Sidlaghatta : ಕಳೆದ ಮೇ ತಿಂಗಳ 5 ನೇ ತಾರೀಕಿನಂದು ಬಿದ್ದ ಆಲಿ ಕಲ್ಲು ಬಿರುಗಾಳಿ ಮಳೆಗೆ ಹಾಳಾಗಿರುವ ಹಿಪ್ಪುನೇರಳೆ ಸೊಪ್ಪಿನ ತೋಟಗಳ ರೈತರ ಪರಿಹಾರದ ಅರ್ಜಿಗಳನ್ನು ತಹಶೀಲ್ದಾರರ ಕಚೇರಿಗೆ ಕಳುಹಿಸಲಾಗಿದೆ.
ಆಯಾ ವೃತ್ತದ ಗ್ರಾಮ ಆಡಳಿತಾಧಿಕಾರಿಗಳು ಅರ್ಜಿಗಳನ್ನು ಪರಿಹಾರದ ಫೋರ್ಟಲಿನಲ್ಲಿ ಎಂಟ್ರಿ ಮಾಡಬೇಕಿದ್ದು ಎಂಟ್ರಿ ಮಾಡುವಾಗ ಅರ್ಜಿಯಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಸಂಖ್ಯೆ ಬರಲಿದೆ.
ಈ ಒಟಿಪಿ ಸಂಖ್ಯೆಯನ್ನು ಆಯಾ ಗ್ರಾಮ ಆಡಳಿತಾಧಿಕಾರಿಗಳಿಗೆ ತಿಳಿಸಬೇಕಿದೆ. ಆದರೆ ಸಾಕಷ್ಟು ರೈತರು ಕೊಟ್ಟಿರುವ ಅರ್ಜಿಯಲ್ಲಿನ ಮೊಬೈಲ್ ಸಂಖ್ಯೆ ಕೆಲಸ ಮಾಡುತ್ತಿಲ್ಲ, ಒಟಿಪಿ ಸಂಖ್ಯೆ ಹೇಳುತ್ತಿಲ್ಲ, ಒಟಿಪಿ ಸಂಖ್ಯೆ ಹೋಗುವ ಮೊಬೈಲ್ ರೈತನ ಬದಲಿಗೆ ಅವರ ಮಕ್ಕಳು ಅಥವಾ ಇನ್ಯಾರ ಬಳಿಯೋ ಇದೆ ಹಾಗಾಗಿ ಫೋರ್ಟಲಿನಲ್ಲಿ ಎಂಟ್ರಿ ಮಾಡಲು ಅಡಚಣೆ ಆಗುತ್ತಿದೆ ಎಂದು ಗ್ರಾಮ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಹಾಗಾಗಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿರುವ ತಲದುಮ್ಮ್ಮನಹಳ್ಳಿ, ವೀರಾಪುರ, ಬೂದಾಳ, ಸೊಣ್ಣೇನಹಳ್ಳಿ, ಬೊಮ್ಮನಹಳ್ಳಿ, ಬಚ್ಚಹಳ್ಳಿ ಗ್ರಾಮಗಳ ರೈತರು ಗ್ರಾಮ ಆಡಳಿತಾಧಿಕಾರಿ ರಾಕೇಶ್ ನಿಟ್ಟೂರ ಮೊಬೈಲ್ ಸಂಖ್ಯೆ 9352705628, ಪಿಂಡಿಪಾಪನಹಳ್ಳಿ ಗ್ರಾಮದ ರೈತರು ನಾಗರಾಜ್ ಮೊಬೈಲ್ ಸಂಖ್ಯೆ 8088923645 ಇವರನ್ನು ತುರ್ತಾಗಿ ಸಂಪರ್ಕಿಸಬೇಕಿದೆ.
ನಿಮ್ಮ ನಿಮ್ಮ ಅರ್ಜಿಗಳನ್ನು ಪರಿಶೀಲಿಸಿಕೊಳ್ಳಲು ರೇಷ್ಮೆ ಇಲಾಖೆಯ ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ಜಗದೇವಪ್ಪ ಗುಗ್ಗರಿ ಮನವಿ ಮಾಡಿದ್ದಾರೆ.