Sidlaghatta : ಶಿಡ್ಲಘಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐದು NSS ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ 16ನೇ ಬುಡಕಟ್ಟು ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಟಿ.ಎಮ್. ತರುಣ್, ಡಿ. ಪವನ್, ಎಸ್. ಮಧು, ಎ. ಅಭಿಷೇಕ್ ಮತ್ತು ವೈ.ಎಮ್. ತೇಜಸ್ ಗೌಡ ಅವರು ವಿವಿಧ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟಾಗಿ ಭಾಗವಹಿಸಿ, ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಆಹಾರ ಮತ್ತು ಭಾಷೆಗಳನ್ನು ಪರಿಚಯಿಸಿದರು. ಇತರ ರಾಜ್ಯಗಳ ಸಂಸ್ಕೃತಿಗಳನ್ನು ತಿಳಿದುಕೊಂಡರು.
ಈ ಶಿಬಿರವು ಡಿಸೆಂಬರ್ 2ರಿಂದ 7ರವರೆಗೆ ಜ್ಞಾನಭಾರತಿ ಆವರಣದ ಎನ್‌ಎಸ್‌ಎಸ್ ಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸೆಂಟ್ರಲ್ ಫೋರ್ಸ್‌ಗಳು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆಸಲಾಗುತ್ತಿದೆ.
ಬುಡಕಟ್ಟು ಜನಾಂಗದ ಸಮಸ್ಯೆಗಳನ್ನು ತಿಳಿಯಲು ಮತ್ತು ಅವರಿಗೆ ಸಹಾಯ ಮಾಡಲು ಶಿಬಿರವು ಮುಖ್ಯವಾಗಿದೆ. ಭಾರತದ ವಿವಿಧ ರಾಜ್ಯಗಳಿಂದ 220 ಬುಡಕಟ್ಟು ಯುವಕರು ಭಾಗವಹಿಸಿದ್ದಾರೆ. ಶಿಬಿರದಲ್ಲಿ ಯೋಗ, ಕ್ರೀಡೆ, ಉಪನ್ಯಾಸ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿಶೇಷ ತರಬೇತಿಗಳನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಿಲ್ಲಾ ಯುವಾಧಿಕಾರಿ ಎ. ನಾಗಲಕ್ಷ್ಮಿ ಮತ್ತು ಇನ್ನೂ ಹಲವಾರು ಅಧಿಕಾರಿಗಳು ಹಾಜರಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.