಲಕ್ಷ್ಮಪ್ಪ, ಮುನಿನಾರಾಯಣಮ್ಮ, ನಿರ್ಮಲ, ಲಕ್ಷ್ಮಣ, ಮುಖ್ಯಶಿಕ್ಷಕ ಜೆ.ಶ್ರೀನಿವಾಸ್, ಸಹಶಿಕ್ಷಕರಾದ ಟಿ.ರಾಜಣ್ಣ, ಎಸ್.ಕಲಾಧರ, ಟಿ.ಜೆ.ಸುನಿತ, ಎನ್. ಪದ್ಮಾವತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here