Sidlaghatta : ಯಾವುದೆ ಜಾತಿ ಮತ್ತು ಮಹಿಳೆ ಕುರಿತು ಕೀಳಾಗಿ ಮಾತನಾಡುವುದನ್ನು ನಮ್ಮ ಬಿಜೆಪಿ ಪಕ್ಷವು ಯಾವುದೆ ಕಾರಣಕ್ಕೂ ಒಪ್ಪುವುದಿಲ್ಲ. ಅಂತಹ ಸಂಸ್ಕೃತಿವುಳ್ಳ ಯಾರನ್ನೂ ಪಕ್ಷವು ಇಟ್ಟುಕೊಳ್ಳುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಕಂಬದಹಳ್ಳಿ ಸುರೇಂದ್ರಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ ಅವರು ಜಾತಿಯೊಂದರ ಬಗ್ಗೆ ಮತ್ತು ಮಹಿಳೆಯ ಬಗ್ಗೆ ಕೀಳಾಗಿ ನಿಂದನೆ ಮಾಡಿ ಮಾತನಾಡಿರುವುದು ಅವರಿಗೆ ಅಥವಾ ಇನ್ನಾರಿಗೆ ಆಗಲಿ ಶೋಭೆ ತರುವುದಲ್ಲ. ಅದನ್ನು ನಮ್ಮ ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದರು.
ಶಿಸ್ತು ಸಮಿತಿಯು ಕೂಡಲೆ ಮುನಿರತ್ನಂ ವಿರುದ್ದ ಕ್ರಮವಹಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತೆ ಪಕ್ಷದ ವರಿಷ್ಠರನ್ನು ಅವರು ಆಗ್ರಹಿಸಿದ್ದಾರೆ.